ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

Written By:

ಕುಡಿದು ಕಾರು ಚಾಲನೆ ಮಾಡುತ್ತಿದ್ದ ಯುವಕನೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಅಪಘಾತ ನಡೆದಿದ್ದು, ಮರ್ಸಿಡಿಸ್ ಗುದ್ದಿದ ಪರಿಣಾಮ ಮಾರುತಿ ಸುಜುಕಿ ಆಲ್ಟೋ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

ರಾಜಧಾನಿ ದೆಹಲಿಯಲ್ಲಿ ಬಾಲಕನೊಬ್ಬ ಕಾರು ಚಾಲನೆ ಮಾಡಿ ವೃದ್ಧನೋರ್ವನ ಪ್ರಾಣ ತೆಗೆದ ಘಟನೆ ಮಾಸುವ ಮುನ್ನವೇ ಇದೀಗ ಅಂತದ್ದೇ ಮತ್ತೊಂದು ಪ್ರಕರಣ ನಡೆದಿದೆ. 19 ವರ್ಷದ ಯುವಕನೋರ್ವ ಕುಡಿತ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅನಾಹುತಕ್ಕೆ ಕಾರಣವಾಗಿದ್ದಾನೆ.

ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

ದೆಹಲಿ ಮೂಲದ ಧ್ರುವ ಬಗ್ಲಾ ಎಂಬಾತನೇ ಮರ್ಸಿಡಿಸ್ ಇ ಕ್ಲಾಸ್ ಕಾರನ್ನು ಚಾಲನೆ ಮಾಡುತ್ತಿದ್ದಾಗ ಮಾರುತಿ ಸುಜುಕಿ ಕಾರಿಗೆ ಡಿಕ್ಕಿ ಹೊಡಿದ್ದು, ಅಪಘಾತದಲ್ಲಿ ಮಾರುತಿ ಚಾಲಕನ ಪರಿಸ್ಥಿತಿ ಚಿಂತಾಜನಕವಾಗಿದೆ.

ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

ರಾತ್ರಿ 9 ಗಂಟೆಯ ಹೊತ್ತಿಗೆ ಪೂರ್ವ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಟ್ರಾಫಿಕ್ ಪೊಲೀಸರು ಚೆಕ್ ಫೋಸ್ಟ್‌ನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

ಕುಡಿದು ಚಾಲನೆ ಮಾಡುತ್ತಿದ್ದ ಧ್ರವ ಬಗ್ಲಾ ಸಿಕ್ಕಿಬೀಳುವ ಭಯಕ್ಕೆ ಪೊಲೀಸರಿಂದ ತಪ್ಪಿಸಿಕೊಳ್ಳಲು ತಕ್ಷಣವೇ ಮಾರ್ಗ ಬದಲಾವಣೆಗೆ ಮುಂದಾಗಿದ್ದಾನೆ. ಈ ವೇಳೆ ಕಾರು ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಧ್ರವ ಕಾರಿನ ಪಕ್ಕದಲ್ಲೇ ಇದ್ದ ಮಾರುಕಿ ಸುಜುಕಿಗೆ ನಿಯಂತ್ರಣ ತಪ್ಪಿ ವೇಗವಾಗಿ ಡಿಕ್ಕಿ ಹೊಡೆದಿದ್ದಾನೆ.

ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

ಅದೃಷ್ಠವಶಾತ್ ಮರ್ಸಿಡಿಸ್‌ನಲ್ಲಿದ್ದ ಅತ್ಯುತ್ತಮ ಏರ್‌ಬ್ಯಾಗ್ ವ್ಯವಸ್ಥೆಯಿಂದಾಗಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಮಾರುತಿ ಸುಜುಕಿ ಆಲ್ಟೋ ಚಾಲಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಕುಡಿದು ಕಾರು ಚಾಲನೆ- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ

ಇನ್ನು ಅಪಘಾತಕ್ಕೆ ಕಾರಣವಾದ ಧ್ರವ ವಿರುದ್ಧ ಪೊಲೀಸರು ದೂರು ದಾಖಲಿಸಿ ವಶಕ್ಕೆ ಪಡೆದಿದ್ದರು. ಆದ್ರೆ ಪೊಲೀಸರು ವಶಕ್ಕೆ ಪಡೆದ ಅರ್ಧ ಗಂಟೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

Read more on ಅಪಘಾತ accident
English summary
Read in Kannada about Drunk Youth Rams Mercedes Into Maruti Swift While Avoiding Police Check Post.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark