ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಸಂಚಾರಿ ನಿಯಮವನ್ನು ಉಲ್ಲಂಘನೆಗೆ ವಾಹನ ಸವಾರರಿಗೆ ದುಬಾರಿ ದಂಡವನ್ನು ವಿಧಿಸುತ್ತಿದ್ದಾರೆ. ಇದೀಗ ರಾಜಸ್ಥಾನದ ಟ್ರಕ್ ಡ್ರೈವರ್ ಒಬ್ಬ‍‍ನಿಗೆ ಬರೋಬ್ಬರಿ ರೂ. 1.41 ಲಕ್ಷ ದಂಡ ವಿಧಿಸಿದ್ದಾರೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಂದ ಬಳಿಕ ಇದು ದೇಶದಲ್ಲಿಯೇ ದುಬಾರಿ ಮೊತ್ತದ ದಂಡವಾಗಿದೆ.

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದೇಶದೆಲ್ಲೆಡೆ ಭಾರೀ ಮೊತ್ತದ ದಂಡವನ್ನು ಹಾಕಲಾಗುತ್ತಿದೆ. ಈ ಹಿಂದೆ ಒಡಿಶಾದಲ್ಲಿ ಲಾರಿ ಚಾಲಕರೊಬ್ಬರಿಗೆ ರೂ. 86,000 ದಂಡ ಹಾಕಿದ್ದು ದೇಶದಲ್ಲಿಯೇ ದುಬಾರಿ ದಂಡವಾಗಿತ್ತು. ಆದರೆ ಈಗ ರಾಜಸ್ಥಾನದ ಲಾರಿ ಚಾಲಕನೊಬ್ಬ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಬರೋಬ್ಬರಿ ರೂ. 1.41 ಲಕ್ಷ ದಂಡ ಕಟ್ಟಿದ್ದಾರೆ.

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ರಾಜಸ್ಥಾನದ ನೋಂದಾವಣೆಗೊಂಡಿರುವ ಟ್ರಕ್‍‍ಗೆ ಹೊಸ ಮೋಟಾರ್ ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆಗಾಗಿ ದುಬಾರಿ ದಂಡವನ್ನು ವಿಧಿಸುವ ಮೂಲಕ ಟ್ರಾಫಿಕ್ ಪೊಲೀಸರು ಹೊಸ ದಾಖಲೆಯನ್ನು ಬರೆದಿದ್ದಾರೆ. ದೆಹಲಿಯ ರೋಹಿಣೆ ಸರ್ಕಲ್ ಟ್ರಾಫಿಕ್ ಪೊಲೀಸರು ಈ ದಾಖಲೆ ಬರೆದಿದ್ದಾರೆ.

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ವಾಹನವು ಟಾಟಾ 4018 ಹೆವಿ ಡ್ಯೂಟಿ ಟ್ರಕ್ ಎಂದು ರಾಜಸ್ಥಾನದ ಬಿಕಾನೆರ್ ಆರ್‍‍ಟಿಒ ಅಡಿಯಲ್ಲಿ ನೋಂದಾವಣೆಗೊಂಡಿರುವ ಟ್ರಕ್ ಎಂದು ಕೇಂದ್ರ ವಾಹನ ನೋಂದಣಿ ಡೇಟಾಬೇಸ್ ಇಂದ ತಿಳಿದಿದೆ.

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ಈ ಹಿಂದೆ ನಾಗಾಲ್ಯಾಂಡ್ ನೋಂದಣೆ ಸಂಖ್ಖೆಯನ್ನು ಹೊಂದಿರುವ ಟ್ರಕ್ ಚಾಲಕನಿಗೆ ಒಡಿಶಾ ಸಂಬಲ್ಪುರ ಜಿಲ್ಲೆಯ ಪ್ರಾದೇಶಿಕ ಟ್ರಾಫಿಕ್ ಪೊಲೀಸರು ರೂ. 86,500 ದಂಡವನ್ನು ವಿಧಿಸಿದ್ದರು. ಇದರ ಕುರಿತು ಸಂಬಾಲ್ಪುರ ಪ್ರಾದೇಶಿಕ ಟ್ರಾಫಿಕ್ ಪೊಲೀಸ್ ಅಧಿಕಾರಿ ಲಲಿತ್ ಮೋಹನ್ ಬೆಹಾರ ಅವರ ಪ್ರಕಾರ, ಟ್ರಕ್ ಚಾಲಕ ಅಶೋಕ್ ಜಾದವ್ ಅವರಿಗೆ ಸಾಮಾನ್ಯ ಅಪರಾಧಕ್ಕೆ ರೂ. 5000, ಅನಧಿಕೃತ ವ್ಯಕ್ತಿಗಳಿಗೆ ವಾಹನ ಚಾಲಯಿಸಲು ಅವಕಾಶ ನೀಡಿದ್ದಕ್ಕಾಗಿ ರೂ. 5,000 ದಂಡ ವಿಧಿಸಿದ್ದರು.

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ಇಷ್ಟೇ ಅಲ್ಲದೇ ಪರವಾನೆಗೆ ಇಲ್ಲದೆ ವಾಹನ ಚಲಾಯಿದಕ್ಕೆ ರೂ. 56,000, 18 ಟನ್‍‍ಗಿಂತ ಹೆಚ್ಚು ಓವರ್ ಲೋಡ್ ಗಾಗಿ ರೂ.20,000 ದಂಡವನ್ನು ವಿಧಿಸಿದ್ದರು, ಹೀಗೆ ಒಟ್ಟು ದಂಡ ರೂ. 86,500 ಸಾವಿರ ದಂಡವಾಗಿತ್ತು. ಕೆಲವು ದಾಖಲೆಗಳನ್ನು ಸಹ ಹಾಜರಿಪಡಿಸಿ, ಪೊಲೀಸ್ ಅಧಿಕಾರಿಗಳ ಜೊತೆ ಐದು ಗಂಟೆಗಳೆಗಿಂತ ಹೆಚ್ಚು ಕಾಲ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನಂತರ ಚಾಲಕ ಒಟ್ಟು ರೂ. 70,000 ದಂಡವನ್ನು ಪಾವತಿಸಿದನು. ನಾಗಲ್ಯಾಂಡ್ ನೋಂದಣೆ ಸಂಖ್ಖೆ ಎನ್‍ಎಲ್‍ 01 ಜಿ 1470 ಹೊಂದಿರುವ ಟ್ರಕ್ ನಾಗಲ್ಯಾಂಡ್ ಮೂಲದ ಬಿಎಲ್ಎ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‍‍ಗೆ ಸೇರಿದ ಟ್ರಕ್ ಆಗಿದೆ.

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ಈ ಪ್ರಕರಣವಾದ ಬಳಿಕ ದಾಖಲೆ ಮಟ್ಟದಲ್ಲಿ ದುಬಾರಿ ದಂಡವನ್ನು ರಾಜಸ್ಥಾನದಭಗವಾನ್‌ ರಾಮ್‌ ಎಂಬ ಟ್ರಕ್​ ಮಾಲಿಕನಿ​ಗೆ ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್​ಲೋಡ್​ ನಿಯಮದನ್ವಯ ದಂಡ ವಿಧಿಸಲಾಗಿದೆ. ಸೆಪ್ಟೆಂಬರ್​ 5 ರಂದು ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿ ಟ್ರಕ್​ ವಶಕ್ಕೆ ಪಡೆದಿದ್ದರು. ದುಬಾರಿ ಮೊತ್ತವನ್ನು ಪಾವತಿಸಲು 5ದಿನಗಳ ಕಾಲ ಸಮಯವನ್ನು ತೆಗೆದುಕೊಂಡು ಹಣವನ್ನು ಹೊಂದಿಸದ ಬಳಿಕ ಸೆಪ್ಟೆಂಬರ್​ 9 ರಂದು ಕೋರ್ಟ್​ನಲ್ಲಿ ದಂಡ ಪಾವತಿಸಿ ವಾಹನ ಮಾಲಿಕನು ಟ್ರಕ್ ಅನ್ನು ಬಿಡಿಸಿಕೊಂಡರು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿಗೆ ತುಂಬಿಸಲಾಗಿದ್ದ ಸರಕಿಗೆ ಮೊದಲ ಒಂದು ಟನ್​ಗೆ 20 ಸಾವಿರ ಮತ್ತು ಆ ನಂತರ ಪ್ರತಿಯೊಂದು ಟನ್​ಗೆ 2 ಸಾವಿರದಂತೆ ಓವರ್​ಲೋಡ್​ ಮಾಡಿದ್ದಕ್ಕಾಗಿ ಒಟ್ಟು ರೂ. 48 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೇ ಆರ್​ಸಿ ಮತ್ತು ಪರ್ಮಿಟ್​ ಇಲ್ಲದ್ದಕ್ಕಾಗಿ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ. ಎಲ್ಲಾ ಸೇರಿ ಡ್ರೈವರ್​ಗೆ ರೂ. 70,800 ಮತ್ತು ಇಷ್ಟೇ ಮೊತ್ತದ ದಂಡವನ್ನು ಟ್ರಕ್​ ಮಾಲಿಕನಿಗೆ ವಿಧಿಸಲಾಗಿದೆ. ಹೀಗಾಗಿ ದಂಡದ ಒಟ್ಟು ಮೊತ್ತ ರೂ. 1,41,600 ಆಗಿದೆ ಎಂದು ವರದಿಗಳು ತಿಳಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

 ಸಂಚಾರಿ ನಿಯಮ ಉಲ್ಲಂಘನೆಗೆ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ

ದಿನಗಳು ಕಳದಂತೆ ದಂಡ ಮೊತ್ತದ ಸಂಖ್ಖೆಯು ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅಪಘಾತಗಳಾಗುದನ್ನು ತಪ್ಪಿಸಲು ಮತ್ತು ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂದು ಸಂಚಾರಿ ನಿಯಮ ಜಾರಿಗೊಳಿಸಿದ್ದಾರೆ. ದಂಡಕ್ಕೆ ಹೆದರಿಯಾದರೂ ಚಾಲಕರು ಸಂಚಾರಿ ನಿಯಮ ಪಾಲಿಸಲಿ ಎಂಬುವುದು ಉದ್ದೇಶವಾಗಿದೆ. ಆದರೆ ಈ ದುಬಾರಿ ದಂಡದಿಂದ ಸಾರ್ವಜನಿಕರ ಮೇಲೆ ದೊಡ್ಡ ಮಟ್ಟದ ಪಾರಿಣಾಮ ಬೀರುತ್ತದೆ. ಗುಜರಾತ್ ಸರ್ಕಾರವು ಈ ದುಬಾರಿ ಮೊತ್ತವನ್ನು ಇಳಿಸಿದೆ ಅದೇ ರೀತಿ ರಾಜ್ಯದಲ್ಲೂ ಸರ್ಕಾರ ದಂಡದ ಮೊತ್ತವನ್ನು ಇಳಿಸಿದರೆ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ.

Source: News18

Most Read Articles

Kannada
English summary
At Rs 1.41 Lakh, Rajasthan Vehicle Creates New Record For Highest Traffic Fine in India - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X