ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

ಸ್ಯಾಂಡಲ್ ವುಡ್ ಜನಪ್ರಿಯ ನಟ ಯಶ್ ಕೆಜಿಎಫ್‌ಗೂ ಮುನ್ನ ಕರ್ನಾಟಕದಲ್ಲಿ ಮಿಂಚಿದರೇ ಈಗ ಇಡೀ ಭಾರತದಲ್ಲಿ ರಾಕಿ ಭಾಯ್ ಹೆಸರಿನಲ್ಲಿ ಸದ್ದು ಮಾಡುತ್ತಿದ್ದಾರೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

2008ರಲ್ಲಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಯಶ್ ಈಗ ಕನ್ನಡದ ಬಹುದೊಡ್ಡ ಸ್ಟಾರ್ ಎನಿಸಿಕೊಂಡಿದ್ದಾರೆ. 2018 ರಲ್ಲಿ KGF ಚಾಪ್ಟರ್ 1 ಬಿಡುಗಡೆಯೊಂದಿಗೆ ಯಶ್ ದೇಶದಾದ್ಯಂತ ಉತ್ತಮ ಮನ್ನಣೆ ಮತ್ತು ಖ್ಯಾತಿಯನ್ನು ಗಳಿಸಿದರು. ಇದೀಗ ಕೆಜಿಎಫ್-2 ಸಿನಿಮಾ ಹಿಟ್ ಆಗಿದ್ದೇ ತಡ ಬಾಲಿವುಡ್ ಕೂಡ ಯಶ್ ಅವರ ಕಾಲ್‌ಶೀಟ್‌ಗಾಗಿ ಕಾಯಿತ್ತಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

ಹೀಗಿರುವಾಗ ಯಶ್ ಕೂಡ ತಮ್ಮ ಖ್ಯಾತಿಗೆ ತಕ್ಕಂತೆ ಒಂದಷ್ಟು ದುಬಾರಿ ಕಾರುಗಳನ್ನು ಖರೀದಿಸಿದ್ದಾರೆ. ಈ ಕಾರುಗಳು ಯಾವುದೇ ಬಾಲಿವುಡ್‌ ನಟರ ಕಾರ್ ಕಲೆಕ್ಷನ್‌ಗೂ ಕಮ್ಮಿಯಿಲ್ಲ. ಈ ಲೇಖನದಲ್ಲಿ ರಾಕಿ ಭಾಯ್ ಒಡೆತನದ ಕೆಲವು ದುಬಾರಿ ಕಾರುಗಳ ಕುರಿತು ತಿಳಿಸಿದ್ದೇವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

1. ಮರ್ಸಿಡಿಸ್ ಬೆಂಝ್ DLS 350D :

ಯಶ್ ಒಡೆತನದ ಹಲವು ಐಷಾರಾಮಿ ಕಾರುಗಳಲ್ಲಿ ಮರ್ಸಿಡಿಸ್ ಬೆಂಝ್ DLS 350D ಕೂಡ ಒಂದು. ಹಾಗೆಯೇ ಅವರ ನೆಚ್ಚಿನ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಹೊರತಾಗಿ ಅವರು ಹಲವು ದುಬಾರಿ ಮರ್ಸಿಡಿಸ್ ಬೆಂಝ್ ಕಾರುಗಳನ್ನು ಹೊಂದಿದ್ದಾರೆ. ಯಶ್ ಬಳಿ ಇರುವ ಈ ಬೆಂಜ್ ಕಾರಿನ ಬೆಲೆ 85 ಲಕ್ಷ ರೂ. ಇದನ್ನು ಹೆಚ್ಚಾಗಿ ಸಣ್ಣ-ಪುಟ್ಟ ರೈಡ್‌ಗಳಿಗಾಗಿ ಬಳಸುತ್ತಾರೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

2. ಮರ್ಸಿಡಿಸ್ GLC 250 D ಕೂಪೆ:

ಮರ್ಸಿಡಿಸ್ ಬೆಂಝ್ DLS 350D ನಂತರ ಮರ್ಸಿಡಿಸ್ ಜಿಎಲ್‌ಸಿ 250ಡಿ ಕೂಪೆಯನ್ನು ಸಹ ಹೊಂದಿದ್ದಾರೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ರೂ. 78 ಲಕ್ಷವಿದೆ. ಇದು ನೋಡಲು ತುಂಬಾ ಆಕರ್ಷಕ ಲುಕ್‌ನೊಂದಿಗೆ ಬರುತ್ತದೆ. ಇದಲ್ಲದೇ ವಾಹನ ಚಾಲಕರಿಗೆ ಉತ್ತಮ ಚಾಲನಾ ಅನುಭವವನ್ನೂ ನೀಡುತ್ತದೆ. ಈ ಕಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

3. ಆಡಿ Q7:

ಆಡಿ ಕ್ಯೂ7 ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಯಶ್ ಕೂಡ ಈ ಐಷಾರಾಮಿ ಕಾರು ಹೊಂದಿದ್ದಾರೆ. ಯಶ್ ಅವರೇ ಈ ಕಾರನ್ನು ಓಡಿಸಲು ಇಷ್ಟಪಡುತ್ತಾರೆ. ಈ ಹೊಸ ಕಾರು ಉತ್ತಮ ವಿನ್ಯಾಸ, ಗುಣಮಟ್ಟದ ಒಳಾಂಗಣ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 3.0-ಲೀಟರ್ TFSI ಕ್ವಾಟ್ರೋ ಪೆಟ್ರೋಲ್, 3.0-ಲೀಟರ್ TDI ಕ್ವಾಟ್ರೋ ಡೀಸೆಲ್ ಮತ್ತು 4.2-ಲೀಟರ್ TDI ಕ್ವಾಟ್ರೋ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

4. BMW 520D:

ಬಿಎಂಡಬ್ಲ್ಯು 520ಡಿ ಯಶ್ ಅವರ ಬಳಿಯಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ. BMW 5 ಸರಣಿಯು ಆಧುನಿಕ ವಾಣಿಜ್ಯ ಸೆಡಾನ್‌ನ ಸಾರಾಂಶವಾಗಿದೆ. ಇದು ಅನೇಕ ಸ್ಟೈಲಿಂಗ್ ವೈಶಿಷ್ಟ್ಯಗಳನ್ನು ಹೊಂದಿದ್ದು, ತುಂಬಾ ಆಕರ್ಷಕವಾಗಿ ಕಾಣುತ್ತದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ರೂಪಾಂತರಗಳಲ್ಲಿ ಒಂದಾಗಿದೆ. ಇದು ಮಧ್ಯಮ ಗಾತ್ರದ BMW ಸೆಡಾನ್ ಆಗಿದ್ದು, ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ಸೆಡಾನ್ ಆಗಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

5. ರೇಂಜ್ ರೋವರ್ ಇವೊಕ್:

ಯಶ್ ಅವರ ಬಳಿ ರೇಂಜ್ ರೋವರ್ ಇವೊಕ್ ಕೂಡ ಇದೆ. ರೇಂಜ್ ರೋವರ್ ಇವೊಕ್ ಐದು-ಬಾಗಿಲು ಮತ್ತು ಕನ್ವರ್ಟಿಬಲ್ ಬಾಡಿ ಸ್ಟೈಲ್‌ನೊಂದಿಗೆ ಬರುತ್ತದೆ. ಐದು-ಬಾಗಿಲು ಐದು ಮಾದರಿಯ ಶ್ರೇಣಿಯನ್ನು ಹೊಂದಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಟಚ್ ಪ್ರೊ ಡ್ಯೂ ಸಿಸ್ಟಮ್, 12.3-ಇಂಚಿನ ಇಂಟರ್ಯಾಕ್ಟಿವ್ ಡ್ರೈವರ್ ಡಿಸ್ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಾಣಿಕೆ ಮತ್ತು ಸೆಗ್‌ಮೆಂಟ್-ಮೊದಲ ಸ್ಪಷ್ಟ-ದೃಷ್ಟಿಯ ಆಂತರಿಕ ಹಿಂಬದಿಯ ನೋಟ ಕನ್ನಡಿಯನ್ನು ಒಳಗೊಂಡಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

6. ಮಿತ್ಸುಬಿಷಿ ಪಜೆರೊ ಸ್ಪೋರ್ಟ್:

ಕೆಲವು ವರ್ಷಗಳ ಹಿಂದೆ ಮಿತ್ಸುಬಿಷಿ ಪಜೆರೊ ಸ್ಪೋರ್ಟ್ಸ್ ಆಫ್-ರೋಡ್ SUV ಗಳಲ್ಲಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿತ್ತು. ಇತ್ತೀಚೆಗೆ ಇದಕ್ಕೆ ಬೇಡಿಕೆ ಕಡಿಮೆಯಾಗಿದೆ. ಇದೀಗ ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಆಲ್-ವೀಲ್ ಡ್ರೈವ್ ವೈಶಿಷ್ಟ್ಯಗಳೊಂದಿಗೆ 176-bhp ಉತ್ಪಾದಿಸುವ 2.5-ಲೀಟರ್ ಇಂಟರ್‌ಕೂಲರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಡೆಸಲ್ಪಡುತ್ತದೆ. ಪಜೆರೊ ಸ್ಪೋರ್ಟ್ಸ್ ಕಾರಿನ ಬೆಲೆ ರೂ. 37.75 ಲಕ್ಷವಿದೆ.

ಕೆಜಿಎಫ್ ಹಿಟ್ ಬಳಿಕ ಯಾವುದೇ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ನಟ ಯಶ್ ಕಾರ್ ಕಲೆಕ್ಷನ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟ ಯಶ್ ಅವರಿಗೆ ಕಾರುಗಳೆಂದರೆ ಸಖತ್ ಕ್ರೇಜ್ ಇದೆ. ಸ್ವತಃ ತಾವೇ ಓಡಿಸುವುದೆಂದರೆ ಅವರಿಗೆ ತುಂಬಾ ಇಷ್ಟ, ಫ್ಯಾಮಿಲಿ ಜೊತೆಗೆ ಫ್ರೀ ಸಿಕ್ಕಾಗ ಜಾಲಿ ರೈಡ್ ಅನ್ನು ಆನಂದಿಸುತ್ತಾರೆ. ಸದ್ಯಕ್ಕೆ ಅವರ ಬಳಿಯಿರುವ ಕಾರ್ ಕಲೆಕ್ಷನ್ ಯಾವುದೇ ಬಾಲುವುಡ್ ನಟರಿಗೂ ಕಮ್ಮಿಯಿಲ್ಲ. ಮುಂದಿನ ದಿನಗಳಲ್ಲಿ ಸೂಪರ್ ಸ್ಪೋರ್ಟಿ ಕಾರುಗಳನ್ನು ಖರೀದಿಸುವ ನಿರೀಕ್ಷೆಯಿದೆ.

Most Read Articles

Kannada
English summary
After the kgf hit actor yash car collection
Story first published: Saturday, November 12, 2022, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X