ವಿಡಿಯೋ: ಸ್ವಿಫ್ಟ್ ಚಾಲಕನ ಅವಾಂತರ- ಲ್ಯಾಂಬೋರ್ಗಿನಿ ಡಿಕ್ಕಿ ಹೊಡೆದ ಪರಿಣಾಮ ಇಕೊ ಕಾರಿನ ಚಾಲಕ ಸಾವು

Written By:

ದೆಹಲಿಯ ಎಕ್ಸ್‌ಪ್ರೆಸ್ ವೇ ನಲ್ಲಿ ಸ್ವಿಫ್ಟ್ ಕಾರು ಚಾಲಕನ ಎಡವಟ್ಟಿನಿಂದಾಗಿ ವೇಗದಲ್ಲಿದ್ದ ಲ್ಯಾಂಬೋರ್ಗಿನಿ ಕಾರೊಂದು ಇಕೊ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಇಕೊ ಕಾರಿಗೆ ಲ್ಯಾಂಬೋರ್ಗಿನಿ ಡಿಕ್ಕಿ- ಭೀಕರ ಅಪಘಾತದಲ್ಲಿ ಓರ್ವ ಸಾವು

ದೆಹಲಿ ಸಮೀಪದ ನೊಯ್ಡಾ ಸೆಕ್ಟರ್ 135 ಬಳಿ ಈ ದುರಂತ ನಡೆದಿದ್ದು,ಅಪಘಾತದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇಕೊ ಕಾರಿಗೆ ಲ್ಯಾಂಬೋರ್ಗಿನಿ ಡಿಕ್ಕಿ- ಭೀಕರ ಅಪಘಾತದಲ್ಲಿ ಓರ್ವ ಸಾವು

ಸ್ಪಿಫ್ಟ್ ಕಾರು ಚಾಲಕನ ಅವಾಂತರ ತಪ್ಪಿಸಲು ಹೋದ ಲ್ಯಾಂಬೋರ್ನಿಗಿಯು ಪಕ್ಕದಲ್ಲೇ ಇದ್ದ ಇಕೊ ಸ್ಪೋರ್ಟ್ ಕಾರಿಗೆ ರಭಸವಾಗಿ ಗುದಿದ್ದು, ಇಕೊ ಕಾರು ರಸ್ತೆ ಪಕ್ಕದಲ್ಲಿದ್ದ ಅರಣ್ಯ ಪ್ರದೇಶದತ್ತ ಉರುಳಿಕೊಂಡು ಹೋಗಿದೆ.

ಇಕೊ ಕಾರಿಗೆ ಲ್ಯಾಂಬೋರ್ಗಿನಿ ಡಿಕ್ಕಿ- ಭೀಕರ ಅಪಘಾತದಲ್ಲಿ ಓರ್ವ ಸಾವು

ದುರಂತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ದೆಹಲಿಯ ಮಂಡವಾಲಿ ನಿವಾಸಿ ಅರ್ಶದ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಅರ್ಶದ್ ಅವರನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

ಲ್ಯಾಂಬೋರ್ಗಿನಿ, ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಇಕೊ ಕಾರಿನ ನಡುವೆ ನಡೆದ ಭೀಕರ ಅಪಘಾತದ ಸಿಸಿಟಿವಿ ದೃಶ್ಯ ಇಲ್ಲದೆ ವೀಕ್ಷಿಸಿ.

Read more on ಅಪಘಾತ accident
English summary
Read in Kannada about Fatal Accident In NCR Involving Lamborghini Huracan, Maruti Swift Dzire And Eeco
Story first published: Monday, July 10, 2017, 18:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark