ಇಂಡಿಯನ್ ಗ್ರ್ಯಾನ್ ಪ್ರಿ; ಕೇಳರಿಯದ 22 ಸತ್ಯಗಳು

By Nagaraja

ಬಹುನಿರೀಕ್ಷಿತ ಇಂಡಿಯನ್ ಗ್ರ್ಯಾನ್ ಪ್ರಿ (Indian Grand Prix) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯ ಸಮೀಪದಲ್ಲಿರುವ ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ಫಾರ್ಮುಲಾ ಒನ್ (ಎಫ್‌1) ಮೂರನೇ ಆವೃತ್ತಿಯು ಎಲ್ಲ ಹಂತದಲ್ಲೂ ನೋಡುಗರನ್ನು ಮೂಕವಿಸ್ಮಿತಗೊಳಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಹತ್ತು ಹಲವಾರು ಸವಾಲುಗಳನ್ನು ಮೆಟ್ಟಿ ನಿಟ್ಟಿರುವ ಎಫ್1 ಆಯೋಜಕರು ಕೊನೆಗೂ ಬಿಲಿಯನ್ ಡಾಲರ್ ವೆಚ್ಚದ ಫಾರ್ಮುಲಾ ಒನ್ ರೇಸ್ ಹಮ್ಮಿಕೊಳ್ಳಲು ಸನ್ನದ್ಧವಾಗಿ ನಿಂತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ಡ್ರೈವ್ ಸ್ಪಾರ್ಕ್ ವಿಶೇಷ ಲೇಖನವೊಂದನ್ನು ಸಿದ್ಧಪಡಿಸಿದ್ದು, ಇಂಡಿಯನ್ ಫಾರ್ಮುಲಾ ಒನ್ ರೇಸ್‌ಗೆ ಸಂಬಂಧಪಟ್ಟ ಕೆಲವೊಂದು ಆಸಕ್ತಿದಾಯಕ ಮಾಹಿತಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಲಾಗಿದೆ.

ಕೆಳಗೆ ಕೊಡಲಾಗಿರುವ ಸ್ಲೈಡರ್‌ನಲ್ಲಿ ಇಂಡಿಯನ್ ಗ್ರ್ಯಾನ್ ಪ್ರಿ ಎಫ್1 ರೇಸ್‌ನ ಇತಿಹಾಸ ಹಾಗೂ ಮೂರನೇ ಆವೃತ್ತಿಯ ವೇಳಾಪಟ್ಟಿಯನ್ನು ಹಂಚಲಾಗಿದೆ.

ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್

ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್

ಅಂತರಾಷ್ಟ್ರೀಯ ಫಾರ್ಮುಲಾ ಒನ್ ಚಾಂಪಿಯನ್‌ಶಿಪ್‌ನಿಂದ (ಎಫ್‌ಐಎ) ಮಾನ್ಯತೆ ಪಡೆದುಕೊಂಡಿರುವ ಇಂಡಿಯನ್ ಗ್ರ್ಯಾನ್ ಪ್ರಿ, ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿದೆ.

2011ರಲ್ಲಿ ಚೊಚ್ಚಲ ರೇಸ್

2011ರಲ್ಲಿ ಚೊಚ್ಚಲ ರೇಸ್

ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ರೇಸ್, 2011ರ ಅಕ್ಟೋಬರ್ 30ರಂದು ಆದ್ಧೂರಿಯಾಗಿ ನಡೆದಿತ್ತು. ಇದು 2011 ಫಾರ್ಮುಲಾ ಒನ್ ಆವೃತ್ತಿಯ 17ನೇ ರೇಸ್ ಆಗಿದ್ದವು.

ಸೆಬಾಸ್ಟಿಯನ್ ವೆಟಲ್

ಸೆಬಾಸ್ಟಿಯನ್ ವೆಟಲ್

ಅಂತೆಯೇ ಮೊದಲೆರಡು ಫಾರ್ಮುಲಾ ಒನ್ ರೇಸ್ ಗೆದ್ದ ಖ್ಯಾತಿಗೆ ಜರ್ಮನಿಯ ಸೆಬಾಸ್ಟಿಯನ್ ವೆಟಲ್ ಪಾತ್ರವಾಗಿದ್ದಾರೆ. ರೆಡ್ ಬುಲ್ ತಂಡವನ್ನು ಪ್ರತಿನಿಧಿಸುತ್ತಿರುವ ವೆಟಲ್, ಈ ವರೆಗೆ ಇಂಡಿಯನ್ ಗ್ರ್ಯಾನ್ ಪ್ರಿಕ್ಸ್ ಗೆದ್ದ ಏಕಮಾತ್ರ ಸ್ಪರ್ಧಾಳುವಾಗಿದ್ದಾರೆ.

ಆಯೋಜಕರು

ಆಯೋಜಕರು

ಜೆಪೀ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಇಂಡಿಯನ್ ಗ್ರ್ಯಾನ್ ಪ್ರಿ ಆಯೋಜಕರಾಗಿದ್ದಾರೆ. ಅಲ್ಲದೆ 2011ರಲ್ಲಿ ಫಾರ್ಮುಲಾ ಒನ್ ಆಡಳಿತದ (ಎಫ್‌ಒಎಂ) ಜತೆ ಐದು ವರ್ಷದ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಸೂತ್ರಧಾರಿ

ಸೂತ್ರಧಾರಿ

5.14 ಕೀ.ಮೀ. ಉದಕ್ಕೆ ಹರಡಿರುವ ದೇಶದ ಎಫ್1 ಟ್ರ್ಯಾಕನ್ನು ಜರ್ಮನಿಯ ವಾಸ್ತುಶಿಲ್ಪಿ ಹರ್ಮನ್ ತಿಲ್ಕೆ (Hermann Tilke) ವಿನ್ಯಾಸಗೊಳಿಸಿದ್ದಾರೆ.

 ಚಾಲಕರ ಸ್ವರ್ಗ

ಚಾಲಕರ ಸ್ವರ್ಗ

ವೇಗ ಹಾಗೂ ನಿಧಾನವಾದ ಸರ್ಕ್ಯೂಟ್ ಸೇರಿದಂತೆ ಇಂಡಿಯನ್ ಗ್ರ್ಯಾ ಪ್ರಿ ಎಫ್1 ಟ್ಯಾಕ್‌ನಲ್ಲಿ ಒಟ್ಟು 16 ತಿರುವುಗಳಿವೆ. ಈ ಮೂಲಕ ಚಾಲಕರ ಸ್ವರ್ಗ ಎನಿಸಿಕೊಂಡಿದೆ.

ಜೇಪಿ ಗ್ರೀನ್ ಸ್ಪೋರ್ಟ್ಸ್ ಸಿಟಿ

ಜೇಪಿ ಗ್ರೀನ್ ಸ್ಪೋರ್ಟ್ಸ್ ಸಿಟಿ

ಅಂತೆಯೇ ಒಟ್ಟು 875 ಎಕ್ರೆ ಪ್ರದೇಶದಲ್ಲಿ ಇಂಡಿಯನ್ ಗ್ರ್ಯಾನ್ ಪ್ರಿ ಹರಡಿಕೊಂಡಿದೆ. ಇದು ಕೂಡಾ ಜೇಪಿ ಗ್ರೀನ್ ಸ್ಪೋರ್ಟ್ಸ್ ನಗರದ ಭಾಗವಾಗಿದೆ.

ರೇಸ್ ಇತಿಹಾಸ- 2011 ಇಂಡಿಯನ್ ಗ್ರ್ಯಾನ್ ಪ್ರಿ

ರೇಸ್ ಇತಿಹಾಸ- 2011 ಇಂಡಿಯನ್ ಗ್ರ್ಯಾನ್ ಪ್ರಿ

ಚೊಚ್ಚಲ ಏರ್‌ಟೆಲ್ ಇಂಡಿಯನ್ ಗ್ರ್ಯಾನ್ ಪ್ರಿ, ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 2011 ಅಕ್ಟೋಬರ್ 30ರಂದು ಜರಗಿತ್ತು.

ದೇಶದ ಸಾಮರ್ಥ್ಯ ಪ್ರದರ್ಶನ

ದೇಶದ ಸಾಮರ್ಥ್ಯ ಪ್ರದರ್ಶನ

ಮೈ ರೋಮಾಂಚನಗೊಳಿಸುವ ಈ ಮಹಾನ್ ಕ್ರೀಡಾಕೂಟವನ್ನು ವೀಕ್ಷಿಸಲು 95,000ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ಈ ಮೂಲಕ ಮೆಗಾ ರೇಸಿಂಗ್ ಈವೆಂಟ್‌ನಲ್ಲಿ ಜಗತ್ತಿಗೆ ಭಾರತದ ಸಾಮರ್ಥ್ಯ ಪ್ರದರ್ಶಿಸಲಾಯಿತು.

ಸೆಬಾಸ್ಟಿಯನ್ ಕಮಾಲ್

ಸೆಬಾಸ್ಟಿಯನ್ ಕಮಾಲ್

11 ಜಯಭೇರಿಗಳನ್ನು ತಮ್ಮ ಕಿಸೆಯೊಳಗೆ ಹಾಕಿದ್ದ ಸೆಬಾಸ್ಟಿಯನ್ ವೆಟಲ್ ಚೊಚ್ಚಲ ಆವೃತಿಯ ವಿಜೇತರಾದರು.

ಚಕರ್ಡ್ ಫ್ಯಾಗ್ ಹಾರಿಸಿದ ಸಚಿನ್

ಚಕರ್ಡ್ ಫ್ಯಾಗ್ ಹಾರಿಸಿದ ಸಚಿನ್

ಕ್ರಿಕೆಟ್‌ನ ಜೀವಂತ ದಿಗ್ಗಜ ಸಚಿನ್ ತೆಂಡೂಲ್ಕರ್ ಚಕರ್ಡ್ ಫ್ಯಾಗ್ ತೋರಿಸುವ ಮೂಲಕ ಫಾರ್ಮುಲಾ ಒನ್ ಮೇಲಿನ ತಮ್ಮ ಪ್ರೇಮವನ್ನು ತೋರಿದ್ದರು.

ಭಾರತದ ಏಕಮಾತ್ರ ಚಾಲಕ

ಭಾರತದ ಏಕಮಾತ್ರ ಚಾಲಕ

ಎಚ್‌ಆರ್‌ಟಿ ಎಫ್1 ತಂಡವನ್ನು ಪ್ರತಿನಿಧಿಸಿದ್ದ ಭಾರತದ ಏಕಮಾತ್ರ ಚಾಲಕ ನರೈನ್ ಕಾರ್ತಿಕೇಯನ್ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಸಹರಾ ಫೋರ್ಸ್ ಇಂಡಿಯಾ

ಸಹರಾ ಫೋರ್ಸ್ ಇಂಡಿಯಾ

ಹಾಗೆಯೇ ಉದ್ಯಮಿ ವಿಜಯ್ ಮಲ್ಯ ಒಡೆತನದ ಭಾರತೀಯ ತಂಡ ಸಹರಾ ಫೋರ್ಸ್ ಇಂಡಿಯಾದ ಆಡ್ರಿಯಾನ್ ಸುಟಿಲ್ 9ನೇ ಸ್ಥಾನ ಆಲಂಕರಿಸಿದ್ದರು.

ಅತ್ಯುತ್ತಮ ಎಫ್1 ಪ್ರವರ್ತಕ

ಅತ್ಯುತ್ತಮ ಎಫ್1 ಪ್ರವರ್ತಕ

ಬಳಿಕ ಫೇಡರೇಷನ್ ಇಂಟರ್‌ನ್ಯಾಷನಲ್ ಡಿ ಆಟೋಮೊಬೈಲ್‌ನ (ಎಫ್‌ಐಎ) 'ಅತ್ಯುತ್ತಮ ಎಫ್1 ಪ್ರವರ್ತಕ' ಪ್ರಶಸ್ತಿಗೂ ಇಂಡಿಯನ ಗ್ರ್ಯಾನ್ ಪ್ರಿ ಆಯೋಜಕರಾದ ಜೇಪಿ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಭಾಜನವಾಗಿತ್ತು.

ರೇಸ್ ಇತಿಹಾಸ- 2012 ಇಂಡಿಯನ್ ಗ್ರ್ಯಾನ್ ಪ್ರಿ

ರೇಸ್ ಇತಿಹಾಸ- 2012 ಇಂಡಿಯನ್ ಗ್ರ್ಯಾನ್ ಪ್ರಿ

ಎರಡನೇ ಆವೃತ್ತಿಯ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿ 2012 ಅಕ್ಟೋಬರ್ 28ರಂದು ಬಿಐಸಿ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜರಗಿತ್ತು.

ರೆಡ್ ಬುಲ್ ಪರಾಕ್ರಮ

ರೆಡ್ ಬುಲ್ ಪರಾಕ್ರಮ

ಇಲ್ಲೂ ರೆಡ್ ಬುಲ್ ತಂಡದ ಸೆಬಾಸ್ಟಿಯನ್ ವೆಟಲ್ ಜಯಭೇರಿ ಮೊಳಗಿಸಿದ್ದರು. ಈ ಮೂಲಕ ಸತತ ಎರಡನೇ ಬಾರಿಯಲ್ಲೂ ಚಾಂಪಿಯನ್ ಪಟ್ಟ ಆಲಂಕರಿಸಿದ್ದರು.

ಗಗನ್ ನಾರಂಗ್

ಗಗನ್ ನಾರಂಗ್

ಈ ಬಾರಿ ಸಚಿನ್ ಜಾಗಕ್ಕೆ ಬಂದಿದ್ದ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಗಗನ್ ನಾರಂಗ್ ಚಕರ್ಡ್ ಬಾವುಟವನ್ನು ಹಾರಿಸಿದ್ದರು.

ಸತತ ಎರಡನೇ ಬಾರಿಯೂ ಜೇಪಿ ಜಯಭೇರಿ

ಸತತ ಎರಡನೇ ಬಾರಿಯೂ ಜೇಪಿ ಜಯಭೇರಿ

ಇಲ್ಲಿ ಕಂಡುಬಂದಿರುವ ಇನ್ನೊಂದು ವಿಶೇಷ ಅಂಶವೆಂದರೆ ಸತತ ಎರಡನೇ ಬಾರಿಯೂ ಎಫ್1 ಅಂತರಾಷ್ಟ್ರೀಯ ಸಮಿತಿಯಿಂದ ಶ್ರೇಷ್ಠ ಪ್ರವರ್ತಕ ಪ್ರಶಸ್ತಿಯನ್ನು ಜೇಪಿ ಸ್ಪೋರ್ಟ್ಸ್ ಅಂತರಾಷ್ಟ್ರೀಯ ಲಿಮಿಟೆಡ್ ಆಲಂಕರಿಸಿತ್ತು.

2013 ಇಂಡಿಯನ್ ಗ್ರ್ಯಾನ್ ಪ್ರಿ

2013 ಇಂಡಿಯನ್ ಗ್ರ್ಯಾನ್ ಪ್ರಿ

ಈ ಬಾರಿಯ ಏರ್‌ಟೆಲ್ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ 2013 ಅಕ್ಟೋಬರ್ 25 ಶುಕ್ರವಾರದಿಂದ ಅಕ್ಟೋಬರ್ 27 ಭಾನುವಾರದ ವರೆಗೆ ಸಾಗಲಿದೆ.

ವೇಳಾಪಟ್ಟಿ ಇಂತಿದೆ

ವೇಳಾಪಟ್ಟಿ ಇಂತಿದೆ

2013 ಅಕ್ಟೋಬರ್ 25, ಶುಕ್ರವಾರ

ಅಭ್ಯಾಸ 1 : ಸಮಯ- ಬೆಳಗ್ಗೆ 10ರಿಂದ 11.30ರ ವರೆಗೆ

ಅಭ್ಯಾಸ 2 : ಸಮಯ- ಮಧ್ಯಾಹ್ನ 2ರಿಂದ 03.30ರ ವರೆಗೆ

2013 ಅಕ್ಟೋಬರ್ 26, ಶನಿವಾರ

ಅಭ್ಯಾಸ 3 : ಸಮಯ- ಬೆಳಗ್ಗೆ 11ರಿಂದ 12ರ ವರೆಗೆ

ಅರ್ಹತಾ ರೇಸ್ : ಸಮಯ- ಮಧ್ಯಾಹ್ನ 2ಕ್ಕೆ

2013 ಅಕ್ಟೋಬರ್ 27, ಭಾನುವಾರ

ಫೈನಲ್ ರೇಸ್: ಸಮಯ- ಮಧ್ಯಾಹ್ನ 3ಕ್ಕೆ ಸರಿಯಾಗಿ

2014 ಹಾಗೂ 2015 ಇಂಡಿಯನ್ ಗ್ರ್ಯಾನ್ ಪ್ರಿ

2014 ಹಾಗೂ 2015 ಇಂಡಿಯನ್ ಗ್ರ್ಯಾನ್ ಪ್ರಿ

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ರಾಜಕೀಯ ಹಾಗೂ ವೇಳಾಪಟ್ಟಿ ಅಭಾವ ಹಿನ್ನಲೆಯಲ್ಲಿ 2014ನೇ ಇಂಡಿಯನ್ ಗ್ರ್ಯಾನ್ ಪ್ರಿ ರದ್ದಾಗಿದೆ. ಆದರೆ ಒಂದು ವರ್ಷದಷ್ಟು ತಡವಾಗಿ ಅಂದರೆ 2015ರಲ್ಲಿ ಮತ್ತೆ ಆಗಮನವಾಗಲಿದೆ.

ಆರ್ಥಿಕ ಲಾಭಗಳು

ಆರ್ಥಿಕ ಲಾಭಗಳು

10,000ದಷ್ಟು ಮಂದಿಗೆ ಉದ್ಯೋಗವಕಾಶವನ್ನು ಕಲ್ಪಿಸಿಕೊಟ್ಟಿರುವ ಇಂಡಿಯನ್ ಗ್ರ್ಯಾನ್ ಪ್ರಿ, 1048 ಕೋಟಿ ರು.ಗಳಷ್ಟು ಆದಾಯವನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕಾಗಿ ದೀಪಾವಳಿ ಹಬ್ಬದ ಆವೃತ್ತಿ ಸಂದರ್ಭದಲ್ಲಿ ರೇಸ್ ಆಯೋಜಿಸಲಾಗುತ್ತದೆ.

Most Read Articles

Kannada
English summary
The Indian Grand Prix is an Formula 1 race in the calendar of the FIA Formula One World Championship, currently being held at the Buddh International Circuit in Greater Noida near New Delhi.
Story first published: Tuesday, October 22, 2013, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X