ಪೋಷಕರೇ ಹುಷಾರ್- ಎರಡೇ ಸೇಕೆಂಡ್‌ಗಳಲ್ಲಿ ಮಗುವಿನ ಪ್ರಾಣವೇ ಇಲ್ಲವಾಯ್ತು..!

Written By:

ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಭಾನುವಾರದಂದು ಭಾರೀ ಅಪಘಾತವೊಂದು ನಡೆದಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್ ಗುದ್ದಿದ ರಭಸಕ್ಕೆ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ತಾಯಿಯ ಜೊತೆ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ರಾಯಲ್ ಎನ್‌ಫೀಲ್ಡ್ ಗುದ್ದಿದ ಪರಿಣಾಮ 7 ವರ್ಷದ ಬಾಲಕನೊಬ್ಬನ ದುರಂತವಾಗಿ ಸಾವನ್ನಪ್ಪಿರುವ ಘಟನೆ ಕರೀಂನಗರದ ಗಂಗಾಧರ್ ನಗರದಲ್ಲಿ ನಡೆದಿದೆ.

ಬೈಕ್ ಗುದ್ದಿದ ರಭಸಕ್ಕೆ ಬಾಲಕ 50 ಅಡಿಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಬಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ.

ಅಪಘಾತದ ನಂತರ ಬೈಕ್ ನಿಲ್ಲಿಸಿದ್ದ ಆರೋಪಿ ಹೆಚ್ಚು ಜನರು ಸೇರುತ್ತಿರುವುದನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿರುವ ಕರೀಂನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದ್ರೆ ಪ್ರಕರಣದಲ್ಲಿ ಮೆಲ್ನೋಟಕ್ಕೆ ಎರಡು ಕಡೆಯಿಂದಲೂ ತಪ್ಪುಗಳಿರುವುದು ಕಂಡುಬರುತ್ತಿದ್ದು, ಮಕ್ಕಳ ಬಗ್ಗೆ ಪೋಷಕರು ನಿಗಾ ವಹಿಸುವುದು ಒಳಿತು.

ಬಸ್ ನಿಲ್ದಾಣ ಬಳಿ ಭೀಕರ ಅಪಘಾತ ದೃಶ್ಯಗಳು ಸಿಸಿಟಿವಿ ಸೆರೆಯಾಗಿದ್ದು, ಪೋಷಕರ ನಿರ್ಲಕ್ಷ್ಯತೆ ಮತ್ತು ಬೈಕ್ ಚಾಲಕನ ಅಜಾಗರೂಕತೆ ಎದ್ದು ಕಾಣುತ್ತದೆ.

Read more on ಅಪಘಾತ accident
English summary
Read in Kannada about Horrible Accident Speedy Bike Hits to Boy in Karimnagar.
Please Wait while comments are loading...

Latest Photos