ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು ತಪ್ಪು ಎಂದು ತಿಳಿದಿದ್ದರೂ ಬಹುತೇಕ ವಾಹನ ಸವಾರರು ಪದೇ ಪದೇ ಈ ತಪ್ಪನ್ನುಮಾಡುತ್ತಲ್ಲೇ ಇರುತ್ತಾರೆ.

By Rahul Ts

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು ತಪ್ಪು ಎಂದು ತಿಳಿದಿದ್ದರೂ ಬಹುತೇಕ ವಾಹನ ಸವಾರರು ಪದೇ ಪದೇ ಈ ತಪ್ಪನ್ನುಮಾಡುತ್ತಲ್ಲೇ ಇರುತ್ತಾರೆ. ಆದ್ರೆ ಇನ್ಮುಂದೆ ಇಂತಹ ತಪ್ಪು ಮಾಡುವ ಮುನ್ನ ಬಹಳಷ್ಟು ಎಚ್ಚರಿಕೆ ವಹಿಸಿ ಇಲ್ಲವಾದ್ರೆ ಏನು ಆಗುತ್ತೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಉತ್ತರ.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ವಾಹನ ಚಾಲನೆ ಮಾಡುತ್ತಾ ಮೊಬೈಲ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೆಹಲಿ ಟ್ರಾಫಿಕ್ ಪೊಲೀಸರು ಮಹತ್ವದ ಆದೇಶವೊಂದನ್ನು ಜಾರಿಗೆ ತಂದಿದ್ದಾರೆ. ಚಾಲನೆ ವೇಳೆ ಮೊಬೈಲ್ ಬಳಸಿದ್ದು ಕಂಡಬಂದಲ್ಲಿ ಅಂತವರ ಚಾಲನಾ ಪರವಾನಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಿದೆಯಂತೆ.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ನೀವು ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸುತ್ತಿರುವಾಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳ್ಳುವುದಲ್ಲದೇ ಸಾರ್ವಜನಿಕರು ಕೂಡಾ ಮೊಬೈಲ್ ಬಳಕೆ ಮಾಡುತ್ತಾ ವಾಹನ ಚಾಲನೆ ಮಾಡುವವರ ಫೋಟೋವನ್ನು ಆರ್‌ಟಿಒ ಅಧಿಕಾರಿಗಳಿಗೆ ಕಳುಹಿಸಿದ್ರು ನಿಮ್ಮ ಚಾಲನಾ ಪರವಾನಿಗೆ ರದ್ದುಗೊಳ್ಳಲಿದೆ.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಇದಕ್ಕೆ ಕಾರಣ, ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ 2016ರಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಸುವಾಗ ನಡೆದ ರಸ್ತೆ ಅಪಘಾತಗಳಲ್ಲಿ 2,138 ಮಂದಿಯ ಪ್ರಾಣಗಳನ್ನು ಕಳೆದುಕೊಂಡಿದ್ದು, ಇದುವರೆಗೂ ಅಪಘಾತಗಳ ಸಂಖ್ಯೆಯು ಹೆಚ್ಚುತ್ತಲೆ ಇದೆ.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಇತ್ತೀಚೆಗೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದ ಬಸ್ ಅಪಘಾತದಲ್ಲಿ ಶಾಲೆಗೆ ಹೊರಟಿದ್ದ 13 ಮಂದಿ ಮಕ್ಕಳು ಮೃತಪಟ್ಟಿದ್ದರು. ಇದಕ್ಕೆ ಕಾರಣ ಆ ಡ್ರೈವರ್ ಫೋನಿನಲ್ಲಿ ಮಾತಾಡುತ್ತಿದದ್ದೆ ಎಂದು ಸಾಬೀತಾಗಿದೆ.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಹಾಗೆಯೇ ಡ್ರೈವಿಂಗ್ ಮಾಡುವಾಗ ಫೋನಿನಲ್ಲಿ ಮಾತನಾಡುವುದು ಮತ್ತು ಸೆಲ್ಫಿ ಕಿಲ್ಲಿಕ್ಕಿಸಿಕೊಳ್ಳುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದ್ದು, ಇದರಿಂದ ತಮಗೆ ಮಾತ್ರವಲ್ಲದೆ ಇತರರಿಗೂ ಕೂಡ ತೊಂದರೆಯಾಗುತ್ತದೆ ಎಂಬುವುದು ವಾಹನ ಸವಾರರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನಮೆಗೆಲ್ಲಾ ಗೊತ್ತಿರುವ ಹಾಗೆ ಬಹುತೇಕ ವಾಹನ ಸವಾರರು ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುತ್ತಿರುವುದು ದುರಂತಗಳಿಗೆ ಕಾರಣವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ದೆಹಲಿ ಮತ್ತು ರಾಜಸ್ತಾನ ಸರ್ಕಾರಗಳು ದಿಟ್ಟಹೆಜ್ಜೆ ಇಟ್ಟಿವೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಇಂತಹ ಕಠಿಣ ಕಾನೂನು ಜಾರಿಗೆ ಅವಶ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹೊಸ ಮಾರ್ಗಸೂಚಿ ಬಗ್ಗೆ ಪರಿಶೀಲನೆ ಮಾಡಿ ಜಾರಿಗೆ ತರುವುದು ಒಳಿತು.

ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವ ಮುನ್ನ ಇತ್ತ ನೋಡಿ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್...

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಮೆಟ್ರೋ ಸಿಟಿಗಳಲ್ಲಿನ ಕಾರು ಮಾರಾಟದಲ್ಲಿ ಭಾರೀ ಇಳಿಕೆ- ಕಾರಣ ಕೇಳಿದ್ರೆ ನಿಮಗೂ ಅಚ್ಚರಿ....

Most Read Articles

Kannada
English summary
Talking On Mobile Phone While Driving/Riding Will Get Your Licence Cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X