ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

Written By:

'ಮೇಕ್ ಇನ್ ಇಂಡಿಯಾ' ಯೋಜನೆಗೆ ಉತ್ತೇಜನ ನೀಡುವ ಮೂಲಕ ಸದಾ ಸ್ವದೇಶಿ ಮಂತ್ರ ಪಠಿಸುವ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಅಧಿಕೃತ ಪ್ರಯಾಣಕ್ಕೆ ವಿದೇಶಿ ಮೂಲದ ಕಾರನ್ನು ಏಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ಬಹಳಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ವಿದೇಶಿ ಕಾರಿನ ಬಳಕೆ ಹಿಂದಿನ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಅಧಿಕಾರಕ್ಕೂ ಮುನ್ನ ಮಹೀಂದ್ರ ಆಂಡ್ ಮಹೀಂದ್ರದ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನವನ್ನು ಬಳಕೆ ಮಾಡುತ್ತಿದ್ದ ನರೇಂದ್ರ ಮೋದಿ ಅವರು ಪ್ರಧಾನಿ ಗದ್ದುಗೇರಿದ ಬಳಿಕ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್ ಕಾರು ಬಳಕೆಗೆ ಮೋರೆ ಹೋಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬೇಕಾದ ಸಕಲ ರೀತಿಯ ಭದ್ರತಾ ಸೌಲಭ್ಯಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ ಭರವಸೆಯನ್ನು ನೀಡಿತ್ತು. ಆದಾಗಿಯೂ ಭದ್ರತಾ ದೃಷ್ಠಿಯಿಂದ ಬಿಎಂಡಬ್ಲ್ಯು 7 ಸೀರಿಸ್ ಕಾರು ಖರೀದಿ ಮಾಡಲಾಗಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ವಿಶೇಷ ರಕ್ಷಣಾ ಪಡೆ (ಎಸ್‌ಪಿಜೆ) ಸೂಚನೆಯ ಮೆರೆಗೆ ಸ್ಕಾರ್ಪಿಯೊ ಕಾರಲ್ಲಿ ಹಲವಾರು ಮಾರ್ಪಾಡುಗಳನ್ನು ತರಲಾಗಿತ್ತು. ಆದರೆ ಸ್ವದೇಶಿ ಕಾರನ್ನು ಬಳಕೆ ಮಾಡಲು ಮೋದಿ ಹಿಂಜರಿದ್ದರು.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಸೇಫ್ ಅಲ್ಲ

ವಿಶೇಷ ರಕ್ಷಣಾ ಪಡೆ (ಎಸ್‌ಪಿಜೆ) ಪ್ರಕಾರ ಮಾರ್ಪಾಡುಗೊಳಿಸಿದ ಸ್ಕಾರ್ಪಿಯೊ ಕಾರು ಅಷ್ಟೊಂದು ಸುರಕ್ಷಿತವಾಗಿಲ್ಲ ಎಂಬುವುದು ಹಲವರ ವಾದ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ನೇರ ಟಾರ್ಗೆಟ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸ್ಕಾರ್ಪಿಯೊ ವರ್ಧಿತ ಗ್ರೌಂಡ್ ಕ್ಲಿಯರನ್ಸ್ ಹೊಂದಿರುತ್ತದೆ. ಹಾಗಾಗಿ ಉಗ್ರರಿಗೆ ಕಾರನ್ನು ನೇರ ಗುರಿ ಮಾಡಲು ಸಾಧ್ಯವಾಗಲಿದೆ ಎಂಬುವುದು ರಕ್ಷಾಪಡೆಗಳ ದೂರದೃಷ್ಠಿ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಬಿಎಂಡಬ್ಲ್ಯು 7 ಸಿರೀಸ್

ಇನ್ನೊಂದೆಡೆ ಕಡಿಮೆ ರಸ್ತೆ ಸಾನಿಧ್ಯವನ್ನು ಹೊಂದಿರುವ ಬಿಎಂಡಬ್ಲ್ಯು 7 ಸಿರೀಸ್ ಕಾರು ಹೆಚ್ಚಿನ ಸುರಕ್ಷತೆಗೆ ಹೆಸರುವಾಸಿಯಾಗಿದ್ದು, ಎಸ್‌ಪಿಜೆ ಕಮಾಂಡೋಗಳನ್ನು ಒಳಗೊಂಡಿರುವ ಬಿಎಂಡಬ್ಲ್ಯು ಎಕ್ಸ್ 5 ಕಾರುಗಳು ಸುತ್ತುವರಿಯುವ ಮೂಲಕ ರಕ್ಷಣೆ ನೀಡುತ್ತಿವೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಕಾರುಗಳನ್ನು ನಿರ್ವಹಿಸುವುದು ಅತಿ ಸುಲಭವಾಗಿದ್ದು, ನೆಲಕ್ಕೆ ಹತ್ತಿರವಾಗಿರುವುದರಿಂದ ತಕ್ಷಣ ಬದಲಾವಣೆಗಳನ್ನು ತರಬಹುದಾಗಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಬೆದರಿಕೆ

ಮಾಜಿ ಪಿಎಂ ರಾಜೀವ್ ಗಾಂಧಿ ಬಳಿಕ ದೇಶದ ಅತ್ಯಂತ ಹೆಚ್ಚು ಅಪಾಯ ಆಹ್ವಾನಿತ ಪ್ರಧಾನಿ ಎಂದು ಗುರುತಿಸಿಕೊಂಡಿರುವ ನರೇಂದ್ರ ಮೋದಿ ಅವರಿಗೆ ಗರಿಷ್ಠ ಭದ್ರತೆ ಒದಗಿಸುವುದು ರಕ್ಷಣಾ ಪಡೆಯ ಜವಾಬ್ದಾರಿಯಾಗಿದ್ದು, ಐಷಾರಾಮಿ ಕಾರು ಅನಿವಾರ್ಯ ಎನ್ನಲಾಗುತ್ತಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಇನ್ನೊಂದೆಡೆ ಜರ್ಮನಿಯ ಬಿಎಂಡಬ್ಲ್ಯು ನಿರ್ಮಿತ ಶಸ್ತ್ರಸಜ್ಜಿತ ಕಾರುಗಳು ವಿಶ್ವದೆಲ್ಲೆಡೆ ಅತಿ ಹೆಚ್ಚು ವಿಶ್ವಾಸಾರ್ಹವೆನಿಸಿದೆ. ಅತ್ತ ಸ್ಕಾರ್ಪಿಯೊಗೆ ಇಂತಹ ಯಾವುದೇ ದಾಖಲೆಗಳ ಬೆಂಬಲವಿಲ್ಲ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಅಟಲ್ ಬಿಹಾರಿ ಪಾಜಪೇಯಿ ಪ್ರಧಾನಿಯಾಗಿದ್ದ ಮೊದಲ ಬಾರಿಗೆ ಬಿಎಂಡಬ್ಲ್ಯು 7 ಸಿರೀಸ್ ಭದ್ರತಾ ಕಾರುಗಳ ಬಳಕೆ ಆರಂಭವಾಗಿತ್ತು. ಇದಕ್ಕೂ ಮೊದಲು ಅಂಬಾಸಿಡರ್ ಕಾರುಗಳನ್ನು ಬಳಕೆ ಮಾಡಲಾಗುತ್ತಿತ್ತು.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಮಾಜಿ ಪ್ರಧಾನಿಯಿಂದಲೂ ಬಿಎಂಡಬ್ಲ್ಯು ಕಾರು ಬಳಕೆ

ಮನಮೋಹನ್ ಸಿಂಗ್ ಅವರಂತಹ ಮಾಜಿ ಪ್ರಧಾನ ಮಂತ್ರಿಗಳು ತಮ್ಮ ಅಧಿಕೃತ ಪ್ರವಾಸಕ್ಕಾಗಿ ಬಿಎಂಡಬ್ಲ್ಯು 7 ಸಿರೀಸ್ ಕಾರುಗಳನ್ನೇ ಬಳಕೆ ಮಾಡುತ್ತಿದ್ದಾರೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಬಿಎಂಡಬ್ಲ್ಯು, ಸ್ಕಾರ್ಪಿಯೊ ಹೊರತಾಗಿ ಇತರೆ ಕಾರುಗಳ ಬಳಕೆ ಬಗ್ಗೆಯೂ ಪ್ರಸ್ತಾಪವಿತ್ತು. ಆದರೆ ಅನಗತ್ಯವಾಗಿ ಹೆಚ್ಚುವರಿ ದುಡ್ಡು ವ್ಯಯ ಮಾಡುವುದರ ಹೊರತಾಗಿ ಅಂತಿಮವಾಗಿ ಬಿಎಂಡಬ್ಲ್ಯು 2 ಸೀರಿಸ್ ಕಾರನ್ನು ಆಯ್ಕೆ ಮಾಡಲಾಗಿತ್ತು.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

1988ನೇ ಇಸವಿಯಲ್ಲಿ ಸ್ಥಾಪಿತಗೊಂಡಿದ್ದ ವಿಶೇಷ ರಕ್ಷಣಾ ಪಡೆಯು (ಎಸ್‌ಪಿಜಿ) ದೇಶದ ಪ್ರಧಾನಿ ಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಒದಗಿಸುವಲ್ಲಿ ಕಟುಬದ್ಧವಾಗಿದೆ. ಅಲ್ಲದೆ ಮಹೀಂದ್ರಗಿಂತಲೂ ಹೆಚ್ಚು ಭದ್ರತೆಯನ್ನು ಒಳಗೊಂಡಿರುವ ಬಿಎಂಡಬ್ಲ್ಯು 7 ಸಿರೀಸ್ ಹೆಚ್ಚು ಸೂಕ್ತ ಎಂದು ಸಲಹೆ ನೀಡಿತ್ತು.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ದೇಶದ ಅತ್ಯಂತ ಸುರಕ್ಷಿತ ವಾಹನ ಎಂದು ಗುರುತಿಸಿಕೊಂಡಿರುವ ಪ್ರಧಾನಿ ಅವರ ಬಿಎಂಡಬ್ಲ್ಯು 7 ಸಿರೀಸ್, ಬಾಂಬ್, ಗುಂಡಿನ ದಾಳಿ ಹಾಗೂ ರಾಸಾಯನಿಕ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ವಿಶೇಷ ತಂತ್ರಜ್ಞಾನಗಳನ್ನು ಒಳಗೊಂಡ ಬಿಎಂಡಬ್ಲ್ಯು 7 ಸಿರೀಸ್ ಕಾರಿನ ಮಗದೊಂದು ವೈಶಿಷ್ಟ್ಯವೆಂದರೆ ಇದು ಫ್ಲ್ಯಾಟ್ ಟೈರ್‌ನಲ್ಲೇ ಸುಮಾರು ಕೀ.ಮೀ.ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆಳವಡಿಸಲಾಗಿರುವ ಮುಂದುವರಿದ ಶಾಖ ಸಂದೇಕಗಳು ಕ್ಷಿಪಣಿ ಹಾಗೂ ಆ್ಯಸಿಡ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಇನ್ನು ಇಂಧನ ಟ್ಯಾಂಕ್‌ಗಳನ್ನು ವಿಶೇಷ ಕವಚಗಳಾಗಿ ವಿನ್ಯಾಸಗೊಳಿಸಲಾಗಿದ್ದು, ಎಂತಹುದೇ ಶಕ್ತಿಶಾಲಿ ಬಾಂಬ್ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕವನ್ನು ಒದಗಿಸುತ್ತದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಮಾಜಿ ಎಸ್‌ಪಿಜಿ ಅಧಿಕಾರಿಯೊಬ್ಬರ ಪ್ರಕಾರ ಪ್ರಧಾನಿ ದರ್ಜೆಯ ಹುದ್ದೆಯಲ್ಲಿರುವವರಿಗೆ ಸ್ಕಾರ್ಪಿಯೊ ಯೋಗ್ಯ ವಾಹನವಲ್ಲ. ಇದರ ಉದ್ದಳತೆಯು ವಿಶೇಷವಾಗಿಯೂ ಎತ್ತರ ಸುರಕ್ಷತೆಗೆ ಬೆದರಿಕೆಯಾಗಲಿದೆ ಎಂದಿದ್ದರು.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಅಷ್ಟೇ ಅಲ್ಲದೆ ವಿಶೇಷ ಪರಣಿತಿ ಪಡೆದ ಚಾಲಕರು ಮಾತ್ರ ಇದನ್ನು ಚಾಲನೆ ಮಾಡುತ್ತಾರೆ. ಬಿಎಂಡಬ್ಲ್ಯು ಇದಕ್ಕಾಗಿ ವಿಶೇಷ 'ಟ್ರೈನಿಂಗ್ ಫಾರ್ ಫ್ರೊಫೆಷನಲ್' ಎಂಬ ತರಬೇತಿಯನ್ನು ಚಾಲಕರಿಗೆ ನೀಡುತ್ತಿದ್ದು, ತೀವ್ರತರ ಪರಿಸ್ಥಿತಿಯಲ್ಲೂ ಹೇಗೆ ವಾಹನ ನಿಭಾಯಿಸಬೇಕು ಎಂಬುದನ್ನು ಹೇಳಿಕೊಡಲಾಗುತ್ತೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಇದರ ಜೊತೆಗೆ ಅತ್ಯಂತ ನುರಿತ ಭದ್ರತಾ ಪಡೆಯ ಮಾರ್ಗದರ್ಶನದಲ್ಲಿ ದಾಳಿ ವೇಳೆಯಲ್ಲೂ ಕಾರನ್ನು ಹೇಗೆ ಪಾರು ಮಾಡಬೇಕು ಎಂಬುದನ್ನು ಚಾಲಕರು ಕರಗತ ಮಾಡಿಕೊಂಡಿರುತ್ತಾರೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ವೈಯಕ್ತಿಕರಣಗೊಳಿಸಿದ ಮೋದಿ ಕಾರು ಅತ್ಯುನ್ನತ್ತ ವೈಶಿಷ್ಟ್ಯಗಳನ್ನು ಪಡೆದಿದೆ. ಆದರೆ ಭದ್ರತಾ ದೃಷ್ಟಿಯ ಹಿನ್ನಲೆಯಲ್ಲಿ ವಿಶಿಷ್ಟತೆಗಳನ್ನು ಗೌಪ್ಯವಾಗಿಡಲಾಗಿದೆ. ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಬಿಎಂಡಬ್ಲ್ಯು ಕಾರುಗಳ ಸೇರ್ಪಡೆ, ಉಪಗ್ರಹ ದೂರವಾಣಿ ಮತ್ತು ಜಾಮ್ಮರ್‌ಗಳಲ್ಲಿ ಹೊಸ ಗುಪ್ತಚರ ಹಾಗೂ ಸಂವಹನ ವೈಶಿಷ್ಟ್ಯಗಳ ಸ್ಥಾಪನೆಯಾಗಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಇವೆಲ್ಲದಕ್ಕೂ ಮಿಗಿಲಾಗಿ ಮೋದಿ ನೀತಿ 'ಮೇಕ್ ಇನ್ ಇಂಡಿಯಾ' ಆಗಿದ್ದು, ಬದಲಾಗಿ 'ಮೇಕ್ ಇಂಡಿಯನ್' ಅಲ್ಲ. ತನ್ಮೂಲಕ ಭಾರತಕ್ಕೆ ಅತಿ ಹೆಚ್ಚು ಹೂಡಿಕೆಯನ್ನು ತರುವ ಮೂಲಕ ತಂತ್ರಜ್ಞಾನ ಅಭಿವೃದ್ಧಿ ಜೊತೆಗೆ ಗರಿಷ್ಠ ಉದ್ಯೋಗವಕಾಶವನ್ನು ಸೃಷ್ಟಿ ಮಾಡುವುದಾಗಿದೆ.

ಸ್ವದೇಶಿ ಮಂತ್ರ ಪಠಿಸುವ ಪ್ರಧಾನಿ ಮೋದಿಗ್ಯಾಕೆ ವಿದೇಶಿ ಕಾರಿನ ವ್ಯಾಮೋಹ..!!

ಇನ್ನು ಮೋದಿ ಭದ್ರತೆಗಾಗಿ ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದ್ದರೂ ಬಿಎಂಡಬ್ಲ್ಯು 7 ಸಿರಿಸ್ ಕಾರಿನ ಬಗ್ಗೆ ವಿರೋಧಿ ಬಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಸ್ವದೇಶಿ ಮಂತ್ರದ ಪಠಿಸುವ ಪ್ರಧಾನಿಗೆ ವಿದೇಶಿ ಕಾರು ಅಗತ್ಯವೇ ಎನ್ನುವ ಮಾತು ಮಾತು ಕೇಳಿಬರುತ್ತಿವೆ.

English summary
Why Indian PM Narendra Modi Use Made In Germany Car For Commuting
Please Wait while comments are loading...

Latest Photos