ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

Written By:

ಭಾರತೀಯ ಮೂಲದ ಹಲವಾರು ಮಂದಿ ಸಿಂಗಾಪುರದಲ್ಲಿ ಉದ್ಯೋಗ ಹರಸಿಕೊಂಡಿದ್ದು, ತಮ್ಮ ಕುಟುಂಬದೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಹಬ್ಬ ಹರಿ ದಿನಗಳ ಆಚರಣೆಗಳಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಭಾರತದಲ್ಲಿ ನಾನಾ ಧರ್ಮ ಪಂಗಡದವರು ಹಬ್ಬವನ್ನು ವಿಶೇಷ ರೀತಿಯಲ್ಲಿ ಕೊಂಡಾಡುತ್ತಾರೆ. ಪ್ರಸ್ತುತ ದೀಪಾವಳಿ ಹಬ್ಬ ಆಗಮನವಾಗಿವಾಗಿರುವಂತೆಯೇ ಸಿಂಗಾಪುರದ ಮೆಟ್ರೊ ರೈಲು ಮತ್ತು ಸ್ಟೇಷನ್ ಸಂಪೂರ್ಣವಾಗಿ ಭಾರತೀಯ ಶೈಲಿಯಲ್ಲಿ ಬದಲಾಗಿಬಿಟ್ಟಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಸಿಂಗಾಪುರದ ಮಾಸ್ ರಾಪಿಡ್ ಟ್ರಾನ್ಸಿಸ್ಟ್ (ಎಂಆರ್ ಟಿ) ರೈಲು ಜಾಲ ವ್ಯವಸ್ಥೆ ದೀಪಾವಳಿ ಥೀಮ್ ನಲ್ಲಿ ಹೊಸತಾದ ರೈಲೊಂದನ್ನು ಬಿಡುಗಡೆಗೊಳಿಸಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಅಷ್ಟೇ ಯಾಕೆ ಸಂಪೂರ್ಣ ರೈಲು ನಿಲ್ದಾಣವನ್ನೇ ವರ್ಣಮಯ ದೀಪಾವಳಿ ಆಲಂಕಾರದೊಂದಿಗೆ ಬದಲಾಯಿಸಲಾಗಿದೆ. ಇಲ್ಲಿ ಪುಟ್ಟ ಭಾರತವನ್ನು ಕಣ್ಣಾರೆ ದರ್ಶನ ಮಾಡಬಹುದಾಗಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಇಲ್ಲಿ ದೀಪಾವಳಿ ಹಬ್ಬವನ್ನು ಬರಮಾಡಿಕೊಳ್ಳುವ ರೀತಿಯನ್ನು ಕಂಡಾಗ ಭಾರತದಲ್ಲಿ ಇಷ್ಟೊಂದು ಸಂಭ್ರಮದಲ್ಲಿ ಹಬ್ಬವನ್ನು ಆಚರಿಸಲಾಗುತ್ತಿದೆಯೇ ಎಂಬ ಸಂದೇಹ ಮೂಡುತ್ತದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ದೀಪಾವಳಿ ಥೀಮ್ ರೈಲನ್ನು ಸಿಂಗಾಪುರ ಸಾರಿಗೆ ಸಚಿವ ಖಾವ್ ಬೂನ್ ವಾನ್ ಅಧಿಕೃತವಾಗಿ ಉದ್ಘಾಟಿಸಿದರು. ಇದು ಉತ್ತರ ಪೂರ್ವ ಲೇನ್ ನಿಂದ ಸಂಚಾರವನ್ನು ಆರಂಭಿಸಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಅದೃಷ್ಟ ಸಂಕೇತವಾಗಿರುವ ಭಾರತೀಯ ಶೈಲಿಯ ಆಭರಣಗಳು, ತಾವರೆ, ನವಿಲುಗಳ ಆಲಂಕಾರವನ್ನು ಮೆಟ್ರೋ ಸ್ಟೇಷನ್ ಮತ್ತು ರೈಲಿನೊಳಗೆ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಲಿಟ್ಲ್ ಇಂಡಿಯಾ ಶಾಪ್ ಕೀಪರ್ಸ್ ಆಂಡ್ ಹೆರಿಟೇಜ್ ಅಸೋಸಿಯೇಷನ್ (ಲಿಷಾ) ಜೊತೆ ಸೇರಿಕೊಂಡು ಲ್ಯಾಂಡ್ ಟ್ರಾನ್ಸ್ ಪೋರ್ಟ್ ಅಥಾರಟಿ (ಎಲ್ ಟಿಎ) ದೀಪಾವಳಿ ಥೀಮ್ ರೈಲನ್ನು ರಚಿಸಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಉತ್ತರ ಪೂರ್ವ ಲೈನ್ ಮತ್ತು ಡೌನ್ ಟೌನ್ ರೈಲ್ವೆ ಸ್ಟೇಷನ್ ಗಳನ್ನು ಸಹ ಪುಟ್ಟ ಭಾರತದ ರೂಪದಲ್ಲಿ ಸಂಪೂರ್ಣವಾಗಿ ಬದಲಾಯಿಸಲಾಗಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ದೀಪಾವಳಿ ಹಬ್ಬವು ಕತ್ತಲಿನಿಂದ ಬೆಳಕನೆಡೆಗೆ ವಿಜಯದ ಸಂಕೇತವಾಗಿದ್ದು, ಇದರಂಗವಾಗಿ ವಿಶೇಷ ರಂಗೋಲಿ, ಹೂಗಳನ್ನು ಚಿತ್ತಾರ ಮೂಡಿಸಲಾಗಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಅಂದ ಹಾಗೆ ಪ್ರಸ್ತುತ ರೈಲು ಸೇವೆಯು ಅಕ್ಟೋಬರ್ 15ರಿಂದಲೇ ಸೇವೆಯನ್ನು ಆರಂಭಿಸಿದೆ. ಈಗ ದೀಪಾವಳಿ ನಂತರ ನವೆಂಬರ್ ಮಧ್ಯಂತರ ಅವಧಿಯ ವರೆಗೂ ಓಡಾಡಲಿದೆ.

ಸಿಂಗಾಪುರದಲ್ಲೊಂದು ಪುಟ್ಟ ಭಾರತ; ದೀಪಾವಳಿ ಕಿಚ್ಚು ಹಚ್ಚಿದ ರೈಲು

ಇವೆಲ್ಲದರೊಂದಿಗೆ ಭಾರತೀಯ ಹಬ್ಬ ಆಚರಣೆ ಮತ್ತು ಸಾಂಪ್ರದಾಯಗಳ ಮಹತ್ವ ಸಿಂಗಾಪುರ ಜನತೆಯಲ್ಲೂ ಪಸರಿಸುವಂತಾಗಿದೆ.

Read more on ಭಾರತ india
English summary
Diwali Celebrations Abroad — Singapore Gets Diwali-Themed Train!
Story first published: Thursday, October 27, 2016, 18:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark