ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ತಾಯಿ ಮತ್ತು ಮಕ್ಕಳ ನಡುವಿನ ನಂಟನ್ನು ಯಾರಿಂದಲೂ ವಿವರಿಸಲು ಸಾಧ್ಯವಿಲ್ಲ. ಅದರಲ್ಲೂ ಕೆಲ ಗಂಡು ಮಕ್ಕಳಿಗೆ ತಮ್ಮ ತಾಯ ಮುಖದಲ್ಲಿ ನಗುವನ್ನು ಕಾಣಲು ಏನನ್ನಾದರೂ ಮಾಡಬಲ್ಲರೆಂದು ಈಗಾಗಲೇ ಅದೆಷ್ಟೊ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಇಲ್ಲೂ ಕೂಡಾ ಅಂತದ್ದೊಂದು ಇಂಟ್ರಸ್ಟಿಂಗ್ ಸ್ಟೋರಿ ಇದೆ ನೋಡಿ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬದುಕಿನ ನಗುವನ್ನು ಮತ್ತು ಇನ್ನಿತರೆ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಿತ್ತಾರೆ. ಯಾಕೆಂದ್ರೆ ಅವರಿಗೆ ತಮ್ಮ ಮಕ್ಕಳೇ ಭವಿಷ್ಯವಾಗಿತ್ತೆ. ಹಾಗೆಯೇ ಮಕ್ಕಳಿಗೂ ಸಹ ತಾವು ಜೀವನದಲ್ಲಿ ನೊಂದಿದ್ದರೆ ತಾಯಿಯ ಮಡಿಲಲ್ಲಿ ತಲೆಯಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡರೆ ತಮಗಿರುವ ನೋವು ಮಾಯವಾಗುತ್ತದೆ ಎಂಬ ಭಾವನೆಯು ಹಲವರಿಗಿದೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಇಂತಹ ಅದೆಷ್ಟೊ ನಮ್ಮ ನೋವುಗಳನ್ನು ತನ್ನದೆಂದು ಭಾವಿಸಿ ಕಷ್ಟ ಪಡುವ ತಾಯಿಗೆ ನಾವು ಏನು ನೀಡಿದರು ಎಷ್ಟು ನೀಡಿದರೂ ಕಡಿಮೆ ಅಂತಾನೆ ಹೇಳಬಹುದು. ತೆಲಂಗಾಣ ಮೂಲದ ಯುವಕನೊರ್ವ ಸ್ವತಃ ತಾನು ದುಡಿದ ಹಣದಿಂದ ತನ್ನ ತಾಯಿಗೆ ಹೊಸ ಕಾರನ್ನುಸರ್ಫೈಸ್‌ ಆಗಿ ನೀಡಿ ಕೊಂಡಾಡಿದ್ದಾನೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಹೌದು, ರೋಹಿತ್ ತಲೌಜ್ ಎಂಬ ತೆಲಂಗಾಣ ರಾಜ್ಯ ಮೂಲದ ಯುವಕ ತಾನು ದುಡಿದ ಹಣದಲ್ಲಿ ತನ್ನ ತಾಯಿಗೆಂದು ಮೊದಲ ಬಾರಿಗೆ ಐಷಾರಾಮಿ ಸ್ಕೋಡಾ ರ್‍ಯಾಪಿಡ್ ಎಡಿಷನ್ ಎಕ್ಸ್ ಸೆಡಾನ್ ಕಾರನ್ನು ಉಡುಗೊರೆಯಾಗಿ ನೀಡಿರುವ ವಿಡೀಯೋ ನೋಡುಗರನ್ನು ಭಾವುಕರನ್ನಾಗಿ ಮಾಡಿದೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ತನ್ನ ತಾಯಿ ಎಂದರೆ ತುಂಬಾ ಇಷ್ಟವಿರುವ ರೋಹಿತ್ ತನ್ನ ತಾಯಿಯ ಕಣ್ಣಲ್ಲಿ ಸಂತೋಷವನ್ನು ನೋಡಲು, ಸ್ಕೋಡಾ ರ್‍ಯಾಪಿಡ್ ಎಕ್ಸ್ ಎಡಿಷನ್ ಕಾರನ್ನು ಖರೀದಿಸಿದ್ದು, ಖರೀದಿಸಿದ ನಂತರ ಮನೆಯ ಹೊರಗೆ ತಂದು ಇರಿಸಿದ್ದ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ತಂದಿದ್ದ ಹೊಸ ಕಾರಿನ ವಿಷಯವನ್ನು ರೋಹಿತ್ ತನ್ನ ತಂದೆಗೆ ಮಾತ್ರ ಹೇಳಿದ್ದು, ತಾಯಿಗೆ ಸರ್ಫೈಸ್‌ ಆಗಿ ನೀಡಲು ರೋಹಿತ್ ಮತ್ತು ಆತನ ಸ್ನೇಹಿತರು ತೀರ್ಮಾನಿಸಿದ್ದರು. ಮನೆ ಒಳಗಿಂದ ತನ್ನ ತಾಯಿಯನ್ನು ನಿನಗೇನೊ ತೋರಿಸಬೇಕು ಎಂದು ತಾಯಿಯ ಕಣ್ಣುಮುಚ್ಚಿಸಿ ಮನೆ ಹೊರಗೆ ಕರೆದುಕೊಂಡು ಬರುತ್ತಾನೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಕವರ್ ಮಾಡಲಾಗಿದ್ದ ಸ್ಕೋಡಾ ಕಾರಿನ ಮತ್ತು ಈ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಜನ ಕಾತುರದಿಂದ ನೋಡುತ್ತಿದ್ದರು. ಕೊನೆಗೂ ರೋಹಿತ್ ತನ್ನ ತಾಯಿಯನ್ನು ಹೊಸ ಕಾರಿನ ಮುಂದೆ ತಂದು ನಿಲ್ಲಿಸಿ ಸರ್ಫೈಸ್‌ ನೀಡಿದ್ದಾನೆ.

ಮಗನು ನೀಡಿದ ಆ ಸರ್ಫೈಸ್‌ ಅನ್ನು ಕಂಡ ತಕ್ಷಣ ಆ ತಾಯಿಯ ಮುಖದಲ್ಲಿ ಬಂದ ನಗೆಯು ವರ್ಣಾತೀತವಾದದ್ದು. ಕಾರನ್ನು ಕಂಡ ತಕ್ಷಣವೇ ಮಗನನ್ನು ತಬ್ಬಿಕೊಂಡು ತನ್ನ ಖುಷಿಯನ್ನು ವ್ಯಕ್ತಪಡಿಸಿದ ನಂತರ ತಾಯಿಯ ಬಾಯಲ್ಲಿ ಮಾತುಗಳೇ ಇಲ್ಲವಾಗಿತ್ತು.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ತಾಯಿಯ ಮುಖದಲ್ಲಿನ ನಗುವನ್ನು ನೋಡುತ್ತಾ ರೋಹಿತ್ ಕಾರಿನ ಕೀಲಿಯನ್ನು ತಾಯಿಯ ಕೈಗೆ ನೀಡಿ, ಕಾರಿನ ಒಳಗಡೆ ಕೂರಿಸಲು ಮುಂದಾದ. ತಂದೆಯು ಕೂಡಾ ಪ್ಯಾಸ್ಸೆಂಜರ್ ಸೀಟ್‍‍ನಲ್ಲಿ ಕೂರಿಸಿ ಹೊರಗಡೆಯಿಂದಲೇ ಇಬ್ಬರ ಸಂತೋಷವನ್ನು ಕಾಣುತ್ತಿದ್ದ ಮಗ.

MOST READ: ಅಚ್ಛೇ ದಿನ್ ಬಂತು - ನೀವು ಊಹಿಸಲಾಗದಷ್ಟು ಕಡಿಮೆಯಾಗಲಿವೆ ಇಂಧನ ಬೆಲೆಗಳು..

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಹೊಸ ಕಾರನ್ನು ಖರೀದಿಸಿದ ನಂತರ ತನ್ನ ತಾಯಿಗೆ ಈ ರೀತಿಯಲ್ಲಿ ಸರ್ಫೈಸ್‌ ನೀಡಲು ಸಹಕರಿಸಿದ ತನ್ನ ಸ್ನೇಹಿತರನ್ನು ಮತ್ತು ಡೀಲರ್‍‍ನನ್ನು ರೋಹಿತ್ ಬಿಗಿಯಾದ ಅಪ್ಪುಗೆಯನ್ನು ನೀಡಿ ಕೃತಜ್ಞತೆಯಾಚಿಸಿದ್ದಾನೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಇನ್ನು ಸ್ಕೋಡಾ ರ್‍ಯಾಪಿಡ್ ಎಕ್ಸ್ ಕಾರಿನ ಬಗ್ಗೆ ಹೇಳುವುದಾದರೇ, ಈ ಕಾರು 2017ರ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದು, ಆಕರ್ಷಕ ವಿನ್ಯಾಸ ಮತ್ತು ನವೀಕರಿಸಲಾದ ವೈಶಿಷ್ಟ್ಯತೆಗಳನ್ನು ಈ ಕಾರು ಪಡೆದುಕೊಂಡಿದೆ. ಹಾಗಾದರೆ ವಿಡಿಯೋನಲ್ಲಿ ಕ್ಯಾಂಡಿ ವೈಟ್ ಮತ್ತು ಬ್ಲಾಕ್ ರೂಫ್ ಹೊಂದಿರುವ ಸ್ಕೋಡಾ ರ್‍ಯಾಪಿಡ್ ಎಕ್ಸ್ ಎಡಿಷನ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಸ್ಕೋಡಾ ರ್‍ಯಾಪಿಡ್ ಎಕ್ಸ್ ಕಾರಿನ ಮುಂಭಾಗದಲ್ಲಿ ಕಪ್ಪು ಬಣ್ಣದಿಂದ ಸಜ್ಜುಗೊಂಡ ಫ್ರಂಟ್ ಗ್ರಿಲ್, ಒಆರ್‍‍ವಿಎಂ ಮತ್ತು ಕಪ್ಪು ಡಿಫ್ಹ್ಯೂಸರ್ ಅನ್ನು ಪಡುದುಕೊಂಡಿದೆ. ಇದಲ್ಲದೇ ಈ ಕಾರು ಸ್ಮೋಕ್ಡ್ ಹೆಡ್‍‍ಲ್ಯಾಂಪ್ಸ್ ಮತ್ತು ಆಕರ್ಷಕ ಟೈಲ್‍ಲೈಟ್ ಅನ್ನು ಸಹ ಪಡೆದುಕೊಂಡಿದೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಸ್ಕೋಡಾ ರ್‍ಯಾಪಿಡ್ ಕಾರಿನ ಒಳಭಾಗದಲ್ಲಿ ಹೊಸ ಸ್ಪೋರ್ಟಿ 3 ಸ್ಪೋಕ್ ಫ್ಲ್ಯಾಟ್ ಬಾಟಮ್ಡ್ ಸ್ಟೀರಿಂಗ್ ವ್ಹೀಲ್ ಅನ್ನು ಕಪ್ಪು ಬಣ್ಣದ ಲೆಧರ್‍‍ನಿಂದ ಸಜ್ಜುಗೊಳಿಸಲಾಗಿದ್ದು, ಅದರ ಮೇಲೆ ಜೊತೆಗೆ ಕೆಂಪು ಬಣ್ಣದ ಹೊಲಿಗೆಯನ್ನು ನೀಡಲಾಗಿದೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಕಾರಿನ ಒಳಭಾಗದಲ್ಲಿ ಕಂದು ಬಣ್ಣದಲ್ಲಿನ ಗೇರ್‍‍ಸ್ಟಿಕ್ ಮತ್ತು ಡ್ಯಾಶ್‍‍ಬೋರ್ಡ್‍‍ನ ಮೇಲೆ ಅಳವಡಿಸಲಾಗಿದ್ದು, ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್‍‍ಗಳನ್ನು ಕಪ್ಪು ಮತ್ತು ಗ್ರೇ ಪಟ್ತಿಗಳಿಂದ ಸಜ್ಜುಗೊಳಿಸಲಾಗಿದೆ. ಅಲ್ಲದೇ ಸ್ಪೋರ್ತಿ ಲುಕ್ ಅನ್ನು ನೀಡಲು ಸ್ಟೈನ್‍‍ಲೆಸ್ ಸ್ಟೀಲ್ ಪೆಡಲ್, ಸ್ಪೋರ್ತಿ ಗ್ರಾಫಿಕ್ಸ್ ಮತ್ತು ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ನೀಡಲಾಗಿದೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಎಂಜಿನ್ ಸಾಮರ್ಥ್ಯ

ಸ್ಕೋಡಾ ರ್‍ಯಾಪಿಡ್ ಎಡಿಷನ್ ಎಕ್ಸ್ ಕಾರು 1.6 ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, 1.6 ಲೀಟರ್ ಪೆಟ್ರೋಲ್ ಏಂಜಿನ್ 104 ಬಿಹೆಚ್‍ಪಿ ಮತ್ತ್ 153ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಏಝ್ಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಡಿಎಸ್‍ಜಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಇನ್ನು ಸ್ಕೋಡಾ ರ್‍ಯಾಪಿಡ್ ಎಡಿಷನ್ ಎಕ್ಸ್ ಕಾರಿನ 1.5 ಲೀಟರ್ ಡೀಸೆಲ್ ಎಂಜಿನ್ 109ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 7 ಸ್ಪೀಡ್ ಡಿಎಸ್‍ಜಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಪ್ರಯಾಣಿಕರ ಸುರಕ್ಷತೆಗಾಗಿ ಸ್ಕೋಡಾ ರ್‍ಯಾಪಿಡ್ ಎಡಿಷನ್ ಎಕ್ಸ್ ಕಾರಿನಲ್ಲಿ ಡ್ಯುಯಲ್ ಏರ್‍‍ಬ್ಯಾಗ್‍ಗಳು, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಸೆಂಟ್ರಲ್ ಲಾಕಿಂಗ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸ್ಸಿಸ್ಟ್ ಮತ್ತು ಇನ್ನಿತರೆ ಸುರಕ್ಷತಾ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 10.99 ಲಕ್ಷದ ಪ್ರಾರಂಭಿಕ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದೆ.

Video Courtesy: Rohit Talloju

Most Read Articles

Kannada
English summary
Son gifts mum a Skoda Rapid Edition X, happiness all around.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more