ಸಿಗ್ನಲ್‌ಗಳಲ್ಲಿ ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್..!!

Written By:

ನಮ್ಮಲ್ಲಿ ಅದೆಷ್ಟೋ ಜನ ಸರಿಯಾಗಿ ಸಂಚಾರಿ ನಿಯಮಗಳನ್ನು ಪಾಲಿಸೋದಿಲ್ಲ. ಕಚೇರಿಗೆ ಬೇಗ ಹೋಗುವ ಭರದಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಟ್ರಾಫಿಕ್ ರೂಲ್ಸ್‌ಗಳನ್ನು ಬ್ರೇಕ್ ಮಾಡುವುದಲ್ಲದೇ ಪೊಲೀಸರ ಎದುರಲ್ಲೇ ಮುನ್ನುಗ್ಗಲು ಪ್ರಯತ್ನಿಸುತ್ತೇವೆ. ಆದ್ರೆ ಇಂದೋರ್ ಸಿಟಿಗೆ ಬಂದ್ರೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಅಷ್ಟು ಸುಲಭವಲ್ಲ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ನೀವು ಇನ್ನು ಮುಂದೆ ಇಂದೋರ್ ಕಡೆ ಪ್ರವಾಸಕ್ಕೊ ಅಥವಾ ಇನ್ನಾವುದೋ ಕೆಲಸಕ್ಕೆ ಅಂತಾ ಹೋಗೋದಾದ್ರೆ ಸ್ವಲ್ಪ ಎಚ್ಚರ ವಹಿಸಿ. ಅಪ್ಪಿ ತಪ್ಪಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಿಮಗೆ ದಂಡ ತಪ್ಪಿದ್ದಲ್ಲ. ಇದಕ್ಕೆ ಕಾರಣ ಮೈಕಲ್ ಜಾಕ್ಸನ್ ಸ್ಟೆಪ್ ಮೂಲಕವೇ ಫೇಮಸ್ ಆಗಿರುವ ಟಫ್ ಕಾಪ್ ರಂಜೀತ್ ಸಿಂಗ್....

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಹೌದು.. ಟ್ರಾಫಿಕ್ ಸಿಗ್ನಲ್‌ಗಳ ಮಧ್ಯೆ ಚಿತ್ರ ನಟನಂತೆ ಡಾನ್ಸ್ ಮಾಡುವ ರಂಜೀತ್ ಸಿಂಗ್ ಇಂದೋರ್ ಜನತೆಯ ಪಾಲಿನ ರಿಯಲ್ ಸಿಂಗಂ. ಯಾಕಂದ್ರೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವರಿಗೆ ತಮ್ಮದೇ ಸ್ಟೈಲ್ ಮೂಲಕ ಉತ್ತರಿಸುವ ಇವರು ಇಂದೋರ್ ಜನತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಮೈಕಲ್ ಜಾಕ್ಸನ್ಸ್​​ಗೆ ಸೆಡ್ಡು ಹೊಡೆಯುವಂತೆ ಆತನದ್ದೇ ಸ್ಟೆಪ್​​ಗಳನ್ನು ಅನುಕರಣೆ ಮಾಡುತ್ತಾ ಟ್ರಾಫಿಕ್ ಸಮಸ್ಯೆಯನ್ನು ಹತೋಟಿಗೆ ತರುವ ರಂಜೀತ್ ಸಿಂಗ್, ಪೀಕ್ ಅವರ್​​​ಗಳಲ್ಲೂ ಸುಗಮ ಸಂಚಾರಕ್ಕೆ ಕಾರಣಕರ್ತನಾಗಿದ್ದಾರೆ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಹೀಗಾಗಿಯೇ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ರಂಜೀತ್ ಸಿಂಗ್ ಹಲವು ನಿಕ್​​ನೇಮ್​​ಗಳು ಹಾಗೂ ಬಿರುದುಗಳನ್ನೂ ಗಳಿಸಿಕೊಂಡಿದ್ದಾರೆ. ಜೊತೆಗ ವಿಶಿಷ್ಟವಾದ ಡಾನ್ಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡುವುದನ್ನು ಕೇವಲ ಕೆಲಸ ಎನ್ನದೇ ಕಲೆ ಎಂದುಕೊಂಡಿದ್ದಾರೆ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಟ್ರಾಫಿಕ್ ಪೊಲೀಸ್ ಅಂದ್ರೆ ಹಣ ಕೀಳೋದಕ್ಕೇ ಇರೋವ್ರು ಅನ್ನೋ ಭಾವನೆ ಇರುವ ನಮ್ಮಲ್ಲಿ ರಂಜೀತ್ ಕೊಂಚ ವಿಭಿನ್ನವಾಗಿ ಕಾಣಿಸಿಕೊಳ್ತಾರೆ. "ಯಾವುದೇ ಕೆಲಸವಾದ್ರೂ ಮಾಡುವ ವ್ಯಕ್ತಿಯನ್ನಾಧರಿಸಿರುತ್ತದೆಯೇ ಹೊರತು ಅದರಲ್ಲಿರುವ ತಪ್ಪುಗಳಿಂದಲ್ಲ" ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ತಪ್ಪದೇ ಓದಿ-ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ?

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಹಿರಿಯ ಅಧಿಕಾರಿಗಳಿಗೂ ಡೋಂಟ್ ಕೇರ್

ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ರಂಜೀತ್ ಸಿಂಗ್ ಅವರು ಸಾರಿಗೆ ನಿಯಮಗಳನ್ನು ಪಾಲಿಸದ ಹಿರಿಯ ಅಧಿಕಾರಿಗಳನ್ನು ಬಿಟ್ಟಿಲ್ಲ. ಜೊತೆಗೆ ತಪ್ಪು ಮಾಡಿದ್ದ ತನ್ನ ತಂದೆ ಸೇರಿದಂತೆ ಅನೇಕರಿಗೆ ದಂಡ ವಿಧಿಸಿದ್ದಾರೆ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಇವೆಲ್ಲವುಗಳಿಂದ ಒಂದಷ್ಟು ಬೈಗುಳಗಳನ್ನೂ ಕೇಳಿಸಿಕೊಂಡಿದ್ದಾರೆ. ಆದರೂ ಇವರ ಕೆಲಸದ ಬಗ್ಗೆ ಯಾರೊಬ್ಬರೂ ಕೊಂಕು ಮಾತನಾಡುವುದಿಲ್ಲ. ಬದಲಿಗೆ ಟ್ರಾಫಿಕ್ ಕಂಟ್ರೋಲ್ ಮಾಡುವ ಸ್ಟೈಲ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಅಂದು ನಗಾಡಿದ ಜನರೇ ಇಂದು ಫ್ಯಾನ್ಸ್

ಆರಂಭದಲ್ಲಿ ರಸ್ತೆ ಮಧ್ಯೆ ನಿಂತು ಡಾನ್ಸ್ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡೋದನ್ನ ನೋಡಿ ಜನ ಹಲವು ರೀತಿಯಲ್ಲಿ ಆಡಿಕೊಂಡಿದ್ದರು. ದಿನ ಕಳೆದಂತೆ ಇವರೊಬ್ಬ ಕಟ್ಟುನಿಟ್ಟಿನ ಅಧಿಕಾರಿ ಎಂದು ಮನವರಿಕೆಯಾಯಿತು.

ತಪ್ಪದೇ ಓದಿ-ಹೆಲ್ಮೆಟ್ ಹಾಕಿಲ್ಲವೆಂದು ಹೆಣ ಉರುಳಿಸೋ ಪೊಲೀಸರನ್ನು ನೋಡಿದ್ದೀರಾ?

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಹೀಗಾಗಿ ಅವರು ಡ್ಯೂಟಿಯಲ್ಲಿದ್ದರೆ ಯಾರೊಬ್ಬರೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಜೊತೆಗೆ ಡಿಫ್ರೆಂಟ್ ಮ್ಯಾನರಿಸಂನಿಂದಾಗಿಯೇ ಹೆಸರು ಮಾಡಿರುವ ರಂಜೀತ್​ಗೆ ಫೇಸ್‌ಬುಕ್ ಪೇಜ್‌ನಲ್ಲಿ 21 ಸಾವಿರ ಜನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಮೈಕಲ್ ಜಾಕ್ಸನ್ ಸ್ಟೆಪ್ಸ್ ಮೂಲಕವೇ ಫುಲ್ ಫೇಮಸ್ ಆದ ಟ್ರಾಫಿಕ್ ಪೊಲೀಸ್

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕರ್ತವ್ಯದಲ್ಲಿದ್ದಾಗಲೇ ಒಮ್ಮೆ ಕಾರು ಅಪಘಾತದಲ್ಲಿ ಸಿಲುಕಿ ತೀವ್ರ ಗಾಯಗೊಂಡಿದ್ದ ರಂಜೀತ್ ಸಿಂಗ್, ಇತರರು ಮಾಡುವ ಸಂಚಾರಿ ಉಲ್ಲಂಘನೆಯ ತಪ್ಪಿನಿಂದ ಅಮಾಯಕರು ಬಲಿಯಾಗಬಾರದು ಎನ್ನುವ ಕಳಕಳಿ ಹೊಂದಿದ್ದಾರೆ.

ಇದರಿಂದಾಗಿ ಮಧ್ಯಪ್ರದೇಶ ಪೊಲೀಸ್ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದ್ದು, ತಮ್ಮ ವೃತ್ತಿ ಮೂಲಕವೇ ನಗರದ ಜನತೆಯ ಮನ ಗೆದ್ದಿರುವ ದಬಾಂಗ್ ಕಾಪ್ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎನ್ನುವುದು ಎಲ್ಲರ ಆಶಯವಾಗಿದೆ.

ತಪ್ಪದೇ ಓದಿ-ಕಾರಿನ ಮೈಲೇಜ್ ಕಡಿಮೆ ಮಾಡುತ್ತವೆ ನಿಮ್ಮ ಈ ಕೆಟ್ಟ ಡ್ರೈವಿಂಗ್ ಚಟಗಳು..

ಉಬರ್ ಚಾಲಕನ ದುರ್ವರ್ತನೆಯಿಂದ ಬಯಲಾಯ್ತು ಮತ್ತೊಂದು ಸ್ಪೋಟಕ ಮಾಹಿತಿ..!!

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Moon Walking Traffic Cop Turns A National Sensation. Click for Details...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark