ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

Written By:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬ್ರಿಟನ್ ಗೆ ಸೇರಿದ ಐದು ಉಪಗ್ರಹಗಳನ್ನು 2015 ಜುಲೈ 11 ಶುಕ್ರವಾರದಂದು ಯಶಸ್ವಿಯಾಗಿ ಉಡಾವಣೆಗೈಯುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಗದೊಂದು ಮೈಲುಗಲ್ಲನ್ನು ಸಾಧಿಸಿದೆ.

Also Read : ಭಾರತದ ಐತಿಹಾಸಿಕ ಮಂಗಳಯಾನ

ಮಂಗಳಯಾನದ ಯಶಸ್ವಿ ಉಡಾವಣೆಯ ಬಳಿಕ ಮತ್ತೆ ಸುದ್ದಿ ಮಾಡಿರುವ ಇಸ್ರೋ, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬ್ರಿಟನ್ ನ ಐದು ಉಪಗ್ರಹಗಳನ್ನು ಪಿಎಸ್‌ಎಲ್‌ವಿ- ಸಿ28 ಹೊತ್ತು ಸಾಗಿತ್ತು.

To Follow DriveSpark On Facebook, Click The Like Button
ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಐದು ಉಪಗ್ರಹಗಳ ಒಟ್ಟು ತೂಕವು ಸರಿ ಸುಮಾರು 1,440 ಕೆ.ಜಿ ಆಗಿತ್ತು. ಇದರೊಂದೆಗಿ ಅತಿ ತೂಕದ ವಾಣಿಜ್ಯ ಉಡಾವಣೆ ಮಾಡಿರುವ ಖ್ಯಾತಿಗೂ ಇಸ್ರೋ ಪಾತ್ರವಾಗಿದೆ.

ಉಪಗ್ರಹಗಳ ಸಂಕ್ಷಿಪ್ತ ವಿವರ

ಉಪಗ್ರಹಗಳ ಸಂಕ್ಷಿಪ್ತ ವಿವರ

  • ಡಿಎಂಸಿ3-1
  • ಡಿಎಂಸಿ3-2
  • ಡಿಎಂಸಿ3-3
  • ಸಿಬಿಎನ್ ಟಿ-1
  • ಡಿ-ಆರ್ಬಿಟ್ ಸೈಲ್
ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಈ ಭೂ ವೀಕ್ಷಣೆಯ ಉಪಗ್ರಹಗಳು ಪರಿಸರ, ಪ್ರಕೃತಿ ಹಾಗೂ ಮೂಲಸೌಕರ್ಯಗಳ ಬಗ್ಗೆ ಸಮಗ್ರ ಚಿತ್ರಣವನ್ನು ರವಾನಿಸಲಿದೆ.

ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಈ ಎಲ್ಲ ಐದು ಉಪಗ್ರಹಗಳನ್ನು ಬ್ರಿಟನ್‌ನ ಡಿಎಂಸಿ ಇಂಟರ್ ನ್ಯಾಷನಲ್ ಇಮೇಜಿಂಗ್ (DMCii)ಜೊತೆಗೆ ಭಾರತದ ಆಂಟ್ರಿಕ್ಸ್ ಕಾರ್ಪೋರೇಷನ್ ಮಿಲಿಟೆಡ್ ನಡೆಸಿರುವ ಒಪ್ಪಂದದ ಭಾಗವಾಗಿ ಉಡಾವಣೆ ಮಾಡಲಾಗಿದೆ. ನಿಮ್ಮ ಮಾಹಿತಿಗಾಗಿ ಡಿಎಂಸಿಐಐ ಸರ್ರೆ ಸ್ಯಾಟಲೈಟ್ ಟೆಕ್ನಾಲಜಿ ಲಿಮಿಟೆಡ್ ನ (ಎಸ್ ಎಸ್ ಟಿಎಲ್) ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಇನ್ನೊಂದೆಡೆ ಆ್ಯಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಭಾರತ ಮೂಲದ ಇಸ್ರೋದ ವಾಣಿಜ್ಯ ವಿಭಾಗವಾಗಿದೆ.

ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಇದು ಪಿಎಸ್‌ಎಲ್‌ವಿಯ ಸತತವಾಗಿ 29ನೇ ಯಶಸ್ವಿ ಹಾರಾಟವಾಗಿದೆ. ಅಲ್ಲದೆ ಯುಕೆ ಸೇರಿದಂತೆ ಇದವರೆಗೆ ವಿದೇಶ ರಾಷ್ಟ್ರಗಳ 45 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೈದಿದೆ.

ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಈ 44.4 ಮೀಟರ್ ಉದ್ದದ ಪೋಲಾರ್ ಸ್ಯಾಟಲೈಟ್ ಪಿಎಸ್‌ಎಲ್‌ವಿ-ಸಿ28 ಒಂದು ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಮಾದರಿಯಾಗಿದೆ. ಅಲ್ಲದೆ ಉಡಾವಣೆ ಬಗ್ಗೆ ಇಸ್ರೋ ಮುಖ್ಯಸ್ಥರಾದ ಕಿರಣ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇಸ್ರೋ ಮಹಾ ಸಾಧನೆ; ಬ್ರಿಟನ್ ಉಪಗ್ರಹಗಳ ಯಶಸ್ವಿ ಹಾರಾಟ

ಒಟ್ಟಿನಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರತಿಷ್ಠೆ ಇಮ್ಮಡಿಯಾಗಿದೆ.

Read more on ಇಸ್ರೊ isro
English summary
PSLV Successfully Launches Five Satellites from UK
Story first published: Saturday, July 11, 2015, 14:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark