ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

Written By:

ಇಷ್ಟು ದಿನಗಳ ಕಾಲ ಗೃಹಪಯೋಗಿ ಕಾರ್ಯಗಳಿಗೆ ಮಾತ್ರ ಬಳಕೆಯಾಗುತ್ತಿದ್ದ ಬಯೋಗ್ಯಾಸ್ ತಂತ್ರಜ್ಞಾನ ಇದೀಗ ಬಹುಉಪಯೋಗಿ ಕಾರ್ಯಗಳ ಬಳಕೆಗೂ ಸಿದ್ಧವಾಗುತ್ತಿದೆ. ಬಯೋಗ್ಯಾಸ್ ಮೂಲಕ ಬಸ್ ಚಾಲನೆ ಕೂಡಾ ಸಾಧ್ಯವಾಗಿಸಿದ ಸಂಶೋಧನೆ ಒಂದು ನಡೆದಿದ್ದು, ಅಗ್ಗದ ಪ್ರಯಾಣಕ್ಕೆ ವಿಶೇಷ ಬಸ್‌ವೊಂದು ಸಿದ್ಧಗೊಂಡಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಡೀಸೆಲ್, ಪೆಟ್ರೋಲ್, ಎಲೆಕ್ಟ್ರಿಕ್ ಹೊರತುಪಡಿಸಿ ಇದೀಗ ಬಯೋಗ್ಯಾಸ್ ಬಳಕೆಯಿಂದಲೂ ಬಸ್ ಚಾಲನೆ ಸಾಧ್ಯವಿದೆ ಎಂಬುವುದು ದೃಡಪಟ್ಟಿದೆ. ಪಶ್ಚಿಮ ಬಂಗಾಳ ಮೂಲದ ಸಂಸ್ಥೆಯೊಂದು ಈ ಸಂಶೋಧನೆಯನ್ನು ಕೈಗೊಂಡಿದ್ದು, ಯಶಸ್ವಿ ಬಸ್ ಚಾಲನೆ ಕೂಡಾ ಸಾಧ್ಯವಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಬಯೋಗ್ಯಾಸ್ ಮೂಲಕ ಬಸ್ ಚಾಲನೆ ಸಾಧ್ಯವಿದೆ ಎಂಬುವುದನ್ನು ಧೃಡಪಡಿಸಿರೋ "ಫೋನೆಕ್ಸ್" ಸಂಸ್ಥೆಯು, ಪ್ರಾಯೋಗಿಕ ಪರೀಕ್ಷೆಯಲ್ಲೂ ಯಶಸ್ವಿಯಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ನೈಸರ್ಗಿಕ ಅನಿಲದಿಂದಲೇ ಓಡುವ ಈ ಬಸ್ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ವ್ಯವಸ್ಥೆಯನ್ನು ಅಳವಡಿಕೆ ಮಾಡಬಹುದಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಇದು ಪ್ರಾಯೋಗಿಕವಾಗಿ ಸಾರಿಗೆ ಇಲಾಖೆಯಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಬಯೋಗ್ಯಾಸ್ ಬಳಕೆಗಾಗಿ ಪ್ರತ್ಯೇಕ ಬಸ್‌ವೊಂದನ್ನು ನಿರ್ಮಾಣ ಮಾಡಿಸಿರುವ ಫೋನೆಕ್ಸ್ ಸಂಸ್ಥೆಯು, ಇದಕ್ಕಾಗಿ 13 ಲಕ್ಷ ಖರ್ಚು ಮಾಡಿದೆ. ಅಶೋಕ್ ಲೈಲ್ಯಾಂಡ್ ಸಂಸ್ಥೆಯು ಈ ವಿಶೇಷ ಬಸ್ ಅನ್ನು ಸಿದ್ಧಗೊಳಿಸಿದ್ದು, ಬಯೋಗ್ಯಾಸ್ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಇನ್ನೊಂದು ಪ್ರಮುಖ ವಿಚಾರವೇನೆಂದರೆ ಕೇವಲ 1 ರೂಪಾಯಿ ಖರ್ಚಿನಲ್ಲಿ ಬಯೋಗ್ಯಾಸ್ ಬಸ್‌ ಮೂಲಕ 17 ಕಿಮಿ ಪ್ರಯಾಣ ಮಾಡಬಹುದು ಎಂದರೇ ನೀವು ನಂಬಲೇಬೇಕು.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಇದಕ್ಕಾಗಿ ಕೋಲ್ಕತ್ತಾದ ಉಲ್ಟದಂಗದಿಂದ ಗರೀಯಾದವರೆಗೆ ವಾಣಿಜ್ಯ ಉದ್ದೇಶಕ್ಕಾಗಿ ಸೇವೆ ಆರಂಭಿಸಲಾಗಿದ್ದು, ಬಯೋಗ್ಯಾಸ್‌ನಿಂದ ಸಂಚರಿಸುವ ಬಸ್‌ನಲ್ಲಿ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಶುದ್ಧ ದೇಶಿ ಹಸುವಿನ ಸಗಣಿಯ ಮೂಲಕ ಸಿದ್ಧಗೊಳ್ಳುವ ಬಯೋಗ್ಯಾಸ್ ಅನ್ನು ಇಲ್ಲಿ ಬಳಕೆ ಮಾಡಲಾಗಿದ್ದು, ಇದಕ್ಕಾಗಿ ಸಾಕಷ್ಟು ಸಂಶೋಧನೆಗಳು ನಡೆಸಲಾಗಿದೆ. ಇದರ ಪ್ರತಿಫಲವಾಗಿ ಇಂದು ಬಸ್ ಚಾಲನೆ ಸಾಧ್ಯವಾಗಿದ್ದು, ಮಹತ್ಪದ ಸಂಶೋಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಕೇವಲ ದೇಶಿ ಹಸುವಿನ ಸಗಣಿ ಮಾತ್ರವಲ್ಲದೇ ಮನುಷ್ಯನ ಮಲದಿಂದಲೂ ಬಯೋಗ್ಯಾಸ್ ಉತ್ಪಾದಿಸುವ ಆಧುನಿಕ ತಂತ್ರಜ್ಞಾನಗಳು ಬಳಕೆಗೆ ಬರುತ್ತಿವೆ. ಇದರಿಂದ ಮನುಷ್ಯನ ಮಲವು ಉಪಯೋಗಕ್ಕೆ ಬರುತ್ತಿದ್ದು, ಪರಿಸರ ನಾಶ ಮಾಡಬಲ್ಲ ಇಂಧನಗಳಿಗೆ ಬ್ರೇಕ್ ಹಾಕಬಹುದಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಪರಿಸರ ಸ್ನೇಹಿಯಾಗಿ ಬಳಕೆಯಾಗುವ ಬಯೋಗ್ಯಾಸ್ ಪರಿಸರಕ್ಕೆ ಯಾವುದೇ ಹಾನಿಉಂಟು ಮಾಡುವುದಿಲ್ಲ. ಜೊತೆಗೆ ಹಸಿ ಕಸ ಮತ್ತು ಒಣ ಕಸದಿಂದಲೂ ಬಯೋಗ್ಯಾಸ್ ಉತ್ಪಾದನೆ ಮಾಡಬಹುದಾಗಿದ್ದು, ನಗರದಲ್ಲಿನ ತ್ಯಾಜ್ಯವನ್ನು ಇದಕ್ಕಾಗಿ ಬಳಕೆ ಮಾಡಬಹುದಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಈಗಾಗಲೇ ಕೋಲ್ಕತ್ತಾದಲ್ಲಿ ಬಯೋಗ್ಯಾಸ್ ಉತ್ಪಾದನೆಯನ್ನು ತ್ಪರಿತಗೊಳಿಸಿರುವ ಫೋನೆಕ್ಸ್ ಸಂಸ್ಥೆಯು, ಪ್ರತಿ ಕೆಜಿ ಬಯೋಗ್ಯಾಸ್ ಸಿದ್ಧಗೊಳಿಸಲು ಕೇವಲ ರೂ.20 ಖರ್ಚು ಮಾಡುತ್ತಿದೆ. ಆದ್ರೆ ರೂ.20ಕ್ಕೆ ಪ್ರತಿಫಲವಾಗಿ ಸಾವಿರಾರು ರೂಪಾಯಿ ಉಳಿತಾಯವಾಗಲಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಈ ಬೃಹತ್ ಯೋಜನೆಯ ರೂವಾರಿಯಾಗಿರುವ ಜ್ಯೋತಿ ಪ್ರಕಾಶ್ ದಾಸ್, ಬಯೋಗ್ಯಾಸ್ ಉತ್ಪಾದನೆಗಾಗಿ ಬೃಹತ್ ಪ್ಲ್ಯಾಂಟ್ ಸಿದ್ಧಗೊಳಿಸಿದ್ದಾರೆ. ಬಿರ್‌ಭೂಮ್ ಜಿಲ್ಲೆಯಲ್ಲಿರುವ ಈ ಪ್ಲ್ಯಾಂಟ್ ಸ್ಥಾಪನೆ ಮಾಡಲಾಗಿದ್ದು, ನೂರಾರು ಬಯೋಗ್ಯಾಸ್ ಸಿಲಿಂಡರ್‌ ಉತ್ಪತ್ತಿ ಮಾಡಲಾಗುತ್ತಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ವಿಶೇಷ ಬಸ್‌ನಲ್ಲಿ 80 ಕೆಜಿ ಬಯೋಗ್ಯಾಸ್ ತುಂಬಬಹುದಾದ ವ್ಯವಸ್ಥೆಯಿದ್ದು, ಸುಮಾರು 1600 ಕಿಲೋ ಮೀಟರ್ ಮೈಲೇಜ್ ಕೊಡಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದು ಪೆಟ್ರೋಲ್, ಡೀಸೆಲ್‌ಗಿಂತಲೂ ಹತ್ತು ಪಟ್ಟು ಅಗ್ಗದ ಪ್ರಯಾಣ ಇದಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ಫೋನೆಕ್ಸ್ ಸಂಸ್ಥೆ ಅಭಿವೃದ್ಧಿಗೊಳಿಸಿರುವ ಈ ಹೊಸ ಯೋಜನೆ ಈಗಾಗಲೇ ಪ.ಬಂಗಾಳದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಿಗೂ ಬಯೋಗ್ಯಾಸ್ ಬಸ್ ಸಂಚಾರ ಬರುವ ಸಾಧ್ಯತೆಗಳಿದ್ದು, ಪರಿಸರ ಮಾಲಿನ್ಯವನ್ನು ಸಂಪೂರ್ಣವಾಗಿ ತಗ್ಗಿಸಬಹುದಾಗಿದೆ.

ಇದು ಅಪ್ಪಟ ದೇಶಿ ತಂತ್ರಜ್ಞಾನದ ಖದರ್- ಬಯೋಗ್ಯಾಸ್ ಮೂಲಕ ಓಡುತ್ತೆ ಈ ಬಸ್..!!

ರಾಜ್ಯದ ಮಾರುಕಟ್ಟೆಗೆ ಪ್ರವೇಶ ಪಡೆದ ಟಾಟಾ ಟಿಗೋರ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
A Kolkata-based company has designed a bus that will run on biogas.
Story first published: Monday, April 3, 2017, 18:26 [IST]
Please Wait while comments are loading...

Latest Photos