ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

By Praveen Sannamani

ಅರೇ ಏನಿದು ಕಿಕಿ ಚಾಲೆಂಜ್. ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಹೆಸರು ಕೇಳಿ ಕೇಳಿ ಸಾಕಾಗಿ ಹೋಗಿದೆ. ಹಿಂಗತಾ ನನ್ನ ಕ್ಲೋಸ್ ಫ್ರೇಂಡ್ ಒಬ್ಬ ಕಾಲ್ ಮಾಡಿದ್ದ. ನನಗೂ ಕೂಡಾ ಅದುವರೆಗೂ ಆ ಬಗ್ಗೆ ಗೊತ್ತಿರಲಿಲ್ಲಾ. ಸರಿ ಏನಿದು ಕಿಕಿ ಚಾಲೆಂಜ್ ಅಂತಾ ಜಾಲತಾಣಗಳಲ್ಲಿ ತದಕಾಡಿದಾಗ ಇದರ ವಿಸ್ತೃತ ಪದ ಸಿಕ್ತು. ಕ್ರೇಜ್ ಜೊತೆಗೆ ಪ್ರಾಣಕ್ಕೆ ಕುತ್ತು ತರಬಹುದಾದ ಈ ಚಾಲೆಂಜ್ ಸದ್ಯ ಜಗತ್ತಿನ ಟ್ರೆಂಡಿಂಗ್ ಸುದ್ದಿ ಅಂದ್ರೆ ನೀವು ನಂಬಲೇಬೇಕು.

ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

ಹೌದು, ವಿಶ್ವದಾದ್ಯಂತ ಟ್ರೆಂಡಿಂಗ್ ನಲ್ಲಿರುವ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕ್ರೇಜಿ ಆಗಿರುವ ಕಿಕಿ ಚಾಲೆಂಜ್ ಮಾಡಲು ಹೋಗಿ ಸಾಕಷ್ಟು ಅನಾಹುತಗಳು ಸಂಭವಿಸಿದೆ. ಇದೇ ಕಾರಣಕ್ಕೆ ಕಿಕಿ ಚಾಲೆಂಜ್ ಅನ್ನು ಹಲವಾರು ಕಡೆಗಳಲ್ಲಿ ಬ್ಯಾನ್ ಕೂಡಾ ಮಾಡಲಾಗಿದೆಯೆಂತೆ.

ಕಿಕಿ ಚಾಲೆಂಜ್ ಅನ್ನು ಇನ್‌ ಮೈ ಫೀಲಿಂಗ್ಸ್ ಚಾಲೆಂಜ್‌ ಎಂದೂ ಕರೆಯಲಾಗುತ್ತಲ್ಲದೇ, ಈ ಅಪಾಯಕಾರಿ ಚಾಲೆಂಜ್‌‌ನಿಂದ ಈಗಾಗಲೇ ಹಲವಾರು ಅನಾಹುತಗಳು ಸಂಭವಿಸಿ ಎಂದ್ರೆ ನೀವು ನಂಬಲೇಬೇಕು. ನೋಡಲು ಒಂದು ಥರಾ ಕ್ರೇಜ್ ಆಗಿರುವ ಈ ಚಾಲೆಂಜ್‌ನಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದ್ರು ಅಲ್ಲಿ ಯಮರಾಜ ಕರೆಕ್ಟ್ ಆಗಿ ಹಾಜರಿ ಹಾಕ್ತಾನೆ.

ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

ಕೇವಲ ವಿದೇಶಿಗಳಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಕಿಕಿ ಚಾಲೆಂಜ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪ್ರಾಣಕ್ಕೆ ಸಂಚಕಾರ ತರುವ ಕಿಕಿ ಚಾಲೆಂಜ್ ಸ್ವೀಕರಿಸಿ ಅನಾಹುತ ಸೃಷ್ಠಿಸಬೇಡಿ ಅಂತಾ ಮುಂಬಯಿ ಪೊಲೀಸರು ಕೂಡಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

ಕಿಕಿ ಚಾಲೆಂಜ್‌ ಅಂದ್ರೆ ಏನು?

ಚಲಿಸುವ ಕಾರಿನಿಂದಲೇ ಜಿಗಿದು ಹಾಲಿವುಡ್‌ ಗಾಯಕ ಡ್ರೇಕ್‌ನ ಇನ್‌'ಮೈ ಫೀಲಿಂಗ್ಸ್' ಹಾಡಿಗೆ ಕಾರಿನ ವೇಗಕ್ಕೆ ಸರಿ ಹೊಂದುವಂತೆ ನೃತ್ಯ ಮಾಡಿಬೇಕು. ನಂತರ ಹಾಡು ಮುಗಿಯುತ್ತಿದ್ದಂತೆ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಚಾಲೆಂಜ್‌ ಇದಾಗಿದೆ.

ಬಾಲಿವುಡ್‍ನ ಕೆಲವು ಸೆಲೆಬ್ರಿಟಿಯರು ಈಗಾಗಲೇ ಈ ಚಾಲೆಂಜ್ ಅನ್ನು ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ಯುವಕ ಯುವತಿಯರಲ್ಲಿ ಹೆಚ್ಚಾಗಿ ಕಿಕಿ ಚಾಲೆಂಜ್ ಹುಚ್ಚು ಶುರುವಾಗಿದೆ.

ಪೊಲೀಸರೇ ಈ ಅಪಾಯಕಾರಿ ಚಾಲೆಂಜ್‌ ಸ್ವೀಕರಿಸಬೇಡಿ ಎಂದು ಎಚ್ಚರಿಕೆ ಕೊಡುವಾಗ ನಟಿ ಜನರನ್ನು ಆ ಅಪಾಯಕಾರಿ ಚಾಲೆಂಜ್ ಸ್ವೀಕರಿಸಲು ಪ್ರೇರೇಪಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಹಲವರು ಇದಕ್ಕೆ ಆಕ್ಷೇಪ ಕೂಡಾ ವ್ಯಕ್ತ ಪಡಿಸಿದ್ದಾರೆ.

ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

ಇದಲ್ಲದೇ ಐಟಿ ಸಿಟಿ ಬೆಂಗಳೂರಿಗೆ ಕಿಕಿ ಚಾಲೆಂಜ್ ಜ್ವರ ಹಬ್ಬಿದ್ದು, ಬಿಗ್ ಬಾಸ್ 5 ಸಿಸನ್ ಸ್ಪರ್ಧಿ ನಿವೇದಿತಾ ಗೌಡ ಕೂಡಾ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ಅಪಾಯಕಾರಿ ಕಿಕಿ ಚಾಲೆಂಜ್ ಸ್ವೀಕರಿಸಿ ಓಡುವ ಕಾರಿನಿಂದ ಇಳಿದ ಹೆಜ್ಜೆ ಹಾಕಿರುವ ನಿವೇದಿತಾ ಗೌಡ ಡ್ಯಾನ್ಸ್‌ಗೆ ಹಲವು ವಿರೋಧ ವ್ಯಕ್ತಪಡಿಸಿದ್ದಾರೆ.

ಕಿಕಿ ಚಾಲೆಂಜ್ ಅಪಾಯಕಾರಿ ಕುರಿತು ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಸಹ ಎಚ್ಚರಿಕೆ ಸಂದೇಶ ರವಾನಿಸಿದ್ದು, ಕಿಕಿ ಚಾಲೆಂಜ್ ನಿಮ್ಮ ಬಾಡಿಗೂ ಗಾಡಿಗೂ ಅಪಾಯಕಾರಿ ಅಂತಾ ಜಾಗೃತಿ ನಡೆಸುತ್ತಿದ್ದಾರೆ.

ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

ಜೊತೆಗೆ ಕಿಕಿ ಚಾಲೆಂಜ್‍ನಿಂದ ತಲೆಬುರುಡೆ ಒಡೆದುಕೊಂಡ ಯುವಕನ ವಿಡಿಯೋ ಒಂದನ್ನ ಅಪ್‌ಲೋಡ್ ಮಾಡಿರುವ ಆಡುಗೋಡಿ ಟ್ರಾಫಿಕ್ ಪೊಲೀಸರು, ಅಪಾಯಕಾರಿ ಚಾಲೆಂಜ್ ಸ್ಪಿಕರಿಸುವುದಕ್ಕೂ ಮುನ್ನ ನಿಮ್ಮ ಜೀವದ ಎಚ್ಚರಿಕೆ ವಹಿಸಿ ಎಂಬ ಸಲಹೆ ನೀಡಿದ್ದಾರೆ.

ಬೇಡ ಹುಡುಗಾಟಿಕೆ- 'ಕಿಕಿ' ಚಾಲೆಂಜ್‌ ಸ್ವಿಕರಿಸುವುದಕ್ಕೂ ಮುನ್ನ ಹುಷಾರ್

ಒಟ್ಟಿನಲ್ಲಿ ಕಿಕಿ ಚಾಲೆಂಜ್ ಸ್ವೀಕರಿಸಿದ ಹಲವು ಮಂದಿ ಬೇರೆವರಿಗೆ ಚಾಲೆಂಜ್ ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಚಾಲೆಂಜ್ ಸ್ವೀಕರಿಸಿದವರಲ್ಲಿ ಸಾಮಾನ್ಯವಾಗಿ ಪೂರ್ಣಗೊಳಿಸಿದವರ ಸಂಖ್ಯೆ ತೀರಾ ಕಡಿಮೆ, ಎದ್ದು ಬಿದ್ದು ಬೇರೆಯವರಿಗೆ ತೊಂದರೆ ನೀಡಿದವರ ಪ್ರಮಾಣವೇ ಅಧಿಕ ಎನ್ನಲಾಗಿದೆ. ಅದರಲ್ಲೂ ಭಾರತದಂತಹ ಪ್ರದೇಶದಲ್ಲಿ ಈ ಚಾಲೆಂಜ್ ಫೂರ್ಣ ಮಾಡಲು ಹೊದರೆ ತೊಂದರೆ ತಪ್ಪಿದಲ್ಲ.

Most Read Articles

Kannada
Read more on off beat police
English summary
Don't Try Kiki Challenge in India-Police Warns Public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X