ಫೆರಾರಿ ಸೂಪರ್ ಕಾರಿನಲ್ಲಿ ಬಾಲಕನ ಜಾಲಿ ರೈಡ್
ನಮ್ಮೆಲ್ಲರ ಸಣ್ಣ ವಯಸ್ಸಿನಲ್ಲಿ ಕಾರು ಹೋಗಿ ಸೈಕಲ್ ಓಡಿಸುವುದೇ ಅಪರೂಪ. ಹಾಗಿರುವಾಗ ಇಲ್ಲೊಬ್ಬ ಬಾಲಕ ದುಬಾರಿ ಫೆರಾರಿ ಸೂಪರ್ ಕಾರು ಓಡಿಸುವ ಮೂಲಕ ಸುದ್ದಿ ಗಿಟ್ಟಿಸಿಕೊಂಡಿದ್ದಾನೆ.
ನೆರೆಯ ರಾಜ್ಯ ಕೇರಳದಿಂದ ಪ್ರಸ್ತುತ ಸುದ್ದಿ ವರದಿಯಾಗಿದೆ. ಎಂಟರ ಅಸುಪಾಸಿನ ಹುಡುಗ ಫೆರಾರಿ 'ಎಫ್ 430' ಸೂಪರ್ ಕಾರಿನಲ್ಲಿ ಜಾಲಿ ರೈಡ್ ಹೊಡೆದಿದ್ದಾನೆ.
ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಬಾಲಕನಿಗೆ ಸಾಥ್ ನೀಡಿದವನು ಮತ್ತೊಬ್ಬ ಹುಡುಗ. ಹೌದು, ಬಾಲಕನ ಸಹ ಪ್ರಯಾಣಿಕನಾಗಿ ಆತನ ಸ್ನೇಹಿತ ಕಾಣಿಸಿಕೊಂಡಿದ್ದಾನೆ.
ಪ್ರಸ್ತುತ ವೀಡಿಯೋ ಸಾಮಾಜಿಕ ತಾಲಜಾಣ ಯೂಟ್ಯೂಬ್‌ನಲ್ಲಿ ಭಾರಿ ಅಲೆಯೆಬ್ಬಿಸಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಬಾಲಕನ ಸಾಹಸವನ್ನು ಗಮನಿಸೋಣ.

ಅಷ್ಟಕ್ಕೂ ಇದನ್ನು ಬಾಲಕನ ಸಾಹಸವೇ ಅಥವಾ ಹೆತ್ತವರ ಅಚಾತುರ್ಯವೇ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ಯಾಕೆಂದರೆ ರಕ್ಷಣೆಗಾಗಿ ಬಾಲಕ ಸೀಟ್ ಬೆಲ್ಟ್ ಕೂಡಾ ಧರಿಸಿರಲಿಲ್ಲ. ಹಾಗೆಯೇ ಸಹ ಚಾಲಕರಾಗಿ ಯಾವುದೇ ನುರಿತ ಡ್ರೈವರುಗಳು ಸಾಥ್ ನೀಡಿರಲಿಲ್ಲ.

ಒಟ್ಟಿನಲ್ಲಿ ಬಾಲಕ ಸುರಕ್ಷಿತವಾಗಿ ಚಕ್ಕಂದವಾಗಿ ರೈಡ್ ಹೊಡೆದಿರುವುದರಿಂದ ಪ್ರಸ್ತುತ ಸುದ್ದಿ ಜನಪ್ರಿಯವಾಗಿದೆ.

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ. ಅಂತಿಮದಲ್ಲಿ ನೀಡಿರುವ ವೀಡಿಯೋ ಕ್ಲಿಕ್ಕಿಸಲು ಮರೆಯದಿರಿ.



ವೀಡಿಯೋ ವೀಕ್ಷಿಸಿ


Click it and Unblock the Notifications








