ಇಂಗ್ಲೆಂಡ್‌ನಲ್ಲಿ ಸ್ಪೋಟಗೊಂಡ ಕಾರು-ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್..!

Written By:

ಆ ಕಾರು ಚಾಲಕ ತನ್ನ ಪಾಡಿಗೆ ತಾನು ಕಾರು ಚಾಲನೆ ಮಾಡುತ್ತಾ ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದಾ. ಆದ್ರೆ ಅದ್ಯಾವೋ ಗಳಿಗೆಯಲ್ಲಿ ಏನಾಯ್ತೋ ಗೊತ್ತಿಲ್ಲ. ಒಮ್ಮೆಲೇ ಕಾರಿನ ಇಂಟಿರಿಯರ್‌ನಲ್ಲಿ ಸ್ಪೋಟ ಶಬ್ದ ಕೇಳಿ ಬಂದಿದ್ದು, ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿತ್ತು.

To Follow DriveSpark On Facebook, Click The Like Button
ಇಂಗ್ಲೆಂಡ್‌ನಲ್ಲಿ ಕಾರು ಸ್ಪೋಟ -ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್!

ಆದ್ರೆ ಕಾರಿನ ಒಳಭಾಗದಲ್ಲಿ ಸ್ಪೋಟದ ಶಬ್ದ ಕೇಳಿ ಬರುತ್ತಿದ್ದಂತೆ ಕಾರಿನ ಮುಂಭಾಗದ ಗ್ಲಾಸ್ ಕಿತ್ತು ಹೋಗಿದ್ದು, ಪ್ರಾಥಮಿಕ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕೇಂದ್ರೆ ಸ್ಪೋಟಕ್ಕೆ ಕಾರಣವಾಗಿದ್ದು ಬೇರೆನು ಅಲ್ಲ ಅದು ಕಾರಿನಲ್ಲಿದ್ದ ಏರ್ ಫ್ರೆಶನರ್ ಅಂದ್ರೆ ನೀವು ನಂಬಲೇಬೇಕು.

ಇಂಗ್ಲೆಂಡ್‌ನಲ್ಲಿ ಕಾರು ಸ್ಪೋಟ -ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್!

ಹೌದು, ಇದೇಲ್ಲಾ ನಡೆದಿರುವುದು ಇಂಗ್ಲೆಂಡ್‌ನಲ್ಲಿರುವ ಪ್ರತಿಷ್ಠಿತ ಹೆನ್ರಿ ಪಬ್ ಹತ್ತಿರ. ಘಟನೆಯಲ್ಲಿ ಚಾಲಕನ ಮುಖ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಕಾರಿನ ಮುಂಭಾಗದ ಗ್ಲಾಸ್ ಹಾಗೂ ಚಾಲಕನ ಕಡೆಯ ಡೋರ್ ಕಿತ್ತು ಹೋಗಿದೆ.

ಇಂಗ್ಲೆಂಡ್‌ನಲ್ಲಿ ಕಾರು ಸ್ಪೋಟ -ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್!

ಘಟನೆಯಿಂದ ಸ್ಥಳದಲ್ಲಿ ಕೆಲ ಗಂಟೆಗಳ ಕಾಲ ಭಾರೀ ಆತಂಕ ಸೃಷ್ಠಿಯಾಗುವ ಮೂಲಕ ಇದೊಂದು ಉಗ್ರರ ಕೃತ್ಯವೆಂದು ನಂಬಲಾಗಿತ್ತು. ಆದ್ರೆ ತನಿಖೆಯಲ್ಲಿ ಇದು ಏರ್‌ಫ್ರೆಶನರ್‌ನಿಂದಾದ ಅವಾಂತರ ಎಂದು ಸಾಬೀತಾಗಿದೆ.

ಇಂಗ್ಲೆಂಡ್‌ನಲ್ಲಿ ಕಾರು ಸ್ಪೋಟ -ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್!

ಕಾರು ಚಾಲನೆ ಮಾಡುತ್ತಿದ್ದ 20 ವರ್ಷದ ಜೋ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಜೋಗೆ ಲಂಡನ್ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂಗ್ಲೆಂಡ್‌ನಲ್ಲಿ ಕಾರು ಸ್ಪೋಟ -ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್!

ಇನ್ನು ಏರ್‌ಫ್ರೆಶನರ್ ಸ್ಪೋಟಕ್ಕೆ ಯಾವ ರೀತಿ ಕಾರಣವಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಿರುವ ಪೋಲಿಸರು, "ಕಾರಿನಲ್ಲಿರುವ ಸ್ವಯಂ ನಿಯಂತ್ರಿತ ಎಸಿ ಗಾಳಿಯ ಜೊತೆ ಎರ್‌ಫ್ರೆಶನರ್ ಗಾಳಿಯೂ ಜೊತೆಗೂಡಿದ್ದು, ಈ ವೇಳೆ ಕಾರು ಚಾಲಕ ಮಾಡುತ್ತಿದ್ದ ಜೋ ಸಿಗರೇಟ್ ಹೊತ್ತಿಸಿರುವುದು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ" ಎಂದಿದ್ದಾರೆ.

ಇಂಗ್ಲೆಂಡ್‌ನಲ್ಲಿ ಕಾರು ಸ್ಪೋಟ -ಘಟನೆಗೆ ಕಾರಣ ಕೇಳಿದ್ರೆ ನಿಮಗೂ ಶಾಕ್!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರು ಚಾಲನೆ ವೇಳೆ ಏರ್‌ಫ್ರೆಶನರ್ ಚಿಮುಕಿಸಿದ ಬಳಿಕ ಯಾವುದೇ ಕಾರಣಕ್ಕೂ ಸಿಗರೇಟು ಹೊತ್ತಿಸುವ ಮುನ್ನ ಹುಷಾರ್ ಆಗಿ ಇರುವುದು ಒಳಿತು. ಯಾಕೇಂದ್ರೆ ಜೋ ಗೆ ಬಂದ ಪರಿಸ್ಥಿತಿ ಇತರರೆ ಬರುವುದು ಬೇಡ.

Read more on ಕಾರು car
English summary
Read in Kannada about Air Freshener Causes Explosion In Car.
Story first published: Thursday, July 20, 2017, 19:50 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark