ಮೋದಿ ಹಿಂಗ್ ಮಾಡಿದಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

Written By:

ಸಲ್ಮಾನ್ ಎಂಬ ಸೌದಿ ಅರೇಬಿಯಾ ದೇಶದ ದೊರೆಯೊಬ್ಬರು 27 ವಿಮಾನಗಳಲ್ಲಿ 1500 ಜನರಿರುವ ತಂಡದೊಂದಿಗೆ ಇಂಡೋನೇಷ್ಯಾ ಪ್ರವಾಸ ಕೈಗೊಂಡಿದ್ದಾರೆ.

To Follow DriveSpark On Facebook, Click The Like Button
ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಸೌದಿ ದೇಶದ ದೊರೆ ಬರೋಬ್ಬರಿ 460 ಟನ್ ಸರಕಿನೊಂದಿಗೆ ಇಂಡೋನೇಷ್ಯಾ ಭೇಟಿ ನೀಡಿದ್ದು, ಈ ಸರಕಿನ ಜೊತೆ ತಮ್ಮ ನೆಚ್ಚಿನ ಎರಡು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊತ್ತೊಯ್ಯಲಾಗಿದ್ದು, ಎಲೆಕ್ಟ್ರಿಕ್ ಲಿಫ್ಟ್ ಗಳನ್ನೂ ಕೂಡ ಕೊಂಡೊಯ್ಯಲಾಗಿದೆ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ದೊರೆ ಉಪಯೋಗಿಸುವ ಪ್ರತಿಯೊಂದು ವಸ್ತು ಕೂಡ ಇಂಡೋನೇಷ್ಯಾ ತಲುಪಿದ್ದು, ಅದರಲ್ಲಿ ತಾವು ಅತಿ ಹೆಚ್ಚು ಪ್ರೀತಿಸುವ ಮರ್ಸಿಡಿಸ್ ಬೆಂಜ್ ಕಾರುಗಳು ಒಳಗೊಂಡಿವೆ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

81 ವರ್ಷದ ದೊರೆಗೆ ಸುರಕ್ಷತೆಗೆ ಉಪಯೋಗಿಸುವ ಪ್ರತಿಯೊಂದು ಬೆಂಗಾವಲು ವಾಹನಗಳು ಹೆಚ್ಚು ಕಡಿಮೆ ಸೌದಿ ಇಂದ ಬಂದಿವೆ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಬಲ್ಲ ಮೂಲಗಳ ದೊರೆಯು ತನ್ನದೇ ಆದ ಖಾಸಗಿ ವಿಮಾನವನ್ನು ಹೊಂದಿದ್ದು, ಪ್ರಪಂಚದಲ್ಲಿಯೇ ಅತಿ ಹೆಚ್ಚು ಸೌಕರ್ಯ ಹೊಂದಿರುವ ಮೊಟ್ಟ ಮೊದಲ ವಿಮಾನ ಎನ್ನಲಾಗಿದೆ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಸದ್ಯ ಸಲ್ಮಾನ್ ದೊರೆ ಬಳಸುತ್ತಿರುವ ಮರ್ಸಿಡಿಸ್ ಎಸ್600 ಕಾರಿನ ಆರಂಭಿಕ ಬೆಲೆ 10.50 ಕೋಟಿ ರೂಗಳಾಗಿದ್ದು,ಈ ಕಂಪನಿಯಲ್ಲಿಯೇ ಅತಿ ಹೆಚ್ಚು ಸುರಕ್ಷತೆಯ ಅಂಶಗಳನ್ನು ಹೊಂದಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರಿನ ಬಾಡಿ ಮತ್ತು ವಿಂಡೋಗಳು ಗುಂಡು ನಿರೋಧಕ ಸಾಮರ್ಥ್ಯದ ಗಟ್ಟಿಯಾದ ಉಕ್ಕಿನ ಕೋರ್‌ಗಳನ್ನು ಹೊಂದಿರಬೇಕು.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಮೇಬ್ಯಾಚ್ ಎಸ್600 ಗಾರ್ಡ್ ಕಾರುಗಳು ಬ್ಯಾಲಿಸ್ಟಿಕ್ ಮತ್ತು ಬ್ಲಾಸ್ಟ್ ಪ್ರೊಟೆಕ್ಷನ್ ತಂತ್ರಜ್ಞಾನ ಹೊಂದಿದೆ. ವಿಶೇಷ ರಕ್ಷಣಾ ವಾಹನ ಇದಾಗಿದ್ದು, ಕಾರಿನಲ್ಲಿ ಕುಳಿತ ವ್ಯಕ್ತಿ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ಪಡೆಯುವುದರಲ್ಲಿ ಸಂಶಯವಿಲ್ಲ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

400 ಕ್ಕೂ ಹೆಚ್ಚು ಲಗ್ಷುರಿ ಕಾರುಗಳನ್ನು ಈ ಪ್ರವಾಸಕ್ಕೆ ಬಾಡಿಗೆ ಪಡೆಯಲಾಗಿದ್ದು, ಕೋಟಿ ಕೋಟಿ ಹಣ ಈ ಮನುಷ್ಯನ ಮತ್ತು ಈತನ ಕುಟುಂಬಕ್ಕೋಸ್ಕರ ಖರ್ಚು ಮಾಡಲಾಗುತ್ತಿದೆ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಈ ರೀತಿಯ ದುಂದುವೆಚ್ಚ ಮಾಡುವುದು ಈ ದೊರೆಗೆ ಮೊದಲೇನಲ್ಲ ಬಿಡಿ, ಈ ಮೊದಲು ಸಾಕಷ್ಟು ಬಾರಿ ಈ ರೀತಿಯ ಹುಚ್ಚು ಸಾಹಸ ಕೈಗೊಳ್ಳುವುದು ಈತನಿಗೆ ಅಭ್ಯಾಸವಾಗಿಹೋಗಿದೆ.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಕಳೆದ ಬಾರಿ ಅಮೇರಿಕಾಗೆ ಭೇಟಿ ಕೊಟ್ಟ ವೇಳೆಯಲ್ಲಿ ಒಂದು ದೊಡ್ಡ ಊರಿನಲ್ಲಿರುವ ಎಲ್ಲಾ ಐಷಾರಾಮಿ ಹೋಟೆಲುಗಳನ್ನು ತನ್ನ ಕುಟುಂಬಕ್ಕೆ ಒಂದು ವಾರಗಳ ಮಟ್ಟಿಗೆ ಬುಕ್ ಮಾಡಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.

ಮೋದಿ ಹಿಂಗೇ ಮಾಡಿದ್ರೆ ನೀವ್ ಸುಮ್ನೆ ಇರ್ತಿದ್ರಾ...!?

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತಾಗಿದೆ ಸೌದಿ ಜನರ ಪರಿಸ್ಥಿತಿ, ಈ ದೊರೆಗೆ ಹೋಲಿಸಿದರೆ ನಮ್ಮ ದೇಶದ ಪ್ರಧಾನ ಮಂತ್ರಿ ಸಾವಿರ ಪಾಲು ಮೇಲು ಅಲ್ಲವೇ ?

ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರಿನ ಚಿತ್ರಗಳನ್ನು ವೀಕ್ಷಿಸಿ...

Read more on ಪ್ರವಾಸ
English summary
Saudi Arabia King Salman is on a trip to Asia and he is visiting Indonesia. The King is bringing a massive 1500 people contingent along with him.
Story first published: Thursday, March 2, 2017, 14:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark