Just In
- 40 min ago
ಆಕರ್ಷಕ ವಿನ್ಯಾಸದ ಹೀರೋ Xoom ಸ್ಕೂಟರ್ ರಿವ್ಯೂ
- 1 hr ago
ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
- 2 hrs ago
ಟಾಪ್ ಸೆಲೆಬ್ರಿಟಿಗಳು ಕೂಡ ಬಳಸಿದ ಕಾರುಗಳನ್ನು ಖರೀದಿಸುತ್ತಾರೆ... ಯಾರಿಗೂ ತಿಳಿಯದ ಪ್ರಯೋಜನಗಳಿವು!
- 3 hrs ago
ಟಾಟಾ ನೆಕ್ಸಾನ್ಗೆ ಸೆಡ್ಡು ಹೊಡೆಯಲು ಹೊಸ ನವೀಕರಣಗಳೊಂದಿಗೆ ಹ್ಯುಂಡೈ ವೆನ್ಯೂ ಬಿಡುಗಡೆ
Don't Miss!
- News
Doctor Harassment: ಎಂಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರಿಂದ ವೈದ್ಯೆಗೆ ಕಿರುಕುಳ, ಆತ್ಮಹತ್ಯೆ!
- Technology
ಭಾರತದಲ್ಲಿ Samsung Galaxy S23 ಬೆಲೆ ಎಷ್ಟು?..ಏನಾದ್ರೂ ಆಫರ್ ಇದೆಯಾ?
- Sports
IND vs NZ: ತನ್ನ ದಾಖಲೆ ಮುರಿದ ಶುಭ್ಮನ್ ಗಿಲ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?
- Movies
Kavyashree: ಬಿಗ್ ಬಾಸ್ ಕಾವ್ರಶ್ರೀ ಹೊಸ ಫೋಟೊಶೂಟ್ ಗುಟ್ಟೇನು? ಸಿನಿಮಾ ಎಂಟ್ರಿ ಕೊಡ್ತಾರಾ?
- Finance
Adani Group Debt : ಭಾರತೀಯ ಬ್ಯಾಂಕ್ಗಳ ಬಳಿ ಮಾಹಿತಿ ಕೇಳಿದ ಆರ್ಬಿಐ
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರ್ದೇಶಕನ ಪ್ರತಿಭೆಯನ್ನು ಗುರ್ತಿಸಿ ದುಬಾರಿ ಬೆಂಝ್ ಕಾರನ್ನು ಗಿಫ್ಟ್ ಕೊಟ್ಟ ಜನಪ್ರಿಯ ನಟ
ಚಿತ್ರ ರಂಗದಲ್ಲಿ ಸಿನಿಮಾ ಉತ್ತಮವಾಗಿ ಮೂಡಿಬಂದರೆ ನಿರ್ಮಾಪಕ ಯಾವುದೇ ಪ್ರಮೋಷನ್ ಮಾಡದಿದ್ದರೂ ಹಣ ಗಳಿಸಬಹುದು. ಹಾಗೆಯೇ ಸಿನಿಮಾ ಫ್ಲಾಪ್ ಆದ್ರೆ ಅಷ್ಟೇ ಸುಲಭವಾಗಿ ಬೀದಿಗೆ ಬರಬಹುದು. ಇತ್ತೀಚೆಗೆ ತೆರೆಕಂಡು ಭಾರತದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಅದೇ ರೀತಿ ಮಳಯಾಳಂನಲ್ಲಿ ಇದೇ ವರ್ಷದ ಆರಭಂದಲ್ಲಿ ತೆರೆಕಂಡು ಭಾರೀ ಸದ್ದು ಮಾಡಿದ್ದ ನಟ ಉನ್ನಿ ಮುಕುಂದನ್ ನಿರ್ಮಾಣದ ಮೇಪಾಡಿಯಾನ್ ಸಿನಿಮಾಗೆ ಅತ್ಯುತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಯಶಸ್ಸಿಗೆ ಕಾರಣವಾದ ನಿರ್ದೇಶಕನಿಗೆ ಇದೀಗ ದುಬಾರಿ ಬೆಂಝ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.

ಮಳಯಾಳಂ ಚಿತ್ರರಂಗದ ಯುವ ನಟ ಉನ್ನಿ ಮುಕುಂದನ್, ಮೆಪ್ಪಾಡಿಯನ್ ಚಿತ್ರದ ನಿರ್ದೇಶಕ ವಿಷ್ಣು ಮೋಹನ್ ಅವರಿಗೆ ಬೆಂಝ್ ಸ್ಮಾಲ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿ ಸಂತಸ ಹಂಚಿಕೊಂಡಿದ್ದಾರೆ. ತಮ್ಮ ಚಿತ್ರಗಳು ಹಿಟ್ ಆಗುತ್ತಿರುವ ಖುಷಿಯನ್ನು ಹಂಚಿಕೊಳ್ಳಲು ಹೊಸ ಕಾರುಗಳನ್ನು ಗಿಫ್ಟ್ ನೀಡುವ ಪ್ರವೃತ್ತಿ ಈಗ ಚಿತ್ರರಂಗದಲ್ಲಿದೆ.

ಉನ್ನಿ ಮುಕುಂದನ್ ನಿರ್ಮಿಸಿದ ಮೇಪಾಡಿಯಾನ್ ಸಿನಿಮಾವು ಚಿತ್ರಮಂದಿರಗಳಲ್ಲಿ ಕಲೆಕ್ಷನ್ ದಾಖಲೆಗಳನ್ನು ಮುರಿದು ಭಾರತ ಮತ್ತು ವಿದೇಶಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದ ಚಲನಚಿತ್ರವಾಗಿದೆ. ಈ ಚಿತ್ರ ಬಿಡುಗಡೆಯಾಗಿ ಸುಮಾರು ಹತ್ತು ತಿಂಗಳ ನಂತರ ಅತ್ಯುತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಉನ್ನಿ ಮುಕುಂದನ್ ಭಾರತದಲ್ಲಿ ಐಷಾರಾಮಿ ಕಾರುಗಳ ಪ್ರಮುಖ ಮಾದರಿಯಾದ Mercedes-Benz GLA200 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಉನ್ನಿ ಮುಕುಂದನ್, ಇದು ಸ್ವಲ್ಪ ತಡವಾಗಿದೆ, ಇದು ಕೇವಲ ಉಡುಗೊರೆಯಾಗಿರದೆ ನಿಮ್ಮ ಶ್ರಮಕ್ಕೆ ಸಿಕ್ಕ ಮನ್ನಣೆ ಎಂದಿದ್ದಾರೆ.

ಉನ್ನಿ ಪ್ರೀಮಿಯಂ ಸೆಕೆಂಡ್ ಹ್ಯಾಂಡ್ ಕಾರು ವಿತರಕ ರಾಯಲ್ ಡ್ರೈವ್‌ನಿಂದ ತನ್ನ ಪ್ರಿಯ ನಿರ್ದೇಶಕನಿಗಾಗಿ ಮರ್ಸಿಡಿಸ್-ಬೆಂಝ್‌ನ ಬೇಬಿ ಸ್ಪೋರ್ಟ್ಸ್ ಯುಟಿಲಿಟಿ ವಾಹನವನ್ನು ಖರೀದಿಸಿದ್ದಾರೆ. ಸದ್ಯ ಮಳಯಾಳಂ ಚಿತ್ರರಂಗದ ಎಲ್ಲಾ ದೊಡ್ಡ ನಟ, ನಟಿಯರು ಈ ಡೀಲರ್‌ಶಿಪ್‌ನಿಂದ ತಮ್ಮ ವಾಹನಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ಮಾಲಿವುಡ್‌ನ ಜನಪ್ರಿಯ ನಟ ಪೃಥ್ವಿರಾಜ್ ಇದೇ ಡೀಲರ್‌ಶಿಪ್‌ನಿಂದ ಹೊಸ ಮರ್ಸಿಡಿಸ್ ಜಿ-ವ್ಯಾಗನ್ ಖರೀದಿಸಿದ್ದರು. ಇದೀಗ ಉನ್ನಿ ಖರೀದಿಸಿ ನಿರ್ದೇಶಕನಿಗೆ ನೀಡಿದ್ದು, ಕಾರನ್ನು ಪಡಿಯಲು ನಿರ್ದೇಶಕ ವಿಷ್ಣು ತನ್ನ ಸ್ನೇಹಿತರೊಂದಿಗೆ ಆಗಮಿಸಿದ್ದರು.

ಮರ್ಸಿಡಿಸ್ ಬೆಂಝ್ GLA SUV
ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಯಾವ ಮಾದರಿಯನ್ನು ಮೆಪ್ಪಾಡಿಯನ್ ನಿರ್ದೇಶಕರಿಗೆ ಉಡುಗೊರೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಜರ್ಮನ್ ಮೂಲದ ಕಾರು 1.4 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದೆ.

GLA ಪೆಟ್ರೋಲ್ ಆವೃತ್ತಿಯು 163 bhp ಉತ್ಪಾದಿಸಿದರೆ, ಡೀಸೆಲ್ ಎಂಜಿನ್ ಗರಿಷ್ಠ 190 bhp ಶಕ್ತಿಯನ್ನು ಹೊರಹಾಕುತ್ತದೆ. ಎರಡೂ ಎಂಜಿನ್‌ಗಳನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಕಾರು ಸುಮಾರು 44.90 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂ) ಆರಂಭವಾಗುತ್ತದೆ.

ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗೆ ಹೆಚ್ಚಿನ ಪರ್ಫಾಮೆನ್ಸ್ ಹೊಂದಿರುವ ಈ ಕಾರಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಪ್ರಮುಖ ವೈಶಿಷ್ಟ್ಯಗಳಾಗಿವೆ. ಹಿಂಭಾಗದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಹೊಸ ಅಡಾಪ್ಟಿವ್ LED ಟೈಲ್ ಲ್ಯಾಂಪ್‌ಗಳನ್ನು ಸಹ ಕಾಣಬಹುದು.

ಮರ್ಸಿಡಿಸ್ ಬೆಂಝ್ GLA SUV 200 ಅನ್ನು 18-ಇಂಚಿನ ಮತ್ತು 19-ಇಂಚಿನ AMG ಅಲಾಯ್ ವೀಲ್‌ಗಳೊಂದಿಗೆ ಆಯ್ಕೆ ಮಾಡಬಹುದು. ಹೊಸ ಐಷಾರಾಮಿ ಎಸ್‌ಯುವಿಯು ಮೌಂಟೇನ್ ಗ್ರೇ, ಇರಿಡಿಯಮ್ ಸಿಲ್ವರ್, ಕಾಸ್ಮೊಸ್ ಬ್ಲ್ಯಾಕ್, ಡೆನಿಮ್ ಬ್ಲೂ ಮತ್ತು ಪೋಲಾರ್ ವೈಟ್ ಎಂಬ ಐದು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಮರ್ಸಿಡಿಸ್ ಬೆಂಝ್ GLA SUV ಒಳಭಾಗವನ್ನು ನೋಡುವುದಾದರೆ ಎರಡು 10.25-ಇಂಚಿನ ಹೈ-ಡೆಫಿನಿಷನ್ ಡಿಸ್ಪ್ಲೇಗಳನ್ನು ಒಳಗೊಂಡಿರುವ ಸ್ಟ್ಯಾಂಡರ್ಡ್ MBUX ವೈಡ್‌ಸ್ಕ್ರೀನ್ ಸೆಟಪ್ ಮುಖ್ಯ ಆಕರ್ಷಣೆಯಾಗಿದೆ. ಇದು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.

ಮರ್ಸಿಡಿಸ್ ಬೆಂಝ್ GLA 200 SUV ಏಳು ಏರ್‌ಬ್ಯಾಗ್‌ಗಳು, ಆಕ್ಟಿವ್ ಬ್ರೇಕ್‌ಗಳು, ಪ್ರಿ-ಸೇಫ್, ಆಕ್ಟಿವ್ ಬಾನೆಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಆಫ್-ರೋಡ್ ಎಂಜಿನಿಯರಿಂಗ್ ಪ್ಯಾಕೇಜ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತೀಯ ಚಿತ್ರರಂಗವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಆರ್‌ಆರ್‌ಆರ್, ಕೆಜಿಎಫ್, ಪುಷ್ಪಾ, ಕಾಂತಾರ ಸಿನಿಮಾಗಳು ವಿದೇಶಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿರ್ದೇಶಕರಿಗೆ ನಟರು ಆತ್ಮೀಯವಾಗಿ ಉಡುಗೊರೆ ನೀಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಮುಂದಿನ ದಿನಗಳಲ್ಲಿ ಹಾಲಿವುಡ್ ಸಿನಿಮಾಗಳಿಗೂ ಭಾರತೀಯ ಸಿನಿಗಳು ಪೈಪೋಟಿಯಾಗಿ ನಿಲ್ಲುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ.