ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎರಡು ವರ್ಷಗಳಲ್ಲಿ ರಸ್ತೆ ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಯೋಜಿಸಿದ್ದು, ಈ ನಿಟ್ಟಿನಲ್ಲಿ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸಲು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ರಸ್ತೆ ಸುರಕ್ಷತೆಯನ್ನು ತ್ವರಿತವಾಗಿ ಸುಧಾರಿಸಲು ಸೇವ್‌ಲೈಫ್ ಫೌಂಡೇಶನ್ ರೂಪಿಸಿರುವ ವಿವಿಧ ತಂತ್ರಗಳು ಮತ್ತು ಪರಿಹಾರಗಳನ್ನು ಪರಿಗಣಿಸಲು ಮತ್ತು ಕಾರ್ಯಗತಗೊಳಿಸಲು ಗಡ್ಕರಿ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಸುರಕ್ಷತೆಯ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಲು ಮಧ್ಯಸ್ಥಗಾರರನ್ನು ಸಂವೇದನಾಶೀಲಗೊಳಿಸುವಂತೆ ಒತ್ತಿ ಹೇಳಿದರು. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ ಮತ್ತು ರಸ್ತೆ ಅಪಘಾತಗಳಿಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದ ಅವರು, ಮೂರು ವಿಷಯಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಇದು ಸಮಸ್ಯೆಗೆ ತಕ್ಷಣದ ಪರಿಹಾರ, ಮಧ್ಯಮ ಅವಧಿಯ ಪರಿಹಾರ ಮತ್ತು ದೀರ್ಘಾವಧಿಯ ಪರಿಹಾರವನ್ನು ಒಳಗೊಂಡಿರುತ್ತದೆ. ಶೂನ್ಯ ಅಪಘಾತದ ಪ್ರತಿಜ್ಞೆ ಮಾಡುವಂತೆ ಎಲ್ಲ ಕ್ಷೇತ್ರಾಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರನ್ನು ಪ್ರೇರೇಪಿಸುತ್ತಿರುವುದಾಗಿ ತಿಳಿಸಿದರು.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಸಾವು ಸಂಭವಿಸುವ ದೇಶಗಳಲ್ಲಿ ಭಾರತವೂ ಒಂದು. ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ, ಇದರಲ್ಲಿ 1.50 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಈ ಅಂಕಿ-ಅಂಶವು ಪ್ರಪಂಚದ ಇತರ ಯಾವುದೇ ದೇಶಗಳಲ್ಲಿ ಇಲ್ಲವಾಗಿದ್ದು, ಭಾರತದಲ್ಲಿ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳೇ ಪ್ರಮುಖ ಕಾರಣವೆಂದು ಉಲ್ಲೇಖಿಸಲಾಗಿದೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ನಡೆಯುತ್ತಿವೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಭಾರತದಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ (NHs) ಸಂಭವಿಸುತ್ತವೆ. ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವುಗಳು ದ್ವಿಚಕ್ರ ವಾಹನ ಚಾಲಕರದ್ದೇ ಆಗಿದೆ. ರಸ್ತೆ ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಯೇ ಪ್ರಮುಖ ಕಾರಣ ಎಂದರು.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಸಾರಿಗೆ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಅಪಘಾತಗಳಿಗೆ ಪ್ರಮುಖ ಕಾರಣವಾಗಿ ರಾಂಗ್ ಸೈಡ್ನಲ್ಲಿ ಚಾಲನೆ, ಅತಿವೇಗ, ಟ್ರಾಫಿಕ್ ಸಿಗ್ನಲ್ ಜಂಪಿಂಗ್, ಅಪ್ರಾಪ್ತ ವಯಸ್ಸಿನ ವಾಹನ ಚಾಲನೆ, ಕುಡಿದು ವಾಹನ ಚಾಲನೆಯಂತಹ ಪ್ರಕರಣಗಳು ಮುಂಚೂಣಿಗೆ ಬಂದಿವೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ವಾಹನ ಶಿಕ್ಷಣ, ಎಂಜಿನಿಯರಿಂಗ್, ಕಾನೂನು ಮತ್ತು ತುರ್ತು ಆರೈಕೆಯ ಆಧಾರದ ಮೇಲೆ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ನಿತಿನ್ ಗಡ್ಕರಿ ಬಹುಮುಖ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಇದರ ಅಡಿಯಲ್ಲಿ, ಜಿಲ್ಲೆಯ ಸಂಸದರ (ಲೋಕಸಭೆ) ಅಧ್ಯಕ್ಷತೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಚಿವಾಲಯವು ಮುಂದಾಗಿದೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಇದರ ಭಾಗವಾಗಿ ಭಾರತದ ಪ್ರತಿ ಜಿಲ್ಲೆಯಲ್ಲಿ 'ಸಂಸತ್ತಿನ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ'ರಿಗೆ ಸೂಚನೆ ನೀಡಿದೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಸುಧಾರಿಸಲು ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯ್ದೆ (2019) ಅನ್ನು ಆಗಸ್ಟ್ 9, 2019 ರಂದು ದೇಶದಲ್ಲಿ ಜಾರಿಗೆ ತರಲಾಗಿದೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ನೂತನ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟನೆ

ಇತ್ತೀಚೆಗೆ, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹರಿಯಾಣದ ನುಹ್ ಜಿಲ್ಲೆಯಲ್ಲಿ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದರು. ಈ ಸ್ಕ್ರ್ಯಾಪಿಂಗ್ ಘಟಕವನ್ನು ಅಭಿಷೇಕ್ ಗ್ರೂಪ್ ಮತ್ತು ಜಪಾನ್‌ನ ಕೈಹೋ ಸಾಂಗ್ಯೊ ಜಂಟಿ ಉದ್ಯಮದ ಅಡಿಯಲ್ಲಿ ಸ್ಥಾಪಿಸಿದ್ದಾರೆ. ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಮತ್ತು ಮರುಬಳಕೆ ಮಾಡಲು ಈ ಘಟಕದಲ್ಲಿ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ವಾಹನ ಸ್ಕ್ರ್ಯಾಪಿಂಗ್ ಘಟಕದಲ್ಲಿ, ಸ್ಕ್ರ್ಯಾಪ್ ಮಾಡಿದ ವಾಹನಗಳಿಂದ ಸ್ಟೀಲ್ ಮತ್ತು ಪ್ಲಾಸ್ಟಿಕ್ ಅನ್ನು ತೆಗೆದು ಕರಗಿಸಲಾಗುತ್ತದೆ. ಮರುಬಳಕೆಯ ಉಕ್ಕು ಮತ್ತು ಪ್ಲಾಸ್ಟಿಕ್ಗಳನ್ನು ಇತರ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಸ್ಥಾವರವು ಪ್ರತಿ ತಿಂಗಳು 1,800 ವಾಹನಗಳನ್ನು ಮರುಬಳಕೆ ಮಾಡಬಹುದು.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಮುಂದಿನ ಕೆಲವು ತಿಂಗಳುಗಳಲ್ಲಿ ಈ ಗುಂಪು ದೇಶದ ವಿವಿಧ ಭಾಗಗಳಲ್ಲಿ 7-8 ಸ್ಕ್ರ್ಯಾಪಿಂಗ್ ಪ್ಲಾಂಟ್‌ಗಳನ್ನು ಸ್ಥಾಪಿಸಲಿದೆ. ನಿತಿನ್ ಗಡ್ಕರಿ ಅವರು ಕೆಲವು ತಿಂಗಳ ಹಿಂದೆ ನೋಯ್ಡಾದಲ್ಲಿ ಇದೇ ರೀತಿಯ ವಾಹನ ಸ್ಕ್ರ್ಯಾಪಿಂಗ್ ಮತ್ತು ಮರುಬಳಕೆ ಘಟಕವನ್ನು ಉದ್ಘಾಟಿಸಿದ್ದರು.

ಮುಂದಿನ 2 ವರ್ಷಗಳಲ್ಲಿ ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಲಿವೆ: ಸಚಿವ ಗಡ್ಕರಿ ಹೇಳಿಕೆ

ಈ ಘಟಕವನ್ನು ಮಾರುತಿ ಸುಜುಕಿ ಮತ್ತು ಟೊಯುಟ್ಸು ವಾಹನಗಳ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ. 150 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ಸ್ಕ್ರಾಪಿಂಗ್ ಘಟಕವನ್ನು ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಭಾರತವನ್ನು ದಕ್ಷಿಣ ಏಷ್ಯಾದ ವಾಹನ ಸ್ಕ್ರಾಪಿಂಗ್ ಹಬ್ ಮಾಡಲು ಯೋಜಿಸಿರುವಯದಾಗಿ ಹೇಳಿದರು.

Most Read Articles

Kannada
English summary
Road accidents to fall by 50 percent in two years says nitin gadkari
Story first published: Friday, May 13, 2022, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X