'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

Written By:

ಭಾರತೀಯ ಭೂ ಸೇನೆಯ ಅವಿಭಾಜ್ಯ ಭಾಗವಾಗಿರುವ ಮಾರುತಿ ಜಿಪ್ಸಿ ನಿಧಾನವಾಗಿ ತನ್ನ ಅಧಿಪತ್ಯವನ್ನು ಕಳೆದುಕೊಳ್ಳುತ್ತಿದೆ. ಸೈನ್ಯದ ಬೇಡಿಕೆಗೆ ತಕ್ಕಂತೆ ಹೆಚ್ಚು ಆಧುನಿಕ ವಾಹನಗಳತ್ತ ಭಾರತೀಯ ಸೇನೆಯು ಚಿತ್ತ ಹಾಯಿಸಿದೆ. ಇದರೊಂದಿಗೆ ಕ್ರಮೇಣ ಜಿಪ್ಸಿ ಮೂಲೆಗುಂಪಾಗುತ್ತಿದೆ.

To Follow DriveSpark On Facebook, Click The Like Button
'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

ಕಾಲ ಕಾಲಕ್ಕೆ ಭಾರತೀಯ ಸೈನ್ಯದ ಅವಶ್ಯಕತೆಗಳಿಗೆ ಅನುಸಾರವಾಗಿ ವಾಹನ ತಂತ್ರಜ್ಞಾನದಲ್ಲೂ ಬದಲಾವಣೆಯಾಗಿದೆ. ಮಹೀಂದ್ರ ಹಾಗೂ ಟಾಟಾಗಳಂತಹ ಸಂಸ್ಥೆಗಳು ಜಪ್ಸಿಗೆ ಪೈಪೋಟಿಯನ್ನು ಒಡ್ಡಲು ಅತ್ಯಾಧುನಿಕ ಆಫ್ ರೋಡ್ ವಾಹನಗಳೊಂದಿಗೆ ಮುಂದೆ ಬಂದಿದೆ.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

ಇಷ್ಟೆಲ್ಲ ಆದರೂ ಭಾರತೀಯ ನಾಗರಿಕರ ಪಾಲಿಗೆ ಜಿಪ್ಸಿ ಮರೆಯಲಾರದ ವಾಹನವಾಗಿದೆ. ಇದು ಅತ್ಯಾಧುನಿಕ ಎಸಿ, ಪವರ್ ವಿಂಡೋ, ಎಬಿಎಸ್ ಅಥವಾ ಏರ್ ಬ್ಯಾಗ್ ವೈಶಿಷ್ಟ್ಯಗಳನ್ನು ಇಲ್ಲದೆ ಹೋಗಿರಬಹುದು. ಆದರೂ ಹತ್ತಾರು ವಿಷಯಗಳಿಂದ ಈಗಲೂ ಅತ್ಯಂತ ವಿಶ್ವಸಾರ್ಹ ಆಫ್ ರೋಡ್ ವಾಹನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

1985ನೇ ಇಸವಿಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ ಜಿಪ್ಸಿ ಪ್ರಾರಂಭದಲ್ಲಿ 45 ಅಶ್ವಶಕ್ತಿ ಉತ್ಪಾದಿಸುವ 4 ಸಿಲಿಂಡರ್ ಒಂದು ಲೀಟರ್ ಎಂಜಿನ್ ಜೋಡಣೆಯಾಗಿತ್ತು.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

ಬಳಿಕ ಇದು 4 ಸಿಲಿಂಡರ್ ಕಾರ್ಬ್ಯೂರೇಟಡ್ 1.3 ಲೀಟರ್ ಎಂಜಿನ್ ನೊಂದಿಗೆ ಬದಲಾಯಿಸಿತ್ತಲ್ಲದೆ 103 ಎನ್ ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿಯನ್ನು ನೀಡುತ್ತಿತ್ತು.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

500 ಕೆ.ಜಿ ಭಾರ ಹೊರುವ ವಿಭಾಗದಲ್ಲಿ ಗುರುತಿಸಿಕೊಂಡಿರುವ ಮಾರುತಿ ಜಿಪ್ಸಿ ಇಂದಿಗೂ ಭಾರತೀಯ ಸೇನೆಯ ನೆಚ್ಚಿನ ವಾಹನವೆನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕೆಲವೊಂದು ವಾಸ್ತವಾಂಶಗಳ ಬಗ್ಗೆ ಚರ್ಚಿಸುವ ಪ್ರಯತ್ನ ಮಾಡಲಾಗುವುದು.

ಹಗುರ ಭಾರ

ಹಗುರ ಭಾರ

ಕಳೆದ ಮೂರು ದಶಕಗಿಂತಲೂ ಹೆಚ್ಚು ಸಮಯದಿಂದ ಭಾರತೀಯ ಸೇನೆಯ ಸೇವೆ ಸಲ್ಲಿಸುತ್ತಿರುವ ಮಾರುತಿ ಜಪ್ಸಿ, ತನ್ನ ಹಗುರ ಭಾರದಿಂದಲೇ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

765 ಕೆ.ಜಿ. ಭಾರ ಹೊಂದಿರುವ ಮಾರುತಿ ಜಿಪ್ಸಿ ಮಹಿಂದ್ರ ಥಾರ್ ಗಿಂತಲೂ ಹಗುರ ಭಾರವಾಗಿದೆ. ಅನಗತ್ಯ ಎಲೆಕ್ಟ್ರಿಕ್ ಸಿಸ್ಟಂ ಅಥವಾ ಎಸಿ ಘಟಕಗಳು ಇಲ್ಲದಿರುವುದು ಭಾರ ಕಡಿತ ಮಾಡಲು ನೆರವಾಗಿದೆ.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

ಹಗುರ ಭಾರ ಆಗಿರುವುದರಿಂದಲೇ ಕೆಸರು ಅಥವಾ ಮರಳುಗಾಡಿನಲ್ಲಿ ನಿಖರವಾಗಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಸಿಲುಕಿಕೊಂಡರೂ ಅನಾಯಾಸವಾಗಿ ಮೇಲೆಕ್ಕೆತ್ತಬಹುದಾಗಿದೆ.

ಪವರ್ ಟು ವೇಟ್ ಅನುಪಾತ

ಪವರ್ ಟು ವೇಟ್ ಅನುಪಾತ

ಮಾರುತಿ ಜಿಪ್ಸಿಯಲ್ಲಿರುವ 1298 ಸಿಸಿ 4 ಸಿಲಿಂಡರ್ ಎಂಜಿನ್ 103 ಎನ್ ಎಂ ತಿರುಗುಬಲದಲ್ಲಿ 80 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ವಾಹನದ ಒಟ್ಟಾರೆ ಭಾರ 1620 ಕೆ.ಜಿ ಆಗಿದೆ. ಈ ಸಂಯೋಜನೆಯು ಕಡಿಮೆ ಭಾರದಲ್ಲಿ ಹೆಚ್ಚಿನ ಪವರ್ ನೀಡಲು ಸಹಕಾರಿಯಾಗಿದೆ.

ವಿಮಾನದಿಂದ ಕೆಳಕ್ಕಿಳಿಸು

ವಿಮಾನದಿಂದ ಕೆಳಕ್ಕಿಳಿಸು

ಯುದ್ಧ ಮುಂತಾದ ತುರ್ತು ಪರಿಸ್ಥಿತಿ ಎದುರಾದಾಗ ಐಎಲ್-76, ಸಿ17 ಅಥವಾ ಗ್ಲೋಬ್ ಮಾಸ್ಟರ್ III ವಿಮಾನಗಳಿಂದ ಮಾರುತಿ ಜಪ್ಸಿ ಕೆಳಕ್ಕಿಳಿಸುವುದು ಅತ್ಯಂತ ಸುಲಭವಾಗಿದೆ. ಇದೇ ಕಾರಣಕ್ಕಾಗಿ ಜಿಪ್ಸಿ ಭಾರತೀಯ ಸೇನೆ ಹಾಗೂ ವಾಯುಪಡೆಯ ಮೊದಲ ಆಯ್ಕೆಯಾಗಿರುತ್ತದೆ.

ಹೆಲಿಕಾಪ್ಟರ್ ಗಳಿಂದಲೂ ಲಿಫ್ಟ್

ಹೆಲಿಕಾಪ್ಟರ್ ಗಳಿಂದಲೂ ಲಿಫ್ಟ್

ಹಗುರ ಭಾರ ಜಿಪ್ಸಿ ಅತ್ಯಂತ ಕಠಿಣವಾದ ಆಫ್ ರೋಡ್ ಗಳನ್ನೂ ಕಾರ್ಯಾಚರಣೆ ನಡೆಸಬಲ್ಲದು. ಅಲ್ಲದೆ ಲಘು ಭಾರದ ಹೆಲಿಕಾಪ್ಟರ್ ಗಳಿಂತಲೂ ಲಿಫ್ಟ್ ಮಾಡಬಹುದಾಗಿದೆ.

ಆಫ್ ರೋಡ್ ಸಾಮರ್ಥ್ಯ

ಆಫ್ ರೋಡ್ ಸಾಮರ್ಥ್ಯ

ಭಾರತೀಯ ಸೇನೆಯ ಎಲ್ಲ ರೀತಿಯ ಅಗತ್ಯಗಳನ್ನು ಮಾರುತಿ ಜಿಪ್ಸಿ ಪೂರೈಸುತ್ತಿದೆ. ಇದರಲ್ಲಿ ಆಫ್ ರೋಡ್ ಸಾಮರ್ಥ್ಯ ನಿರ್ಣಾಯಕವಾಗಿದೆ. ದೇಶದ ಯಾವುದೇ ಭೂ ಪ್ರದೇಶದಲ್ಲೂ ಜಿಪ್ಸಿ ಅತ್ಯಂತ ನಿಖರವಾದ ಕಾರ್ಯಾಚರಿಸಬಲ್ಲದು. ಇದರಲ್ಲಿ ರಿಯರ್ ಲೀಫ್ ಸ್ಪ್ರಿಂಗ್ ಜೊತೆ ಡಬಲ್ ಆಕ್ಷನ್ ಡ್ಯಾಂಪರ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಜೋಡಿಸಲಾಗಿದೆ.

ಸರ್ವತೋಮುಖ ಮತ್ತು ಬಾಳ್ವಿಕೆ

ಸರ್ವತೋಮುಖ ಮತ್ತು ಬಾಳ್ವಿಕೆ

ಸರ್ವತೋಮುಖ ಮತ್ತು ಬಾಳ್ವಿಕೆಯ ವಿಚಾರದಲ್ಲಿ ಜಪ್ಸಿ ಮೀರಿಸುವುದು ಸ್ವಲ್ಪ ಕಷ್ಟನೇ ಸರಿ. ಇತರೆ ಎಸ್ ಯುವಿಗಳನ್ನು ಹೋಲಿಸಿದಾಗ ಜಿಪ್ಸಿ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ.

ಮಾರ್ಪಾಡು

ಮಾರ್ಪಾಡು

ಭಾರತೀಯ ಸೇನೆಯು ತನ್ನ ವಿಶೇಷ ಕಾರ್ಯಾಚರಣೆ ಯೋಜನೆಗಳಿಗೆ ಅನುಸಾರವಾಗಿ ಜಿಪ್ಸಿಯನ್ನು ಮಾರ್ಪಾಡುಗೊಳಿಸುತ್ತಿದೆ. ಇದು ಸಾಫ್ಟ್ ಮತ್ತು ಓಪನ್ ಟಾಪ್ ವೆರಿಯಂಟ್ ಗಳಲ್ಲಿ ಲಭ್ಯವಿರುತ್ತದೆ.

ಇಂಧನ ಕ್ಷಮತೆ

ಇಂಧನ ಕ್ಷಮತೆ

ಪ್ರತಿಯೊಂದು ಗಾಡಿಯ ಯಶಸ್ಸಿನಲ್ಲಿ ಇಂಧನ ಕ್ಷಮತೆ ನಿರ್ಣಾಯಕ ಘಟಕವೆನಿಸುತ್ತದೆ. ಎಲ್ಲ ಪ್ರತಿಸ್ಪರ್ಧಿಗಳು ಡೀಸೆಲ್ ಗಾಡಿಯಲ್ಲಿ ಓಡುವಾಗ ಜಪ್ಸಿ ಮಾತ್ರ ಪೆಟ್ರೋಲ್ ಎಂಜಿನ್ ಮೊರೆ ಹೋಗಿರುವುದು ವಿಶೇಷ. ಹಿಮಾಲಯದಂತಹ ಅತ್ಯಂತ ಕನಿಷ್ಠ ತಾಪಮಾನ ಪ್ರದೇಶದಲ್ಲೂ ಜಿಪ್ಸಿ ಭಲೇ ಭೇಷ್ ಎನಿಸಿಕೊಂಡಿದೆ.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

ಕಡಿಮೆ ವೀಲ್ ಟ್ರ್ಯಾಕ್ ಹಾಗೂ ಟರ್ನಿಂಗ್ ರೇಡಿಯಸ್ ಕಾಪಾಡಿಕೊಂಡಿರುವುದರಿಂದ ಕಡಿದಾದ ಘಾಟಿ ಪ್ರದೇಶದಲ್ಲೂ ಜಪ್ಸಿ ನಿರ್ವಹಣೆ ಮೆಚ್ಚುಗೆಗೆ ಪಾತ್ರವಾಗಿದೆ.

'ಮಾರುತಿ ಜಿಪ್ಸಿ' ಭಾರತೀಯ ಸೇನೆಯ ಫೇವರಿಟ್ ಗಾಡಿ ಏಕೆ?

ಹೆಚ್ಚು ಉಪಯುಕ್ತವಾಗುವ, ವಿಶ್ವಾಸಾರ್ಹ ಹಾಗೂ ಕಡಿಮೆ ನಿರ್ವಹಣಾ ವಾಹನಗಳನ್ನು ಭಾರತೀಯ ಸೇನೆ ಆಶ್ರಯಿಸಿಕೊಂಡಿದೆ. ಈ ಎಲ್ಲ ಬೇಡಿಕೆಗಳನ್ನು ಜಿಪ್ಸಿ ಪೂರೈಸುತ್ತಿದೆ. ಹಾಗಾಗಿ ಭಾರತೀಯ ಸೇನೆಗೆ ಸರಿಯಾಗಿ ಹೊಂದಿಕೆಯಾಗಿದೆ.

Read more on ಭಾರತ india
English summary
Reasons why Indian Army prefer Maruti Gypsy over any other SUV
Story first published: Friday, December 2, 2016, 11:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark