ಸಾವಿನ ಕೂಪಕ್ಕೆ ತಳ್ಳುವ ವಿಶ್ವದ 10 ಭೀಕರ ರಸ್ತೆಗಳು

By Nagaraja

ಮಾನವ ಅಂದ ಮೇಲೆ ಪ್ರಾಣ ಭಯ ಇದ್ದೇ ಇರುತ್ತದೆ. ಆದರೂ ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲವಿರುವ ಅವರು ಛಲ ಬಿಡದೇ ಎಷ್ಟೇ ಕಠಿಣ ಹಾದಿಯಲ್ಲೂ ಬೇಕಾದರೂ ತಮ್ಮ ಗುರಿ ಮುಟ್ಟುವತ್ತ ಮಗ್ನವಾಗಿರುತ್ತಾರೆ.

Also Read: 'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಇರುವುದು ಒಂದೇ ಜೀವನ. ಈ ಪುಟ್ಟ ಅವಧಿಯಲ್ಲಿ ವಿಶ್ವವನ್ನು ಸುತ್ತುವ ಅವಕಾಶ ಎಲ್ಲರಿಗೂ ಸಿಗಲಾರದು. ಭೂಮಿಯ ನೈಸರ್ಗಿಕ ರಚನೆಗೆ ಹೊಂದಿಕೊಂಡು ಮಾನವ ತನ್ನ ಕಾರ್ಯ ಸಾಧನೆಗಾಗಿ ರಸ್ತೆಗಳನ್ನು ನಿರ್ಮಿಸುತ್ತಾನೆ. ಕೆಲವೊಂದು ಬಾರಿ ಇದು ಅಪಾಯವನ್ನು ಆಹ್ವಾನಿಸುತ್ತದೆ. ಪ್ರಸ್ತುತ ಲೇಖನದಲ್ಲಿ ವಿಶ್ವದ 10 ಅತಿ ಅಪಾಯಕಾರಿ ರಸ್ತೆಗಳು ಮತ್ತು ಇವುಗಳು ಯಾಕೆ ಅಪಾಯಕಾರಿ ಎನಿಸಿಕೊಂಡಿವೆ ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ.

01. ಪಸ್ಸಾಜ್ ಡಿ ಗ್ವಾ - ಫ್ರಾನ್ಸ್ (Passage De Gois)

01. ಪಸ್ಸಾಜ್ ಡಿ ಗ್ವಾ - ಫ್ರಾನ್ಸ್ (Passage De Gois)

ಫ್ರಾನ್ಸ್ ಅಂಟ್ಲಾಟಿಕ್ ತೀರದಲ್ಲಿರುವ ಈ 4.3 ಕೀ.ಮೀ. ಉದ್ದದ ರಸ್ತೆಯು ಫ್ರಾನ್ಸ್ ಮೈನ್ ಲ್ಯಾಂಡ್ ನಿಂದ ನೊರ್ ಮೌಂಟಿಯರ್ ದ್ವೀಪವನ್ನು ಸಂಪರ್ಕಿಸುತ್ತದೆ. ಮೊದಲ ನೋಟದಲ್ಲಿ ಇದು ಅಷ್ಟು ಕೆಟ್ಟ ರಸ್ತೆಯಲ್ಲವೆಂಬ ಭಾವನೆ ನಿಮ್ಮಲ್ಲುಂಟು ಮಾಡಬಹುದು. ಆದರೆ ಕೆಲವೇ ಹೊತ್ತಿನಲ್ಲಿ ನಿಮ್ಮ ಅಭಿಪ್ರಾಯ ಬದಲಾಗಲಿದ್ದು, ದೈತ್ಯಕಾರಾದ ಅಲೆಗಳು ಅಬ್ಬರಿಸಲಿದೆ. ಕ್ಷಣಾರ್ಧದಲ್ಲಿ ಸಂಪೂರ್ಣ ರಸ್ತೆಯು ಮಾಯವಾಗಲಿದೆ. ದಿನವೊಂದರಲ್ಲಿ ಎರಡು ಬಾರಿ ಇದು ನೀರಿನಿಂದ ಆವೃತ್ತವಾಗಿರಲಿದ್ದು, ಈ ವೇಳೆ ಸಂಚರಿಸುವ ವಾಹನಗಳು ಸ್ವಲ್ಪವೂ ಎಡವಟ್ಟು ನಡೆಸಿದರೆ ನೇರವಾಗಿ ನೀರಿನೊಳಗೆ ಸೇರಲಿದೆ. ಇಲ್ಲಿನ ಮಂಜುಗಡ್ಡೆಯಂತಹ ನಯವಾದ ರಸ್ತೆಯಲ್ಲಿ ಚಲಿಸುವುದು ಸವಾಲಿನ ವಿಷಯವಾಗಿರಲಿದೆ.

02. ಪ್ಯಾಟಿಯೊಪಾಲೊ-ಪೆರ್ಡಿಕಾಕಿ ರೋಡ್ -ಗ್ರೀಸ್ (Patiopoulo-Perdikaki Road)

02. ಪ್ಯಾಟಿಯೊಪಾಲೊ-ಪೆರ್ಡಿಕಾಕಿ ರೋಡ್ -ಗ್ರೀಸ್ (Patiopoulo-Perdikaki Road)

ಸರಿ ಸುಮಾರು 23.5 ಕೀ.ಮೀ. ಉದ್ದಕ್ಕೂ ಹೆಚ್ಚು ದೂರ ಹರಡಿರುವ ಈ ಪರ್ವತ ರಸ್ತೆಯು ಗ್ರೀಕ್ ನಲ್ಲಿ ಸಮುದ್ರ ಮಟ್ಟಕ್ಕಿಂತಲೂ 500 ಮೀಟರ್ ಮೇಲ್ಮೆಯಲ್ಲಿ ಸ್ಥಿತಗೊಂಡಿದೆ. ಆರಂಭದಲ್ಲಿ ಈ ಬಗ್ಗೆ ಕೇಳಿದಾಗ ಸಮಸ್ಯೆಯಲ್ಲ ಎಂದೆನಿಸಿದರೂ ಇಲ್ಲಿರುವ ದೊಡ್ಡದಾದ ಗುಂಡಿಗಳು ಮತ್ತು ಕಡಿದಾದ ತಿರುವುಗಳು ಸಮಸ್ಯೆಯನ್ನು ಸೃಷ್ಟಿ ಮಾಡಲಿದೆ. ಈ ಹಾದಿಯಾಗಿ ಟ್ರಕ್ ಗಳಂತಹ ಘನ ವಾಹನಗಳು ಸಂಚರಿಸುವುದರಿಂದ ನಿಮ್ಮ ಪಯಣ ಮತ್ತಷ್ಟು ದುಸ್ತರವಾಗಲಿದೆ. ಇನ್ನು ರಾತ್ರಿ ಸವಾರಿಯಂತೂ ಅಪಾಯ ಕಟ್ಟಿಟ್ಟ ಬುತ್ತಿ.

03. ಲಕ್ಸರ್ ಆಲ್ ಹರ್ಗಾಡಾ ರೋಡ್ - ಈಜಿಪ್ಟ್ (Luxor-Al-Hurghada Road)

03. ಲಕ್ಸರ್ ಆಲ್ ಹರ್ಗಾಡಾ ರೋಡ್ - ಈಜಿಪ್ಟ್ (Luxor-Al-Hurghada Road)

ಪ್ರಾಚೀನ ಲಕ್ಸರ್ ಮತ್ತು ಹರ್ಗಾಡಾದ ರೆಡ್ ಸೀ ರೆಸಾರ್ಟ್ ನಗರದಲ್ಲಿರುವ ಈ ಅಪಾಯಕಾರಿ ರಸ್ತೆಯಿಂದ ದೂರವುಳಿಯುವುದೇ ಒಳಿತು. ಯಾಕೆಂದರೆ ಈ ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆ ಉಗ್ರರು ಮತ್ತು ಕಳ್ಳರ ದಾಳಿ ಎದುರಾಗುವ ಭೀತಿಯೂ ಇರುತ್ತದೆ. ಇನ್ನು ಕಡಿಮೆ ಪ್ರಕಾಶಮಾನ ಹೆಡ್ ಲೈಟ್ ನಿಂದಲೂ ಹಲವಾರು ಅಪಘಾತ ಘಟಿಸುತ್ತಲೇ ಇದೆ.

 04. ಟರೊಕೊ ಜಾರ್ಜ್ ರೋಡ್ - ತೈವಾನ್ (Taroko Gorge Road)

04. ಟರೊಕೊ ಜಾರ್ಜ್ ರೋಡ್ - ತೈವಾನ್ (Taroko Gorge Road)

ಹೆದ್ದಾರಿ 08ರ ಭಾಗವಾಗಿರುವ ಟರೊಕೊ ಜಾರ್ಜ್ ರೋಡ್, ತೈವಾನ್‌ನ ಅತಿ ಭೀಕರ ರಸ್ತೆಗಳಲ್ಲಿ ಒಂದಾಗಿದೆ. ಇಲ್ಲಿ ಭೂಕಂಪ ಮತ್ತು ಮಣ್ಣು ಜರಿತದ ನೈಸರ್ಗಿಕ ವಿಕೋಪಗಳು ಪದೇ ಪದೇ ನಡೆಯುತ್ತಲೇ ಇರುತ್ತದೆ. ಇಲ್ಲಿನ ಕಿರಿದಾದ ರಸ್ತೆಯು ಕಡಿದಾದ ತಿರುವುಗಳನ್ನು ಪಡೆದಿರುವುದು ಅಪಾಯವನ್ನು ಮತ್ತಷ್ಟು ಆಹ್ವಾನಿಸುತ್ತಿದೆ.

05. ಸ್ಕಿಪರ್ಸ್ ಕ್ಯಾನ್ಯಾನ್ ರೋಡ್ - ನ್ಯೂಜಿಲೆಂಡ್ (Skippers Canyon Road)

05. ಸ್ಕಿಪರ್ಸ್ ಕ್ಯಾನ್ಯಾನ್ ರೋಡ್ - ನ್ಯೂಜಿಲೆಂಡ್ (Skippers Canyon Road)

ಒಂದು ಅಪಾಯಕಾರಿ ರಸ್ತೆಗೆ ಹೊಂದಿರುಬೇಕಾದ ಎಲ್ಲ ಕೆಟ್ಟ ಗುಣಗಳನ್ನು ದಕ್ಷಿಣ ನ್ಯೂಜಿಲೆಂಡ್ ನಲ್ಲಿರುವ ಸ್ಥಿತಗೊಂಡಿರುವ ಸ್ಕಿಪರ್ಸ್ ಕ್ಯಾನ್ಯಾನ್ ರೋಡ್ ಹೊಂದಿದೆ. ಪರ್ವತ ಗುಡ್ಡಗಳಿಂದ ಸುತ್ತುವರಿದ ಪ್ರದೇಶ, ಕಡಿದಾದ ತಿರುವು ಮುಂತಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿನ ಕಿರಿದಾದ ರಸ್ತೆಯಲ್ಲಿ ಎರಡು ವಾಹನಗಳು ಮುಖಾಮುಖಿಯಾದಾಗ ಅವಘಡ ಸಾಧ್ಯತೆ ಮತ್ತಷ್ಟು ಹೆಚ್ಚುತ್ತದೆ.

06. ಹಲ್ಸೆಮಾ ಹೈವೇ - ಪಿಲಿಫೈನ್ಸ್ (Halsema Highway)

06. ಹಲ್ಸೆಮಾ ಹೈವೇ - ಪಿಲಿಫೈನ್ಸ್ (Halsema Highway)

ಸಮುದ್ರ ಮಟ್ಟಕ್ಕಿಂತ 200 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಇಲ್ಲಿನ ಹಲ್ಸೆಮಾ ಹೈವೇ ಬೇಸಿಗೆ ಕಾಲದಲ್ಲಿ ಸುರಕ್ಷಿತ ಎನಿಸಿದರೂ ಮಳೆಗಾಲದಲ್ಲಿ ಅತಿ ಹೆಚ್ಚಿನ ತೊಂದರೆ ಎದುರಾಗಲಿದೆ. ಗುಡ್ಡ ಕುಸಿತ, ಮಣ್ಣು ಜರಿತದಿಂದಾಗಿ ರಸ್ತೆಗಳೇ ಮಾಯಾವಾಗಲಿದೆ. ಹಾಗಾಗಿ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಸುರಕ್ಷಿತವಾಗಿ ಹಿಂತಿರುಗಲಿದ್ದಾರೆ ಎಂಬುದರಲ್ಲಿ ಯಾವ ಗ್ಯಾರಂಟಿಯೂ ಇಲ್ಲ. ಅಂಕಿಅಂಶಗಳ ಪ್ರಕಾರ ವರ್ಷಂಪ್ರತಿ ಇಲ್ಲಿನ ರಸ್ತೆಗಳಲ್ಲಿ ಅತಿ ಹೆಚ್ಚು ಅವಘಡಗಳು ಸಂಭವಿಸುತ್ತದೆ.

07. ಟಿಯಾನ್ಮೆನ್ ಮೌಂಟೆನ್ ರೋಡ್ - ಟೀನಾ (Tianmen Mountain Road)

07. ಟಿಯಾನ್ಮೆನ್ ಮೌಂಟೆನ್ ರೋಡ್ - ಟೀನಾ (Tianmen Mountain Road)

ಸಮುದ್ರ ಮಟ್ಟಕ್ಕಿಂತ 1100 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಟಿಯಾನ್ಮೆನ್ ಮೌಂಟೆನ್ ರೋಡ್ 11 ಕೀ.ಮೀ. ದೂರದ ವರೆಗೆ ಹರಡಿದೆ. ಇಲ್ಲಿ 99ರಷ್ಟು ಅತ್ಯಂತ ಕಡಿದಾದ ಹೆರ್ ಪಿನ್ ತಿರುವುಗಳಿದ್ದು, ಸವಾರರನ್ನು ಸಾವಿನ ಕೂಪಕ್ಕೆ ತಳ್ಳಲಿದೆ. ಇದೇ ಕಾರಣಕ್ಕಾಗಿ ಮುಂಭಾಗದಿಂದ ಬರುವ ವಾಹನಗಳು ಕಣ್ಣಿಗೆ ಕಾಣಸಿಗುವುದಿಲ್ಲ. ಅಲ್ಲದೆ ವೇಗವಾಗಿ ಚಲಿಸಿದ್ದಲ್ಲಿ ಸುಲಭವಾಗಿ ಅವಘಡಕ್ಕೆ ಸಿಲುಕುತ್ತದೆ.

08. ಐರ್ ಹೈವೇ, ಆಸ್ಟ್ರೇಲಿಯಾ (Eyre Highway)

08. ಐರ್ ಹೈವೇ, ಆಸ್ಟ್ರೇಲಿಯಾ (Eyre Highway)

ನೋಡುವಾಗ ನೇರ ರೇಖೆಯಂತಿರುವ ಈ ಪ್ರೇಕ್ಷಕ ರಮಣೀಯ ಐರ್ ಹೈವೇಯು ಆಸ್ಟ್ರೇಲಿಯಾದಲ್ಲಿ ಸ್ಥಿತಗೊಂಡಿದೆ. ದಟ್ಟಾರಣ್ಯದ ನಡುವೆ ಹಾದು ಹೋಗುವ 684 ಮೈಲು ಉದ್ದದ ಈ ರಸ್ತೆಯು ನಿಮ್ಮಲ್ಲಿ ನಿರಾಸೆ ತರಿಸಬಹುದು. ಇದೇ ಕಾರಣಕ್ಕಾಗಿ ನಿಮ್ಮ ಏಕಾಗ್ರತೆಗೆ ಭಂಗವುಂಟಾದಾಗ ರಸ್ತೆ ಮಧ್ಯೆ ಪದೇ ಪದೇ ಕಾಂಗರೂಗಳಂತಹ ವನ್ಯಜೀವಿಗಳ ಆಕ್ರಮಣವಾಗಲಿದೆ. ಇದೇ ಕಾರಣಕ್ಕಾಗಿ 'ಪ್ರಾಣಿಹತ್ಯೆ ಕಣಿವೆ' ಎಂಬ ಅಡ್ಡ ಹೆಸರನ್ನು ಈ ರಸ್ತೆ ಪಡೆದಿದೆ.

09. ಕಾರಕೋರಂ ಹೈವೇ, ಚೀನಾದಿಂದ ಪಾಕಿಸ್ತಾನ(Karakoram Highway)

09. ಕಾರಕೋರಂ ಹೈವೇ, ಚೀನಾದಿಂದ ಪಾಕಿಸ್ತಾನ(Karakoram Highway)

ಪಾಕಿಸ್ತಾನ ಸರಕಾರವು ಇದಕ್ಕೆ "ಸ್ನೇಹ ಹೆದ್ದಾರಿ" ಎಂಬ ಹೆಸರಿಟ್ಟರೂ ವಿಪರ್ಯಾಸವೆಂದರೆ ಇಲ್ಲಿ ವಾಹನ ಚಲಿಸುವ ಚಾಲಕ ಅಥವಾ ಪ್ರಯಾಣಿಕರಿಗೇ ಆಗಲಿ ಯಾವುದೇ ಪ್ರೀತಿಯ ವಾತಾವರಣ ಸೃಷ್ಟಿಯಾಗುವುದಿಲ್ಲ. ಸಮುದ್ರ ಮಟ್ಟಕ್ಕಿಂತಲೂ 4,800 ಮೀಟರ್ ಎತ್ತರದಲ್ಲಿರುವ ಕಾರಕೋರಂ ಪರ್ವತ ಹೈವೇ ಖುಂಜಾರಾಬ್ ಪಾಸ್ (Khunjerab) ಹಾದಿಯಾಗಿ ಚೀನಾವನ್ನು ಸಂಪರ್ಕಿಸುತ್ತದೆ. ಇಲ್ಲಿನ ನೈಸರ್ಗಿತವಾಗಿ ಎದುರಾಗುವ ದಟ್ಟವಾದ ಮಂಜು ಹಾಗೂ ಅನಿರೀಕ್ಷಿತ ಪ್ರವಾಹಗಳು ಹೆಚ್ಚು ಅಪಾಯವನ್ನು ಸೃಷ್ಟಿಮಾಡುತ್ತದೆ. ಇನ್ನು ಉಗ್ರರ ದಾಳಿಯನ್ನು ಅಲ್ಲಗಳೆಯುವಂತಿಲ್ಲ. ಸಮುದ್ರ ಮಟ್ಟಕ್ಕಿಂತ ತುಂಬಾ ಎತ್ತರದಲ್ಲಿರುವುದರಿಂದ ಪ್ರಯಾಣಿಕರಿಗೆ ಉಸಿರಾಟದ ತೊಂದರೆಯೂ ಎದುರಾಗುತ್ತದೆ.

10. ಜೋಝಿಲಾ ರಸ್ತೆ - ಭಾರತ (Zoji La Pass)

10. ಜೋಝಿಲಾ ರಸ್ತೆ - ಭಾರತ (Zoji La Pass)

ನೈಸರ್ಗಿಕ ಸುಂದರ ನಾಡು ಕಾಶ್ಮೀರದಲ್ಲಿ ಹಾದು ಹೋಗುತ್ತಿರುವ ಜೋಝಿಲಾ ರಸ್ತೆ ರಾಷ್ಟ್ರೀಯ ಹೆದ್ದಾರಿ 1ಡಿ ಶ್ರೀನಗರ ಹಾಗೂ ಲೆಹ್ ನಡುವೆ ಸ್ಥಿತಗೊಂಡಿದೆ. ಇಲ್ಲಿ ಪ್ರವಾಸಿಗರು ಪಶ್ಚಿಮ ಹಿಮಾಲಯ ಪ್ರದೇಶದ ರಸದೌತಣ ಸವಿಯಬಹುದಾಗಿದೆ. ಇದು ಸಮುದ್ರ ಮಟ್ಟಕ್ಕಿಂದ 11,575 ಅಡಿ (3,528 ಮೀಟರ್) ಎತ್ತರದಲ್ಲಿದೆ. ಆದರೆ ಇಲ್ಲಿ ಬೀಸುವ ಬಲವಾದ ಗಾಳಿ ಹಾಗೂ ಹಿಮಪಾತವೂ ಎಂತವರನ್ನು ನಡುಗಿಸಲಿದೆ.

ಇವನ್ನೂ ಓದಿ

ಭಾರತದ ಅತ್ಯಂತ ಅಪಾಯಕಾರಿ 15 ರಸ್ತೆಗಳು

Most Read Articles

Kannada
Read more on ಟಾಪ್ 10 top 10
English summary
Ten Roads You Would Never Want to Drive On
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X