ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ವಾಹನಗಳಲ್ಲಿ ನಕಲಿ ನಂಬರ್‍‍ಪ್ಲೇಟ್‍‍ಗಳನ್ನು ಬಳಸುವುದು ಭಾರತದಲ್ಲಿ ಕಾನೂನುಬಾಹಿರವಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿ ಈ ಹಿಂದೆ ಪೊಲೀಸರು ನಕಲಿ ನಂಬರ್‍‍ಪ್ಲೇಟ್‍‍ಗಳನ್ನು ಹೊಂದಿದ್ದ ಸಾವಿರಾರು ವಾಹನಗಳನ್ನು ವಶಕ್ಕೆ ಪಡೆದಿದ್ದರು.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಹೊಸ ವಾಹನಗಳನ್ನು ಖರೀದಿಸುವ ಕೆಲವರು ತಮ್ಮ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಿಸುವುದಿಲ್ಲ. ರಿಜಿಸ್ಟ್ರೇಷನ್ ಮಾಡಿಸದಿದ್ದರೆ ನಂಬರ್ ನೀಡುವುದಿಲ್ಲ. ನಂಬರ್ ಪ್ಲೇಟ್ ಹೊಂದಿಲ್ಲದೇ ವಾಹನ ಚಲಾಯಿಸಿದರೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಈ ಕಾರಣಕ್ಕೆ ಯಾವುದೋ ವಾಹನದ ನಂಬರ್ ಅನ್ನು ತಮ್ಮ ವಾಹನಕ್ಕೆ ಅಳವಡಿಸಿಕೊಂಡು ವಾಹನ ಚಲಾಯಿಸುತ್ತಾರೆ. ಹೀಗೆ ನಕಲಿ ನಂಬರ್ ಪ್ಲೇಟ್ ಹೊಂದಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ನಿಜವಾದ ವಾಹನ ಮಾಲೀಕನ ವಿಳಾಸಕ್ಕೆ ದಂಡದ ಚಲನ್‍‍ಗಳನ್ನು ಕಳುಹಿಸಲಾಗುತ್ತದೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ತನ್ನದಲ್ಲದ ತಪ್ಪಿಗೆ ನಿಜವಾದ ವಾಹನ ಮಾಲೀಕನು ಕಷ್ಟ ಪಡಬೇಕಾಗುತ್ತದೆ. ಇದೇ ರೀತಿಯ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ರಾಯಲ್ ಎನ್‍‍ಫೀಲ್ಡ್ ಬುಲೆಟ್ ಸವಾರನು ಸಾವಿರಾರು ರೂಪಾಯಿಗಳಷ್ಟು ನಿಯಮಗಳನ್ನು ಉಲ್ಲಂಘಿಸಿದ ನಂತರ ಬಂಧಿತನಾಗಿದ್ದಾನೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಮೈಸೂರು ನಗರ ಪೊಲೀಸರು ಕೆ.ಜಿ ಕೊಪ್ಪಲಿನ ನಿವಾಸಿ ರವಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ರವಿ ಇನ್ನೊಂದು ವಾಹನದ ನಂಬರ್ ಪ್ಲೇಟ್ ಆದ ಕೆ‍ಎ 09 ಹೆಚ್‍‍ಜೆ 0597 ನಂಬರ್ ಅನ್ನು 2018ರ ಡಿಸೆಂಬರ್‍‍ನಿಂದ ಬಳಸುತ್ತಿದ್ದಾನೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಆಗಿನಿಂದ ಕೆ‍ಎ 09 ಹೆಚ್‍‍ಜೆ 0597 ನಂಬರ್ ವಾಹನವನ್ನು ಹೊಂದಿದ್ದ ನಿಜವಾದ ಮಾಲೀಕರು ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ 39 ಎಲೆಕ್ಟ್ರಾನಿಕ್ ಚಲನ್‍‍ಗಳನ್ನು ಪಡೆದಿದ್ದಾರೆ. ಅವರು ಯಾವುದೇ ರೀತಿಯ ಉಲ್ಲಂಘನೆಯನ್ನು ಮಾಡದೇ ಇದ್ದರೂ ಸಹ ಅವರಿಗೆ ದಂಡ ವಿಧಿಸಿರುವ ಚಲನ್‍‍ಗಳನ್ನು ನೀಡಲಾಗಿದೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಸ್ಟಾರ್ ಆಫ್ ಮೈಸೂರ್ ವರದಿಗಳ ಪ್ರಕಾರ ಈ ನಂಬರಿನ ನಿಜವಾದ ಮಾಲೀಕರು ಡಿ.ಚಂದ್ರು. ತಮಗೆ ಬರುತ್ತಿದ್ದ ದಂಡದ ಚಲನ್‍‍ಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ತಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲವೆಂಬುದರ ಅರಿವಿದ್ದ ಚಂದ್ರುರವರು ಮೈಸೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿದ್ದ ಟ್ರಾಫಿಕ್ ಮ್ಯಾನೇಜ್‍‍ಮೆಂಟ್ ವಿಭಾಗಕ್ಕೆ ಭೇಟಿ ನೀಡಿದ್ದಾರೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಅಲ್ಲಿದ್ದ ಸಿಬ್ಬಂದಿಗೆ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ಈ ದೃಶ್ಯಗಳಲ್ಲಿ ಯುವಕನೊಬ್ಬ ರಾಯಲ್ ಎನ್‍‍ಫೀಲ್ಡ್ ಬುಲೆಟ್ ಚಲಾಯಿಸುತ್ತಿರುವುದು ಕಂಡು ಬಂದಿದೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಆದರೆ ಚಂದ್ರುರವರ ಬಳಿ ಇರುವುದು ಹೋಂಡಾ ಡಿಯೊ ಸ್ಕೂಟರ್. ನಂತರ ಚಂದ್ರುರವರು ಈ ಬಗ್ಗೆ ದೂರು ನೀಡಿದ್ದಾರೆ. ನಂತರ ಸಂಬಂಧಪಟ್ಟ ಎ‍‍ಸಿ‍‍ಪಿರವರು ಮೈಸೂರಿನ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಈ ಬೈಕಿನ ಮೇಲೆ ಕಣ್ಣಿಟ್ಟು, ಮಾಲೀಕನನ್ನು ಬಂಧಿಸುವಂತ ಸೂಚಿಸಿದ್ದಾರೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಈ ರೀತಿ ಸೂಚನೆ ಬಂದ ಎರಡು ಗಂಟೆಗಳ ಒಳಗಾಗಿ ಪೊಲೀಸರು ನಕಲಿ ನಂಬರ್ ಪ್ಲೇಟ್ ಹೊಂದಿದ್ದ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಚಲಾಯಿಸುತ್ತಿದ್ದ ಯುವಕನನ್ನು ಇರ್ವಿನ್ ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಪೊಲೀಸರು ಬೈಕಿಗೆ ಸಂಬಂಧಪಟ್ಟ ಅಸಲಿ ದಾಖಲೆಗಳನ್ನು ತೋರಿಸುವಂತೆ ರಾಯಲ್ ಎನ್‍‍ಫೀಲ್ಡ್ ಬೈಕಿನ ಮಾಲೀಕನನ್ನು ಕೇಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಬೈಕಿನ ನಿಜವಾದ ನಂಬರ್ ಕೆ‍ಎ 09 ಹೆಚ್‍‍ಜೆ 3597 ಎಂದು ತಿಳಿದು ಬಂದಿದೆ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ತಕ್ಷಣವೇ ಪೊಲೀಸರು ಬೈಕ್ ಅನ್ನು ವಶಕ್ಕೆ ಪಡೆದು, ರವಿಯನ್ನು ಕಸ್ಟಡಿಗೆ ಪಡೆದಿದ್ದಾರೆ. ಸದ್ಯಕ್ಕೆ ರವಿ ಹಾಗೂ ಆತನ ಬೈಕ್ ಅನ್ನು ಜಯಲಕ್ಷ್ಮಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದ ಹಾಗೆ ಚಂದ್ರುರವರು ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದರು.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಆರೋಪಿ ರವಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರು ದಂಡ ವಿಧಿಸಬಾರದೆಂಬ ಕಾರಣಕ್ಕೆ ನಕಲಿ ನಂಬರ್ ಪ್ಲೇಟ್ ಬಳಸಿದ್ದಾಗಿ ತಿಳಿಸಿದ್ದಾನೆ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವುದು ಇದೇ ಮೊದಲ ಸಲವೇನಲ್ಲ.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಕೆಲವು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸರು, ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಸೆಡಾನ್ ಕಾರ್ ಅನ್ನು ವಶಕ್ಕೆ ಪಡೆದಿದ್ದರು. ಇದೇ ರೀತಿಯ ಘಟನೆ ಜಮ್ಮು-ಕಾಶ್ಮೀರದಲ್ಲಿಯೂ ನಡೆದಿತ್ತು.

ನಕಲಿ ನಂಬರ್‍‍ಪ್ಲೇಟ್ ಬಳಸಿ ಸಿಕ್ಕಿಬಿದ್ದ ಮೈಸೂರಿನ ಯುವಕ

ಈ ರೀತಿ ನಕಲಿ ನಂಬರ್ ಪ್ಲೇಟ್ ಹೊಂದುವುದರಿಂದ ಮಾಲೀಕನಿಗೆ ಭಾರೀ ಮೊತ್ತದ ದಂಡವನ್ನು ವಿಧಿಸುವುದರ ಜೊತೆಗೆ ವಾಹನವನ್ನು ಶಾಶ್ವತವಾಗಿ ವಶಕ್ಕೆ ಪಡೆಯಬಹುದು.

Source:Star Of Mysore

Most Read Articles

Kannada
English summary
Man arrested for using fake number plate - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X