2020ರ ವೇಳೆಗೆ ಫ್ಲೈ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ ಉಬರ್

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಉಬರ್ ಸಂಸ್ಥೆಯು ಭವಿಷ್ಯ ಸಾರಿಗೆ ಮಾಧ್ಯಮವಾಗಿರುವ ಫ್ಲೈ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಸುಳಿವು ನೀಡಿದೆ.

By Praveen

ಸದ್ಯ ಟ್ಯಾಕ್ಸಿ ರಂಗದಲ್ಲಿ ಓಲಾ ಹಾಗೂ ಊಬರ್‌ ಸಂಸ್ಥೆಗಳಿಗೆ ಇರುವ ಪೈಪೋಟಿ ಹೇಗಿದೆ ಎಂಬುವುದು ನಿಮಗೆಲ್ಲಾ ಗೊತ್ತಿದ್ದದ್ದೇ. ಜೊತೆಗೆ ಕೆಲವೆಡೆ ಓಲಾ ಮುಂದಿದ್ದರೆ, ಇನ್ನು ಕೆಲವೆಡೆ ಊಬರ್‌ ಮುಂದಿದೆ. ಈಗ ಊಬರ್‌ ಇನ್ನೊಂದು ದೊಡ್ಡ ಹೆಜ್ಜೆ ಮುಂದಿಡುವ ಮೂಲಕ ಎಲ್ಲ ಟ್ಯಾಕ್ಸಿ ಸಂಸ್ಥೆಗಳನ್ನು ಹಿಂದೆ ಹಾಕಲು ಹೊರಟಿದೆ.

2020ರ ವೇಳೆಗೆ ಫ್ಲೈ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ ಉಬರ್

ಫ್ಲೈ ಟ್ಯಾಕ್ಸಿ ಯೋಜನೆಗೆ ಉಬರ್ ಬೃಹತ್ ಪ್ಲ್ಯಾನ್

ಹಾರಾಡುವ ಟ್ಯಾಕ್ಸಿಗಳ ಬಗ್ಗೆ ಕೇಳಿದ್ದೀರಾ? ಇಲ್ಲ, ಅವು ಇನ್ನೂ ನಿಜವಾಗಿಲ್ಲ. ಆದ್ರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಜೊತೆ ಕೈಜೊಡಿಸಿರುವ ಊಬರ್‌, ಗಾಳಿಯಲ್ಲಿ ಹಾರಾಡುವ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

2020ರ ವೇಳೆಗೆ ಫ್ಲೈ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ ಉಬರ್

ಇತ್ತೀಚೆಗೆ ಒಂದು ಸಮಾವೇಶದಲ್ಲಿ ಈ ಯೋಜನೆಯ ಬಗ್ಗೆ ಸುಳಿವು ನೀಡಿರುವ ಊಬರ್‌ ಮುಖ್ಯಸ್ಥರು, ಹೊಸ ಯೋಜನೆಗೆ 'ಊಬರ್‌ಏರ್‌' ಎಂದು ಹೆಸರಿಡಲಾಗಿದೆ ಎಂಬ ಮಹತ್ವದ ವಿಚಾರವನ್ನು ಹೊರಹಾಕಿದ್ದಾರೆ.

2020ರ ವೇಳೆಗೆ ಫ್ಲೈ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ ಉಬರ್

ಇನ್ನು ವಿಶ್ವದ ಪ್ರಮುಖ ನಗರಗಳಲ್ಲಿ ಈ ಟ್ಯಾಕ್ಸಿಗಳು ಇನ್ನು ಹತ್ತು ವರ್ಷಗಳಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲಿದ್ದು, ಇಂತಹ ಯೋಜನೆಗಳು ಭವಿಷ್ಯದ ದೃಷ್ಠಿಯಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆ ಎನ್ನಬಹುದು.

2020ರ ವೇಳೆಗೆ ಫ್ಲೈ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ ಉಬರ್

ಹೀಗಾಗಿಯೇ ಹಾರಾಡುವ ಟ್ಯಾಕ್ಸಿ ಯೋಜನೆ ಬಗ್ಗೆ ಹೊಸ ಹೊಸ ಚಿಂತನೆಗಳನ್ನು ನಡೆಸಿರುವ ಉಬರ್, 2020ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ಇದರ ಮೊದಲ ಪ್ರದರ್ಶನ ನಡೆಸಲಿದೆ.

2020ರ ವೇಳೆಗೆ ಫ್ಲೈ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಲಿದೆ ಉಬರ್

ತದ ನಂತರವಷ್ಟೇ ತನ್ನ ಮುಂದಿನ ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಲಿರುವ ಉಬರ್, ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಆಕಾಶಕ್ಕೆ ಲಗ್ಗೆ ಹಾಕಲು ಹೊರಟಿದೆ.

Trending on Kannada DriveSpark:

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಮಗುವಿಗೆ ಸ್ತನಪಾನ ಮಾಡುತ್ತಿದ್ದಾಗ ಕಾರನ್ನು ಎಳೆದೊಯ್ದ ಟ್ರಾಫಿಕ್‌ ಪೊಲೀಸರು..!!

Most Read Articles

Kannada
English summary
Read in Kannada: NASA to build Flying Taxi Air control Software, Joins hand with Uber. Click for Details...
Story first published: Monday, November 13, 2017, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X