ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

By Nagaraja

ದಕ್ಷಿಣ ಕೊರಿಯಾದಲ್ಲಿ ಟರ್ಮಿನಲ್ ಹೈ ಅಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ಮಿಸೈಲ್ ಪ್ರತಿಬಂಧಕ ವ್ಯವಸ್ಥೆಯನ್ನು ನಿಜಿಯೋಸುವ ಅಮೆರಿಕದ ನಿರ್ಧಾರದ ಬೆನ್ನಲ್ಲೇ ಅತ್ತ ಎಚ್ಚೆತ್ತುಕೊಂಡಿರುವ ಚೀನಾ, ಆರು ವರ್ಷಗಳ ಹಿಂದೆ ನಡೆಸಿರುವ ಖಂಡಾಂತರ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯ ನೈಜ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಿದೆ.

ದಕ್ಷಿಣ ಕೊರಿಯಾಗೆ ನೆರವು ಮಾಡುವ ಅಮೆರಿಕ ನೀತಿಯ ವಿರುದ್ಧವಾಗಿ ಧ್ವನಿ ಎತ್ತಿರುವ ಚೀನಾ, ಖಂಡಾಂತರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಲ್ಲಿ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದೆ. ಇದು ವಿಶ್ವದ ಅಶ್ವ ಶಕ್ತಿಗಳ ನಡುವೆ ಶೀತಲ ಸಮರಕ್ಕೆ ಹೇತುವಾಗಲಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಖಂಡಾಂತರ ಕ್ಷಿಪಣಿ ವ್ಯವಸ್ಥೆಯು ಚೀನಾ ರಕ್ಷಣಾ ವ್ಯವಸ್ಥೆಯ ಬಲವನ್ನು ಇಮ್ಮಡಿಗೊಳಿಸಿದೆ. 2010ರ ಬಳಿಕ ಅನೇಕ ಬಾರಿ ಯಶಸ್ವಿ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಎತ್ತರದ ವಾಯು ವಲಯ ರಕ್ಷಣೆಯ ಭಾಗವಾಗಿ ಮುಂದಿನ ವರ್ಷಾಂತ್ಯದೊಳಗೆ ಟರ್ಮಿನಲ್ ಹೈ ಅಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ನಿಯೋಜಿಸುವ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಜಂಟಿ ನೀತಿಗೆ ವಿರುದ್ಧವಾಗಿ ಚೀನಾ ತಾಜಾ ವಿಡಿಯೋ ತುಣುಕುಗಳನ್ನು ಬಯಲು ಮಾಡಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಅಮೆರಿಕ, ಉತ್ತರ ಕೊರಿಯಾದಿಂದ ದಕ್ಷಿಣ ಕೊರಿಯಾಗೆ ಎದುರಾಗುವ ಸಂಭವನೀಯ ದಾಳಿಯನ್ನು ಎದುರಿಸಲು ಖಂಡಾಂತರ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ ಎಂದಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಈ ನಡುವೆ ಅಮೆರಿಕ ನೀತಿಯನ್ನು ಖಂಡಿಸಿರುವ ಚೀನಾ ಹಿರಿಯಧಿಕಾರಿಗಳು, ಅಮೆರಿಕ ನಿಲುವಿನಿಂದ ನಮ್ಮ ಆಂತರಿಕ ಭದ್ರತೆಗೆ ಭೀತಿ ಎದುರಾಗಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಏತನ್ಮಧ್ಯೆ ದಕ್ಷಿಣ ಕೊರಿಯಾವನ್ನು ಎಚ್ಚರಿಸಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಇದರಿಂದ ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆ ಬರಲಿದೆ ಎಂದಿದ್ದಾರೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಅಮೆರಿಕದ ಟರ್ಮಿನಲ್ ಹೈ ಅಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಖಂಡಾಂತರ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯು, ಶತ್ರು ಪಾಳೇಯದಿಂದ ಚಿಮ್ಮಿ ಬರುವ ಮಿಸೈಲ್ ಗಳನ್ನು ಹೊಡೆದುರುಳಿಸುವಷ್ಟು ಸಮರ್ಥವೆನಿಸಿಕೊಂಡಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಇದಾದ ಬೆನ್ನಲ್ಲೇ ಹೇಳಿಕೆ ಕೊಟ್ಟಿರುವ ಅಮೆರಿಕ, ದಕ್ಷಿಣ ಕೊರಿಯಾದಲ್ಲಿ ಅತ್ಯಾಧುನಿಕ ಥಾಡ್ ಮಿಸೈಲ್ ಪ್ರತಿಬಂಧಕವನ್ನು ನಿಯೋಜಿಸುವುದರಿಂದ ಚೀನಾಗೆ ಯಾವುದೇ ಭದ್ರತಾ ಭೀತಿ ಕಾಡದು ಎಂದಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಚೀನಾ ಹೊರತಾಗಿ ಅತ್ತ ರಷ್ಯಾ ಕೂಡಾ ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ನಿಲುವನ್ನು ವಿರೋಧಿಸುತ್ತಿದೆ. ಥಾಡ್ ರಾಡಾರ್ ವ್ಯವಸ್ಥೆಯಿಂದ ಮಿಲಿಟರಿ ಸಾಮರ್ಥ್ಯವನ್ನು ಪತ್ತೆ ಹಚ್ಚಲು ಸಾಧ್ಯ ಎಂಬ ಭೀತಿ ಚೀನಾಗೆ ಕಾಡುತ್ತಿದೆ.

ಅಮೆರಿಕ 'ಥಾಡ್' ಮಿಸೈಲ್ ವ್ಯವಸ್ಥೆಗೆ ಚೀನಾ ಕೆಂಗಣ್ಣು

ಉತ್ತರ ಕೊರಿಯಾದ ಖಂಡಾಂತರ ಸಾಮರ್ಥ್ಯದ ಕ್ಷಿಪಣಿ ವ್ಯವಸ್ಥೆಯ ವಿರುದ್ಧವಾಗಿ ಥಾಡ್ ಮಿಸೈಲ್ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಚೀನಾ ಭದ್ರತೆಗೆ ತೊಂದರೆ ಎದುರಾಗದು ಎಂದು ಅಮೆರಿಕ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

Most Read Articles

Kannada
English summary
China releases footage of first interception test for ballistic missile defense system
Story first published: Wednesday, July 27, 2016, 11:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X