ರೂ.9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ರೋಲ್ಸ್ ರಾಯ್ಸ್ ಸಂಸ್ಥೆಯು 14 ವರ್ಷಗಳ ನಂತರ ಫ್ಯಾಂಟಮ್ ಆವೃತ್ತಿಯನ್ನು ಎಂಟನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಕಾರಿನ ಬೆಲೆಯನ್ನು ಬರೋಬ್ಬರಿ 9.50 ಕೋಟಿಗೆ ನಿಗದಿ ಮಾಡಲಾಗಿದೆ.

By Praveen

ರೋಲ್ಸ್ ರಾಯ್ಸ್ ಸಂಸ್ಥೆಯು 14 ವರ್ಷಗಳ ನಂತರ ಫ್ಯಾಂಟಮ್ ಆವೃತ್ತಿಯನ್ನು ಎಂಟನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದ್ದು, ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಕಾರಿನ ಬೆಲೆಯನ್ನು ಬರೋಬ್ಬರಿ 9.50 ಕೋಟಿಗೆ ನಿಗದಿ ಮಾಡಲಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಅರಾಮದಾಯಕ ಸವಾರಿಗೆ ಅನುಕೂಲಕರವಾಗುವಂತೆ ಹೊಸ ಕಾರು ಆವೃತ್ತಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಪ್ರಸುತ್ತ ಮಾದರಿಗಳಿಂತ ಶೇ.30ರಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೊರ ಮತ್ತು ಒಳ ವಿನ್ಯಾಸಗಳು ಬದಲಾವಣೆಗೊಳಿಸಿರುವುದೇ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ರೋಲ್ಸ್ ರಾಯ್ಸ್ ಫ್ಯಾಂಟಮ್ 8ರ ಇನ್ನೊಂದು ವಿಶೇಷ ಅಂದ್ರೆ ಕಾರಿನ ಪ್ರತಿಯೊಬ್ಬ ಭಾಗವು ಕೂಡಾ ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಂಡಿದ್ದು, ಈ ಮೂಲಕ ಸುಪ್ರಸಿದ್ಧ ವಿನ್ಯಾಸ ಪರಂಪರೆಯನ್ನು ಮುಂದುವರಿಸಲಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಇನ್ನು ಫ್ಯಾಂಟಮ್ 8ರ ಆವೃತ್ತಿಯಲ್ಲಿ ಪ್ಯಾಂಥಿಯಾನಾ ಗ್ರಿಲ್ ಮರು ನಿರ್ಮಾಣ ಮಾಡಲಾಗಿದ್ದು, ಸ್ಪಿರಿಟ್ ಆಫ್ ಎಕ್ಸ್ಟ್ಯಾಸಿಯ ಸ್ಥಾನವನ್ನು ಅರ್ಧ ಇಂಚು ಎತ್ತರಿಸಲಾಗಿದೆ. ಜೊತೆಗೆ ಹೊಸ ಹೆಡ್‌ಲ್ಯಾಂಡ್ ಗ್ರಾಫಿಕ್ ಕೂಡಾ ಅದ್ಭುತ ವಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಎಂಜಿನ್ ಸಾಮರ್ಥ್ಯ

ಫ್ಯಾಂಟಮ್ 8ನೇ ತಲೆಮಾರಿನ ಕಾರುಗಳು ಟ್ವಿನ್ ಟರ್ಬೋಚಾರ್ಜ್ಡ್ 6.75-ಲೀಟರ್ ವಿ12 ಎಂಜಿನ್ ಹೊಂದಿದ್ದು, 563-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಈ ಮೂಲಕ 5.3 ಸೇಕೆಂಡುಗಳಲ್ಲಿ 100 ಕಿಮಿ ವೇಗದಲ್ಲಿ ಚಲಿಸಬಲ್ಲ ಗುಣಹೊಂದಿದ್ದು, ಪ್ರತಿ ಗಂಟೆಗೆ 250 ಕಿಮಿ ಚಾಲನಾ ಮಿತಿ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಇದಲ್ಲದೇ ಫ್ರಾಸ್ಟೆಡ್ ಮತ್ತು ಹಗಲಿನ ಚಾಲನೆಯ ದೀಪಗಳು ಲೇಸರ್ ಬೆಳಕಿನ ವ್ಯವಸ್ಥೆಯೊಂದಿಗೆ ಉರಿಯುವ ವ್ಯವಸ್ಥೆ ಹೊಂದಿದ್ದು. ಇವು ರಾತ್ರಿ ವೇಳೆ 600 ಮೀಟರ್‌ಗಳಷ್ಟು ಬೆಳಕನ್ನು ಹೊರಸೂಸುತ್ತೆವೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ರೋಲ್ಸ್ ರಾಯ್ಸ್ ಹೊಸ ಆವೃತ್ತಿಯು ಫ್ಯಾಂಟಮ್‌ನಲ್ಲಿ 22 ಇಂಚಿನ ಅಲಾಯ್ ಚಕ್ರಗಳೊಂದಿಗೆ ಮಿಶ್ರಲೋಹಗಳನ್ನು ಬಳಸಿಕೊಂಡಿದ್ದು, ಸುರಕ್ಷತೆಗಾಗಿ ಪನೋರಮಿಕ್ ವೀಕ್ಷಣೆಯ 4 ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಹೊಸ ಕಾರಿನ ಐಷಾರಾಮಿ ವೈಶಿಷ್ಟ್ಯತೆಗಳನ್ನು "ದ ಗ್ಯಾಲರಿ" ಎಂದು ಉಲ್ಲೇಖಿಸಲಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಹೆಚ್ಚುವರಿಯಾಗಿ 7x3 ಹೈ ರೆಜೆಲ್ಯೂಶನ್ ಹೆಚ್‌ಡಿ ಡಿಸ್ ಫೈ, ಕ್ರಾಸ್ ಟ್ರಾಫಿಕ್ ವಾರ್ನಿಂಗ್, ಆಕ್ಟಿವ್ ಕ್ರೂಸ್ ಕಂಟ್ರೋಲರ್ ಮತ್ತು ಪ್ರತಿಹಂತದಲ್ಲೂ ಸೆನ್ಸಾರ್ ಮಾದರಿಗಳನ್ನು ಫ್ಯಾಂಟಮ್ ಹೊಸ ಕಾರಿನಲ್ಲಿ ಪರಿಚಯಿಸಲಾಗಿದೆ.

ರೂ. 9.50 ಕೋಟಿಗೆ ಬಿಡುಗಡೆಯಾದ ರೋಲ್ಸ್ ರಾಯ್ಸ್ ಹೊಸ ಕಾರಿನ ಸ್ಪೆಷಲ್ ಏನು?

ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ದುಬಾರಿ ಕಾರುಗಳು ಲಭ್ಯವಿದ್ದರು 1925ರಲ್ಲಿ ಸರ್ ಹೆನ್ರಿ ರಾಯ್ಸ್ ನಿರ್ಮಿಸಿದ ಫ್ಯಾಂಟಮ್ ಆವೃತ್ತಿಯೂ ವಿಶ್ವದ ಅತ್ಯಂತ ಪ್ರಭಾವಿ ಕಾರು ಎಂದರೇ ತಪ್ಪಾಗಲಾರದು.ಈ ನಡುವೆ 8ನೇ ತಲೆ ಮಾರಿನ ರೋಲ್ಸ್ ರಾಯ್ಸ್ ಆವೃತ್ತಿಯು ಮತ್ತಷ್ಟು ಹೊಸತನದೊಂದಿಗೆ ಬಿಡುಗಡೆಯಾಗಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ.

Trending On DriveSpark Kannada:

ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

ವಿಮಾನ ಕಂಡುಹಿಡಿದವರು 'ರೈಟ್ ಬ್ರದರ್ಸ್' ಎನ್ನುವವರು ಈ ಲೇಖನ ಓದಲೇಬೇಕು..

ಮಾರುತಿ ಕಂಪನಿ ಬಗ್ಗೆ ಈ 28 ವಿಚಾರ ಅಚ್ಚರಿ ಉಂಟು ಮಾಡ್ತವೆ,ಆದ್ರೆ 7ನೇ ವಿಚಾರ ನಿಮ್ಗೆ ಕೋಪ ತರಿಸುತ್ತೆ !!

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

Most Read Articles

Kannada
English summary
Rolls-Royce Phantom VIII Launched In India; Prices Start At Rs 9.50 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X