ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

Written By:

ಅತಿ ದುಬಾರಿ ಹಮ್ಮರ್ ಕಾರು ಮಹೇಂದ್ರ ಸಿಂಗ್ ಧೋನಿ ಹತ್ರ ಇದೆ ಎಂದು ಜಗತ್ತಿಗೇ ತಿಳಿದಿರೋ ವಿಚಾರ. ಸಮಯ ಸಿಕ್ಕಾಗಲೆಲ್ಲ ತವರು ರಾಂಚಿಯಲ್ಲಿ ಎಂಎಸ್ ಧೋನಿ ತಮ್ಮ ಹಮ್ಮರ್ ಕಾರ್ ನಲ್ಲಿ ರೌಂಡ್ ಹೊಡೆಯುತ್ತಿರುತ್ತಾರೆ. ಆದರೆ ಈಗ ಧೋನಿ ಹಮ್ಮರ್ ಕಾರಿನ ಜೊತೆ ಒಬ್ಬ ಮಹಿಳೆಯ ಬಗ್ಗೆ ಹೇಳಲೇ ಬೇಕಾದ ಪರಿಸ್ಥಿತಿ ಬಂದಿದೆ.

To Follow DriveSpark On Facebook, Click The Like Button
ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಹೌದು, ಧೋನಿಗೆ ಕೇವಲ ಪುರುಷ ಅಭಿಮಾನಿಗಳು ಮಾತ್ರ ಇದ್ದಾರೆ ಅಂತ ನೀವ್ ಏನಾದ್ರು ಅನ್ಕೊಂಡ್ ಇದ್ರೆ, ನಿಮ್ಮ ಊಹೆ ಖಂಡಿತ ಸುಳ್ಳು. ಅತಿ ಹೆಚ್ಚು ಮಹಿಳೆಯರನ್ನು ಅಭಿಮಾನಿಗಳನ್ನಾಗಿ ಪಡೆದೆ ಕ್ರಿಕೆಟರ್ಗಳ ಸಾಲಿನಲ್ಲಿ ಧೋನಿ ಕೂಡ ಇದ್ದಾರೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

35 ವರ್ಷ ವಯಸ್ಸಿನ ಧೋನಿ ಮೊನ್ನೆ ರಾಂಚಿಯ ಬಿರ್ಸಾ ಮುಂದ ವಿಮಾನ ನಿಲ್ದಾಣದಿಂದ ಮನೆಗೆ ಹಮ್ಮರ್ ಕಾರಿನಲ್ಲಿ ತೆರಳುತ್ತಿರುವ ವೇಳೆಯಲ್ಲಿ ಮಹಿಳೆಯೋಬ್ಬರು ಧೋನಿಯ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಸಲುವಾಗಿ ಹಮ್ಮರ್ ಕಾರನ್ನು ತಡೆದಿರುವ ಘಟನೆ ನೆಡೆದಿದೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಕೋಲ್ಕತಾದಲ್ಲಿ ನೆಡೆದ ರಾಜ್ಯಮಟ್ಟದ ವಿಜಯ್ ಹಜಾರೆ ಟ್ರೋಫಿ ಪಂದ್ಯ ಮುಗಿಸಿಕೊಂಡು ರಾಂಚಿಗೆ ಮರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನೆಡೆದಿದೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಧೋನಿ ತನ್ನ ಸಹ ಆಟಗಾರರೊಂದಿಗೆ ಹಿಂತಿರುಗಿದ ವಿಮಾನದಲ್ಲೇ ಈ ಮಹಿಳೆ ಕೂಡ ಪ್ರಯಾಣ ಮಾಡಿದ್ದರು ಎನ್ನಲಾಗಿದೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ವಿಮಾನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಧೋನಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಆಗಲಿಲ್ಲ ಎಂಬ ನಿರಾಶೆಯಲ್ಲಿ ಆಕೆ ಈ ನಿರ್ಧಾರ ಕೈಗೊಂಡರು ಎನ್ನಲಾಗಿದೆ. ಶತಾಯಗತಾಯ ಧೋನಿಯೊಂದಿಗೆ ಸೆಲ್ಫಿ ಅಥವಾ ಧೋನಿಯ ಹಸ್ತಾಕ್ಷರ ಪಡೆದುಕೊಳ್ಳಲೇ ಬೇಕು ಎಂದು ನಿರ್ಧರಿಸಿ ಈ ರೀತಿ ಮಾಡಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಅದೇ ಸಂದರ್ಭದಲ್ಲಿ ಆಕೆಯ ಬ್ಯಾಗ್ ಕೆಳಗೆ ಬಿದ್ದು ಹುಮ್ಮರ್ ಕಾರಿಗೆ ಸಿಲುಕಿಕೊಂಡಿದ್ದು ಗಮನಿಸಿದ ಧೋನಿ ತನ್ನಿಂದ ಆಕೆಗೆ ಹೀಗಾಗಿದೆ ಎಂದು ತಿಳಿದು ಕಾರಿನಿಂದ ಇಳಿದು ಬಂದು ಆಕೆ ಬಗ್ಗೆ ವಿಚಾರಿಸಿದ್ದಾರೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಎಷ್ಟೋ ಬಾರಿ ಈ ರೀತಿಯ ಹುಚ್ಚು ಸಾಹಸ ಅಭಿಮಾನಿಗಳು ಮಾಡುತ್ತಿರುತ್ತಾರೆ ಎಂಬುದನ್ನು ಸೆಲೆಬ್ರೆಟಿಗಳಿಗೆ ತಿಳಿದಿರುತ್ತದೆ, ಆದರೆ ಧೋನಿ ಕಾರಿನಿಂದ ಇಳಿದು ತನ್ನೊಂದಿಗೆ ಯುವತಿ ಸೆಲ್ಫಿ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟು ತಾವು ಅಭಿಮಾನಿಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎಂಬುದನ್ನು ಈ ಮೂಲಕ ಹೇಳಿದ್ದಾರೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಧೋನಿಯ ಅಭಿಮಾನಿಗಳೇ ಹಾಗೆ, ಇದೆ ರೀತಿ ಒಬ್ಬ ಯುವಕ ಧೋನಿಯೊಂದಿಗೆ ಸೆಲ್ಫಿ ತಗೆಸಿಕೊಳ್ಳುವ ಹುಚ್ಚಿನಿಂದ ಧೋನಿಯ ಹಮ್ಮರ್ ಕಾರನ್ನು ವಿಮಾನ ನಿಲ್ದಾಣದಿಂದ ಹಿಂಬಾಲಿಸಿಕೊಂಡು ಬಂದು ಕೊನೆಗೂ ಧೋನಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಸಫಲವಾಗಿದ್ದಾನೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಕೆಲವು ತಿಂಗಳ ಹಿಂದೆ ನೇರವಾಗಿ ಕೋಟಿ ಗಟ್ಟಲೆ ಬೆಲೆ ಬಾಳುವ ತಮ್ಮ ಹಮ್ಮರ್ ಕಾರಿನಲ್ಲಿ ವಿಮಾನ ನಿಲ್ದಾಣವನ್ನು ತಲುಪಿ ಕಿವೀಸ್ ಆಟಗಾರರಲ್ಲಿ ಅಚ್ಚರಿ ಉಂಟು ಮಾಡಿದ್ದರು.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ತಮ್ಮ ಅಭಿರುಚಿಗಳಲ್ಲಿ ವಿಶೇಷತೆಯನ್ನು ಕಾಪಾಡಿಕೊಂಡಿರುವ ಧೋನಿ ಅಮೆರಿಕ ಮೂಲದ ಹಮ್ಮರ್ ಎಚ್2 ಕಾರನ್ನು ಖರೀದಿಸಿದ್ದಾರೆ. ಇದು ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳನ್ನು ಮಾತ್ರ ಹೊಂದಿದ್ದಾರೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಕಾರು ಮತ್ತು ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿರುವ ಧೋನಿ ತಮ್ಮ ಮನೆಯಲ್ಲಿ ತಮ್ಮ ಪ್ರೀತಿಯ ಕಾರ್ ಹಾಗೂ ಬೈಕ್ ಗಳ ಕಲೆಕ್ಷನ್ ಹೊಂದಿದ್ದಾರೆ.

ಧೋನಿಯ 'ಹಮ್ಮರ್' ಕಾರು ತಡೆದ ಯುವತಿಗೆ ಏನ್ ಬೇಕಂತೆ ಗೊತ್ತಾ...!?

ಹಮ್ಮರ್ ಶಕ್ತಿಶಾಲಿ 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ 393 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಧೋನಿ ಹೆಚ್ಚು ಇಷ್ಟಪಡುವ Mercedes-Maybach ಜಿ 650 ವಾಹನದ ಚಿತ್ರಗಳನ್ನು ಈಗಲೇ ವೀಕ್ಷಿಸಿ.

Read more on ಹಮ್ಮರ್ hummer
English summary
The fan blocked MS Dhoni's Hummer in the hope of clicking a selfie or at least get an autograph from the ex-captain of the Indian Cricket team.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark