4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ನಮ್ಮ ದೇಶದಲ್ಲಿ ಅದೆಷ್ಟೋ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಹಾಕಿರುವುದನ್ನು ಬಿಟ್ಟರೆ ಅವುಗಳ ಅನುಷ್ಠಾನಕ್ಕೆ ತಂದಿರುವುದು ಮಾತ್ರ ಬೆರಳಣಿಕೆಯಷ್ಟು ಮಾತ್ರ. ಇಂತಹ ಯೋಜನೆಗಳಲ್ಲಿ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ಯೋಜನೆ ಕೂಡಾ ಒಂದು.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಹೌದು, ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸಲು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ದೇಶದ ಅತೀ ಉದ್ದದ ರೈಲು ಸೇತುವೆಗೆ ಅಡಿಗಲ್ಲು ಹಾಕಿ ಬರೋಬ್ಬರಿ 21 ನಂತರ ಸೇವೆಗೆ ಮುಕ್ತವಾಗಿದ್ದು, 21 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೃಹತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆ ಮಾಡಿದ್ದಾರೆ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಈ ಯೋಜನೆಗೆ ಅಡಿಗಲ್ಲು ಹಾಕಿದ್ದು ಕರ್ನಾಟಕದ ಮಣ್ಣಿನ ಮಗ ಮಾಜಿ ಪ್ರಧಾನಿ ದೇವೇಗೌಡ್ರು. ಆದ್ರೆ ಕಾರಣಾಂತರಗಳಿಂದ ದೇವೇಗೌಡ್ರ ಕನಸಿನ ಯೋಜನೆಯು ಕನಸಾಗಿಯೇ ಉಳಿದಿತ್ತು.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

1996-97ರ ಅವಧಿಯಲ್ಲಿ ದೇಶದ 11ನೇ ಪ್ರಧಾನಿಯಾಗಿದ್ದ ಹೆಚ್.ಡಿ.ದೇವೇಗೌಡ್ರು ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದರು. ಆದ್ರೆ ಅವರ ಅದೃಷ್ಟ ಚೆನ್ನಾಗಿರಲಿಲ್ಲ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಖರ್ಚಿ ಕಾಲಿ ಮಾಡುವ ಪ್ರಸಂಗಗಳು ಎದುರಾದವು.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಜೂನ್ 1, 1996ರಿಂದ ಎಪ್ರಿಲ್ 21, 1997ರ ತನಕ ಪ್ರಧಾನಿ ಹುದ್ದೆಯಲ್ಲಿದ್ದ ದೇವೇಗೌಡ್ರು ಅಧಿಕಾರದಲ್ಲಿ ಇದಷ್ಟು ದಿನಗಳ ಕಾಲ ಹಲವು ಬೃಹತ್ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅದರಲ್ಲಿ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ನಿರ್ಮಾಣ ಯೋಜನೆ ಕೂಡಾ ಒಂದು ಎಂದು ಮರೆಯಲು ಸಾಧ್ಯವಿಲ್ಲ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ದೇವೇಗೌಡರ ಅಧಿಕಾರ ಕಳೆದುಕೊಂಡ ಮೇಲೆ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ಯೋಜನೆ ಅಲ್ಲಿಗೆ ತಟಸ್ಥವಾಗಿತ್ತು. ತದನಂತರ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿಯವರು ಸಹ ಇದೇ ಯೋಜನೆಗೆ 2002ರಲ್ಲಿ ಮತ್ತೊಮ್ಮೆ ಅಡಿಗಲ್ಲು ಹಾಕಿದರೂ ಸಹ ಈ ಯೋಜನೆ ಮಾತ್ರ ಪೂರ್ಣಗೊಳ್ಳಲೇ ಇಲ್ಲ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಹೀಗೇ ದಿನದೂಡುತ್ತಲೇ ಬಂದಿಲ್ಲ ಈ ಯೋಜನೆಗೆ ಮಾಜಿ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರು ಮತ್ತೆ ಚಾಲನೆ ನೀಡುತ್ತಾರೆ ಎಂದುಕೊಂಡಿದ್ದ ಅಸ್ಸಾಂ ಜನತೆಗೆ ಆಗಲೂ ನಿರಾಶೆ ಉಂಟು ಮಾಡಿತು. ಸುಮಾರು 10 ವರ್ಷಗಳ ಕಾಲ ಆಡಳಿತದಲ್ಲಿದ್ದ ಮನಮೋಹನ್ ಸಿಂಗ್ ಅವರು ಈ ಯೋಜನೆಯ ಕುರಿತಾಗಿ ಒಂದೇ ಒಂದು ಚರ್ಚೆಯನ್ನು ಕೂಡಾ ಮಾಡಲಿಲ್ಲ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಆದ್ರೆ ಅಸ್ಸಾಂ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಹಣಕಾಸಿನ ನೆರವು ನೀಡಿ 21 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಮಾಡಿದ್ದಾರೆ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಬರೋಬ್ಬರಿ 4.94 ಕಿ.ಮೀ ಉದ್ದ ಹೊಂದಿರುವ ಬೋಗಿಬೀಲ್ ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕಾಗಿ ಬರೋಬ್ಬರಿ 5,920 ಕೋಟಿ ವೆಚ್ಚ ಮಾಡಲಾಗಿದ್ದು, ಈ ಯೋಜನೆಯು ಆರಂಭಗೊಂಡ ನಂತರ ಅಂದಾಜು ಬಜೆಟ್‌ಗಿಂತ ಶೇ 85ರಷ್ಟು ವೆಚ್ಚ ಏರಿಕೆಯಾಗಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವೆ ಬ್ರಹ್ಮಪುತ್ರ ನದಿ ಮೇಲೆ ಈ ರೈಲು ಸೇತುವೆಯನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಅಷ್ಟೆ ಅಲ್ಲದೇ ಭಾರತ- ಚೀನಾ ಗಡಿಯಲ್ಲಿ ರಕ್ಷಣಾ ಸಾಮಗ್ರಿಗಳ ಪೂರೈಕೆಗೂ ಅನುಕೂಲವಾಗಲಿದೆಯಲಿದೆ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಅಸ್ಸಾಂನ ದರ್ಬಾಂಗ್ ಹಾಗೂ ಅರುಣಾಚಲ ಪ್ರದೇಶದ ಪಸೀಘಾಟ್ ನಗರವನ್ನು ಈ ಸೇತುವೆ ಸಂಪರ್ಕಿಸಲಿದ್ದು, ಬ್ರಹ್ಮಪುತ್ರ ನದಿ ಜಲಮಟ್ಟದಿಂದ 32 ಮೀಟರ್ ಎತ್ತರದಲ್ಲಿರುವ ಬ್ರಿಡ್ಜ್ ಅನ್ನು ಸ್ವೀಡನ್ ಹಾಗೂ ಡೆನ್ಮಾರ್ಕ್ ದೇಶಗಳನ್ನು ಸಂಪರ್ಕಿಸುವ ಸೇತುವೆಯ ಶೈಲಿಯಲ್ಲಿ ನಿರ್ಮಿಸಲಾಗಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಸದ್ಯದ ಪರಿಸ್ಥಿತಿಯಲ್ಲಿ ಅರುಣಾಚಲಪ್ರದೇಶವನ್ನು ತಲುಪಬೇಕೇಂದರೆ ಅಸ್ಸಾಂನ ಗುವಾಹಟಿಯಿಂದ 186 ಕಿ.ಮೀ. ದೂರದಲ್ಲಿರುವ ತೇಜ್‌ಪುರ ಮೂಲಕ ಹಾದು ಹೋಗಬೇಕಾಗುವ ಅನಿವಾರ್ಯತೆಗಳಿದ್ದು, ತೇಜ್‌ಪುರದಿಂದ ಅರುಣಾಚಲ ಗಡಿ ತಲುಪಲು ಕನಿಷ್ಠ 2 ದಿನ ತೆಗೆದುಕೊಳ್ಳುತ್ತದೆ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಅಷ್ಟೇ ಅಲ್ಲದೇ ಈ ಭಾಗದಲ್ಲಿ ಯಾವುದೇ ಬ್ರಿಡ್ಜ್ ಇಲ್ಲದಿರುವ ಕಾರಣಕ್ಕೆ ಬಹುತೇಕರು ದೋಣಿ ಸಂಚಾರವನ್ನೇ ನೆಚ್ಚಿಕೊಂಡಿದ್ದು, ಪ್ರವಾಹದ ಸಂದರ್ಭಗಳಲ್ಲಿ ಆಗಾಗ ದೋಣಿ ದುರಂತ ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಈ ಹೊಸ ಯೋಜನೆಯಿಂದ ಈ ಭಾಗದ ಜನತೆಗೆ ಹೆಚ್ಚು ಅನುಕೂಲವಾಗಲಿದೆ.

MOST READ: ಹೆದ್ದಾರಿ ದರೋಡೆಕೋರರ ಹೆಡೆಮುರಿ ಕಟ್ಟಲು ಡಿಸಿಪಿ ಅಣ್ಣಾಮಲೈ ಮಾಡಿದ ಪ್ಲ್ಯಾನ್ ಹೇಗಿತ್ತು ಗೊತ್ತಾ?

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾದ ಈ ಬೋಗಿಬೀಲ್ ಸೇತುವೆ ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಕೂಡ ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡುವಷ್ಟು ಸುಭದ್ರವಾಗಿ ಕಟ್ಟಲಾಗಿದ್ದು, ಪೂರ್ಣವಾಗಿ ವೆಲ್ಡಿಂಗ್ ಮೂಲಕ ನಿರ್ಮಿಸಿದ ದೇಶದ ಏಕೈಕ ಹಾಗೂ ಮೊದಲ ಸೇತುವೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

4.9 ಕಿ.ಮಿ ಉದ್ದದ ಈ ಬ್ರಿಡ್ಜ್ ನಿರ್ಮಾಣವಾಗಲು ಬರೋಬ್ಬರಿ 21 ವರ್ಷ ಬೇಕಾಯ್ತು..!

ಒಟ್ಟಿನಲ್ಲಿ 21 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಮೋದಿ ಯಶಸ್ವಿ ಒಂದಡೇಯಾದಲ್ಲಿ ಮತ್ತೊಂದೆಡೆ ಇದೇ ಯೋಜನೆಯ ಕನಸುಕಂಡು 21 ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ್ದ ದೇವೇಗೌಡರಿಗೂ ಇದು ಖುಷಿಯ ವಿಚಾರವೇ ಸರಿ.

Source: ANI

Most Read Articles

Kannada
English summary
PM Modi inaugurates Bogibeel Bridge. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more