Just In
- 4 min ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 1 hr ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- 1 hr ago
13 ಉದ್ಯೋಗಿಗಳಿಗೆ ಹೊಸ ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ ಕಂಪನಿ
- 2 hrs ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
Don't Miss!
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Movies
Paaru: ತಾಯಿ ಆಗುತ್ತಿರುವ ವಿಚಾರವನ್ನು ಆದಿ ಬಳಿ ಹೇಳಿಯೇ ಬಿಡುತ್ತಾಳಾ ಪಾರು?
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶ್ವದ ಮೊದಲ ಹೈಡ್ರೋಜನ್ ರೈಲುಗಳಿಗೆ ಚಾಲನೆ: ವೇಗ, ಮೈಲೇಜ್, ವೈಶಿಷ್ಟ್ಯಗಳ ಮಾಹಿತಿ
ಹೆಚ್ಚು ಪರಿಸರ ಸ್ನೇಹಿ ಪ್ರಯಾಣಕ್ಕೆ ಬಾಗಿಲು ತೆರೆಯುವ ಮೂಲಕ ಜರ್ಮನಿಯು ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಕಳೆದ ಬುಧವಾರ ಉದ್ಘಾಟಿಸಿದೆ.
Recommended Video
ಜರ್ಮನಿಯ ಲೋವರ್ ಸ್ಯಾಕ್ಸೋನಿಯ ಬ್ರೆಮರ್‌ವೋರ್ಡ್‌ನಲ್ಲಿರುವ ವಿವಿಧ ಮಾರ್ಗಗಳಿಗೆ 14 ಕೊರಾಡಿಯಾ ಐಲಿಂಟ್ ರೈಲುಗಳು ಸೇವೆ ಸಲ್ಲಿಸಲಿವೆ. ಇವು ಇಂಧನ-ಕೋಶ ಪ್ರೊಪಲ್ಷನ್ ತಂತ್ರಜ್ಞಾನದಿಂದ ಚಾಲಿತವಾಗಿವೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಈ 14 ರೈಲುಗಳಲ್ಲಿ ಐದು ಬುಧವಾರ ಪಾದಾರ್ಪಣೆ ಮಾಡಿವೆ. ವರ್ಷಾಂತ್ಯದ ವೇಳೆಗೆ ವಿವಿಧ ಮಾರ್ಗಗಳ 15 ಡೀಸೆಲ್ ರೈಲುಗಳನ್ನು ಹಂತಹಂತವಾಗಿ ಬದಲಾಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕೇವಲ ಒಂದು ಕಿಲೋಗ್ರಾಂ ಹೈಡ್ರೋಜನ್ ಇಂಧನವು ಸರಿಸುಮಾರು 4.5 ಲೀ.ಗಳಷ್ಟು ಡೀಸೆಲ್ ಇಂಧನಕ್ಕೆ ಸಮನಾಗಿರುತ್ತದೆ.

ಈ ಹೈಡ್ರೋಜನ್-ಚಾಲಿತ ರೈಲುಗಳು 100km (60 ಮೈಲಿ)ಗಿಂತ ಹೆಚ್ಚಿನ ರೈಲುಮಾರ್ಗದಲ್ಲಿ ಡೀಸೆಲ್ ರೈಲುಗಳನ್ನು ಬದಲಾಯಿಸಲಿವೆ. ಇದೀಗ ಪಾದಾರ್ಪಣೆ ಮಾಡಿರುವ ರೈಲುಗಳು ಹ್ಯಾಂಬರ್ಗ್ ಬಳಿಯ ಕುಕ್ಸ್‌ಹೇವನ್, ಬ್ರೆಮರ್‌ಹೇವನ್, ಬ್ರೆಮರ್‌ವೋರ್ಡೆ ಮತ್ತು ಬಕ್ಸ್‌ಟೆಹುಡ್ ನಗರಗಳಿಗೆ ಸೇವೆ ಸಲ್ಲಿಸಲಿವೆ.

ಈ ಯೋಜನೆಯು ಎಲ್ಬೆ-ವೆಸರ್ ರೈಲ್ವೇಸ್ ಅಂಡ್ ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ (ಇವಿಬಿ) ಅನ್ನು ಸಹ ಒಳಗೊಂಡಿದೆ, ಇದು ರೈಲುಗಳನ್ನು ಓಡಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ರೈಲುಗಳು ಯಾವುದೇ ಮಾಲಿನ್ಯವನ್ನು ಹೊರಸೂಸುವುದಿಲ್ಲ ಮತ್ತು ಕಡಿಮೆ ಶಬ್ದವನ್ನು ಉಂಟುಮಾಡುತ್ತವೆ, ಕೇವಲ ಉಗಿ ಮತ್ತು ಆವಿಯಾದ ನೀರನ್ನು ಹೊರಸೂಸುತ್ತವೆ.

ಈ ಮೂಲಕ 1,000-kilometre (621-mile) ವ್ಯಾಪ್ತಿಯನ್ನು ನೀಡುತ್ತವೆ. ಅಂದರೆ ಹೈಡ್ರೋಜನ್‌ನ ಒಂದು ಟ್ಯಾಂಕ್‌ನಲ್ಲಿ ಪೂರ್ಣ ದಿನದವರೆಗೆ ನೆಟ್ವರ್ಕ್‌ನಲ್ಲಿ ಕಾರ್ಯನಿರ್ವಹಿಸಬಹುದು ಮಾರ್ಗದಲ್ಲಿ ಈಗಾಗಲೇ ಹೈಡ್ರೋಜನ್ ಭರ್ತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ರೈಲುಗಳು 140 kmph (87mph) ವೇಗವನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿವೆ ಎಂದು CNN ವರದಿ ಮಾಡಿದೆ.

ಸಿಎನ್‌ಎನ್ ಪ್ರಕಾರ, ರೈಲ್ವೇಯ ಮಾಲೀಕರಾದ ಲ್ಯಾಂಡೆಸ್ನಾಹ್ವೆರ್ಕೆಹ್ರ್ಸ್‌ಗೆಸೆಲ್‌ಸ್ಚಾಫ್ಟ್ ನೀಡರ್ಸಾಚ್ಸೆನ್ (ಎಲ್‌ವಿಎನ್‌ಜಿ) ಮತ್ತು ಈ ರೈಲುಗಳ ನಿರ್ಮಾಪಕ ಅಲ್‌ಸ್ಟೋಮ್ ನಡುವೆ 93 ಮಿಲಿಯನ್ ಯುರೋಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವು ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಿಸುವ ಸುಸ್ಥಿರ ಭವಿಷ್ಯವನ್ನು ಖಾತ್ರಿಪಡಿಸುವ ಪ್ರಮುಖ ಗುರಿಯಾಗಿದೆ ಎಂದು ಅಲ್ಸ್ಟಾಮ್‌ನ ಸಿಇಒ ಹೆನ್ರಿ ಪೌಪರ್ಟ್-ಲಾಫಾರ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಭವಿಷ್ಯದಲ್ಲಿ ನಾವು ಯಾವುದೇ ಡೀಸೆಲ್ ರೈಲುಗಳನ್ನು ಖರೀದಿಸುವುದಿಲ್ಲ. ಈಗಾಗಲೇ ಬಳಸುತ್ತಿರುವ ಹಳೆಯ ಡೀಸೆಲ್ ರೈಲುಗಳನ್ನೂ ಮುಂದಿನ ದಿನಗಳಲ್ಲಿ ಬದಲಾಯಿಸಲಾಗುವುದು. ಆದರೆ ಅವುಗಳು ಹೈಡ್ರೋಜನ್ ಅಥವಾ ಬ್ಯಾಟರಿ ಚಾಲಿತ ರೈಲುಗಳಾಗಿರುತ್ತವೆಯೋ ಎಂಬುದನ್ನು ಕಂಪೆನಿ ಇನ್ನೂ ನಿರ್ಧರಿಸಿಲ್ಲ" ಎಂದು LNVG ವಕ್ತಾರ ಡಿರ್ಕ್ ಆಲ್ಟ್ವಿಗ್ ತಿಳಿಸಿದ್ದಾರೆ.

"ಈ ಯೋಜನೆಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನವೀಕರಿಸಬಹುದಾದ ಶಕ್ತಿಗಳ ರಾಜ್ಯವಾಗಿ ನಾವು ಸಾರಿಗೆ ವಲಯದಲ್ಲಿ ಹವಾಮಾನ ತಟಸ್ಥತೆಯ ಹಾದಿಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸುತ್ತಿದ್ದೇವೆ" ಎಂದು ಲೋವರ್ ಸ್ಯಾಕ್ಸೋನಿಯ ಅಧ್ಯಕ್ಷ ಸ್ಟೀಫನ್ ವೇಲ್ ಅಭಿಪ್ರಾಯಪಟ್ಟಿದ್ದಾರೆ.

ಹೈಡ್ರೋಜನ್ ಟ್ರೈನ್ ನಿರ್ವಹಣೆ ಹೇಗೆ
ಈ ರೈಲುಗಳಲ್ಲಿ ಹೈಡ್ರೋಜನ್(ಜಲಜನಕ) ಹಾಗೂ ಆಕ್ಸಿಜನ್(ಆಮ್ಲಜನಕ) ಬೆರೆಸುವ ಮೂಲಕ ವಿದ್ಯುತ್ ಉತ್ಪಾದಿಸಿ ಅದನ್ನು ರೈಲು ಚಾಲನೆಗೆ ಬಳಸಲಾಗುತ್ತದೆ. ಈ ಪ್ರತಿಕ್ರಿಯೆಯಲ್ಲಿ ಹಬೆ ಹಾಗೂ ನೀರಷ್ಟೇ ತ್ಯಾಜ್ಯವಾಗಿ ಹೊರಹಾಕಲ್ಪಡುತ್ತದೆ. ಹೆಚ್ಚುವರಿ ಇಂಧನವನ್ನು ರೈಲಿನಲ್ಲಿರುವ ಅಯಾನ್ ಲಿಥಿಯಂ ಬ್ಯಾಟರಿಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಲದೇ ರೈಲುಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಸಹ ಡೀಸೆಲ್ ರೈಲುಗಳಿಗಿಂತ ಕಡಿಮೆ.

ಹೈಡ್ರೋಜನ್ ರೈಲುಗಳು ದುಬಾರಿ
ಹೈಡ್ರೋಜನ್ ರೈಲುಗಳು ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗಿಂತ ದುಬಾರಿ. ಆದರೆ, ಈ ರೈಲುಗಳನ್ನು ನಿರ್ವಹಿಸುವ ವೆಚ್ಚ ಕಡಿಮೆ ಎಂದು ಯೋಜನೆಯ ವ್ಯವಸ್ಥಾಪಕ ಸ್ಟೆಫಾನ್ ಸ್ಕ್ರಾಂಕ್ ತಿಳಿಸಿದ್ದಾರೆ. ಆದರೆ, ಬ್ರಿಟನ್, ನೆದರ್ಲ್ಯಾಂಡ್ಸ್, ಡೆನ್ಮಾರ್ಕ್, ನಾರ್ವೆ, ಇಟಲಿ ಹಾಗೂ ಕೆನಡಾ ಸೇರಿದಂತೆ ಹಲವು ದೇಶಗಳು ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿವೆ.