ಮೆಟ್ರೋ ಸಿಬ್ಬಂದಿ ಮತ್ತು ಪೊಲೀಸರ ನಡುವಿನ ಕಿತ್ತಾಟ-ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರು..!

Written By:

'ನಮ್ಮ ಮೆಟ್ರೋ' ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ (ಕೆಎಸ್ ಐಎಸ್ ಎಫ್) ಸಿಬ್ಬಂದಿ ನಡುವೆ ಜುಲೈ 6ರ ನಡೆದ ಗಲಾಟೆ ಪ್ರಕರಣದ ಕಾವು ತೀವ್ರಗೊಂಡಿದ್ದು, ಮೆಟ್ರೋ ಸಂಚಾರ ಕೂಡಾ ಸ್ತಬ್ಧವಾಗಿದೆ.

 ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಕಿತ್ತಾಟ- ಮೆಟ್ರೋ ಸಂಚಾರ್ ಬಂದ್

ಇದಲ್ಲದೇ ಕೆ.ಎಸ್.ಐ.ಎಸ್.ಎಫ್. ಪೊಲೀಸರು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಮೆಟ್ರೋ ಸಿಬ್ಬಂದಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮೆಟ್ರೋ ಸಿಬ್ಬಂದಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

 ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಕಿತ್ತಾಟ- ಮೆಟ್ರೋ ಸಂಚಾರ್ ಬಂದ್

ಈ ಹಿನ್ನೆಲೆ ಮುಂಜಾನೆಯಿಂದ ಆರಂಭವಾಗಬೇಕಿದ್ದ ಮೆಟ್ರೋ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

 ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಕಿತ್ತಾಟ- ಮೆಟ್ರೋ ಸಂಚಾರ್ ಬಂದ್

ಇನ್ನು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿರುವ ಮೆಟ್ರೋ ಸಿಬ್ಬಂದಿಯೂ ಹಿರಿಯ ಅಧಿಕಾರಿಗಳ ಸಂಧಾನಕ್ಕೂ ಮಣಿಯದೇ ಹೋರಾಟ ಮುಂದುವರೆಸಿದ್ದಾರೆ.

 ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಕಿತ್ತಾಟ- ಮೆಟ್ರೋ ಸಂಚಾರ್ ಬಂದ್

ಆದ್ರೆ ನಮ್ಮ ಮೆಟ್ರೊ ಸಿಬ್ಬಂದಿ ಮತ್ತು ಕೆಎಸ್ ಐಎಸ್ಎಫ್ ಸಿಬ್ಬಂದಿಯ ವೈಯಕ್ತಿಕ ಜಗಳದಿಂದಾಗಿ ಸಮಸ್ಯೆ ಎದುರಿಸುತ್ತಿರುವವರು ಮಾತ್ರ ಜನಸಾಮನ್ಯರು.

 ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಕಿತ್ತಾಟ- ಮೆಟ್ರೋ ಸಂಚಾರ್ ಬಂದ್

ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಮತ್ತು ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ ಒಟ್ಟು 42 ಕಿ.ಮೀ.ಮಾರ್ಗದಲ್ಲಿ ದಿನವೊಂದಕ್ಕೆ 3 ಲಕ್ಷ ಪ್ರಯಾಣಿಕರು ಮೆಟ್ರೋ ಸಂಚಾರವನ್ನೇ ಅವಲಂಭಿಸಿದ್ದು, ಮೆಟ್ರೋ ಬಂದ್ ಆಗಿರುವುದು ಭಾರೀ ಸಮಸ್ಯೆಯುಂಟು ಮಾಡಿದೆ.

 ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಕಿತ್ತಾಟ- ಮೆಟ್ರೋ ಸಂಚಾರ್ ಬಂದ್

ಹೀಗಾಗಿ ಕೂಡಲೇ ಸಮಸ್ಯೆ ಬಗೆಹರಿಸಬೇಕಿರುವ ಮೆಟ್ರೋ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯು ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕಿದೆ.

Read more on ಮೆಟ್ರೋ metro
English summary
Read in Kannada about Namma Metro is Bund Today.
Story first published: Friday, July 7, 2017, 10:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark