ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕನ ರಿಯಲ್ ಸ್ಟೋರಿ ಇದು...

By Praveen Sannamani

ಮೋಟಾರ್ ಸ್ಪೋರ್ಟ್ ಕುರಿತಾಗಿ ಪ್ರತಿಯೊಬ್ಬರಿಗೂ ಕ್ರೇಜ್ ಇದ್ದೆ ಇರುತ್ತೆ. ಆದ್ರೆ ಟ್ರ್ಯಾಕ್‌‌ಗೆ ಬಂದಾಗ ಬಹುತೇಕರಿಗೆ ಅದು ಅಸಾಧ್ಯವಾಗದ ಮಾತು. ಇದೇ ಕಾರಣಕ್ಕೆ ಅದೆಷ್ಟೋ ಮೋಟಾರ್ ಸ್ಪೋರ್ಟ್ ಉತ್ಸಾಹಿಗಳು ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದೇ ಇಲ್ಲ. ಇಂತಹ ಕಠಿಣ ಕ್ಷೇತ್ರದಲ್ಲೂ ಇದೀಗ ಬೆಂಗಳೂರಿನ 15 ವರ್ಷದ ಬಾಲಕನೊಬ್ಬ ಅದ್ಭುತ ಪ್ರದರ್ಶನ ತೊರುತ್ತಿದ್ದಾನೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಹೌದು, ಬೆಂಗಳೂರು ಮೂಲದ ಟಿಜಿಲ್ ರಾವ್ ಸದ್ಯ 2018ರ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಬುತ ಪ್ರದರ್ಶನ ತೋರುತ್ತಿದ್ದು, ಚೆನ್ನೈ ಮೂಲದ ಮೊಮೆಂಟಮ್ ಮೋಟಾರ್‌ಸ್ಪೋರ್ಟ್ಸ್ ತಂಡವನ್ನ ಪ್ರತಿನಿಧಿಸತ್ತಿದ್ದಾರೆ. ಈ ತಂಡದಲ್ಲಿ ಅತಿ ಕಿರಿಯ ವಯಸ್ಸಿನ ಸ್ಪರ್ಧಿಯಾಗಿರುವ ಟಿಜಿಲ್ ರಾವ್ ಅವರು ನಾಲ್ಕು ಬಾರಿ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ ಆಗಿರುವ ದೀಪಕ್ ಪೌಲ್ ಚಿನ್ನಪ್ಪ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗುರುವಿಗೆ ತಕ್ಕ ಶಿಷ್ಯನಾಗಿರುವ ಟಿಜಿಲ್ ಸದ್ಯ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಷನ್ ಉದಯೊನ್ಮುಖ ಪ್ರತಿಭೆ ಎಂದ್ರೆ ತಪ್ಪಾಗುವುದಿಲ್ಲ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

2018ರ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ಈಗಾಗಲೇ ಚಾಲನೆ ಪಡೆದುಕೊಂಡಿದ್ದು, ಕಳೆದ ಜೂನ್ 22ರಿಂದ 24ರ ತನಕ ನಡೆದ ಮೊದಲ ಹಂತದ ಸ್ಪರ್ಧೆಗಳಲ್ಲಿ ಬೆಂಗಳೂರಿನ ಟಿಜಿಲ್ ರಾವ್ ಟ್ರ್ಯಾಕ್ ಪ್ರದರ್ಶನವು ಪ್ರತಿಯೊಬ್ಬರನ್ನು ನಿಬ್ಬೆರಗಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೊದಲ ಮತ್ತು ಮೂರನೇ ಸುತ್ತಿನ ಟ್ರ್ಯಾಕ್ ಪ್ರದರ್ಶನದಲ್ಲಿ ಅನುಕ್ರಮವಾಗಿ10ನೇ ಮತ್ತು 11 ನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದ ಟಿಜಿಲ್ ರಾವ್, 2ನೇ ಸುತ್ತಿನಲ್ಲಿ ಪ್ರದರ್ಶನ ತೊರುವಾಗ 5ನೇ ಸ್ಥಾನಕ್ಕೆ ಗುರಿತಲುವ ಹಂತದಲ್ಲೇ ತಾಂತ್ರಿಕ ತೊಂದರೆಯಿಂದಾಗಿ ತುಸು ಹಿನ್ನಡೆಯಾಗಿದ್ದನ್ನ ಬಿಟ್ಟರೇ ಉಳಿದೆರಡು ಸುತ್ತಿನಲ್ಲಿ ಘಾಟಾನುಘಟಿ ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡಿದರು.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಇಂಡಿಯನ್ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ಆರಂಭಿಕ ರೇಸ್ ಚಾಂಪಿಯನ್ ಆವೃತ್ತಿಯಾಗಿರುವ ಫಾರ್ಮುಲಾ ಎಲ್‌ಜಿಬಿ 1300 ಕೆಟಗೆರಿಯಲ್ಲಿ ಸಿಂಗಲ್ ಸೀಟರ್ ಓಪನ್ ವೀಲ್ಹ್ ರೇಸ್ ಇದಾಗಿದ್ದು, 1.3-ಲೀಟರ್ ಎಂಜಿನ್ ಪ್ರೇರಿತ ಮಾರುತಿ ಸ್ವಿಫ್ಟ್ ರೇಸ್ ಕಾರನ್ನ ಚಾಲನೆ ಮಾಡಿದ ಟಿಜಿಲ್ ರಾವ್ ಅವರು 1 ನಿಮಿಷ 09 ಸೇಕೆಂಡ್‌ಗಳಲ್ಲಿ ತಮ್ಮ ಮೊದಲ ಗುರಿಸಾಧನೆ ಮಾಡಿದರು.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಗಂಟೆಗೆ ಬರೋಬ್ಬರಿ 175 ಕಿ.ಮೀ ವೇಗ ಸಾಧಿಸುವಷ್ಟು ವೇಗ ಪಡೆದುಕೊಂಡಿದ್ದ ಮಾರುತಿ ಸ್ವಿಫ್ಟ್ ರೇಸ್ ಎಡಿಷನ್ ಮೂಲಕ ಆಕರ್ಷಕ ಪ್ರದರ್ಶನ ನೀಡಿದ ಟಿಜಿಲ್ ರಾವ್, ರೇಸ್‌ನಲ್ಲಿದ್ದ ಬಹುತೇಕ 20 ವರ್ಷಕ್ಕಿಂತಲೂ ಹೆಚ್ಚಿನ ಪ್ರತಿಸ್ಪರ್ಧಿಗಳಿಂತ ತಾನೆೇನು ಕಡಿಮೆ ಇಲ್ಲ ಎಂಬುವುದನ್ನ ಸಾಬೀತುಪಡಿಸಿದ್ದಾನೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

'ಅಂಗವೈಕಲ್ಯಕ್ಕೆ ಸೆಡ್ಡುಹೊಡೆದ ಟಿಜಿಲ್'

ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ. ನ್ಯಾಷನಲ್ ರೇಸ್ ಚಾಂಪಿಯನ್‌ಶಿಪ್ ಮಿಂಚುತ್ತಿರುವ ಟಿಜಿಲ್ ರಾವ್, ಹುಟ್ಟಿನಿಂದಲೇ 'ಕಬ್ಲ್‌ಫುಟ್'(Clubfoot)ಎನ್ನುವ ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಇದ್ಯಾವುದಕ್ಕೂ ಲೆಕ್ಕಿಸದ ಈ ಬಾಲಕ ಮಾತ್ರ ಪಠ್ಯೇತರ ಚಟುವಟಿಕೆಗಳಲ್ಲಿ ಹೊಸ ಭರವಸೆಯೊಂದಿಗೆ ಮುನ್ನುಗ್ಗುತ್ತಿದ್ದಾನೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಬೆಂಗಳೂರಿನ ಪ್ರತಿಷ್ಠಿತ ಮಿರಾಂಬಿಕಾ ಸ್ಕೂಲ್ ಫಾರ್ ನ್ಯೂ ​​ಏಜ್ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿ ಓದುತ್ತಿರುವ ಟಿಜಿಲ್ ರಾವ್, ಮೋಟಾರ್ ರೇಸಿಂಗ್ ಹೊರತುಪಡಿಸಿ ಸ್ಕೇಟಿಂಗ್ ವಿಭಾಗದಲ್ಲೂ ರಾಜ್ಯ ಮಟ್ಟದಲ್ಲೂ ಪ್ರತಿನಿಧಿಸಿದ್ದಾನೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಇದರ ಜೊತೆ ಈಜು, ಬಾಸ್ಕೇಟ್ ಬಾಲ್‌ನಲ್ಲೂ ಉತ್ತಮ ಪ್ರದರ್ಶನ ತೊರುವ ಟಿಜಿಲ್, ಬಾಲ್ಯದ ದಿನಗಳಲ್ಲಿ ಸರಿಯಾಗಿ ನಿಲ್ಲಲೂ ಸಾಧ್ಯವಾಗದ ಪರಿಸ್ಥಿತಿಯಲ್ಲೂ ಅವನು ಬೆಳೆದುಬಂದ ಹಾದಿ ಅಷ್ಟು ಸುಲಭವಾಗಿರಲ್ಲ. ಹೀಗೆ ಕಷ್ಟದ ಸಂದರ್ಭದಲ್ಲೂ ಯಾವುದಕ್ಕೂ ಎದೆಗೂಂದದೇ ಯಶಸ್ಸಿನತ್ತ ಪ್ರಯಣಿಸುತ್ತಿದ್ದು, 11ನೇ ವರ್ಷದವನಿದ್ದಾಗಲೇ ಆಟೋ ಎಕ್ಸ್‌ಪೋ ಒಂದಕ್ಕೆ ಭೇಟಿ ನೀಡಿ ಮೋಟಾರ್‌ಸ್ಪೋರ್ಟ್ ಕ್ಷೇತ್ರದಲ್ಲಿ ಹೊಸ ಸಾಧನೆಯ ಕನಸು ಕಂಡಿದ್ದನಂತೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಅದರಂತೆಯೇ ಫಾರ್ಮುಲಾ ಜಿಪಿ2 ಡ್ರೈವರ್ ಅರ್ಜುನ್ ಮೈನಿ ಬಳಿ ತರಬೇತಿ ಪಡೆದುಕೊಂಡ ಟಿಜಿಲ್ ರಾವ್, ಟ್ರ್ಯಾಕ್ ಕೌಶಲ್ಯ ತರಬೇತಿಯೊಂದಿಗೆ ನ್ಯಾಷನಲ್ 2 ಸ್ಟೋಕ್ ಗೋ ಕಾರ್ಟ್ ರೇಸಿಂಗ್ ವಿಭಾಗದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ತದನಂತರ 14ನೇ ವಯಸ್ಸಿಗೆ ಮೋಟಾರ್‌ಸ್ಪೋರ್ಟ್ ವಿಭಾಗದಲ್ಲೂ ಸ್ಥಾನ ಗಿಟ್ಟಿಸಿಕೊಂಡಲ್ಲದೇ, 15ನೇ ವಯಸ್ಸಿನ ಬಾಲಕನೊಬ್ಬ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್‌ನ ಆರಂಭಿಕ ರೇಸ್ ಚಾಂಪಿಯನ್ ಆವೃತ್ತಿಯಾಗಿರುವ ಫಾರ್ಮುಲಾ ಎಲ್‌ಜಿಬಿ 1300 ಕೆಟಗೆರಿಯಲ್ಲಿ ಅದ್ಬುತ ಟ್ರ್ಯಾಕ್ ಕೌಶಲ್ಯ ಪ್ರದರ್ಶನ ಮಾಡಿ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಬಾಲ್ಯದಲ್ಲಿ ತಮ್ಮ ಮಗ ಸರಿಯಾಗಿ ನಡೆದಾಡಲು ಬಂದರೇ ಸಾಕು ಎಂದು ದೇವರು ಪ್ರಾರ್ಥಿಸುತ್ತಿದ್ದ ಟಿಜಿಲ್ ರಾವ್ ತಂದೆ-ತಾಯಿಗಳು ಇಂದು ಮಗನ ಯಶಸ್ಸು ಕಂಡು ಹೆಮ್ಮೆಪಡುವಂತಾಗಿದ್ದು, ಟಿಜಿಲ್ ಕನಸಿಗೆ ಸ್ಪೂರ್ತಿಯಾಗಿರುವ ಅರ್ಜುನ್ ಮೈನಿ ಮತ್ತು ದೀಪಕ್ ಚಿನ್ನಪ್ಪ ಅವರ ತರಬೇತಿಯಿಂದಾಗಿ ಈ ಬಾಲಕ ಸಾಧನೆಯ ಹಿಂದೆ ಬಹುದೊಡ್ಡ ಪಾತ್ರ ವಹಿಸುತ್ತಿದ್ದಾರೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

'ಪ್ರತಿಭೆಗೆ ಆರ್ಥಿಕ ಹೊರೆ'

ಮೋಟಾರ್ ಸ್ಪೋರ್ಟ್ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ ಎಂಬುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಪ್ರತಿ ಹಂತದಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಲೇಬೇಕಾದ ಅನಿವಾರ್ಯತೆಗಳಿದ್ದು, ಮಧ್ಯಮ ವರ್ಗದ ಸುಮಖ್ ರಾವ್ ಮತ್ತು ಸಪ್ನಾ ರಾವ್ ಅವರು ತಮ್ಮ ಮಗ ಟಿಜಿಲ್ ಸಾಧನೆಯ ಹಾದಿಯನ್ನು ಸುಗಮಗೊಳಿಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಈಗಾಗಲೇ ವಿವಿಧ ಮಾದರಿಯ ತರಬೇತಿ ಹಾಗೂ ಟ್ರ್ಯಾಕ್ ಶುಲ್ಕಕ್ಕಾಗಿಯೇ ಬರೋಬ್ಬರಿ 20 ಲಕ್ಷ ಖರ್ಚು ಮಾಡಲಾಗಿದ್ದು, ಮುಂದಿನ ಹಾದಿಯನ್ನ ಸುಗಮಗೊಳಿಸುವ ಉದ್ದೇಶದಿಂದ ಪ್ರಾಯೋಜಕತ್ವದ ಹುಡುಕಾಟದಲ್ಲಿದ್ದಾರೆ. ಇದರಿಂದ ರೇಸಿಂಗ್ ಸಲಕರಣೆಗಳು ಮತ್ತು ಕೌಲಶ್ಯ ತರಬೇತಿಗಳಿಗೆ ಪ್ರಾಯೋಜಕತ್ವದ ಅವಶ್ಯಕತೆಯಿದ್ದು, ಟಿಜಿಲ್ ರಾವ್ ಸಾಧನೆ ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಅಗತ್ಯವಿದೆ.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಮೊಮೆಂಟಮ್ ಮೋಟಾರ್‌ ಸ್ಪೋರ್ಟ್ ಕುರಿತು ಒಂದಿಷ್ಟು...

ಚೆನ್ನೈನಲ್ಲಿ ಸ್ಥಾಪಿತವಾಗಿರುವ ಮೊಮೆಂಟಮ್ ಮೋಟಾರ್‌ ಸ್ಪೋರ್ಟ್ ತಂಡವು ವೃತ್ತಿಪರ ರೇಸಿಂಗ್ ತಂಡವಾಗಿದೆ. ರಷೀದ್ ಖಾನ್ ಅವರಿಂದ ಸಂಸ್ಥಾಪಿಸಿರುವ ಈ ತಂಡವು 2016ರಲ್ಲಿ ನಡೆದಿದ್ದ ಎಂಆರ್‌ಎಫ್ ಎಂಎಂಎಸ್ಸಿ ಎಫ್ಎಂಎಸ್‌ಐ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿತ್ತು. ತದನಂತರ 2017ರಲ್ಲಿ ಫಾರ್ಮುಲಾ ಎಲ್‌ಜಿಬಿ 1300 ರೂಕೀ ಕ್ಲಾಸ್‌ನಲ್ಲಿ ಗೆದ್ದ ಈ ತಂಡವು ನ್ಯಾಷನಲ್ ಓಪನ್, ನ್ಯಾಷನಲ್ ರೂಕೀ ಮತ್ತು ವಿದ್ಯಾರ್ಥಿ ಓಪನ್ ವಿಭಾಗದಲ್ಲೂ ಅತ್ಯುತ್ತಮ ಸಾಧನೆ ಮಾಡಿತ್ತು.

ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಬೆಂಗಳೂರು ಬಾಲಕ

ಇದೀಗ ಇದೇ ತಂಡದಲ್ಲಿರುವ ವಿದ್ಯಾರ್ಥಿ ಟಿಜಿಲ್ ರಾವ್ ಸಹ ಭರವಸೆಯ ಸ್ಪರ್ಧಿಯಾಗಿ ಪ್ರದರ್ಶನ ತೊರುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ದಾಖಲೆಗಳನ್ನ ಸೃಷ್ಠಿಸಲಿರುವ ಟಿಜಿಲ್ ಎಂಬ ಅದ್ಬುತ ಪ್ರತಿಭೆಗೆ ನಮ್ಮೆಲ್ಲರ ಹಾರೈಕೆ ಇದ್ದೆ ಇರುತ್ತೆ. ಆಲ್ ದಿ ಬೆಸ್ಟ್ ಟಿಜಿಲ್ ರಾವ್...

Kannada
Read more on motorsports
English summary
Meet Tijil Rao — The Youngest Racer In The 2018 National Racing Championships.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more