55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

Written By:

ಸೇವೆಯಲ್ಲಿರುವ ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್ ತನ್ನ ಅಂತಿಮ ಪ್ರಯಾಣವನ್ನುಆರಂಭಿಸಿದ್ದು, ವರ್ಷಾಂತ್ಯಕ್ಕೆ ಸೇವೆಯಿಂದ ನಿವೃತ್ತಿ ಹೊಂದಲಿದೆ. ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕ ನೌಕೆ ಕಳೆದ 55 ವರ್ಷಗಳಿಂದ ಸೇವೆಯಲ್ಲಿತ್ತು.

To Follow DriveSpark On Facebook, Click The Like Button
55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಭಾರತೀಯ ನೌಕಾಪಡೆಯ ಪ್ರಬಲ ಹಾಗೂ ಹೆಮ್ಮೆಯ ಯುದ್ಧ ನೌಕೆಯಾಗಿರುವ ಐಎನ್ ಎಸ್ ವಿರಾಟ್, ಮುಂಬೈನಿಂದ ಕೊಚ್ಚಿ ಬಂದರಿಗೆ ತನ್ನ ಅಂತಿಮ ಪ್ರಯಾಣವನ್ನು ಆರಂಭಿಸಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಬ್ರಿಟಿಷ್ ರಾಯಲ್ ನೇವಿಯಲ್ಲಿ 27 ವರ್ಷಗಳು ಸೇರಿದಂತೆ ಐದು ದಶಕಗಳಿಗೂ ಹೆಚ್ಚು ಕಾಲ ಐಎನ್ ಎಸ್ ವಿರಾಟ್ ಸೇವೆ ಸಲ್ಲಿಸಿದೆ. 1959ರಲ್ಲಿ ಬ್ರಿಟಿಷ್ ರಾಯಲ್ ನೇವಿಯಲ್ಲಿ ಹೆಎಂಎಸ್ ಹೆರ್ಮ್ಸ್ ಹೆಸರಿನಲ್ಲಿ ಸೇವೆಯನ್ನು ಆರಂಭಿಸಿತ್ತು.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಬಳಿಕ 1984ರಲ್ಲಿ ಕಡಲ ಕಿನಾರೆ ತಲುಪಿದ ಐಎನ್ ಎಸ್ ವಿರಾಟ್ ಯುದ್ಧ ನೌಕೆಯನ್ನು 1987ರಲ್ಲಿ ಭಾರತ ಖರೀದಿಸಿತ್ತು. ಭಾರತೀಯ ನೌಕಾಪಡೆಗೆ ಐಎನ್ ಎಸ್ ವಿರಾಟ್ ಎಂಬ ಹೆಸರನೊಂದಿಗೆ ಸೇರ್ಪಡೆಗೊಂಡ ಈ ಯುದ್ಧ ನೌಕೆ 27 ವರ್ಷಗಳಷ್ಟು ಸೇವೆ ಸಲ್ಲಿಸಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಬ್ರಿಟನ್ ನಿಂದ ನಿರ್ಮಿತ ಭಾರತದಲ್ಲಿ ಸೇವೆಯಲ್ಲಿರುವ ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ಇದಾಗಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಈಗ ಹಳೆಯದಾದ ಐರಾಟ್ ವಿರಾಟ್ ಸ್ಥಾನವನ್ನು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಐಎನ್ ಎಸ್ ವಿಕ್ರಾಮಾದಿತ್ಯ ತುಂಬಲಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಭಾರತೀಯ ವಾಯುದಳದ ನಾಲ್ಕು ವಿಭಾಗಗಳು ವಿರಾಟ್ ಯುದ್ಧ ನೌಕೆಯನ್ನು ಕಾರ್ಯಾಚರಿಸುತ್ತಿದೆ. ಅವುಗಳೆಂದರೆ ವೈಟ್ ಟೈಗರ್ಸ್, ದಿ ಬ್ರೇವ್ಸ್, ಎಂಜಲ್ಸ್ ಮತ್ತು ಹರ್ಪೂನ್ಸ್.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಭಾರತ ಖರೀದಿಸಿದ ಬಳಿಕ ಹೊಸ ಆಗ್ನಿ ನಿಯಂತ್ರಣ ಉಪಕರಣ, ನೇವಿಗೇಷನ್ ರಾಡಾರ್, ಪರಿಷ್ಕೃತ ಎನ್ ಬಿಸಿ ರಕ್ಷಣೆ, ಡೆಕ್ ಲ್ಯಾಂಡಿಂಗ್ ಏಡ್ಸ್ ವ್ಯವಸ್ಥೆಗಳನ್ನು ಒದಗಿಸಲಾಗಿತ್ತು.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ನಿವೃತ್ತಿಯ ಬಳಿಕ ಐಎನ್ ಎಸ್ ವಿರಾಟ್ ಯುದ್ಧ ನೌಕೆಯನ್ನು ಆಂಧ್ರ ಪ್ರದೇಶಕ್ಕೆ ಹಸ್ತಾಂತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದು ವಿಶಾಖಪಟ್ಟಣದ ಬಂದರಿನಲ್ಲಿ ಪ್ರವಾಸೋಧ್ಯಮಕ್ಕೆ ಬಳಸಲಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಸೇವೆಯಿಂದ ನಿವೃತ್ತಿಗೊಳ್ಳಲಿರುವ ಐಎನ್ ಎಸ್ ವಿರಾಟ್ ಯುದ್ಧ ನೌಕೆಯನ್ನು ಏರ್ ಕ್ರಾಫ್ಟ್ ಕ್ಯಾರಿಯರ್ ವಸ್ತು ಸಂಗ್ರಹಾಲಯವಾಗಿ ಬಳಕೆ ಮಾಡಲಾಗುವುದು. ಈ ತೇಲಾಡುವ ಮ್ಯೂಸಿಯಂ ಯುವಕರಿಗೆ ಸ್ಪೂರ್ತಿ ತುಂಬಲಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಪ್ರಮುಖವಾಗಿಯೂ ನಿರ್ವಹಣೆ ದುಬಾರಿಯಾಗಿರುವುದು ಐಎನ್ ಎಸ್ ವಿರಾಟ್ ಸೇವೆಯಿಂದ ನಿವೃತ್ತಿಗೊಳ್ಳಲು ಪ್ರಮುಖ ಕಾರಣವಾಗಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಸಾಗರದಲ್ಲಿ 2250 ದಿನಗಳನ್ನು ಕಳೆದಿರುವ ಐಎನ್ ಎಸ್ ವಿರಾಟ್ ಇದುವರೆಗೆ ಸರಿ ಸುಮಾರು 10.94 ಲಕ್ಷ ಕೀ.ಮೀ. ದೂರ ಸಂಚರಿಸಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಗಂಟೆಗೆ 52 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಐಎನ್ ಎಸ್ ವಿರಾಟ್ ಯುದ್ಧ ನೌಕೆಯು 10,500 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುವಷ್ಟು ಸಮರ್ಥವಾಗಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ನಾವಿಕ ಪಡೆಯ 1207 ಸಿಬ್ಬಂದಿಗಳು ಹಾಗೂ ವಾಯುಪಡೆಯ 143 ಸಿಬ್ಬಂದಿಗಳು ಇದರಲ್ಲಿ ಕಾರ್ಯಾಚರಣೆಗಿಳಿಯಬಹುದಾಗಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಅತ್ಯಂತ ಪ್ರಭಾವಶಾಲಿ ಎಚ್ ಎಎಲ್ ಚೇತಕ್, ಎಚ್ ಎಎಲ್ ಧ್ರುವ್ ಜೊತೆಗೆ ವೆಸ್ಟ್ ಲ್ಯಾಂಡ್ ಸೀ ಕಿಂಗ್ ಎಂಕೆ.42 ಬಿ-ಸಿ ಹಾಗೂ ಬ್ರಿಟಿಷ್ ಏರೋಸ್ಪೇಸ್ ಸೀ ಹ್ಯಾರಿಯರ್ ಎಫ್ ಆರ್ ಎಸ್51 ಸೇರಿದಂತೆ 26 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಪಡೆದಿದೆ.

55 ವರ್ಷ ಸೇವೆ; ವಿಶ್ವದ ಅತಿ ಹಳೆಯ ಯುದ್ಧ ವಿಮಾನ ವಾಹಕ ನೌಕೆ ವಿರಾಟ್ ಗುಡ್ ಬೈ

ಒಟ್ಟಿನಲ್ಲಿ ಕಳೆದೈದು ದಶಕದಿಂದ ಭಾರತೀಯ ನೌಕಾಪಡೆಯ ಭಾಗವಾಗಿರುವ ಐಎನ್ ಎಸ್ ವಿರಾಟ್ ಕೊನೆಗೂ ವಿಧ್ಯುಕ್ತವಾಗಿ ಸೇವೆಯಿಂದ ನಿವೃತ್ತಿ ಹೊಂದಲಿದೆ.

English summary
Indian Navy bids farewell to world’s oldest aircraft carrier INS Viraat
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark