ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

Written By:

ಝೆಡ್ ಪ್ಲಸ್ ಸೆಕ್ಯೂರಿಟಿ ಸುರಕ್ಷತೆಯನ್ನು ಪಡೆದುಕೊಂಡ ಕೆಲವೇ ಕೆಲವು ಉದ್ಯಮಿಗಳಲ್ಲಿ ಪ್ರಪಂಚದ ಅತಿ ದೊಡ್ಡ ಉದ್ಯಮ ಸಂಸ್ಥೆಯಾಗಿರುವ ರಿಲಯನ್ಸ್ ಕಂಪನಿಯ ಒಡೆಯ ಮುಕೇಶ್ ಅಂಬಾನಿ ಕೂಡ ಒಬ್ಬರು.

To Follow DriveSpark On Facebook, Click The Like Button
ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಮುಕೇಶ್ ಅಂಬಾನಿಯವರೇ ಸ್ವತಃ ತನ್ನ ಕಿಸೆಯಿಂದ ಖರ್ಚು ಮಾಡಿ ಅವರ ಮತ್ತು ಅವರ ಕುಟುಂಬಕ್ಕೆ ಈ ರೀತಿಯ ಝೆಡ್ ಪ್ಲಸ್ ಸೆಕ್ಯೂರಿಟಿ ಸೌಲಭ್ಯ ಒದಗಿಸಿಕೊಂಡಿದ್ದಾರೆ. ಹೌದು, ಪ್ರತಿ ತಿಂಗಳಿಗೆ 14 ಲಕ್ಷಕ್ಕೂ ಹೆಚ್ಚು ರೂಗಳನ್ನು ಅಂಬಾನಿ ಸೆಕ್ಯೂರಿಟಿ ಪಡೆದುಕೊಳ್ಳಲು ವಿನಿಯೋಗಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು !!

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ನಮಗೀಗಾಗಲೇ ಗೊತ್ತಿರುವ ಹಾಗೆ ಸುಮಾರು ರೂ 8.5 ಕೋಟಿ ವೆಚ್ಚದ 7 ಸರಣಿಯ ಬಿಎಂಡಬ್ಲ್ಯೂ ವಾಹನ ಈಗಾಗಲೇ ಶಸ್ತ್ರಸಜ್ಜಿತವಾಗಿ ಬೆಂಗಾವಲು ಪಡೆಯಾಗಿ ಅಂಬಾನಿಯ ರೋಲ್ಸ್ ರೊಯ್ಸ್ ಕಾರಿನ ಹಿಂದೆ ಸುತ್ತುತ್ತಿರುತ್ತದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಆದರೆ ನಾವು ಈಗ ಹೇಳ ಹೊರಟಿರುವ ವಿಚಾರ ಬೆಂಗಾವಲು ಪಡೆಯಾಗಿ ಸೇರ್ಪಡೆಯಾಗಿರುವ ಮತ್ತೊಂದು ಬಿಎಂಡಬ್ಲ್ಯೂ ಕಾರಿನ ವಿಚಾರ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಹೌದು, ಮುಕೇಶ್ ಅಂಬಾನಿ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದು, ಪ್ರತಿಷ್ಠಿತ ಬಿಎಂಡಬ್ಲ್ಯೂ ಕ್ರೀಡಾ ಉದ್ದೇಶಿತ ಹೊಸ ಎಕ್ಸ್5 ಬೆಂಗಾವಲು ವಾಹನವನ್ನು ಸೆಕ್ಯೂರಿಟಿ ಉದ್ದೇಶಕ್ಕೆ ಪಡೆದುಕೊಂಡಿದ್ದಾರೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಟೀಮ್-ಬಿಎಚ್.ಪಿ ಯು ಹೊಸ ಬೆಂಗಾವಲು ವಾಹನದ ಚಿತ್ರಗಳನ್ನು ಸೆರೆಹಿಡಿದಿದ್ದು ತನ್ನ ವೆಬ್-ಸೈಟ್ ನಲ್ಲಿ ಬಿಡುಗಡೆಮಾಡಿದೆ. ಸದ್ಯ ಮುಕೇಶ್ ಅಂಬಾನಿಯವರ ಭದ್ರತೆ ನೋಡಿಕೊಳ್ಳುತ್ತಿರುವ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿ.ಆರ್.ಪಿ.ಎಫ್) ನ ಮುದ್ರೆಯನ್ನು ಈ ಬೆಂಗಾವಲು ವಾಹನ ಎಕ್ಸ್5 ಪಡೆದುಕೊಂಡಿದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಸದ್ಯದ ಮಾಹಿತಿ ಪ್ರಕಾರ ಪೊಲೀಸ್ ಇಲಾಖೆ ಹೊಂದಿರುವ ಅತಿ ಹೆಚ್ಚು ದುಬಾರಿಯ ಬೆಂಗಾವಲು ವಾಹನ ಎಂಬ ಖ್ಯಾತಿಯನ್ನು ಈ ಕಾರು ಪಡೆದುಕೊಂಡಿದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಆದರೆ ಚರ್ಚು ವೆಚ್ಚ ಎಲ್ಲವನ್ನೂ ಅಂಬಾನಿಯೇ ನೋಡಿಕೊಳ್ಳುತ್ತಿದ್ದಾರೆ ಎಂಬುದು ನಿಮ್ಮ ಗಮನದಲ್ಲಿ ಇರಲಿ ಓದುಗರೇ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ತಮಗೆ ಸರ್ಕಾರ ಒದಗಿಸಿರುವ ಝಡ್ ಶ್ರೇಣಿಯ ಭದ್ರತೆಯ ವೆಚ್ಚವನ್ನು ತಾವೇ ಭರಿಸುವುದಾಗಿ ರಿಲಯನ್ಸ್ ಕಂಪನಿಗಳ ಒಡೆಯ ಮುಕೇಶ್ ಅಂಬಾನಿ ಕೆಲವು ತಿಂಗಳ ಹಿಂದೆಯಷ್ಟೇ ಸ್ಪಷ್ಟಪಡಿಸಿದ್ದರು, ಅದರಂತೆ ನೆಡೆದುಕೊಳ್ಳುತ್ತಿದ್ದಾರೆ ಕೂಡ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಬೆಂಗಾವಲು ಪಡೆಯಲ್ಲಿ ಮುಕೇಶ್ ಅಂಬಾನಿ ಹೊರತುಪಡಿಸಿ ಪ್ರಧಾನಿ ಮತ್ತು ರಾಷ್ಟ್ರಪತಿಯವರು ಮಾತ್ರ ಬಿಎಂಡಬ್ಲ್ಯೂ ವಾಹನವನ್ನು ಪಡೆಯುತ್ತಾರೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಈ ಬಗ್ಗೆ ಸಂಶೋಧನೆ ಮಾಡಿದ ನಂತರ ತಿಳಿದುಬಂದ ವಿಚಾರವೇನೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ಸೇರಿದ ವಾಹನ ಇದಾಗಿದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಬಿಎಂಡಬ್ಲ್ಯೂ ಕಾರಿನ ಮುದ್ರೆಯನ್ನು ತೆಗೆದುಹಾಕಿರಬಹುದು ಅಥವಾ ಎಲ್ಲಾ ಲಗ್ಜುರಿ ವಾಹನಗಳ ಮುದ್ರೆಯನ್ನು ಕದಿಯುವಂತೆ ಇದನ್ನೂ ಸಹ ಯಾರಾದರೂ ಕದ್ದಿರಬಹುದು ಎನ್ನಲಾಗಿದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಎಕ್ಸ್5 ನ ಎಕ್ಸ್-ಡ್ರೈವ್ 30ನೇ ಆವೃತಿ ಇದಾಗಿದ್ದು, ಎಕ್ಸ್5 ಮಾದರಿಯಲ್ಲಿ ಸಿಗಬಹುದಾದ ಅತಿ ಕಡಿಮೆ ಬೆಲೆಯ ಬಿಎಂಡಬ್ಲ್ಯೂ ಕಾರು ಇದಾಗಿದೆ. ಕಾರಿನ ಬೆಲೆ ರೂ. 70 ಲಕ್ಷ ( ಎಕ್ಸ್ ಶೋರೂಂ).

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಈ ವಾಹನವು ಟ್ವಿನ್- ಸ್ಕ್ರಾಲ್ ಟರ್ಬೊಒಳಗೊಂಡಿರುವ 3.0-ಲೀಟರ್ ಎಂಜಿನ್ ಹೊಂದಿದೆ. ಇನ್ಲೈನ್ ಆರು ಸಿಲಿಂಡರ್ ಹೊಂದಿರುವ ಎಂಜಿನ್ 560 ಎನ್ಎಂ ತಿರುಗುಬಲದಲ್ಲಿ 258 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

8 ವೇಗದ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರುವ ಈ ವಾಹನವು ಚಕ್ರಕ್ಕೆ ಅತಿ ಹೆಚ್ಚು ಶಕ್ತಿಯನ್ನು ವರ್ಗಾವಣೆ ಮಾಡುತ್ತದೆ, ಇದರಿಂದಾಗಿ ಕೇವಲ 6.9 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗ ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ನಮಗೆಲ್ಲರಿಗೂ ತಿಳಿದಿರುವ ಹಾಗೆ ಮುಕೇಶ್ ಅಂಬಾನಿಯೂ ದೇಶದ ಅತಿ ಪ್ರಬಾವಿ ವ್ಯಕ್ತಿಗಳಲ್ಲಿ ಒಬ್ಬರು, ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಬಲಿಷ್ಠ ಸಾಮ್ರಾಜ್ಯ ಕಟ್ಟಿಕೊಂಡು ಎತ್ತರಕ್ಕೆ ಬೆಳೆದ ರೀತಿ ಅತ್ಯುದ್ಭುತ. ಭಾರತ ಸರ್ಕಾರಕ್ಕೆ ಹೊರೆಯಾಗದೆ ತಮ್ಮದೇ ಖರ್ಚಿನಲ್ಲಿ ತಮ್ಮ ಸುರಕ್ಷತೆಗಾಗಿ ಈ ವಾಹನಗಳನ್ನು ಖರೀದಿಸಿರುವುದು ಮೆಚ್ಚುವಂತದ್ದು.

ಅಬ್ಬಾ!! ಮುಕೇಶ್ ಅಂಬಾನಿಯ ಬೆಂಗಾವಲು ಪಡೆಗೆ ಮೊತ್ತೊಂದು ಅಸ್ತ್ರ ಸೇರ್ಪಡೆ

ಮತ್ತೊಂದು ವಿಚಾರವೆಂದರೆ ತಮ್ಮ ಕಾರ್ ಸಂಗ್ರಹದಲ್ಲಿ ಮತ್ತೊಂದು ಹೊಸ ಫೋರ್ಡ್ ಎಂಡೀವರ್ ಸೇರಿಸಿದ್ದಾರೆ ಎಂಬ ಮಾಹಿತಿ ಇದ್ದು, ಆದ್ರೆ ಕಾರಿನ ಯಾವುದೇ ಚಿತ್ರಗಳು ಲಭ್ಯವಾಗಿಲ್ಲ.

2017 ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ವೀಕ್ಷಿಸಲು ಈಗಲೇ ವೀಕ್ಷಿಸಿ.

English summary
BMW X-5 luxury SUV car has been given to the police to provide protection by Reliance Industries Chairman Mukesh Ambani.
Story first published: Friday, February 17, 2017, 13:51 [IST]
Please Wait while comments are loading...

Latest Photos