ಇನ್ಮುಂದೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ರೆ ಪೇಟಿಎಂ ವಾಲೆಟ್ ಯೂಸ್ ಮಾಡಿ....

ದೇಶದೆಲ್ಲೆಡೆ ಡಿಜಿಟಲ್ ಮಯವಾಗುತ್ತಿರುವ ಕಾರಣ ಹಣಕಾಸಿನ ವ್ಯಾವಹಾರವನ್ನು ಕೂಡ ಡಿಜಿಟಲ್ ಮುಖಾಂತರ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಚೆನ್ನೈನ ಟ್ರಾಫಿಕ್ ಪೊಲೀಸರು ಹೊಸ ಯೋಜನೆಯನ್ನು ಒದಗಿಸಲು ಮುಂದಾಗಿದೆ.

By Rahul Ts

ದೇಶಾದ್ಯಂತ ಡಿಜಿಟಲ್ ಮಯವಾಗುತ್ತಿರುವ ಕಾರಣ ಹಣಕಾಸಿನ ವ್ಯವಹಾರವು ಕೂಡಾ ಡಿಜಿಟಲ್ ಮಲವಾಗುತ್ತಿದೆ. ಈ ನಿಟ್ಟಿನಲ್ಲಿ ಚೆನ್ನೈನ ಟ್ರಾಫಿಕ್ ಪೊಲೀಸರು ಕೂಡಾ ಹೊಸ ಯೋಜನೆಯನ್ನು ಒದಗಿಸಲು ಮುಂದಾಗಿದ್ದು, ಇನ್ಮುಂದೆ ಟ್ರಾಫಿಕ್ ಪೊಲೀಸರು ನೀಡುವ ಚಲನ್‍‍ಗಳನ್ನು ಇ-ವಾಲೆಟ್ ಆ್ಯಪ್ ಪೇಟಿಯಂನಿಂದ ಪಾವತಿಸುವ ಆಯ್ಕೆ ನೀಡುತ್ತಿದ್ದಾರೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಹೌದು, ಚೆನ್ನೈನಲ್ಲಿನ ಟ್ರಾಫಿಕ್ ಪೊಲೀಸರು ಈ ಯೋಜನೆಯನ್ನು ಮುನ್ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲಿಯೂ ಕೂಡಾ ಈ ಯೋಜನೆಯನ್ನು ಬಳಸಲಾಗುತ್ತಿದೆ. ಈ ಹಿಂದೆಯೇ ಪೇಟಿಯಂ ಆಪ್‍‍ನಲ್ಲಿ ಟ್ರಾಫಿಕ್ ಚಲನ್‍‍ಗಳನ್ನು ಪಾವತಿಸಬಹುದಾದ ಸೌಲಭ್ಯವು ಲಭ್ಯವಿದ್ದು, ಇದೀಗ ಪೊಲೀಸರು ಕೂಡ ಇದನ್ನು ಬೆಂಬಲಿಸಲು ಮುಂದಾಗಿದ್ದಾರೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಡಿಜಿಟಲ್ ಚಲನ್ ಪಾವತಿ ಮಾಡುವ ಮುಖಾಂತರ ಟ್ರಾಫಿಕ್ ಪೊಲೀಸ್ ಮತ್ತು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ನಡುವೆ ನಡೆಯುತ್ತಿರುವ ಲಂಚ ಪ್ರಕರಣಗಳನ್ನು ತಡೆಯಲು ಇದು ಸಹಕಾರಿಯಾಗಿದೆ ಎನ್ನಬಹುದು.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಯಾಕೆಂದ್ರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸಿಕ್ಕಿಕೊಂಡಾಗ ರೂ 500 ಅಥವಾ ರೂ 1000 ಕೊಡಬೇಕಾದ ಸಮಯದಲ್ಲಿ ಕೇವಲ ರೂ 100 ಲಂಚವನ್ನು ಕೊಟ್ಟು ಎಸ್ಕೇಪ್ ಆಗುತ್ತಿದ್ದರು. ಈ ನಿಟ್ಟಿನಲ್ಲಿ ಇಂತಹ ಲಂಚ ಪ್ರಕರಣಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತವೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಇದು ಮಾತ್ರವಲ್ಲದೆ 300 ಸ್ವೈಪಿಂಗ್ ಯಂತ್ರಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದ್ದು, ಇದರಿಂದ ಸ್ಥಳದಲ್ಲಿಯೇ ನಿಮ್ಮ ಹಣವಿಲ್ಲದಿದ್ದಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರ ಟ್ರಾಫಿಕ್ ಚಲನ್ ಅನ್ನು ಪಾವತಿಸಬಹುದಾಗಿದೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಇದಲ್ಲದೇ ಟ್ರಾಫಿಕ್ ರೂಲ್ಸ್ ಬ್ರೆಕ್ ಮಾಡಿ ಎಸ್ಕೇಪ್ ಆಗುವವರ ವಾಹನದ ಸಂಖ್ಯೆಯನ್ನು ರಸ್ತೆಯ ಸಿಗ್ನಲ್‍‍ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯ ಸಹಾಯದಿಂದ ಸೆರೆಹಿಡಿದು, ಎಸ್ಕೇಪ್ ಆದ ಚಾಲಕರ ಮನೆಗೆ ನೋಟಿಸ್ ಅನ್ನು ಕೂಡಾ ಕಳುಹಿಸಲಾಗುತ್ತಿದೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಮೇಲೆ ಹೇಳಿರುವ ವರದಿಯ ಕೇವಲ ಸ್ಥಳದಲ್ಲಿಯೇ ಟ್ರಾಫಿಕ್ ಪೊಲೀಸ್ ಹತ್ತಿರ ಸಿಕ್ಕಿಕೊಂಡಲ್ಲಿ ಪಾವತಿಸಬಹುದಾದ ಚಲನ್ ಮಾತ್ರ ಅನ್ವಯಿಸಲಾಗುತ್ತಿದ್ದು, ಕುಡಿದು ವಾಹನ ಚಲಾಯಿಸಿ ಸಿಕ್ಕಿಕೊಂಡವರಿಗೆ ಬೇರೆಯದೇ ಟ್ರಿಟ್‌ಮೆಂಟ್ ಇರುತ್ತದೆ. ಇದಕ್ಕೆ ಕಾರಣ, ಕುಡಿದು ವಾಹನ ಚಲಾಯಿಸುವ ಪ್ರಕರಣದಲ್ಲಿ ವೈದ್ಯಕೀಯ ದಾಖಲೆಗಳಿಂದ ಸಾಬೀತು ಮಾಡಿ ನಂತರ ನ್ಯಾಯಲಯದಲ್ಲಿ ಪಾವತಿಸಬೇಕಾದ ನಿಯಮಗಳಿವೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಒಟ್ಟಿನಲ್ಲಿ ಈ ಯೋಜನೆಯು ಇನ್ನಿತರೆ ನಗರಗಳಿಗೂ ಈ ಕೂಡಲೇ ಜಾರಿ ಅವಶ್ಯಕತೆಯಿದ್ದು, ಲಂಚ ಪ್ರಕರಣಗಳನ್ನು ತಡೆಯಬಹುದಾಗಿಜೆ. ಜೊತೆಗೆ ರಸ್ತೆಯಲ್ಲಿ ಸಿಕ್ಕಿಕೊಂಡಾಗ ನಿಮ್ಮ ಬಳಿ ಹಣವಿಲ್ಲದಿದ್ದಾಗ ಪೇಟಿಯಂ ಮೂಲಕ ದಂಡದ ಮೊತ್ತವನ್ನು ಪಾವತಿ ಮಾಡಬಹುದಾಗಿದೆ.

ಇನ್ಮುಂದೆ ಟ್ರಾಫಿಕ್ ಚಲಾನ್ ಅನ್ನು ಪೇಟಿಯಂನಿಂದ ಪಾವತಿಸಬಹುದು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Most Read Articles

Kannada
English summary
Now pay traffic challan through PayTM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X