ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

By Praveen Sannamani

ಕೆಲವೊಮ್ಮೆ ವಾಹನ ಚಾಲನೆ ವೇಳೆ ರಸ್ತೆಗಳ ವಾಸ್ತವ ಹೇಗಿರುತ್ತೆ ಅಂದ್ರೆ, ನಾವು ರಸ್ತೆ ಮೇಲೆ ಚಾಲನೆ ಮಾಡ್ತಾ ಇದೀವೊ ಅಥವಾ ಗುಂಡಿಯೊಳಗೆ ಚಾಲನೆ ಮಾಡ್ತಾ ಇದೀವೊ ಅನ್ನೋದೆ ಕನ್ಫ್ಯೂಷನ್ ಆಗುತ್ತೆ. ಇದೇ ಕಾರಣಕ್ಕೆ ಅದೆಷ್ಟೋ ಜೀವಗಳು ಬಲಿಯಾಗುತ್ತಿದ್ದು, ಅಂತದ್ದೇ ಸ್ಟೋರಿ ಒಂದರ ಹಿಂದಿನ ಈ ಕರುಣಾಜನಕ ಕಣ್ಣೀರ ಕಥೆ ಎಂತವರಿಗೂ ಕಣ್ಣಂಚಿನಲ್ಲಿ ನೀರು ತರಿಸದೇ ಇರಲಾರದು.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ನಿಮಗೆಲ್ಲಾ ಗೊತ್ತಿರುವ ಹಾಗೆ ಇತ್ತೀಚೆಗೆ ಸುದ್ದಿಯಲ್ಲಿರುವುದು ರಸ್ತೆಯಲ್ಲಿರುವ ಯಮಸ್ವರೂಪಿ ಗುಂಡಿಗಳ ಬಗ್ಗೆ ಅದೆಷ್ಟೂ ಎಚ್ಚರವಹಿಸಿದ್ರು ಒಂದಲ್ಲಾ ಒಂದು ರೀತಿಯ ಅನಾಹುತಗಳಿಗೆ ಕಾರಣವಾಗುತ್ತಲೇ ಇವೆ. ಈ ಬಗ್ಗೆ ಗೊತ್ತಿದ್ದರೂ ಜಾಣ ಕುರುಡು ಪ್ರದರ್ಶನ ಮಾಡುವ ಸ್ಥಳೀಯ ಆಡಳಿತ ಸಂಸ್ಥೆಗಳ ಬೇಜವಾಬ್ದಾರಿಯಿಂದಾಗಿ ಪ್ರಾಣಕಳೆದುಕೊಳ್ಳುವವರ ಜೀವಗಳಿಗೆ ಬೆಲೆಯಿಲ್ಲದಂತಾಗಿದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ತನ್ನ ಮಗ ಸಾವಿನ ನಂತರ ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕಾರ್ಯವೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಹೌದು, ಇದು ಎದೆಯುದ್ದ ಬೆಳೆದು ನಿಂತಿದ್ದ ಮಗನನ್ನು ಕಳೆದುಕೊಂಡ ದಾದಾರಾವ್ ಬಿಲ್ಹೊರ್ ಅವರ ಸಾಮಾಜಿಕ ಕಳಕಳಿಯ ಹಿಂದಿನ ಸ್ಟೋರಿ ಕೇಳಿದ್ರೆ ನಿಮ್ಮ ಮನಸ್ಸಿಗೂ ನೋವಾಗದೇ ಇರದು. ಯಮಸ್ಪರೂಪಿಯಾಗಿ ಬಂದ ರಸ್ತೆ ಗುಂಡಿಯಲ್ಲಿ ಮಗನನ್ನು ಕಳೆದುಕೊಂಡ ದಾದಾರಾವ್ ಅವರು ತಮ್ಮ ಮಗನಿಗಾದ ಅನ್ಯಾಯ ಮತ್ತೊಬ್ಬರಿಗೆ ಆಗದಿರಲೆಂದು ಹೊಸ ಅಭಿಯಾನವೊಂದನ್ನ ಆರಂಭ ಮಾಡಿದ್ದಾರೆ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

2015ರಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ 16 ವರ್ಷದ ಪ್ರಕಾಶ್ ಬಿಲ್ಹೊರ್ ರಸ್ತೆ ಗುಂಡಿಗೆ ಬಿದ್ದು ಪ್ರಾಣಕಳೆದುಕೊಂಡಿದ್ದ. ಇದರಿಂದ ಆಘಾತಕ್ಕೆ ಒಳಗಾಗಿದ್ದ ದಾದಾರಾವ್ ಬಿಲ್ಹೊರ್ ಅವರು ಬೈಕ್ ಸವಾರರಿಗೆ ಯಾವುದೇ ತೊಂದರೆಯಾಗದಿರಲಿ ಎನ್ನವ ಉದ್ದೇಶದಿಂದ ರಸ್ತೆ ಗುಂಡಿ ಮುಚ್ಚವು ಹೊಸ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದದಲ್ಲದೇ ನೂರಾರು ಯಮಸ್ವರೂಪಿ ರಸ್ತೆ ಗುಂಡಿಗಳನ್ನ ತಮ್ಮ ಸ್ವಂತ ಖರ್ಚಿನಿಂದಲೇ ಮುಚ್ಚಿ ಇತರರಿಗೆ ಮಾದರಿಯಾಗಿದ್ದಾರೆ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಮೂಲತಃ ಮುಂಬೈ ನಿವಾಸಿಯಾಗಿರುವ ದಾದಾರಾವ್ ಬಿಲ್ಹೊರ್ ಅವರು ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 556 ರಸ್ತೆ ಗುಂಡಿಗಳನ್ನು ಮಚ್ಚಿ ವಾಹನ ಸವಾರಿಗೆ ಅನಕೂಲ ಮಾಡಿಕೊಟ್ಟಿದ್ದು, ಸರ್ಕಾರಗಳು ಮಾಡಬೇಕಾದ ಕಾರ್ಯವನ್ನ ದಾದಾರಾವ್ ಮಾಡುತ್ತಿರುವುದರ ಹಿಂದಿನ ಕಣ್ಣೀರಿನ ಕಥೆ ಜನಪ್ರತಿನಿಧಿಗಳಿಗೆ ಹೇಗೆ ಅರ್ಥವಾದಿತು?

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಎದೆಯುದ್ದ ಬೆಳದಿದ್ದ ಮಗನನ್ನು ಕಣ್ಣುಮುಂದೆ ಕಳೆದುಕೊಂಡ ದಾದಾರಾವ್ ಅವರು ಮತ್ತೊಬ್ಬರಿಗೆ ಈ ಪರಿಸ್ಥಿತಿ ಬರದಿರಲಿ ಎನ್ನುವ ಉದ್ದೇಶದಿಂದ ಪ್ರತಿ ವಾರಾಂತ್ಯದಲ್ಲಿ ಗುಂಡಿಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದಲ್ಲದೇ, ಸಮಾನ ಮನಸ್ಕ ಯುವಕರ ತಂಡ ಕಟ್ಟಿಕೊಂಡು ನೂರಾರು ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ದಾದಾರಾವ್ ಅವರ ಸಾಮಾಜಿಕ ಕಳಕಳಿಯನ್ನ ಗುರುತಿಸಿರುವ ಹಲವು ಜನಪರ ಸಂಘಟನೆಗಳು ಸಹ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಕೈಜೊಡಿಸಿದ್ದು, ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ದುರಂತಕ್ಕಾಗಿ ಕಾಯ್ದುಕುಳಿತಿರುವ 30 ಸಾವಿರಕ್ಕೂ ರಸ್ತೆ ಗುಂಡಿಗಳನ್ನ ಕೂಡಲೇ ಮುಚ್ಚಬೇಕೆಂಬ ಧ್ಯೇಯದೊಂದಿಗೆ ದಾದಾರಾವ್ ರಾವ್ ಅವರು ಯುವ ಪಡೆ ಕಟ್ಟಿಕೊಂಡು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಇನ್ನು ಮಳೆಗಾಲದಲ್ಲಿ ಕೆಸರು ಗದ್ದೆಗಳಾಗಿ ಪರಿವರ್ತನೆಯಾಗುವ ರಸ್ತೆಗಳಲ್ಲಿ ವಾಹನಗಳ ಸವಾರಿಯೂ ನಿಜವಾಗಿಯೂ ಹರಸಾಹಸವೇ ಎನ್ನಬಹುದು. ಅದರಲ್ಲಿಯೂ ಗುಂಡಿಗಳಲ್ಲೇ ಇರುವ ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸುವುದೆಂದರೇ ಜೀವ ಕೈಯಲ್ಲಿ ಹಿಡಿದು ಮುಂದೆ ಸಾಗುವ ಪರಿಸ್ಥಿತಿಯಿದೆ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಮಾಡದ ತಪ್ಪಿಗೆ ಈಗಾಗಲೇ ಅದೆಷ್ಟೋ ವಾಹನ ಚಾಲಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದು, ದಿನಂಪ್ರತಿ ದೇಶದ ವಿವಿಧತೆ ಹತ್ತಾರು ಜನ ದುರಂತವಾಗಿ ಸಾವನ್ನಪ್ಪುತ್ತಿದ್ದಾರೆ. ವಾರದ ಹಿಂದಷ್ಟೇ ದೇಶವ್ಯಾಪಿ ಭಾರೀ ಚರ್ಚೆಗೆ ಕಾರಣವಾದ ಪ್ರಕರಣವೊಂದನ್ನ ನೋಡಿದ್ರೆ ನಿಮಗೆ ಅವರ ಕರಾಳತೆ ಗೊತ್ತಾಗಬಹುದು. ಬೈಕಿನಲ್ಲಿ ಹೋಗುತ್ತಿದ್ದ ಜೋಡಿಯೊಂದು ಗುಂಡಿಯಲ್ಲಿ ಬಿದ್ದ ಕಾರಣ ಮಹಿಳೆ ಮೇಲೆ ಬಸ್ ಹಾಯ್ದುಹೋಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಳ್ಳಬೇಕಾಯ್ತು.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ರಸ್ತೆಯಲ್ಲಿ ಗುಂಡಿಗಳಿಂದಾಗಿಯೇ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನ ಒಮ್ಮೆ ಪರಿಶೀಲನೆ ಮಾಡಿದ್ರೆ ನಿಮಗೆ ಶಾಕ್ ಆಗದೇ ಇರದು. ಇದಕ್ಕೆ ಕಾರಣ, ಕಳೆದ ವರ್ಷ ಭಾರತದಲ್ಲಿ ಸುಮಾರು 3,597 ಮಂದಿ ರಸ್ತೆಯಲ್ಲಿ ಗುಂಡಿಯಿಂದಾಗಿಯೇ ಜೀವ ಕಳೆದುಕೊಂಡಿದ್ದಾರೆ. ಅಂದ್ರೆ ದಿನಕ್ಕೆ ಸುಮಾರು 10 ಮಂದಿ ರಸ್ತೆಯಲ್ಲಿನ ಗುಂಡಿಯ ಕಾರಣದಿಂದಲೇ ಪ್ರಾಣ ಬಿಡುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಡ್ರೈನೇಜ್ ಸಿಸ್ಟಮ್, ರಸ್ತೆ ನಿರ್ಮಾಣದ ಗುಣಮಟ್ಟ, ಸರಿಯಾದ ವ್ಯವಸ್ಥೆ ಇಲ್ಲದೆಯೇ ರಸ್ತೆ ನಿರ್ಮಿಸಲಾಗುತ್ತಿರುವ ಕಾರಣಕ್ಕೆ ರಸ್ತೆಗಳು ಬಹುಬೇಗನೆ ಕಳಪೆಯಾಗುತ್ತಿದ್ದು, ಇದರಿಂದ ಮಾಡದ ತಪ್ಪಿಗೆ ಇನ್ಯಾರೋ ಬಲಿಯಾಗುತ್ತಿರುವುದು ಮಾತ್ರ ದುರಂತ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ವಾಹನ ಸವಾರರೇ ಹುಷಾರ್..!

ಮಳೆಗಾಲದಲ್ಲಿ ವಾಹನ ಚಾಲಕರು ಕೂಡಾ ಹೆಚ್ಚಿನ ಮುಂಜಾಗ್ರತ ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಮಳೆ ನೀರಿನಿಂದ ತುಂಬಿದ ರಸ್ತೆಯ ಮೇಲೆ ಹೋಗುವಾಗ ಎಚ್ಚರಿಕೆ ವಹಿಸಿ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಜೊತೆಗೆ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್ ಮಾಡುವ ಪ್ರವೃತ್ತಿಯನ್ನು ಮೊದಲ ಬಿಡಬೇಕಾದ ಅವಶ್ಯಕತೆಯಿದ್ದು, ಇದರೊಂದಿಗೆ ಓವರ್‍ ಟೇಕಿಂಗ್ ಮಾಡುವಾಗಲೂ ಜಾಗರೂಕತೆಯಿಂದ ವಾಹನ ಚಾಲನೆ ಮಡಿದ್ದಲ್ಲಿ ಮಾತ್ರವೇ ಸುರಕ್ಷಿತವಾಗಿ ನಿಮ್ಮ ಗಮ್ಯವನ್ನು ತಲುಪಬಹುದು. ಇಲ್ಲವಾದ್ರೆ ಯಮ ಸ್ವರೂಪಿ ರಸ್ತೆಗುಂಡಿ ಪಾಲುವಾಗುವುದು ತಪ್ಪಿದಲ್ಲ.

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಒಟ್ಟಿನಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿರುವ ರಸ್ತೆ ಗುಂಡಿಗಳ ಸಮಸ್ಯೆಗೆ ದಾದಾರಾವ್ ಅವರ ಅಳಿಲ ಸೇವೆ ಅದೆಷ್ಟೊ ಪ್ರಾಣಗಳನ್ನು ಉಳಿಸುತ್ತಿದ್ದು, ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನ ಮುಚ್ಚಿಸುವ ಕಾರ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ.

Most Read Articles

Kannada
Read more on off beat
English summary
Mumbai man fills 556 potholes after his son died in one of them.
Story first published: Tuesday, July 31, 2018, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X