ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

Written By:

ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ಬೆಳವಣಿಗೆ ಎಂದೇ ಬಿಂಬಿಸಬೇಕಾಗಿರುವ ಸುದ್ದಿಯೊಂದರಲ್ಲಿ ನೆರೆಯ ಚೀನಾ ದೇಶದ ಸಂಶೋಧಕರು ಮೆದುಳಿನಿಂದಲೇ ನಿಯಂತ್ರಿತ ಕಾರನ್ನು ಅವಿಷ್ಕಾರ ಮಾಡುವ ಮೂಲಕ ವಿಜ್ಞಾನ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ.

Also Read: ಬೈಕ್ ಜಾಕೆಟ್‌ನಲ್ಲೇ ಟರ್ನ್ ಸಿಗ್ನಲ್, ಬ್ರೇಕ್ ಲೈಟ್ಸ್ ಮುಂದಕ್ಕೆ ಓದಿ

ಚೀನಾದ ಉತ್ತರ-ಪೂರ್ವ ಬಂದರು ನಗರ ಟಿಯಾಂಜಿನ್ ಸಂಶೋಧಕರು ಮೆದುಳು ಚಾಲಿತ ಕಾರನ್ನು ಕಂಡುಹುಡುಕಿದ್ದಾರೆ. ಇದೇ ಮೊದಲ ಬಾರಿಗೆ ಇಂತಹದೊಂದು ತಂತ್ರಜ್ಞಾನ ಅಭಿವೃದ್ಧಿಗೊಂಡಿರುವುದು ವಾಹನ ಲೋಕದಲ್ಲೇ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ಟಿಯಾಂಜಿನ್‌ನಲ್ಲಿ ಸ್ಥಿತಗೊಂಡಿರುವ ನಾನ್ಕಯ್ ವಿಶ್ವ ವಿದ್ಯಾಲಯದ ಸಂಶೋಧಕರ ತಂಡವು ಎರಡು ವರ್ಷಗಳ ಕಾಲ ನಡೆಸಿದ ನಿರಂತರ ಅಧ್ಯಯನದ ಬಳಿಕ ಮೆದುಳಿನಿಂದ ನಿಯಂತ್ರಿತ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ನೈಜ ರಸ್ತೆ ಪರಿಸ್ಥಿತಿಯಲ್ಲೂ ಮೆದುಳು ಚಾಲಿತ ಕಾರಿನ ಯಶಸ್ವಿ ಪ್ರಯೋಗವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಮತ್ತಷ್ಟು ನಿಖರತೆಯನ್ನು ಪಡೆಯುವ ನಿರೀಕ್ಷೆ ಹೊಂದಲಾಗಿದೆ.

ಹೇಗೆ ಕೆಲಸ ಮಾಡುತ್ತದೆ ?

ಹೇಗೆ ಕೆಲಸ ಮಾಡುತ್ತದೆ ?

ಚಾಲನೆ ವೇಳೆ ಚಾಲಕ ಕಾರಲ್ಲಿ ಆಳವಡಿಸಲಾಗಿರುವ ಮೆದುಳಿನ ಸಂಕೇತಗಳನ್ನು ಓದುವ ಉಪಕರಣವನ್ನು ಧರಿಸಬೇಕಾಗುತ್ತದೆ. ಈ ಮೂಲಕ ಚಾಲಕ ಮನಸ್ಸಲ್ಲೇ ಯೋಚಿಸುತ್ತಿರುವಂತೆಯೇ ಮುಂದಕ್ಕೆ ಹೋಗಲು, ಹಿಂದಕ್ಕೆ ಚಲಿಸಲು, ವಾಹನ ನಿಲ್ಲಿಸಲು ಅಷ್ಟೇ ಯಾಕೆ ಕಾರನ್ನು ಲಾಕ್ ಹಾಗೂ ಅನ್ ಲಾಕ್ ಮಾಡಲು ಇದರಿಂದ ಸಾಧ್ಯ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ಅಂದರೆ ನಿಮ್ಮ ಮನಸ್ಸಿನಿಂದಲೇ ಕಾರು ಹಿಂದೂ ಮುಂದೂ ಚಲಿಸಲಿದ್ದು, ಕೈ ಅಥವಾ ಕಾಲುಗಳ ಬಳಕೆಯ ಅಗತ್ಯವೇ ಇಲ್ಲ ಎಂದು ಸಂಶೋಧಕರು ವಿವರಿಸುತ್ತಾರೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ಸಂಶೋಧಕ ಜಾಂಗ್ ಜಾವೋ ಪ್ರಕಾರ, ಮಾನವ ಮೆದುಳಿನ ಸಂಕೇತಗಳನ್ನು ಸೆರೆ ಹಿಡಿಯಲು 16 EEG (electroencephalogram) ಸೆನ್ಸಾರ್ ಗಳನ್ನು ಆಳವಡಿಸಲಾಗಿದೆ. ಇದಕ್ಕಾಗಿ ಕಂಪ್ಯೂಟರ್ ಪ್ರೋಗ್ರಾಂ ಅಭಿವೃದ್ಧಿಪಡಿಸಲಾಗಿದ್ದು, ಇವುಗಳು ಸಂಬಂಧಿತ ಸಂಕೇತಗಳನ್ನು ಕಾರಿಗೆ ವರ್ಗಾಯಿಸುವ ಮೂಲಕ ನಿಯಂತ್ರಿಸುತ್ತದೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ವಾಹನ ಜಗತ್ತಿನಲ್ಲಿ ಡ್ರೈವರ್ ಲೆಸ್ ಕಾರುಗಳಿಂದ ತೊಡಗಿ ಅನೇಕ ತಂತ್ರಗಾರಿಕೆಯ ಅವಿಷ್ಕಾರವಾಗುತ್ತಿದೆ. ಹಾಗಿರುವಾಗ ಮನಸ್ಸಿನಿಂದಲೇ ನಿಯಂತ್ರಿಸುವ ಇಂತಹದೊಂದು ಕಾರು ನಿಜಕ್ಕೂ ವಿಶಿಷ್ಟವಾಗಿ ಗುರುತಿಸಿಕೊಳ್ಳಲಿದೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ಸಂಶೋಧಕರ ಪ್ರಕಾರ ಡ್ರೈವರ್‌ಲೆಸ್ ಕಾರುಗಳ ಮುಂದುವರಿದ ಅಭಿವೃದ್ಧಿಯು ನಮ್ಮಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಮೆದುಳಿನಿಂದ ನಿಯಂತ್ರಿತ ಕ್ರಿಯಾತ್ಮಕತೆಗಳು ಹೆಚ್ಚು ಪ್ರಾಯೋಗಿಕವಾಗಿದ್ದು, ಡ್ರೈವರ್ ಲೆಸ್ ಕಾರುಗಳ ತಳಹದಿಯಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಬಹುದಾಗಿದೆ ಎನ್ನುತ್ತಾರೆ.

ಚೀನಾ ಸಂಶೋಧಕರಿಂದ ಮೆದುಳು ನಿಯಂತ್ರಿತ ಕಾರು ಅವಿಷ್ಕಾರ

ಒಟ್ಟಿನಲ್ಲಿ ಹುಟ್ಟಿನಿಂದಲೇ ಅಂಗವಿಕಲ ಸಮಸ್ಯೆಯನ್ನು ಎದುರಿಸುತ್ತಿರುವ ಜನರಿಗಾಗಿ ಕಾರು ಕನಸನ್ನು ನನಸಾಗಿಸುವುದು ತಮ್ಮ ಆರಂಭಿಕ ಕಲ್ಪನೆಯಾಗಿತ್ತು ಎಂದು ವಿಜ್ಞಾನಿಗಳು ವಿವರಿಸುತ್ತಾರೆ.

ಇವನ್ನೂ ಓದಿ

2020 ಜಪಾನ್ ಒಲಿಂಪಿಕ್ಸ್‌ಗೆ ತೆರಳಲು ಚಾಲಕ ರಹಿತ ರೊಬೊಟ್ ಟ್ಯಾಕ್ಸಿ! ಮುಂದಕ್ಕೆ ಓದಿ

English summary
Chinese researchers built brain powered car
Story first published: Monday, December 14, 2015, 9:31 [IST]
Please Wait while comments are loading...

Latest Photos