ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ದೇಶದಲ್ಲಿ ರಸ್ತೆ ನಿಯಮ ಪಾಲಿಸದ ಹಿನ್ನೆಲೆ ದಿನಂಪ್ರತಿ ಹತ್ತಾರು ಭೀಕರ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತವೆ. ಚೆನ್ನೈನಲ್ಲೂ ಭೀಕರ ರಸ್ತೆ ಅಪಘಾತವೊಂದು ನಡೆದಿದ್ದು, ರಸ್ತೆಯಲ್ಲಿ ಅಡ್ಡಲಾಗಿ ಬಂದ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿ ದುರ್ಮರಣಕ್ಕಿಡಾಗಿದ್ದಾರೆ.

ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ಘಟನೆಗೂ ಮುನ್ನ ರಸ್ತೆ ಕ್ರಾಸ್ ಮಾಡುತ್ತಿದ್ದ ಮತ್ತೊಂದು ಬೈಕ್ ಕೆಟಿಎಂ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆದ್ರೆ ಡಿಕ್ಕಿ ಸಂದರ್ಭದಲ್ಲೇ ತಮಿಳುನಾಡು ಸಾರಿಗೆ ಬಸ್ ಕೂಡಾ ಬಂದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರರ ಮೇಲೆ ಹರಿದುಹೋಗಿದೆ.

ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ಇನ್ನು ಬಸ್ ಹರಿದ ರಭಸಕ್ಕೆ ಕೆಟಿಎಂ ಬೈಕ್‌ನಲ್ಲಿದ್ದ ಇಬ್ಬರು ದುರಂತವಾಗಿ ಸಾವನ್ನಪ್ಪಿದರೆ ಇನ್ನೊಂದು ಬೈಕಿನಲ್ಲಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತಂತೆ ತನಿಖೆ ನಡೆಸಿರುವ ಚೆನ್ನೈ ಪೊಲೀಸರು ಘಟನೆ ಕುರಿತಂತೆ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ಘಟನಾ ಸ್ಥಳ ಪರಿಶೀಲನೆ ನಂತರ ಆ ಪ್ರದೇಶದ ಸುತ್ತುಲಿನ ಸಿಸಿಟಿವಿ ವೀಕ್ಷಿಸಿರುವ ಪೊಲೀಸರು, ಕೆಟಿಎಂ ಬೈಕ್ ಸವಾರರು ಮಾಡಿದ ಅಧ್ವಾನವೇ ಘಟನೆಗೆ ಕಾರಣವೆಂಬುದನ್ನು ಖಚಿತಪಡಿಸಿದ್ದಾರೆ.

ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ಅತಿಯಾದ ವೇಗದಲ್ಲಿ ಬಂದಿದ್ದ ಕೆಟಿಎಂ ಬೈಕ್ ಸವಾರರು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬೈಕ್ ಚಾಲನೆ ಮಾಡುತ್ತಿದ್ದರು. ಇದಲ್ಲದೇ ರೋಡ್ ಕ್ರಾಸಿಂಗ್ ಮಾಡುತ್ತಿದ್ದ ಮತ್ತೊಂದು ಬೈಕಿಗೆ ಅವರೇ ಡಿಕ್ಕಿ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ಸದ್ಯ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಬೈಕ್ ಸವಾರರ ಮೇಲೆ ಬಸ್ ಹರಿಸಿದ ಚಾಲಕನ ಮೇಲೂ ಕೇಸ್ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಚೆನ್ನೈನಲ್ಲಿ ಭೀಕರ ರಸ್ತೆ ಅಪಘಾತ- ಇಬ್ಬರು ಕೆಟಿಎಂ ಸವಾರರು ಸ್ಪಾಟ್ ಡೆತ್..!!

ಆದ್ರೆ ಪ್ರಕರಣವನ್ನು ಮೇಲ್ನೋಟಕ್ಕೆ ನೋಡಿದಾಗ ಕೆಟಿಎಂ ಬೈಕ್ ಸವಾರರದ್ದೇ ತಪ್ಪು ಎಂದು ಸಾಬೀತಾಗಿದ್ದರೂ ಅನ್ಯಾಯವಾಗಿ ಬಸ್ ಚಾಲಕ ಸದ್ಯಕ್ಕೆ ಕಂಬಿ ಎಣಿಸುವಂತಾಗಿದೆ. ಇದರಿಂದಾಗಿ ಅತಿವೇಗದ ಬೈಕ್ ಚಾಲನೆ ಮತ್ತು ರಸ್ತೆ ನಿಯಮ ಉಲ್ಲಂಘನೆ ಮಾಡುವ ಮೊದಲು ಎಲ್ಲರೂ ಒಮ್ಮೆ ಯೋಚಿಸಲೇಬೇಕು.

ಹೊಚ್ಚ ಹೊಸ ಮಾರುತಿ ಇಗ್ನಿಸ್ ಕಾರಿನ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಅಪಘಾತ accident
English summary
A brutal accident on the streets of Chennai is a brutal reminder of how everything can go wrong in an instant on India's dangerous roads.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark