ಭಾರತದಲ್ಲಿ 'ಕ್ವಾಡ್-ಕಾಪ್ಟರ್' ಬಂದ್ರೆ ಓಲಾ, ಉಬರ್ ಕಾಲ ಮುಗಿಯುತ್ತೆ...!!

Written By:

ಪ್ರಪಂಚದ ಮೊದಲ ಕ್ವಾಡ್-ಕಾಪ್ಟರ್ ಗಳ ವಿಚಾರದ ಬಗ್ಗೆ ಈಗಾಗಲೇ ದುಬೈ ಸರ್ಕಾರ ದೃಢ ನಿಲುವಿಗೆ ಬಂದಿದ್ದು, ಈಗಾಗಲೇ ಪರೀಕ್ಷೆ ನೆಡೆಸಿರುವ ಈ ಟ್ಯಾಕ್ಸಿಗಳನ್ನು ಲೋಕಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದೆ.

ಚೈನಾ ನಿರ್ಮಿತ ಈ ಹಾರುವ ಸ್ವಯಂ ಚಾಲಿತ ಈಹ್ಯಾಂಗ್ 184 ಹೆಸರಿನ ವಾಹನವು ಪ್ರತಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಭೂಮಿಯಿಂದ ಸುಮಾರು 300 ಮೀಟರ್ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ವಾಹನ ಇದಾಗಿದೆ.

ಎರಡು ಗಂಟೆ ಕಾಲ ವಿದ್ಯುತ್ ಪೂರೈಸಿದರೆ 30 ನಿಮಿಷಗಳಷ್ಟು ಕಾಲ ಹಾರಬಲ್ಲದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಟ್ಯಾಕ್ಸಿಯಲ್ಲಿ ಕುಳಿತುಕೊಳ್ಳುವ ಪ್ರಯಾಣಿಕ ತಾನು ತಲುಪಬೇಕಾಗಿರುವ ನಿರ್ದಿಷ್ಟ ಸ್ಥಳವನ್ನು ಭೂಪಟದಲ್ಲಿ ಗುರುತಿಸಬೇಕು ಅಷ್ಟೇ, ಉಳಿದ ಎಲ್ಲಾ ಕೆಲಸಗಳನ್ನೂ ತಾನೇ ನೋಡಿಕೊಳ್ಳಲಿದೆ ಈ ಚಮತ್ಕಾರಿ ಟ್ಯಾಕ್ಸಿ.

"ವರ್ಲ್ಡ್ ಗವರ್ನಮೆಂಟ್ ಸಮ್ಮಿತ್ ನಲ್ಲಿ ಪ್ರದರ್ಶಿಸಲಾಗಿದ್ದ ಈ ವಾಹನವು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ, ಕಾರ್ಯರೂಪಕ್ಕೂ ಬರುತ್ತಿರುವುದು ನಮ್ಮೆಲ್ಲರ ಹೆಗ್ಗಳಿಕೆ ಮತ್ತು ಇದೇ ಜೂನ್ ಅಂತ್ಯದ ಒಳಗಾಗಿ ಈ ಚಾಲಕ ರಹಿತ ಟ್ಯಾಕ್ಸಿಗಳನ್ನು ನೀವು ದುಬೈನಲ್ಲಿ ನೋಡಲಿದ್ದೀರಿ" ಎಂದು ದುಬೈನ ಸಾರಿಗೆ ಇಲಾಖೆಯ ಮುಖ್ಯಸ್ಥ ಮಟ್ಟರ್ ಅಲ್-ಟಯೆರ್ ಹೇಳಿಕೆ ನೀಡಿದ್ದಾರೆ.

ಎಂಟು ಬಲಿಷ್ಠ ರೆಕ್ಕೆಗಳು ಹೊಂದಿರುವ ಈ ಕ್ವಾಡ್-ಕಾಪ್ಟರ್ ಟ್ಯಾಕ್ಸಿಯು ಎಂತಹ ವಾತಾವರಣದಲ್ಲಿಯೂ ಸಹ ಸಮತೋಲನ ಕಾಯ್ದುಕೊಳ್ಳುವ ವ್ಯವಸ್ಥೆ ಹೊಂದಿದ್ದು, ಇದರಿಂದಾಗಿ ಪ್ರಯಾಣಿಕನ ಸುರಕ್ಷತೆ ಮತ್ತು ಸ್ಥಳದ ನಿಖರತೆ ಬಗ್ಗೆ ಹೆಚ್ಚು ಒತ್ತು ನೀಡಿದಂತಾಗಿದೆ.

ಟ್ರಾಫಿಕ್ ಕಿರಿ ಕಿರಿಯಿಂದಾಗಿ ಬೇಸತ್ತಿರುವ ಮಹಾ ಜನರೇ ಒಮ್ಮೆ ಯೋಚಿಸಿ, ಈ ಕ್ವಾಡ್-ಕಾಪ್ಟರ್ ಬೆಂಗಳೂರಿಗೂ ಬಂದ್ರೆ ಹೆಂಗ್ ಇರುತ್ತೆ ಅಲ್ವಾ...!? ಲಡ್ಡು ಬಂದು ಬಾಯಲ್ಲಿ ಬೀಳೋ ಟೈಮ್ ಯಾವಾಗ್ ಬರುತ್ತೋ ಏನೋ...?

ಮರ್ಸಿಡೆಸ್-ಬೆಂಜ್ ಈಕ್ಯೂ ಹೊಸ ಮಾದರಿಯ ಕಾರಿನ ಚಿತ್ರಗಳನ್ನು ಈಗಲೇ ನೋಡಿ.

English summary
Dubai is looking forward to launch self driving hover taxis in July this year, and has already tested a prototype.
Story first published: Tuesday, February 14, 2017, 13:59 [IST]
Please Wait while comments are loading...

Latest Photos