ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

Written By:

ವಿಮಾನ ಚಾಲನಾ ಪರವಾನಗಿಯನ್ನು ಪಡೆದುಕೊಳ್ಳುವುದು ಡ್ರೈವಿಂಗ್ ಲೈಸೆನ್ಸ್ ಪಡೆಯುವಷ್ಟು ಸುಲಭವಲ್ಲ. ಸಾಕಷ್ಟು ಕಠಿಣ ತರಬೇತಿಯ ಮೂಲಕ ಹಾರುವ ಪರೀಕ್ಷೆಯನ್ನು ಪಾಸ್ ಮಾಡಬೇಕಾಗುತ್ತದೆ.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಆದ್ರೆ, ಮುಂಬೈನ ಈ ವ್ಯಕ್ತಿಯ ಈ ಸಾಧನೆ ಖಂಡಿತ ನಿಮಗೆ ಅಚ್ಚರಿ ಮೂಡಿಸುತ್ತದೆ. ಹೌದು, ಅಮೋಲ್ ಯಾದವ್ ಎಂಬ ಹೆಸರಿನ ಈ ವ್ಯಕ್ತಿ ತಮ್ಮ ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನವನ್ನು ನಿರ್ಮಿಸಿದ್ದಾರೆ. ಕೇವಲ ನಿರ್ಮಾಣ ಮಾಡುವುದಲ್ಲದೆ, ಹಾರುವ ಪರವಾನಗಿಯನ್ನು ಕೂಡ ಗಳಿಸಿದ್ದಾರೆ.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಸತತ ಆರು ವರ್ಷಗಳ ಸಮಯವನ್ನು ತೆಗೆದುಕೊಂಡು ಯಾದವ್ ಅವರು ಈ ವಿಮಾನವನ್ನು ನಿರ್ಮಿಸಿದ್ದಾರೆ. ನಿಮಗೆ ಗೊತ್ತೆ ? ಈ ವಿಮಾನ ನಿರ್ಮಿಸಲು ಸರಿ ಸುಮಾರು ರೂ.4 ಕೋಟಿ ಹಣ ವ್ಯಹಿಸಿದ್ದಾರೆ.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಕೇವಲ ವಿಮಾನ ನಿರ್ಮಿಸಿ ಸುಮ್ಮನೆ ಕೂರದ ಯಾದವ್ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಈ ವಿಷಯದ ಬಗ್ಗೆ ಗಮನಹರಿಸಲು ಮನವಿ ಮಾಡಿದರು.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಮತ್ತೊಂದು ವಿಚಾರವೆಂದರೆ, ಈ ವಿಶೇಷ ರೀತಿಯ ವಾಹನವನ್ನು ವಿಟಿ-ಎನ್ಎಂಡಿ(ವಿಕ್ಟರ್ ಟ್ಯಾಂಗೊ ನರೇಂದ್ರ ಮೋದಿ ದೇವೇಂದ್ರ) ಎಂದು ಹೆಸರಿಸುವ ಮೂಲಕ ತನ್ನ ನೆಚ್ಚಿನ ರಾಜಕಾರಣಿಗಳನ್ನು ಮೆಚ್ಚಿಸಲು ಯೋಜನೆ ರೂಪಿಸಿದ್ದಾರೆ ಎನ್ನಬಹುದು.ಮುಂದೇನಾಯಿತು ನೋಡಿ.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಇಷ್ಟೆಲ್ಲಾ ಕಷ್ಟ ಪಟ್ಟ ಯಾದವ್ ಅವರಿಗೆ ಕೊನೆಗೂ ಫಲ ಸಿಕ್ಕಿದೆ ಎನ್ನಬಹುದು. ಸ್ವತಃ ಮುಖ್ಯಮಂತ್ರಿಯವರು ಸಿವಿಲ್ ಏವಿಯೇಷನ್ (ಡಿಜಿಸಿಎ) ಪ್ರಮಾಣಪತ್ರವನ್ನು ಕ್ಯಾಪ್ಟನ್ ಅಮೋಲ್ ಅವರಿಗೆ ನೀಡಿ ಸನ್ಮಾನಿಸಿದ್ದಾರೆ.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಯಾದವ್ ನಿರ್ಮಿಸಿರುವ ವಾಹನವು 6 ಆಸನಗಳ ವಿಮಾನವಾಗಿದ್ದು, ಗಂಟೆಗೆ ಸುಮಾರು 342 ಕಿ.ಮೀ ವೇಗದಲ್ಲಿ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇದು 2,000 ಕಿ.ಮೀ ವ್ಯಾಪ್ತಿಯಲ್ಲಿ 13000 ಕಿಲೋಮೀಟರು ಎತ್ತರದಲ್ಲಿ ಹಾರಾಟ ನೆಡೆಸಲಿದೆ.

ಮನೆಯ ಟೆರೇಸ್ ಮೇಲೆ ಸ್ವಂತ ವಿಮಾನ ನಿರ್ಮಿಸಿ 'ಮೋದಿ' ಎಂದು ಹೆಸರಿಟ್ಟ...!!

ಮುಂಬೈನ ತಮ್ಮ ಮನೆಯ ಟೆರೇಸ್ ಮೇಲೆ ವಿಮಾನವನ್ನು ನಿರ್ಮಿಸಿರುವ ಯಾದವ್ ಅವರದು ಅದ್ಭುತ ಸಾಧನೆ ಎನ್ನಬಹದು. ಸದ್ಯ, ಯಾದವ್ ಅವರು 20 ಪ್ರಯಾಣಿಕರು ಚಲಿಸಬಹುದಾದ ಮತ್ತೊಂದು ವಿಮಾನವನ್ನು ನಿರ್ಮಿಸಲು ಯೋಜಿಸಿದ್ದಾರೆ.

Read more on plane ವಿಮಾನ
English summary
Mumbai man built his own airplane on his terrace and has earned a flying licence. Mumbai resident Amol Yadav is the man behind this achievement.
Story first published: Thursday, November 23, 2017, 15:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark