ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

By Nagaraja

ಅಂತರಿಕ್ಷ ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ ಬರೆಯಲು ಹೊರಟಿರುವ ಅಮೆರಿಕ ಮೂಲದ ಸ್ಪೇಸ್ ಎಕ್ಸ್ ಸಂಸ್ಥೆಯು, ಮರುಬಳಕೆ ಮಾಡಿದ ರಾಕೆಟನ್ನು ಬಾಹ್ಯಾಕಾಶಕ್ಕೆ ರವಾನಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇದಕ್ಕೂ ಮೊದಲು ಮರುಬಳಕೆ ಮಾಡಬಹುದಾದ ಫಾಲ್ಕನ್ 9 ರಾಕೆಟನ್ನು ಬಾಹ್ಯಾಕಾಶದಿಂದ ಯಶಸ್ವಿಯಾಗಿ ಅಟ್ಲಾಂಟಿಕ್ ಸಾಗರದಲ್ಲಿ ಇಳಿಸಲಾಗಿತ್ತು. ಇದನ್ನು ಅಂತರಿಕ್ಷ ತಂತ್ರಜ್ಞಾನದಲ್ಲಿ ಹೊಸ ಮೈಲುಗಲ್ಲು ಎಂದೇ ವಿಶ್ಲೇಷಿಸಲಾಗಿದೆ.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ಇದುವರೆಗೆ ಬೆಂಕಿಯುಗುಳುತ್ತಾ ಆಕಾಶಕ್ಕೆ ಚಿಮ್ಮುವ ರಾಕೆಟ್ ಗಳು ಭೂಮಿಗೆ ಮರಳದೇ ಸಮುದ್ರದಲ್ಲಿ ಶಾಶ್ವತವಾಗಿ ಲೀನವಾಗುತ್ತಿದ್ದವು. ಇದರಿಂದ ಉಪಗ್ರಹ ಉಡಾವಣಾ ವೆಚ್ಚ ವಿಪರೀತವಾಗಿ ಹೆಚ್ಚಾಗುತ್ತಿತ್ತು.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ಅಮೆರಿಕದ ಸ್ಪೇಸ್ ಎಕ್ಸ್ ಸಂಸ್ಥೆಯು ನಿರಂತರ ಅಧ್ಯಯನದ ಮೂಲಕ ಕಕ್ಷೆಗೆ ಸೇರಿದ ರಾಕೆಟನ್ನು ಸಮುದ್ರದಲ್ಲಿರುವ ತೇಲುವ ಹಡಗಿನ ಮೇಲೆ ಲ್ಯಾಂಡ್ ಮಾಡುವ ಮೂಲಕ ದಾಖಲೆ ಸೃಷ್ಟಿ ಮಾಡಿತ್ತು.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ಈಗ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಸ್ಪೇಸ್ ಎಕ್ಸ್ ಸಂಸ್ಥೆಯು ವಿಮಾನ ಸಿದ್ಧ ರಾಕೆಟ್ ನಿಂದ ಎಸ್‌ಇಎಸ್-10 ಸಂಪರ್ಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ರವಾನಿಸಲಿದೆ.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಲಿಫೋರ್ನಿಯಾ ತಳಹದಿಯ ಸ್ಪೇಸ್ ಎಕ್ಸ್ ಸಂಸ್ಥೆಯ ಸೂತ್ರಧಾರಿಯಾಗಿರುವ ಇಲಾನ್ ಮಸ್ಕ್, ರಾಕೆಟ್ ಮರುಬಳಕೆಯಿಂದ ಉಪಗ್ರಹ ಉಡಾವಣಾ ವೆಚ್ಚ ಶೇಕಡಾ 30ರಷ್ಟು ಕಡಿತವಾಗಲಿದೆ ಎಂದಿದ್ದಾರೆ.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ವಾಣಿಜ್ಯ ವಿಮಾನಗಳ ತರಹನೇ ರಾಕೆಟ್ ಮರು ಬಳಕೆ ಮಾಡುವುದು ಸ್ಪೇಸ್ ಎಕ್ಸ್ ಸಂಸ್ಥೆಯ ಯೋಜನೆಯಾಗಿದೆ.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ಮೊದಲ ಹಂತವಾಗಿ ಎಸ್‌ಇಎಸ್ ಉಪಗ್ರಹವನ್ನು ಫಾಲ್ಕನ್ 9 ಹೊತ್ತೊಯ್ಯಲಿದೆ. ಇದೇ ರಾಕೆಟ್ ಎಪ್ರಿಲ್ ತಿಂಗಳಲ್ಲಿ ಡ್ರಾಗನ್ ಕ್ಯಾಪ್ಸೂಲ್ ಲ್ಯಾಡೆನ್ ಬಾಹ್ಯಾಕಾಶಕ್ಕೆ ಕಳುಹಿಸಿಕೊಡುವ ಮೂಲಕ ಯಶಸ್ವಿಯಾಗಿ ಹಿಂತಿರುಗಿತ್ತು.

ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಸೆಕೆಂಡ್ ಹ್ಯಾಂಡ್ ರಾಕೆಟ್

ಇದುವರೆಗೆ ಆರು ರಾಕೆಟ್ ಗಳನ್ನು ಬಾಹ್ಯಾಕಾಶದಿಂದ ಯಶಸ್ವಿಯಾಗಿ ಭೂಮಿಗೆ ಸೇರಿಸುವ ಸ್ಪೇಸ್ ಎಕ್ಸ್ ಯಶಸ್ವಿಯಾಗಿದೆ. ಕೊನೆಯದಾಗಿ ಆಗಸ್ಟ್ 14ರಂದು ರಾಕೆಟ್ ತೇಲುವ ಹಡಗಿನ ಮೇಲೆ ಲ್ಯಾಂಡ್ ಮಾಡಿತ್ತು.

Most Read Articles

Kannada
English summary
Elon Musk's SpaceX To Make History Again — 'Second-Hand' Rockets Are Now A Thing
Story first published: Thursday, September 1, 2016, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X