ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

Written By:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲಕರವಾಗುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಸಂಸ್ಥೆಯು ಹೊಸ ಯೋಜನೆಯೊಂದನ್ನು ಆರಂಭಿಸುತ್ತಿದೆ.

ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿ ಪ್ರಕಾರ ವಾರಾಂತ್ಯದಲ್ಲೂ ಕಡಿಮೆ ಸಮಯದ ಅಂತರದಲ್ಲಿ ಮೆಟ್ರೋ ಸೇವೆಗಳು ಲಭ್ಯವಿರಲಿದ್ದು, ಎರಡು ರೈಲುಗಳ ನಡುವಿನ ಸಮಯದ ಅಂತರವನ್ನು 15 ನಿಮಿಷದಿಂದ 10 ನಿಮಿಷಕ್ಕೆ ಕಡಿತಗೊಳಿಸಲು ತೀರ್ಮಾನಿಸಿದೆ.

ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಜೊತೆಗೆ ಹೊಸ ಯೋಜನೆಗೆ ಪೂರಕವಾಗಿ ಕಳೆದ 2 ವಾರಗಳಿಂದ ಕಡಿಮೆ ಅಂತರದಲ್ಲಿ ಮೆಟ್ರೋ ಸೇವೆಗಳನ್ನು ಆರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಬಿಎಂಆರ್‌ಸಿಎಲ್ ಉತ್ಸುಕವಾಗಿದೆ.

ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಈ ಬಗ್ಗೆ ಮಾತನಾಡಿರುವ ಬಿಎಂಆರ್ ಸಿಎಲ್ ನ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ಎಸ್. ಶಂಕರ್ ಅವರು "ನವೆಂಬರ್ 10 ಮತ್ತು ನವೆಂಬರ್ 26 ರಂದು 10 ನಿಮಿಷಗಳ ಅಂತರದಲ್ಲಿ ರೈಲುಗಳ ನಿರ್ವಹಣೆ ಮಾಡಲಾಗಿತ್ತು. ಭಾನುವಾರ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ" ಎಂದಿದ್ದಾರೆ.

Recommended Video - Watch Now!
[Kannada] Mahindra KUV 100 NXT Launched In India - DriveSpark
ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಇದರಿಂದ ಕೆಂಪೇಗೌಡ ನಿಲ್ದಾಣದಲ್ಲಿ ಇಳಿದು ಬೇರೆ ರೈಲು ಮಾರ್ಗ ಬದಲಾಯಿಸಬೇಕಾದರೆ ಅವರು ಅರ್ಧ ಗಂಟೆ ಕಾಯಬೇಕಾದ ಪರಿಸ್ಥಿತಿ ತಪ್ಪಲಿದ್ದು, ಲಾಲ್‌ಬಾಗ್, ಕಬ್ಬನ್ ಪಾರ್ಕ್, ವಿಧಾನಸೌಧ ವಿಕ್ಷಣೆಗೆ ಬರುವ ಪ್ರವಾಸಿಗರಿಗೆ ಇದು ಸಾಕಷ್ಟು ಅನುಕೂಲವಾಗಲಿದೆ.

ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಇದಲ್ಲದೇ ತಿಂಗಳಿನಿಂದ ತಿಂಗಳಿಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಲ್ಲಿದ್ದು, ನವೆಂಬರ್ ನಲ್ಲಿ ಇದುವರೆಗೆ ಒಂದೇ ದಿನ 3.9 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿರುವುದು ಉತ್ತಮ ದಾಖಲೆಯಾಗಿದೆ.

ತಪ್ಪದೇ ಓದಿ-ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಇನ್ನು ಮೆಟ್ರೋ ಪ್ರಯಾಣ ದರಗಳಿಂದ ಕಳೆದ ತಿಂಗಳು ಬಂದ ಆದಾಯ 90 ಲಕ್ಷವಾಗಿದ್ದು ಈ ತಿಂಗಳು ಸಹ ಅಷ್ಟೇ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಮೆಟ್ರೋ ನಿಗಮದ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮಾತನಾಡಿದ್ದಾರೆ.

ಬೆಂಗಳೂರಿನ ಜನತೆಗೆ 'ನಮ್ಮ ಮೆಟ್ರೋ'ದಿಂದ ಗುಡ್ ನ್ಯೂಸ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಿಎಂಆರ್‌ಸಿಎಲ್ ಆರಂಭಿಸಿರುವ ಹೊಸ ಯೋಜನೆಯು ಮೆಟ್ರೋ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಲಿದ್ದು, ಮೆಟ್ರೋ ಲಭ್ಯವಿರುವ ಭಾಗಗಳಲ್ಲಿನ ಕ್ಯಾಬ್ ಚಾಲಕರಿಗೆ ಹಾಗೂ ಆಟೋ ರಿಕ್ಷಾ ಆದಾಯಕ್ಕೆ ಕೊಂಚ ಹೊಡೆತ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.

English summary
Read in Kannada about Bengaluru Metro increases frequency of Sunday morning services.
Story first published: Tuesday, November 28, 2017, 11:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark