ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಹಿನ್ನೆಲೆ ಟೆಕ್ಕಿಯ ಮರ್ಡರ್

Written By:

ಟ್ರಾಫಿಕ್ ವೇಳೆ ಬೈಕ್‌ವೊಂದು ಮತ್ತೊಂದು ಬೈಕ್‌ಗೆ ಉಜ್ಜಿಕೊಂಡು ಹೋಗಿದ್ದರ ಪರಿಣಾಮ ಟೆಕ್ಕಿ ಮತ್ತು ರೌಡಿ ಶೀಟರ್ ಮಧ್ಯೆ ಮಾರಾಮಾರಿ ನಡೆದಿದ್ದು, ರೂ. 500 ಕೊಡಲು ಒಪ್ಪದ ಟೆಕ್ಕಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಹತ್ಯೆಯಾದ ಟೆಕ್ಕಿಯನ್ನು 28 ವರ್ಷದ ಪ್ರಣಾಯ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಟೆಕ್ಕಿ ಪ್ರಣಾಯ್ ಹತ್ಯೆ ಮಾಡಿದ್ದ ಓರ್ವ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಕಳೆದ ಸೋಮವಾರ ಪ್ರಣಾಯ್ ಮಿಶ್ರಾ ಅವರ ದ್ವಿಚಕ್ರ ವಾಹನವು ತಾವರೆಕೆರೆ ಮುಖ್ಯ ರಸ್ತೆಯ ಚಾಕ್ಲೇಟ್ ಫ್ಯಾಕ್ಟರಿ ಬಳಿ ಹೊಗುವಾಗ ರೌಡಿಶೀಟರ್ ಕಾರ್ತಿಕ್ ವಾಹನಕ್ಕೆ ಉಜ್ಜಿಕೊಂಡು ಹೊಗಿತ್ತು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಕಾರ್ತಿಕ್ ಮತ್ತು ಆತನ ಸ್ನೇಹಿತ ಅರುಣ್ ಪ್ರಣಾಯ್‍ರನ್ನು ಹಿಂಬಾಲಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

500 ರೂ.ಗೆ ಕೊಲೆ

ಇನ್ನೂ ಆಘಾತಕಾರಿ ಸಂಗತಿ ಅಂದ್ರೆ ಕೇವಲ 500 ರೂ. ಗಾಗಿ ಈ ಕೊಲೆ ನಡೆದಿದೆ. ಗಾಡಿ ಉಜ್ಜಿಕೊಂಡು ಹೋದ ಕಾರಣ ಮುರಿದುಹೋಗಿದ್ದ ಮಡ್ ಗಾರ್ಡ್ ಸರಿಪಡಿಸಲು 500 ರೂ. ಕೊಡಬೇಕು ಎಂದು ರೌಡಿಗಳು ಜಗಳ ಮಾಡಿದ್ದರು.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಆದ್ರೆ ಪ್ರಣಾಯ್ ಇದು ನನ್ನ ತಪ್ಪಲ್ಲ ಎಂದು ಹೇಳಿ ಹಣ ನೀಡಲು ನಿರಾಕರಿಸಿ ಅಲ್ಲಿಂದ ಹೊರಟುಹೋಗಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು, ಪ್ರಣಾಯ್ ಅವರನ್ನ ಬೈಕ್‍ನಲ್ಲಿ ಹಿಂಬಲಿಸಿ ಅಡ್ಡಗಟ್ಟಿದ್ರು.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಪ್ರಣಾಯ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಕೆಳಗೆ ಬಿದ್ದಿದ್ದರು. ಇದರ ಲಾಭ ಪಡೆದ ಆರೋಪಿಗಳು ಪ್ರಣಾಯ್ ಅವರ ಮುಖಕ್ಕೆ ಹೊಡೆದು, ಎರಡು ಬಾರಿ ಹೊಟ್ಟೆಗೆ ಇರಿದು ಸ್ಥಳದಿಂದ ಪರಾರಿಯಾಗಿದ್ದರು.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಪ್ರಣಾಯ್ ರಾಯ್ ವಾಸವಿದ್ದ ಮನೆಯಿಂದ ಕೆಲವು ಕಿ.ಮೀ ದೂರದಲ್ಲೇ ಈ ಘಟನೆ ನಡೆದಿದ್ದು, ರಕ್ತದ ಮಡುವಲ್ಲಿ ಬಿದ್ದಿದ್ದ ಪ್ರಣಾಯ್ ಅವರನ್ನು ಸ್ಥಳದಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದರಾದ್ರೂ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾರೆ.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಇನ್ನು ಪ್ರಕರಣ ಬೇಧಿಸಲು ರಚಿಸಲಾಗಿದ್ದ ಪೊಲೀಸರ ತಂಡವು ಸಿಸಿಟಿವಿ ಪುಟೆಜ್ ಆಧಾರಿಸಿ ಬೈಕ್ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡಿ ರೌಡಿಗಳನ್ನ ಟ್ರೇಸ್ ಮಾಡಿದ್ದಾರೆ. ಮೂರು ಸುತ್ತು ಫೈರಿಂಗ್ ಮಾಡಿದ ನಂತರ 24 ವರ್ಷದ ಆರೋಪಿ ಕಾರ್ತಿಕ್‍ನನ್ನು ಮಂಗಳವಾರದಂದು ಪೊಲೀಸರು ಬಂಧಿಸಿದ್ದು, ಈ ವೇಳೆ ರೌಡಿಶೀಟರ್ ಕಾರ್ತಿಗ್‌ಗೆ ಮತ್ತು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.

ಬೈಕ್ ಟಚ್ ಆಗಿದ್ದಕ್ಕೆ ಕಿರಿಕ್- ರೂ.500 ಕೊಡಲು ಒಪ್ಪದ ಟೆಕ್ಕಿ ಮರ್ಡರ್

ಘಟನೆಗೂ ಮುನ್ನ ಭಾನುವಾರದಂದು ಪ್ರಣಾಯ್ ತನ್ನ ಸ್ನೇತರೊಂದಿಗೆ ಹೊರಗೆ ಪಾರ್ಟಿ ಮುಗಿಸಿ ಮನೆಗೆ ಹೋಗಿ ಮತ್ತೆ ತನ್ನ ಗೆಳತಿಯನ್ನು ಭೇಟಿಯಾಗಲು ಹೊರಟಿದ್ದರು ಎನ್ನಲಾಗಿದ್ದು, ಪ್ರಣಾಯ್ ಮಿಶ್ರಾ ಮೂಲತಃ ಒಡಿಶಾದವರು ಎಂದು ತಿಳಿದುಬಂದಿದೆ.

Read more on ಅಪರಾಧ crime
English summary
Read in Kannada about Road rage Is The Reason Behind Bangalore Techie’s Murder.
Story first published: Thursday, October 12, 2017, 12:19 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark