ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್ ಅನ್ನು ಕೇರಳ ಹೈಕೋರ್ಟ್ ಕಡ್ಡಾಯಗೊಳಿಸುವುದರ ಜೊತೆಗೆ ಕೆಲವು ಹೊಸ ನಿಬಂಧನೆಗಳನ್ನು ವಿಧಿಸಿದೆ. ಈ ನಿಬಂಧನೆಗಳು ಮುಂದಿನ ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಎಂದು ಕೇರಳ ಹೈಕೋರ್ಟ್ ಅದೇಶ ನೀಡಿದೆ.

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಹೆಲ್ಮೆಟ್ ಧರಿಸದೇ ಇರುವವರನ್ನು ಮತ್ತು ಬೈಕ್ ಸವಾರರನ್ನು ತಪಾಸಣೆ ಮಾಡಲು ನಿಲ್ಲಿಸಲು ಸೂಚಿಸಿದಾಗ ಅದನ್ನು ನಿಲ್ಲಸದೇ ಬೈಕ್ ಸವಾರರು ಮುಂದೆ ಚಲಿಸಿದ ಸಂದರ್ಭದಲ್ಲಿ ಟ್ರಾಫಿಕ್ ಪೋಲಿಸರು ಅವರನ್ನು ಬೆನ್ನಟ್ಟುವಂತಿಲ್ಲವೆಂದು ಕೇರಳ ಹೈಕೋರ್ಟ್ ಹೇಳಿದೆ. ಪೊಲೀಸರು ಅಂತಹ ವಾಹನ ಬರುವ ಹಾದಿಯಲ್ಲಿ ಅಡ್ಡ ಬಂದು ತಡೆಯುವುದು ಅಥವಾ ದೈಹಿಕ ಬಲ ತೋರುವುದು ಮಾಡುವಂತಿಲ್ಲ.

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಈ ರೀತಿ ವಾಹನಗಳನ್ನು ಅಡ್ಡಗಟ್ಟಿದಾಗ ಅಪಘಾತ ಅಥವಾ ಪ್ರಾಣಪಾಯವಾಗುವ ಕಾರಣ ಟ್ರಾಫಿಕ್ ಪೊಲೀಸರು ಅವರನ್ನು ಪತ್ತೆಹಚ್ಚಲು ಹೆಚ್ಚು ಅಧುನಿಕ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ನ್ಯಾಯಾಲಯ ಹೇಳಿದೆ.

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಮೋಟಾರ್ ವಾಹನ ಡ್ರೈವಿಂಗ್ ನಿಯಂತ್ರಣ ಕಾಯ್ದೆ 2017ರ ನಿಯಮದಂತೆ ಟ್ರಾಫಿಕ್ ಪೊಲೀಸರು ವಾಹನವನ್ನು ಯಾವ ಕಾರಣಕ್ಕೆ ತಡೆಯಬಹುದು ಎಂಬುದರ ಬಗ್ಗೆ ಅಧಿಕೃತ ಪಟ್ಟಿ ತಯಾರಿಸಲು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಡಿಜಿಟಲ್ ಕ್ಯಾಮೆರಾ, ಟ್ರಾಫಿಕ್ ಸಿಸಿ ಕ್ಯಾಮೆರಾ, ಮೊಬೈಲ್ ಕ್ಯಾಮೆರಾ, ಇತರ ಅಧುನಿಕ ತಂತ್ರಜ್ಞಾನಗಳನ್ನು ಬಳಿಸಿ ಅವರನ್ನು ಪತ್ತೆಹಚ್ಚಬಹುದಾಗಿದೆ. ವಾಹನದ ದಾಖಲೆ, ಫಿಟೆನೆಸ್ ಸರ್ಟಿಫಿಕೇಟ್ ಮತ್ತು ಇನ್ನಿತರ ದಾಖಲೆಗಳನ್ನು ಪರಿಶೀಲಿಸಲು ಮತ್ತು ದ್ವಿಚಕ್ರ ವಾಹನದ ಅಗತ್ಯ ಮಾಹಿತಿ ಪಡೆಯಲು ಇವುಗಳನ್ನು ಬಳಸಬಹುದು.

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ವಾಹನಗಳ ಪರಿಶೀಲನೆಗಾಗಿ ವಾಹನದ ಮುಂದೆ ನಿಂತು ಅಡ್ಡ ಹಾಕುವುದು ಅಥವಾ ಬೆನ್ನುಟ್ಟವ ಮೂಲಕ ಯಾವುದೇ ದೈಹಿಕವಾಗಿ ಆಡಚಣೆಯನ್ನು ಮಾಡಬಾರದು. ಇದು ಸವಾರರಿಗೆ ಅಲ್ಲದೇ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಗಳ ಜೀವಕ್ಕೂ ಅಪಾಯವನ್ನುಂಟು ಮಾಡಬಹುದು.

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಕೇರಳದ ಮಲಪ್ಪುರಂನ 18 ವರ್ಷದ ಅರ್ಜಿದಾರರಿಗೆ ಜಾಮೀನು ನೀಡುವ ಪ್ರಕರಣದಲ್ಲಿ ಕೇರಳದ ಹೈಕೋರ್ಟ್ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರೋಪಿ ಮತ್ತು ಆತನ ಸ್ನೇಹಿತ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ಅಡ್ಡ ಬಂದಾಗ ಟ್ರಾಫಿಕ್ ಪೊಲೀಸ್ ಎಡಗಾಲಿಗೆ ಬೈಕ್ ಅನ್ನು ಹತ್ತಿಸಿ ಪರಾರಿಯಾಗಲು ಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ರಸ್ತೆಯಲ್ಲಿ ಬಿದ್ದಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಕೋರ್ಟ್‌ನಲ್ಲಿ ಈ ಪ್ರಕರಣದ ಸವಾರನು ಪೊಲೀಸರಿಂದಾಗಿ ಅಪಘಾತವಾಗಿತ್ತು ಎಂಬ ವಾದವನ್ನು ಮಂಡಿಸಿದರು. ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಬೈಕಿಗೆ ಅಡ್ಡ ಬಂದು ಬೈಕಿನ ಹ್ಯಾಂಡಲ್ ಬಾರ್ ಅನ್ನು ಹಿಡಿಯದಿದ್ದರೆ ಅಪಘಾತ ಸಂಭವಿಸುತ್ತಿರಲಿಲ್ಲ ಎಂದು ನ್ಯಾಯಲಯದಲ್ಲಿ ಸವಾರನು ವಾದ ಮಂಡಿಸಿದ್ದನು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ದೇಶದಲ್ಲಿ ಈ ರೀತಿಯ ಹಲವಾರು ಪ್ರಕರಣಗಳು ಸಂಭವಿಸಿವೆ. ಪೊಲೀಸರು ಅಡ್ಡ ಬಂದಾಗ ಅವರಿಂದ ಬಜಾವ್ ಆಗಲು ಅಥವಾ ಸವಾರನು ಹೆದರಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇದಕ್ಕೆ ಮುಂಬೈನಲ್ಲಿ ನಡೆದ ಘಟನೆಯ ಈ ವೀಡಿಯೋ ಉದಾಹರಣೆಯಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬೈಕ್ ಸವಾರರನ್ನು ಅಡ್ಡ ಹಾಕುವಂತಿಲ್ಲವೆಂದು ಹೈಕೋರ್ಟ್ ಆದೇಶ

ಇಂದಿನ ಅಧುನಿಕ ಯುಗದಲ್ಲಿ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಟ್ರಾಫಿಕ್ ಪೊಲೀಸರು ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ಅದರ ನೋಂದಣೆ ಸಂಖ್ಯೆಯನ್ನು ಬಳಸಿ ಮಾಲೀಕನಿಗೆ ದಂಡದ ಚಲನ್ ಅಥವಾ ನೋಟಿಸ್ ಕಳುಹಿಸುವ ವಿಧಾನವನ್ನು ಅನುಸರಿಸಬಹುದಾಗಿದೆ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಇನ್ನು ಮುಂಬೈ ಪೊಲೀಸರು ಇ-ಚಲನ್ ಮೂಲಕ ಕಳುಹಿಸಲಾದ ರೂ.80 ಕೋಟಿ ಪಾವತಿಯಾಗದ ದಂಡದ ಹಣವನ್ನು ವಸೂಲಿ ಮಾಡಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಸಂಚಾರ ದಂಡ ಪಾವತಿಸದವರ ವಿರುದ್ಧ ಬಂಧನ ವಾರಂಟ್ ಹೊರಡಿಸುವಂತೆ ನ್ಯಾಯಾಲಯಗಳಿಗೆ ಮನವಿ ಮಾಡಲು ಮುಂಬೈ ಪೊಲೀಸ್ ಇಲಾಖೆ ನಿರ್ಧರಿಸಿದೆ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಈ ಅಭಿಯಾನವನ್ನು 2019ರ ಡಿಸೆಂಬರ್ 1ರಿಂದ ಆರಂಭಿಸುವ ಸಾಧ್ಯತೆಗಳಿರುವುದಾಗಿ ವರದಿಯಾಗಿದೆ. ಆದ್ದರಿಂದ, ಇ-ಚಲನ್ ಮೂಲಕ ನಿಮಗೆ ಕಳುಹಿಸಲಾದ ದಂಡದ ಮೊತ್ತವನ್ನು ನೀವು ಪಾವತಿಸದೇ ಇದ್ದರೆ, ಬಂಧನದಿಂದ ತಪ್ಪಿಸಿಕೊಳ್ಳಲು ಕೂಡಲೇ ದಂಡದ ಹಣವನ್ನು ಪಾವತಿಸಿ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಸಂಚಾರ ಪೊಲೀಸರು ಈ ರೀತಿಯ ಕಠಿಣ ಕ್ರಮಕ್ಕೆ ಯಾವ ಕಾರಣಕ್ಕೆ ಮುಂದಾಗಿದ್ದಾರೆ ಎಂಬುದನ್ನು ನೋಡುವುದಾದರೆ, ಈ ವ್ಯವಸ್ಥೆಯನ್ನು 2016ರಲ್ಲಿ ಪರಿಚಯಿಸಿದಾಗಿನಿಂದ ಮುಂಬೈನ ಸಂಚಾರ ಪೊಲೀಸ್ ಇಲಾಖೆಯಲ್ಲಿ 27 ಲಕ್ಷಕ್ಕೂ ಹೆಚ್ಚಿನ ಪಾವತಿಯಾಗದ ಇ-ಚಲನ್‍‍ಗಳಿವೆ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಇವುಗಳ ಪೈಕಿ 9,000 ಕ್ಕೂ ಹೆಚ್ಚು ಇ-ಚಲನ್‌ಗಳು ರೂ. 5,000ಕ್ಕೂ ಹೆಚ್ಚಿನ ಮೊತ್ತವನ್ನು ಹೊಂದಿವೆ. ಕಳೆದ 3 ವರ್ಷಗಳಿಂದ ರೂ. 80 ಕೋಟಿಗೂ ಅಧಿಕ ಮೊತ್ತದ ದಂಡಗಳನ್ನು ಪಾವತಿಸಲಾಗಿಲ್ಲ. ದಂಡ ಪಾವತಿಸದ ಜನರಿಗೆ ಟ್ರಾಫಿಕ್ ಪೊಲೀಸರು ಎಸ್‌ಎಂಎಸ್ ಹಾಗೂ ಪತ್ರಗಳನ್ನು ಕಳುಹಿಸಿದ್ದರೂ ಸಾಕಷ್ಟು ಜನರು ದಂಡ ಪಾವತಿಸಿಲ್ಲ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಕಳೆದ ವರ್ಷ ದಂಡದ ರೂಪದಲ್ಲಿ ರೂ.139 ಕೋಟಿ ಸಂಗ್ರಹಿಸಲಾಗಿತ್ತು. ಈ ವರ್ಷ ಇದರ ಪ್ರಮಾಣ ರೂ.100 ಕೋಟಿಗಳಿಗೆ ಇಳಿಕೆಯಾಗಿದೆ. ಮುಂಬೈ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಮಧುಕರ್ ಪಾಂಡೆ ಈ ಬೆಳವಣಿಗೆಯನ್ನು ಖಚಿತ ಪಡಿಸಿದ್ದಾರೆ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಈ ಬಗ್ಗೆ ಮಾತನಾಡಿದ ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಪರಾಧಿಗಳು ಕಾನೂನಿಗೆ ಭಯಪಡುವಂತೆ ಮಾಡುವುದು ಅವಶ್ಯಕ. ಇದಕ್ಕೂ ಮುನ್ನ ಪೊಲೀಸರು ಅಪರಾಧಿಗಳ ಲೈಸೆನ್ಸ್ ಹಾಗೂ ವಾಹನದ ದಾಖಲೆಗಳನ್ನು ವಶಪಡಿಸಿಕೊಂಡು, ದಂಡ ಪಾವತಿಸಿದ ನಂತರ ವಾಪಸ್ ನೀಡುತ್ತಿದ್ದರು.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಈಗ ಸ್ಥಳದಲ್ಲಿ ಇ-ಚಲನ್ ನೀಡಲಾಗುತ್ತಿದ್ದು ನಿಯಮಗಳನ್ನು ಉಲ್ಲಂಘಿಸುವವರ ವಾಹನದ ಫೋಟೋ ಕ್ಲಿಕ್ ಮಾಡಿ ಎಸ್‍ಎಂ‍ಎಸ್ ಕಳುಹಿಸಲಾಗುತ್ತದೆ. ಅನೇಕ ಬಾರಿ ಈ ವಾಹನಗಳನ್ನು ಆರ್‌ಟಿಒದಲ್ಲಿ ನೋಂದಾಯಿಸಿರುವುದಿಲ್ಲ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ನೋಂದಾಯಿಸಿದ್ದರೂ ತಪ್ಪು ವಿಳಾಸವನ್ನು ನೀಡಲಾಗುತ್ತದೆ. ದಂಡ ಪಾವತಿಸದವರನ್ನು ಜೈಲಿಗೆ ಕಳುಹಿಸುವಂತಹ ವ್ಯವಸ್ಥೆ ನಮಗೆ ಬೇಕು ಎಂದು ಹೇಳಿದರು. ಈ ಹಿಂದೆ, ಮುಂಬೈನ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಇ-ಚಲನ್ ಮೂಲಕ ಕಳುಹಿಸುತ್ತಿದ್ದ ದಂಡವನ್ನು ಪಾವತಿಸದಿರುವ ಅನೇಕ ಘಟನೆಗಳು ನಡೆದಿವೆ.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಕೆಲ ತಿಂಗಳ ಹಿಂದೆ ಮುಂಬೈ ಪೊಲೀಸರು ರೂ. 1.04 ಲಕ್ಷ ದಂಡವನ್ನು ಪಾವತಿಸದ ಉದ್ಯಮಿಯೊಬ್ಬರ ಹೋಂಡಾ ಅಕಾರ್ಡ್ ಐಷಾರಾಮಿ ಸೆಡಾನ್ ಅನ್ನು ವಶಕ್ಕೆ ಪಡೆದಿದ್ದರು. ಮತ್ತೋರ್ವ ಉದ್ಯಮಿ ಬಿಎಂಡಬ್ಲ್ಯು 3-ಸೀರೀಸ್ ಹಾಗೂ ಹೋಂಡಾ ಅಕಾರ್ಡ್ ಕಾರುಗಳಲ್ಲಿ ಬಾಂದ್ರಾ-ವರ್ಲಿ ಸಮುದ್ರ ಮಾರ್ಗದಲ್ಲಿ ಹಲವು ಬಾರಿ ವೇಗವಾಗಿ ಕಾರು ಚಲಾಯಿಸಿದ್ದರು.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಆದರೆ 103 ಬಾರಿ ವೇಗವಾಗಿ ಕಾರು ಚಲಾಯಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದರೂ ದಂಡವನ್ನು ಪಾವತಿಸಿರಲಿಲ್ಲ. ತನ್ನ ಹೋಂಡಾ ಅಕಾರ್ಡ್‌ ಕಾರ್ ಅನ್ನು ಪಾರ್ಕಿಂಗ್ ಉಲ್ಲಂಘನೆಗಾಗಿ ಎಳೆದೊಯ್ಯಲ್ಪಟ್ಟ ನಂತರ ಅವರನ್ನು ಬಂಧಿಸಲಾಯಿತು.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಅಂತೆಯೇ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ಟಾಟಾ ಸಫಾರಿ ಕಾರು ಕೂಡ ಹಲವು ಬಾರಿ ವೇಗವಾಗಿ ಚಲಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಸರ್ಕಾರದ ಮುಖ್ಯಸ್ಥರಿಗೆ ದಂಡದಿಂದ ವಿನಾಯಿತಿ ನೀಡುವುದರಿಂದ ಈ ದಂಡವನ್ನು ವಿಧಿಸದೇ ಹಾಗೆಯೇ ಬಿಡಲಾಯಿತು.

ದಂಡ ಕಟ್ಟದಿದ್ರೆ ಆರೆಸ್ಟ್ ಆಗ್ತೀರಾ ಎಚ್ಚರ..!

ಇದರ ನಡುವೆ ಕೇರಳ ಹೈಕೋರ್ಟ್ ಹೊಸ ಆದೇಶ ನೀಡಿದ್ದು, ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.ಹೆಲ್ಮೆಟ್ ಧರಿಸದೇ ಇರುವವರನ್ನು ಮತ್ತು ಬೈಕ್ ಸವಾರರನ್ನು ತಪಾಸಣೆ ಮಾಡಲು ನಿಲ್ಲಿಸಲು ಸೂಚಿಸಿದಾಗ ಅದನ್ನು ನಿಲ್ಲಸದೇ ಬೈಕ್ ಸವಾರರು ಮುಂದೆ ಚಲಿಸಿದ ಸಂದರ್ಭದಲ್ಲಿ ಟ್ರಾಫಿಕ್ ಪೋಲಿಸರು ಅವರನ್ನು ಬೆನ್ನಟ್ಟುವಂತಿಲ್ಲವೆಂದು ಕೇರಳ ಹೈಕೋರ್ಟ್ ಹೇಳಿದೆ.

Most Read Articles

Kannada
English summary
Police should not stop bikers using sticks, coming in way – High Court - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more