ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

By Nagaraja

ಭಾರತೀಯ ರೈಲ್ವೆ ತನ್ನ ಬಹುನಿರೀಕ್ಷಿತ ಸೌರಶಕ್ತಿ ಚಾಲಿತ (ಸೋಲಾರ್) ರೈಲಿನ ಪರೀಕ್ಷಾರ್ಥ ಪಯಣವನ್ನು ಯಶಸ್ವಯಾಗಿ ನಡೆಸಿದೆ. ಈ ಮೂಲಕ ಭಾರಿ ಪ್ರಮಾಣದ ವಿದ್ಯುತ್ ಉಳಿತಾಯದೊಂದಿಗೆ ವೆಚ್ಚ ಕೂಡಾ ಕಡಿಮೆಯಾಗಲಿದೆ.

ಇವನ್ನೂ ಓದಿ: ವಿಶ್ವದ ಮೊಟ್ಟ ಮೊದಲ ಸೌರಶಕ್ತಿ ವಿಮಾನ ಭಾರತಕ್ಕೆ

ಪ್ರಸ್ತುತ ರೈಲಿನ ನಿರ್ದಿಷ್ಟ ಕೋಚ್ ಗಳಲ್ಲಿ ಸೋಲಾರ್ ಪ್ಯಾನೆಲ್ ಲಗತ್ತಿಸಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸಂಪೂರ್ಣ ರೈಲಿಗೆ ಸೋಲಾರ್ ಪ್ಯಾನೆಲ್ ಆಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಭಾರತೀಯ ರೈಲ್ವೆ ಅಧಿಕಾರಿಗಳ ಪ್ರಕಾರ ಸೌರಶಕ್ತಿ ರೈಲುಗಳನ್ನು ಜಾರಿಗೆ ತರುವ ಮೂಲಕ ಡೀಸೆಲ್ ಬಳಕೆಯಲ್ಲಿ ಗಣನೀಯ ಕುಸಿತವುಂಟಾಗಲಿದೆ. ಇದು ಒಟ್ಟಾರೆ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಈಗ ನಡೆಸಿರುವ ಪರೀಕ್ಷೆಯ ಪ್ರಕಾರ ಸೋಲಾರ್ ನಿಯಂತ್ರಿತ ಕೋಚ್ ಗಳ ಬಳಕೆಯಿಂದಾಗಿ ದೈನಂದಿನ 17 ಯುನಿಟ್ ಗಳ ವಿದ್ಯುತ್ ಉಳಿತಾಯವಾಗಿದೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಈಗಿನ ಯೋಜನೆ ಪ್ರಕಾರ ಹವಾ ನಿಯಂತ್ರಣ ರಹಿತ ರೈಲು ಬೋಗಿಗಳ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಲಗತ್ತಿಸಲಾಗುವುದು. ಇದರ ಯಶಸ್ಸಿನ ಆಧಾರದಲ್ಲಿ ಸೋಲಾರ್ ಪ್ಯಾನೆಲ್ ರೈಲು ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ರೈಲ್ವೆ ಅಧಿಕಾರಿಗಳ ಪ್ರಕಾರ ಸೋಲಾರ್ ಪ್ಯಾನೆಲ್ ಗಳನ್ನು ಆಳವಡಿಸುವ ಮೂಲಕ ಪ್ರತಿ ಕೋಚ್ ನಲ್ಲಿ ವಾರ್ಷಿಕವಾಗಿ 1.24 ಲಕ್ಷ ರು.ಗಳನ್ನು ಉಳಿತಾಯ ಮಾಡಬಹುದಾಗಿದೆ ಎಂದಿದೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಸೌರಶಕ್ತಿ ರೈಲಿನಲ್ಲಿ ಉತ್ಪಾದನೆಯಾಗುವ ವಿದ್ಯುತನ್ನು ಚಲಿಸುವ ರೈಲಿನ ವಿದ್ಯುತ್ ಅಗತ್ಯಗಳಿಗಾಗಿ ಬಳಕೆ ಮಾಡಲಾಗುವುದು. ಇದರ ಜೊತೆಗೆ ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ ಈ ಮುಖಾಂತರ ಪರಿಸರಕ್ಕೆ ಮಾರಕವಾಗಿರುವ ಕಾರ್ಬನ್ ಡೈ ಓಕ್ಸೈಡ್ ಬಳಕೆಯು ಕಡಿಮೆಯಾಗಲಿದೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಅಧ್ಯಯನ ವರದಿಯೊಂದರ ಪ್ರಕಾರ ಸೌರಶಕ್ತಿ ನಿಯಂತ್ರಿತ ರೈಲುವೊಂದು ವಾರ್ಷಿಕವಾಗಿ 90,000 ಲೀಟರ್ ಗಳಷ್ಟು ಡೀಸೆಲ್ ಉಳಿತಾಯ ಮಾಡಲಿದೆ. ಅಂದರೆ ಬರೋಬ್ಬರಿ 200 ಟನ್ ಕಾರ್ಬನ್ ಡೈ ಓಕ್ಸೆಡ್ ಹೊಗೆ ಹೊರಸೂಸುವುದನ್ನು ತಡೆಯಲಿದೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಸದ್ಯ ಭಾರತೀಯ ರೈಲ್ವೆಯ ಯೋಜನೆಯ ಪ್ರಕಾರ ರೈಲುಗಳು ಡೀಸೆಲ್ ಇಂಧನದಿಂದಲೇ ಚಾಲನೆಯಾಗಲಿದೆ. ಆದರೆ ಚಲಿಸುವ ರೈಲಿನ ಒಳಗಡೆ ಬೇಕಾಗಿರುವ ಅಗತ್ಯ ವಿದ್ಯುತನ್ನು (ಎಸಿ, ಫ್ಯಾನ್, ಲೈಟ್ ಇತ್ಯಾದಿ) ಸೋಲಾರ್ ಪ್ಯಾನೆಲ್ ಗಳಿಂದ ಪೂರೈಸಲಾಗುವುದು.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಭಾರತವು ದೊಡ್ಡ ಮಟ್ಟದಲ್ಲಿ ಸೌರಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿದೆ. ಇಲ್ಲಿ ಎಲ್ಲ ಕಡೆಗಳಲ್ಲೂ ವರ್ಷದುದ್ಧಕ್ಕೂ ಅತ್ಯುತ್ತಮ ಸೂರ್ಯ ಬೆಳಕು ಸಿಗುತ್ತದೆ. ರೈಲ್ವೆಯ ಇಂಧನ ವೆಚ್ಚವನ್ನು ಆದಷ್ಟು ಕಡಿಮೆ ಮಾಡುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ವರದಿಯ ಪ್ರಕಾರ 2013-14ನೇ ಸಾಲಿನಲ್ಲಿ 1.27 ಲಕ್ಷ ಕೋಟಿ ರು.ಗಳನ್ನು ಭಾರತೀಯ ರೈಲ್ವೆ ವ್ಯಯಿಸಿತ್ತು. ಇದರಲ್ಲಿ 28,500 ಕೋಟಿ ರು.ಗಳನ್ನು (ಶೇಕಡಾ 22ರಷ್ಟು) ಇಂಧನ ತುಂಬಿಸುವುದಕ್ಕಾಗಿ ವ್ಯಯ ಮಾಡಲಾಗಿತ್ತು.

ಭಾರತದಲ್ಲಿ ಸೌರಶಕ್ತಿ ಚಾಲಿತ ರೈಲು ಓಡಾಟ

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ಸೌರಶಕ್ತಿ ಕೇಂದ್ರವನ್ನಾಗಿ ಮಾರ್ಪಾಡಿಸುವ ಕ್ರಾಂತಿಕಾರಿ ಯೋಜನೆಯನ್ನು ಭಾರತೀಯ ರೈಲ್ವೆ ಹೊಂದಿದೆ. ಇವೆಲ್ಲವೂ ಸದ್ಯದಲ್ಲೇ ನನಸಾಗಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
Read more on solar
English summary
Indian Railways trials solar-powered trains
Story first published: Tuesday, June 2, 2015, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X