ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

Written By:

ಬದಲಾವಣೆ ಪರ್ವದಲ್ಲಿರುವ ಭಾರತೀಯ ರೈಲ್ವೆಗೆ ಹೊಸತೊಂದು ರೈಲಿನ ಸೇರ್ಪೆಡೆಯಾಗಿದೆ. ಅದುವೇ 'ಹಮ್ ಸಫರ್' ರೈಲು. ಇದು ಈಗ ಸೇವೆಯಲ್ಲಿರುವ ಹವಾನಿಯಂತ್ರಿತ ರೈಲಿಗಿಂತಲೂ ಹೆಚ್ಚಿನ ಐಷಾರಾಮಿ ಸೌಲಭ್ಯಗಳನ್ನು ಪಡೆಯಲಿದೆ.

ಕಳೆದ ರೈಲ್ವೆ ಮುಂಗಡ ಪತ್ರದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹಮ್ ಸಫರ್ ರೈಲಿನ ಸೇವೆಯನ್ನು ಘೋಷಣೆ ಮಾಡಿದ್ದರು. ಇದು ಮುಂದಿನ ತಿಂಗಳು ಸೇವೆಗೆ ಲಭ್ಯವಾಗಲಿದೆ.

To Follow DriveSpark On Facebook, Click The Like Button
ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಸಂಪೂರ್ಣವಾಗಿಯೂ ಎಸಿ ತ್ರಿ ಟೈರ್ ಸೇವೆಯನ್ನು ಹಮ್ ಸಫರ್ ರೈಲು ಹೊಂದಿರಲಿದೆ. ಮೀಸಲು ಪ್ರಯಾಣಿಕರಿಗಾಗಿ ಘೋಷಣೆ ಮಾಡಿರುವ ಮೂರು ರೈಲುಗಳಲ್ಲಿ ಇದೂ ಒಂದಾಗಿದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಹಮ್ ಸಫರ್ ರೈಲಿನ ನಿರ್ಮಾಣ ಹಂತವು ಅಂತಿಮ ಘಟ್ಟದಲ್ಲಿದ್ದು, ಮುಂದಿನ ಒಂದು ತಿಂಗಳೊಳಗೆ ಸೇವೆಗೆ ಲಭ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಸಾಮಾನ್ಯ ರೈಲುಗಳಿಗೆ ಹೋಲಿಸಿದಾಗ ಹೆಚ್ಚಿನ ವೈಶಿಷ್ಟ್ಯಗಳು ಹಮ್ ಸಫರ್ ರೈಲು ಪಡೆಯಲಿದೆ. ಇದು ಟಿವಿ, ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಇನ್ನು ತುರ್ತು ಪರಿಸ್ಥಿತಿಯಲ್ಲಿ ನೆರವಾಗಬಲ್ಲ ಬೆಂಕಿ ಹಾಗೂ ಹೊಗೆ ಪತ್ತೆ ಹಚ್ಚುವ ಹಾಗೂ ನಂದಿಸುವ ಉಪಕರಣವನ್ನು ಜೋಡಣೆ ಮಾಡಲಾಗುವುದು.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಸೀಟುಗಳು ಗರಿಷ್ಠ ದರ್ಜೆಯನ್ನು ಕಾಪಾಡಿಕೊಂಡಿದ್ದು, ಹೆಚ್ಚು ಆರಾಮದಾಯಕವೆನಿಸಿಕೊಂಡಿದೆ. ಇನ್ನು ಸಪ್ರೇಷನ್ ವ್ಯವಸ್ಥೆಯೂ ಇರುತ್ತದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ರೈಲಿನಲ್ಲೇ ನಿಮ್ಮ ಕೆಲಸ ಕಾರ್ಯಗಳಿಗೆ ನೆರವಾಗುವ ರೀತಿಯಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಲಗತ್ತಿಸಲಾಗಿದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಸುರಕ್ಷತೆಯ ದೃಷ್ಟಿಕೋನದಲ್ಲಿ ಸಿಸಿಟಿವಿ ಆಳವಡಿಸಲಾಗಿದೆ. ಇನ್ನು ಜೈವಿಕ ಶೌಚಾಲಯದ ಮುಖಾಂತರ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳದಿದೆ. ತನ್ಮೂಲಕ ಮಲ ವಿಸರ್ಜನೆ ಮುಕ್ತ ಟ್ರ್ಯಾಕ್ ಗಳ ಅಭಿಯಾನಕ್ಕೆ ಕೈಜೋಡಿಸಲಿದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಅಂಧರ ಬ್ರೈಲ್ ಲಿಪಿ ಪ್ರದರ್ಶಕಗಳನ್ನು ಆಳವಡಿಸಲಾಗಿದೆ. ಅಂತೆಯೇ ರೈಲಿನೊಳಗೆ ವಾಸನೆ ನಿಯಂತ್ರಣ ವ್ಯವಸ್ಥೆ ಇರಲಿದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ರೈಲಿನೊಳಗಿನ ಒಟ್ಟಾರೆ ಸೌಂದರ್ಯ ವೃದ್ಧಿಗೆ ಆದ್ಯತೆ ಕೊಡಲಾಗಿದೆ. ಭವಿಷ್ಯತ್ತಿನ ನೋಟ ಹಾಗೂ ಮಹಾರಾಜ ಎಕ್ಸ್ ಪ್ರೆಸ್ ಬೋಗಿಗಳಲ್ಲಿರುವುದಕ್ಕೆ ಸಮಾನವಾದ ವಿನೈಲ್ ಶೀಟ್ ಗಳನ್ನು ಆಳವಡಿಸಲಾಗಿದೆ.

ಭಾರತೀಯ ರೈಲ್ವೆಗೆ ಮಗದೊಂದು ಕೋಡು 'ಹಮ್ ಸಫರ್' ರೈಲು

ಈ ಎಲ್ಲ ಐಷಾರಾಮಿ ಸೌಲಭ್ಯಗಳು ಒಂದೆಡೆಯಾದರೆ ಹೊಸ ರೈಲಿನ ದರ ಶೇಕಡಾ 20ರಷ್ಟು ದುಬಾರಿಯೆನಿಸಲಿದೆ.

Read more on ಭಾರತ india
English summary
Humsafar Indian Railways new fully ac 3 tier train
Story first published: Wednesday, September 21, 2016, 11:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark