ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

Written By:

ಅಂತರ್ಜಾಲದಲ್ಲಿ ಆಟೋ ಮೊಬೈಲ್ ವಹಿವಾಟು ನೆಡೆಸುವ ಸಂಸ್ಥೆಯೊಂದು ನೆಡೆಸಿದ ಸಮೀಕ್ಷೆಯ ವರದಿಯಂತೆ ಮಾರುತಿ ಸುಝುಕಿಯ ಸ್ವಿಫ್ಟ್ ಮತ್ತು ಬಜಾಜ್ ಕಂಪನಿಯ ಪಲ್ಸರ್ ಜನಪ್ರಿಯ ಕಾರು ಮತ್ತು ಜನಪ್ರಿಯ ಬೈಕ್ ಎಂಬ ಮಾಹಿತಿ ಬಹಿರಂಗವಾಗಿದ್ದು, ಈ ಮೂಲಕ ಜನರ ಹೆಚ್ಚು ವಿಶ್ವಾಸಗಳಿಸಿದ ಬೈಕುಗಳ ಮತ್ತು ಕಾರುಗಳ ಪಟ್ಟಿ ಬಿಡುಗಡೆಯಾಗಿದೆ.

To Follow DriveSpark On Facebook, Click The Like Button
ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಮಾರುತಿ ಕಂಪನಿಯ ಸ್ವಿಫ್ಟ್ ಮತ್ತು ಬಜಾಜ್ ಕಂಪನಿಯ ಪಲ್ಸರ್ ವಾಹನಗಳು ಮೊದಲ ಸ್ಥಾನದಲ್ಲಿ ಮೆರೆಯುತ್ತಿರುವುದು, ವಾಹನದ ಮೇಲಿರುವ ಪ್ರೀತಿ ಮತ್ತು ವಿಶ್ವಾಸ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಡ್ರೂಮ್ ಸಂಸ್ಥೆ ಪ್ರತಿ ವರ್ಷವೂ ನೆಡೆಸುವಂತೆ ಈ ವರ್ಷವೂ ಸಹ ಈ ಸಮೀಕ್ಷೆ ನೆಡೆಸಲಾಗಿತ್ತು, ಈಗ ಫಲಿತಾಂಶ ಹೊರಬಿದ್ದಿದೆ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ತನ್ನ ಗ್ರಾಹಕರ ನಡವಳಿಕೆ ಮತ್ತು ಬೇಡಿಕೆಯಂತೆ ಮತ್ತು ಡ್ರೂಮ್ ಸಂಸ್ಥೆಯ ನುರಿತ ತಂಡ ನೆಡೆಸಿದ ವಿಶ್ಲೇಷಣೆಯಂತೆ ಈ ತೀರ್ಮಾನಕ್ಕೆ ಬರಲಾಗಿದೆ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಸ್ವಿಫ್ಟ್ ನಂತರದ ಸ್ಥಾನವನ್ನು ಟೊಯೊಟಾ ಕಂಪನಿಯ ಇನ್ನೋವಾ ತದನಂತರ ಹೋಂಡಾ ಕಂಪನಿಯ ಸಿಟಿ ವಾಹನಗಳು ತುಂಬಲಿವೆ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಇನ್ನು ಬೈಕುಗಳ ವಿಚಾರಕ್ಕೆ ಬರುವುದಾದರೆ, ದೇಶದ ದೈತ್ಯ ಆಟೋ ಸಂಸ್ಥೆ ಬಜಾಜ್ ಕಂಪನಿಯ ಪಲ್ಸರ್ ಮೊದಲನೇ ಸ್ಥಾನ ಪಡೆದುಕೊಂಡು ಗೆಲುವಿನ ನಗೆ ಬೀರುತ್ತಿದೆ. ಪಲ್ಸರ್ ನಂತರದ ಸ್ಥಾನಗಳನ್ನು ಹೀರೋ ಕಂಪನಿಯ ಪ್ಯಾಶನ್ ಪ್ರೊ ಮತ್ತು ಬಜಾಜ್ ಕಂಪನಿಯ ಮತ್ತೊಂದು ಯಶಸ್ವಿ ಬೈಕ್ ಡಿಸ್ಕವರ್ ಪಡೆದುಕೊಂಡಿವೆ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಬಜಾಜ್ ಪಲ್ಸರ್, ಗ್ರಾಹಕರಿಗೆ 135 ಸಿಸಿ ಇಂದ 220 ಸಿಸಿವರೆಗೂ ಇರುವ ವ್ಯವಿಧ್ಯಮಯ ಶ್ರೇಣಿಯ ಬೈಕುಗಳನ್ನು ಕಂಪನಿಯು ನೀಡುತ್ತಾ ಬಂದಿದ್ದು, ಎಲ್ಲಾ ವರ್ಗದ ಜನರನ್ನೂ ತಲುಪಲು ಯಶಸ್ವಿಯಾಗಿದೆ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್ IV ನಿಯಮಗಳನ್ನು ಎಲ್ಲಾ ಬೈಕುಗಳಲ್ಲಿ ಅಳವಡಿಸಿರುವ ಮೊಟ್ಟ ಮೊದಲ ಕಂಪನಿ ಬಜಾಜ್ ಎಂಬುದು ಬೈಕ್ ಮಾರಾಟ ಸಂಸ್ಥೆಯ ಹೆಮ್ಮೆಯ ವಿಚಾರ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

1.2-ಲೀಟರ್ ಕೆ ಸರಣಿಯ ನಾಲ್ಕು ಸಿಲಿಂಡರ್ ಪೆಟ್ರೋಲ್ ಮತ್ತು 1.3-ಲೀಟರ್ ಡಿಡಿಐಏಸ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಎಂಬ ಎರಡು ಮಾದರಿಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಹೊರತರಲಾಗಿದ್ದು, ಅತಿ ಹೆಚ್ಚು ಮಾರಾಟವಾದ ಮೊದಲ 5 ಕಾರುಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಸ್ವಿಫ್ಟ್ ವಾಹನವು ವಿನ್ಯಾಸದ ಬದಲಾವಣೆಯ ನಂತರವೂ ಸಹ ಕಳೆದ ಎರಡು ವರ್ಷಗಳಿಂದ ತನ್ನೆಲ್ಲಾ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕುವ ಮೂಲಕ ಮೊದಲನೇ ಸ್ಥಾನ ಭದ್ರಪಡಿಸಿಕೊಂಡಿರುವುದು ಸಂತೋಷಕರ ವಿಚಾರ.

ದೇಶದ ಅತ್ಯಂತ ಜನಪ್ರಿಯ ಕಾರು ಮತ್ತು ಬೈಕು ಯಾವುದು ಗೊತ್ತೇ...!?

ಇನ್ನು ಸ್ಕೂಟರ್ ಮಾದರಿಗಳಲ್ಲಿ ಸುಜುಕಿ ಆಕ್ಸೆಸ್ ಮತ್ತು ಹೋಂಡಾ ಏವಿಯೇಟರ್ ಸ್ಕೂಟರ್-ಗಳನ್ನು ಹಿಂದಿಕ್ಕಿ ಹೋಂಡಾ ಆಕ್ಟಿವಾ ಮೊದಲ ಸ್ಥಾನ ಪಡೆದುಕೊಂಡಿದೆ.

ಮಾರುತಿ ಸುಜುಕಿ ಮುಂದಿನ ತಲೆಮಾರಿನ ಸ್ವಿಫ್ಟ್ 2017 ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಹೊಸ ಸ್ವಿಫ್ಟ್ ಫೋಟೋ ಗ್ಯಾಲರಿ ವೀಕ್ಷಿಸಲು ಕ್ಲಿಕ್ ಮಾಡಿ.

English summary
The most popular car and bike in India are Maruti Suzuki Swift and Bajaj Pulsar respectively on online platforms, as per a study by online automobile transactional marketplace Droom.
Story first published: Friday, February 17, 2017, 17:07 [IST]
Please Wait while comments are loading...

Latest Photos