ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

Written By:

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿನಯಿಸುತ್ತಿರುವ ಮುಂದಿನ ಚಿತ್ರ 'ಕಬಾಲಿ' ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಪಾ ರಂಜಿತ್ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಅಪ್ಟೆ ನಾಯಕಿಯಾಗಿರಲಿದ್ದಾರೆ.

Also Read: 7 ನಿಮಿಷಗಳಲ್ಲಿ 5 ಕೋಟಿ ಸಂಪಾದಿಸಿದ ಜೇಮ್ಸ್ ಬಾಂಡ್

64ರ ಇಳಿ ವಯಸ್ಸಿನಲ್ಲೂ ಆತ್ಮವಿಶ್ವಾಸ ಕಿಂಚಿತ್ತು ಕಡಿಮೆಯಾಗದಂತೆ ನೋಡಿಕೊಂಡು ತಮಿಳು ಗ್ಯಾಂಗ್ ಸ್ಟಾರ್ ಥ್ರಿಲ್ಲರ್ ಚಿತ್ರದಲ್ಲಿ ರಜನಿ ನಟಿಸುತ್ತಿರುವುದು ಶ್ಲಾಘನೀಯ ಸಂಗತಿ. ಈ ನಡುವೆ ಈ ಸಂಬಂಧ ವಿಶೇಷ ಸ್ಟೋರಿಯೊಂದು ಹೊರಬಿದ್ದಿದೆ. ಅದೇನಂತೀರಾ? ಹೆಚ್ಚಿನ ಮಾಹಿತಿಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ನಿಮಗೆಲ್ಲರಿಗೂ ಹಾಲಿವುಡ್‌ನ ಹೆಸರಾಂತ ಜೇಮ್ಸ್ ಬಾಂಡ್ ಚಿತ್ರಗಳ ಬಗ್ಗೆ ತಿಳಿದೇ ಇದೆ. ಇದರಲ್ಲಿ ಪ್ರಖ್ಯಾತ ಆಸ್ಟನ್ ಮಾರ್ಟಿನ್ ಕಾರುಗಳನ್ನು ಬಳಕೆ ಮಾಡಲಾಗಿದೆ. ಹೀಗೆ ಜೇಮ್ಸ್ ಬಾಂಡ್ ಮತ್ತು ಆಸ್ಟನ್ ಮಾರ್ಟಿನ್ ನಡುವಣ ನಂಟು ಅಮರವಾಗಿದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಈಗ ಬಂದಿರುವ ಮಾಹಿತಿಗಳ ಪ್ರಕಾರ ಜೇಮ್ಸ್ ಬಾಂಡ್ ಚಿತ್ರದಲ್ಲಿ ಉಪಯೋಗಿಸಲಾಗಿರುವ ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನು ಮುಂಬರುವ ಕಬಾಲಿ ಚಿತ್ರದಲ್ಲೂ ರಜನಿಕಾಂತ್ ಬಳಕೆ ಮಾಡಲಿದ್ದಾರಂತೆ!

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಈ ಸಂಬಂಧ ಆಕರ್ಷಕ ಪೋಸ್ಟರ್ ವೊಂದು ಬಿಡುಗಡೆಯಾಗಿದೆ. ಆದರೆ ಈ ಸಂಬಂಧ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಜಗತ್ತಿನ ಅತಿ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನು 1964ರಲ್ಲಿ ಬಿಡುಗಡೆಯಾದ ಜೇಮ್ಸ್ ಬಾಂಡ್ ಚಿತ್ರ ಸರಣಿಯ ಮೂರನೇ ಚಿತ್ರ 'ಗೋಲ್ಡ್ ಫಿಂಗರ್' ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿತ್ತು.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಬಲ್ಲ ಮೂಲಗಳ ಪ್ರಕಾರ, ರಜನಿ ಮೇಲಿನ ಅತೀವ ಪ್ರೀತಿಯನ್ನು ತೋರ್ಪಡಿಸಿರುವ ಅಭಿಮಾನಿಗಳು ಕಬಾಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಇಲ್ಲಿ ಆಸ್ಟನ್ ಮಾರ್ಟಿನ್ ಪೋಸ್ಟರ್ ಜಾಗದಲ್ಲಿ ರಜನಿ ಅವರನ್ನು ಕುಳ್ಳಿರಿಸಲಾಗಿದೆ. ಇದು ಅಭಿಮಾನಿಗಳಲ್ಲಿ ಚಿತ್ರದ ಮೇಲಿರುವ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಆಸ್ಟನ್ ಮಾರ್ಟಿನ್ ಡಿಬಿ5 ಕಾರಿನ ಬದಿಯಲ್ಲಿ ಸೂಟು ಬೂಟು ಧರಿಸಿಕೊಂಡಿರುವ ಗಡ್ಡಧಾರಿ ರಜನಿಕಾಂತ್ ಕೈಯಲ್ಲೊಂದು ಗನ್ ಹಿಡಿದುಕೊಂಡಿರುವ ಲುಕ್ ಎಲ್ಲರ ಆಕರ್ಷಣೆಗೆ ಪಾತ್ರವಾಗಿದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

1963ರಿಂದ 1966ನೇ ಅವಧಿಯಲ್ಲಿ ನಿರ್ಮಾಣವಾಗಿರುವ ಆಸ್ಟನ್ ಮಾರ್ಟಿನ್ ಡಿಬಿ5, 6 ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 285.9 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಪ್ರಸ್ತುತ ಆಸ್ಟನ್ ಮಾರ್ಟಿನ್ ಡಿಬಿ5 ಕಾರು 7.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಹಾಗೂ ಗಂಟೆಗೆ ಗರಿಷ್ಠ 240 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಇದುವರೆಗೆ 1,100ರಷ್ಟು ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನುನಿರ್ಮಿಸಲಾಗಿದೆ. ಮೊದಲ ಬಾರಿಗೆ ಬಿಡುಗಡೆಯಾದಾಗ ಇದು ಸರಿ ಸುಮಾರು ನಾಲ್ಕು ಲಕ್ಷ ರು.ಗಳಷ್ಟು ದುಬಾರಿಯೆನಿಸಿತ್ತು. ಈಗ ಇದರ ಮೌಲ್ಯ 6 ಕೋಟಿ ರುಪಾಯಿಗಿಂತಲೂ ದುಬಾರಿಯೆನಿಸಿದೆ.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಅಷ್ಟೇ ಯಾಕೆ ಗೋಲ್ಡ್ ಫಿಂಗರ್ ನಲ್ಲಿ ಬಳಕೆಯಾದ ಆಸ್ಟನ್ ಮಾರ್ಟಿನ್ ಡಿಬಿ5 ಕಾರು 2010ರಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 28 ಕೋಟಿ ರುಪಾಯಿಗಳಿಗೆ ಹರಾಜುಗೊಂಡಿತ್ತು.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಇನ್ನು 2012ರಲ್ಲಿ ಬಿಡುಗಡೆಯಾದ ಜೇಮ್ಸ್ ಬಾಂಡ್ ಸ್ಕೈಫಾಲ್ ಚಿತ್ರದಲ್ಲೂ ಎರಡು ಆಸ್ಟನ್ ಮಾರ್ಟಿನ್ ಡಿಬಿ5 ಕಾರುಗಳನ್ನು ಬಳಕೆ ಮಾಡಲಾಗಿತ್ತು.

ಸೂಪರ್ ಸ್ಟಾರ್ ರಜನಿ ಮತ್ತು ಕಬಾಲಿ-ಆಸ್ಟನ್ ಮಾರ್ಟಿನ್ ಸ್ಟೋರಿ!

ಒಟ್ಟಿನಲ್ಲಿ ತಮ್ಮ 159ನೇ ಚಿತ್ರದಲ್ಲಿ ಚೆನ್ನೈನ ನೈಜ ಮಾಫಿಯಾ ಜಗತ್ತಿನ ಕಬಲೀಶ್ವರನ್ ಎಂಬ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಅಭಿನಯಿಸುತ್ತಿರುವ ರಜನಿಕಾಂತ್ ಅವರು ಆಸ್ಟನ್ ಮಾರ್ಟಿನ್ ಡಿಬಿ5 ಕಾರನ್ನು ಬಳಕೆ ಮಾಡಲಿದ್ದಾರೆಯೇ ಎಂಬುದು ಇನ್ನು ಕುತೂಹಲವೆನಿಸಿದೆ.

ಇವನ್ನೂ ಓದಿ
English summary
Superstar Rajinikanth posing with Aston Martin DB5 Kabali full details
Story first published: Tuesday, March 1, 2016, 9:47 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark