ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಪಾತ್ರರಾಗಿದ್ದು,. ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸುವ ಮೂಲಕ ಪುರುಷರಿಗೆ ಮಾತ್ರ ತೆರೆದುಕೊಂಡಿದ್ದ ಸಾಮ್ರಾಜ್ಯಕ್ಕೆ ಅವನಿ ಕೂಡಾ

By Praveen

ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಪಾತ್ರರಾಗಿದ್ದು,. ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸುವ ಮೂಲಕ ಪುರುಷರಿಗೆ ಮಾತ್ರ ತೆರೆದುಕೊಂಡಿದ್ದ ಸಾಮ್ರಾಜ್ಯಕ್ಕೆ ಅವನಿ ಕೂಡಾ ಕಾಲಿಟ್ಟಿದ್ದಾರೆ.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಅವನಿ ಚತುರ್ವೇದಿ ಗುಜರಾತ್‍ನ ಜಮ್‍ನಗರದಿಂದ ಎಮ್‍ಐಜಿ-21 ಬೈಸನ್ ವಿಮಾನವೇರಿ ಹಾರಾಟ ಶುರು ಮಾಡಿದಲ್ಲದೇ ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿದರು. ಈ ಮೂಲಕ ಅವನಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಅವನಿ ಕುಟುಂಬದಲ್ಲಿ ಸೇನೆಗೆ ಸೇರ್ಪಡೆಯಾಗಿರುವುದು ಅವರೇ ಮೊದಲೇನಲ್ಲ. ಅವನಿ ಅವರ ಸಹೋದರ ಸೈನಿಕರಾಗಿದ್ದು, ಅವರಿಂದಲೇ ಸ್ಫೂರ್ತಿ ಪಡೆದಿದ್ದಾರೆ.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಅವನಿ ಬಿ.ಟೆಕ್ ಪದವಿ ಪೂರೈಸಿದ್ದಾರೆ. ಭಾರತೀಯ ವಾಯು ಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಹೈದರಾಬಾದ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

2016ರ ಜೂನ್ 18ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರಾನ್‍ಗೆ ಸೇರ್ಪಡೆಯಾದ ಮೂವರು ಮಹಿಳೆಯರಲ್ಲಿ ಅವನಿ ಕೂಡ ಒಬ್ಬರಾಗಿದ್ದರು. ಇವರೊಂದಿಗೆ ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಸೇರ್ಪಡೆಯಾಗಿದ್ದರು.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

43 ಪುರುಷರ ಜೊತೆಯಲ್ಲಿ ಈ ಮೂವರು ಮಹಿಳೆಯರು ತರಬೇತಿ ಪಡೆದಿದ್ದು, ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಕೂಡ ತರಬೇತಿ ಪೂರೈಸಿದ್ದು, ಶೀಘ್ರದಲ್ಲೇ ಅವರೂ ಕೂಡ ಯುದ್ಧವಿಮಾನ ಹಾರಾಟ ನಡೆಸಲಿದ್ದಾರೆ.

ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಅವನಿ ಚತುರ್ವೇದಿ ಎಮ್‍ಐಜಿ-21 ಬೈಸನ್ ಗೂ ಮೊದಲು ಏಕಾಂಗಿಯಾಗಿ ಪೈಲಾಟಸ್ ಪಿಸಿ-7 ಟರ್ಬೊಪ್ರಾಪ್ಸ್, ಕಿರಣ್ ಹಾಗೂ ಹಾವ್ಕ್ ವಿಮಾನಗಳ ಹಾರಾಟ ನಡೆಸಿದ್ದರು. ಚತುರ್ವೇದಿ ಅವರು ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿರುವುದು ಭಾರತವದ ಕಿರೀಟಕ್ಕೆ ಮತ್ತೊಂದು ಗರಿ ತಂದುಕೊಟ್ಟಂತಾಗಿದೆ.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಬ್ರಿಟನ್, ಅಮೆರಿಕ, ಇಸ್ರೇಲ್ ಹಾಗು ಪಾಕಿಸ್ತಾನದಲ್ಲಿ ಈಗಾಗಲೇ ಮಹಿಳೆಯರು ಯುದ್ಧವಿಮಾನ ಹಾರಾಟ ನಡೆಸುತ್ತಿದ್ದು, ಇದೀಗ ಆ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಮತ್ತೊಂದು ವಿಶೇಷ ಅಂದ್ರೆ ವಿಶ್ವದಲ್ಲಿ ಮಿಗ್-21 ಬೈಸನ್ ಯುದ್ಧ ವಿಮಾನ ಅತಿ ವೇಗವಾಗಿ ಹಾರಾಡುವ ಯುದ್ಧ ವಿಮಾನವಾಗಿದ್ದು, ಪ್ರತಿ ಗಂಟೆಗೆ 340 ಕಿಲೋ ಮೀಟರ್ ವೇಗವಾಗಿ ಹಾರಾಟ ನಡೆಸುತ್ತದೆ.

ಯುದ್ದ ವಿಮಾನ ಚಾಲನೆಯಲ್ಲಿ ಇತಿಹಾಸ ಸೃಷ್ಠಿಸಿದ ಅವನಿ ಚತುರ್ವೇದಿ..

ಅಭಿನಂದನೆಗಳ ಮಹಾಪೂರ

ಸದ್ಯ ಅವನಿ ಚತುರ್ವೇದಿ ನಿರ್ಮಿಸಿರುವ ಇತಿಹಾಸಕ್ಕೆ ಅಭಿನಂದನೆಗಳ ಮಾಹಾಪೂರವೇ ಹರಿದುಬರುತ್ತಿದೆ. ದೇಶದ ನಾನಾ ಗಣ್ಯರು ಅವನಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Trending On DriveSpark Kannada:

ರೂ.9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

400 ಅಡಿ ಕಂದಕಕ್ಕೆ ಉರುಳಿದ ಫೋರ್ಡ್ ಎಂಡೀವರ್ ಹೊಸ ಕಾರು...

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

Most Read Articles

Kannada
Read more on plane off beat
English summary
Avani Chaturvedi, Indian Air Force Flying Officer flew a MiG-21 aircraft, to the title of 'The First Indian Woman To Fly A Fighter Jet All By Herself'. The Madhya Pradesh native, Avani Chaturvedi, flew the fighter jet from Jamnagar Air Base in Gujarat on February 19, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X