ವಾಹನ ಚಾಲನೆಯು ಒಂದು ಕಲೆ ಅಂದ್ರೆ ತಪ್ಪಾಗುವುದಿಲ್ಲ. ಅಂತೆಯೇ ವಾಹನಗಳನ್ನು ಸುರಕ್ಷತೆಯಿಂದ ಇಟ್ಟುಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಯಾಕೆಂದ್ರೆ ದುಬಾರಿ ಬೆಲೆ ತೆತ್ತು ಖರೀದಿ ಮಾಡಿರುವ ವಾಹನಗಳ ಬಗ್ಗೆ ಕಾಳಜಿ ವಹಿಸದೇ ಹೋದಲ್ಲಿ ಹೆಚ್ಚುವರಿ ಬೆಲೆ ತೆರಬೇಕಾಗುತ್ತದೆ ಅನ್ನೋದನ್ನ ಮಾತ್ರ ಮರೆಯಬೇಡಿ.
ಅಂದಹಾಗೆ ಈ ಮಾತನ್ನು ಯಾಕೆ ಹೇಳ್ತಾ ಇದೀವಿ ಅಂದುಕೊಂಡ್ರಾ. ಇಲ್ಲೊಬ್ಬ ಕಾರು ಮಾಲೀಕ ಮಾಡಿದ ಒಂದು ಸಣ್ಣ ತಪ್ಪು ನಿಮಗೂ ಎಚ್ಚರಿಕೆಯ ಗಂಟೆ ಎಂದುಕೊಳ್ಳಿ. ಇದಕ್ಕೆ ಕಾರಣ, ಪಾರ್ಕ್ ಆಗಿದ್ದ ಕಾರೊಂದು ಸಡನ್ ಆಗಿ ಹಿಂದಕ್ಕೆ ಚಲಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಾರಿನ ಹ್ಯಾಂಡಲ್ ಬ್ರೇಕ್ ಹಾಕದ ಪರಿಣಾಮ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಹಿಂದಕ್ಕೆ ಚಲಿಸಿದಲ್ಲದೇ ಮುಖ್ಯ ರಸ್ತೆಗೆ ನುಗ್ಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯ ಅನಾಹುತ ನಡೆದಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ.
ಇನ್ನು ಈ ಘಟನೆ ನಡೆದಿರುವುದು ಕೇರಳದ ಕೊಟ್ಟಾಯಂನಲ್ಲಿ. ಅರ್ಪಾಟ್‌ಮೆಂಟ್ ಒಂದರ ಮುಂದೆ ವ್ಯಾಗನ್ ಆರ್ ಕಾರುನ್ನು ಪಾರ್ಕ್ ಮಾಡಲಾಗಿತ್ತು. ಇಳಿಜಾರು ಇದ್ದ ಕಾರಣ ಕಾರು ನಿಯಂತ್ರಣ ತಪ್ಪಿ ಮುಖ್ಯ ರಸ್ತೆಗೆ ನುಗ್ಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರ್ ಪಾರ್ಕ್ ಮಾಡುವಾಗ ಹ್ಯಾಂಡಲ್ ಬ್ರೇಕ್ ಮಾಡದ ಹಿನ್ನೆಲೆಯೇ ಈ ಘಟನೆ ನಡೆದಿದ್ದು, ಕಾರು ಚಾಲಕನಿಲ್ಲದೇ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿರುವ ವ್ಯಾಗನ್ ಆರ್ ಕಂಡು ಸ್ಥಳೀಯರು ಕೂಡಾ ಕೆಲಕಾಲ ಆತಂಕಕ್ಕೆ ಈಡಾಗಿದ್ದರು.
ಕೂಡಲೇ ಕಾರಿನ ಚಕ್ರಗಳಿಗೆ ಕಲ್ಲು ನೀಡಿ ಕಾರನ್ನು ನಿಲುಗಡೆ ಮಾಡಿದ ಸ್ಥಳೀಯರು ಘಟನೆ ಬಗ್ಗೆ ಕಾರು ಮಾಲೀಕನಿಗೆ ವಿಷಯ ತಿಳಿಸಿದ್ದಾರೆ. ಆದ್ರೆ ಮುಖ್ಯರಸ್ತೆಯಲ್ಲಿ ಕಾರು ನುಗ್ಗುತ್ತಿರುವ ವೇಳೆ ಯಾವುದೇ ವಾಹನಗಳು ಇಲ್ಲದ ಕಾರಣಕ್ಕೆ ನಡೆಯಬಹುದಾಗಿದ್ದ ದುರಂತ ಒಂದು ತಪ್ಪಿದೆ ಎನ್ನಬಹುದು.
ಹೀಗಾಗಿ ವಾಹನ ಮಾಲೀಕರು ಕಾರು ಮತ್ತಿತ್ತರ ವಾಹನಗಳನ್ನು ಪಾರ್ಕ್ ಮಾಡುವಾಗ ಸುರಕ್ಷಾ ವಿಧಾನಗಳ ಮೂಲಕ ಪಾರ್ಕ್ ಮಾಡುವುದಲ್ಲದೇ ಮುಂಜಾಗ್ರತೆ ವಹಿಸುವುದನ್ನು ಮರೆಯಬಾರದು. ಇಲ್ಲವಾದ್ರೆ ನಾವು ಮಾಡುವ ಒಂದೊಂದು ಸಣ್ಣ ತಪ್ಪುಗಳು ಸಹ ದೊಡ್ಡ ದುರಂತಗಳಿಗೆ ಕಾರಣವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
01. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...
02. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..
03. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?
04. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...
05. ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark