ಸಂಪೂರ್ಣ ವಿಶ್ವವನ್ನೇ ನಡುಗಿಸಬಲ್ಲ 10 ಅತಿ ವೇಗದ ವಿಮಾನಗಳು

By Nagaraja

ಹಿಂದೆಲ್ಲ ವಿಮಾನದಲ್ಲಿ ಹಾರಾಡುವುದೇ ದೊಡ್ಡ ಕನಸಾಗಿತ್ತು. ಆದರೆ ಬದಲಾದ ಯುಗದಲ್ಲಿ ವಿಮಾನ ಯಾತ್ರೆಯು ಹೆಚ್ಚು ಸುರಕ್ಷಿತ, ಆರಾಮದಾಯಕ ಮಾತ್ರವಲ್ಲದೆ ಅಷ್ಟೇ ವೇಗದಾಯಕವೆನಿಸಿಕೊಂಡಿದೆ. ಪ್ರತಿಯೊಂದು ರಾಷ್ಟ್ರಗಳು ಮಿಲಿಟರಿ ಬಲವನ್ನು ವೃದ್ಧಿಸುವತ್ತ ಗಮನ ಕೇಂದ್ರಿಕರಿಸಿದೆ.

ಆಗಲೇ ಶಬ್ದದ ವೇಗ ಅಥವಾ ಮ್ಯಾಕ್ 1 ಅಂದರೆ 1194 ಕೀ.ಮೀ. ವೇಗವನ್ನು ಕ್ರಮಿಸುವ ಯುದ್ಧ ವಿಮಾನಗಳು ನಿರ್ಮಾಣಗೊಂಡಿದೆ. ಇನ್ನು ಇದಕ್ಕಿಂತಲೂ ವೇಗದ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಹಲವು ಅಗ್ರ ಸಂಸ್ಥೆಗಳು ತೊಡಗಿಸಿಕೊಂಡಿವೆ. ಇವುಗಳು ಕ್ಷಣ ಮಾತ್ರದಲ್ಲಿ ಶತ್ರು ಪಾಳೇಯವನ್ನು ಹೊಡೆದುರುಳಿಸುವಷ್ಟು ಸಮರ್ಥವಾಗಿದೆ. ಪ್ರಸ್ತುತ ಲೇಖನದಲ್ಲಿ ಜಗತ್ತಿನ ಅತಿ ವೇಗದ 10 ವಿಮಾನಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ. ಪ್ರಸ್ತುತ ಪಟ್ಟಿಯಲ್ಲಿ ಯುದ್ಧ ವಿಮಾನಗಳೇ ಹೆಸರು ಮಾಡಿದೆ.

10. ಸುಖೋಯ್ ಸು-27

10. ಸುಖೋಯ್ ಸು-27

ರಷ್ಯಾ ನಿರ್ಮಿತ ಸುಖೋಯ್ ಸು-27 ಯುದ್ಧ ವಿಮಾನವನ್ನು ಪ್ರಮುಖವಾಗಿ ಅಮೆರಿಕದ ಎಫ್-15 ಜೊತೆ ಹೋಲಿಸಲಾಗುತ್ತದೆ. ಸುಖೋಯ್ ಸೂಪರ್ ಫಾಸ್ಟ್ ಯುದ್ದ ವಿಮಾನ ಮ್ಯಾಕ್ 2.35 ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 1985ರಲ್ಲಿ ಪರಿಚಯವಾಗಿರುವ ಈ ಯುದ್ಧ ವಿಮಾನ 800 ಯುನಿಟ್ ಗಳಷ್ಟು ನಿರ್ಮಾಣಗೊಂಡಿದೆ.

09. ಜನರಲ್ ಡೈನಾಮಿಕ್ಸ್ ಎಫ್-111

09. ಜನರಲ್ ಡೈನಾಮಿಕ್ಸ್ ಎಫ್-111

ವ್ಯವಸ್ಥಿತ ಬಾಂಬ್ ದಾಳಿ ನಡೆಸಲು ಬಹು ಪಾತ್ರಧಾರಿ ಜನರಲ್ ಡೈನಾಮಿಕ್ಸ್ ಎಫ್-111 ಯುದ್ಧ ವಿಮಾನ ಸೂಕ್ತವೆನಿಸಲಿದೆ. ಶಬ್ದ ವೇಗ 2.5 ವೇಗದಲ್ಲಿ ಚಲಿಸಬಲ್ಲ ಈ ಯುದ್ಧ ವಿಮಾನವು 1960ರ ದಶಕದಲ್ಲೇ ಅಮೆರಿಕ ಸೇನೆಯ ಸೇವೆ ಸಲ್ಲಿಸಿತ್ತು. ಬಳಿಕ 1970ರ ದಶಕದಲ್ಲಿ ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್ ಸಹ ಇದರ ಸೇವೆ ಗಿಟ್ಟಿಸಿಕೊಂಡಿತ್ತು.

08. ಮೆಕ್ ಡೊನೆಲ್ ಡಗ್ಲಾಸ್ ಎಫ್-15 ಈಗಲ್

08. ಮೆಕ್ ಡೊನೆಲ್ ಡಗ್ಲಾಸ್ ಎಫ್-15 ಈಗಲ್

ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ನಡೆಸಬಲ್ಲ ಮೆಕ್ ಡೊನೆಲ್ ಡಗ್ಲಾಗ್ ಎಫ್-15 ಯುದ್ಧ ವಿಮಾನ 1972ರಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿತ್ತು. ಬೋಯಿಂಗ್ ನಿರ್ಮಿತ ಈ ಯುದ್ಧ ವಿಮಾನ ವಿವಿಧ ರಹಸ್ಯ ಕಾರ್ಯಾಚರಣೆಗೆ ನಿಯುಕ್ತಿಗೊಳಿಸುವುದರಿಂದ ಅನೇಕ ರಾಷ್ಟ್ರಗಳ ಫೇವರಿಟ್ ಎನಿಸಿಕೊಂಡಿದೆ. ಮ್ಯಾಕ್ 2.5 ವೇಗದಲ್ಲಿ ಚಲಿಸಬಲ್ಲ ಎಫ್-15 ಈಗಲ್, ವಿಶ್ವದ ಅತ್ಯಂತ ಯಶಸ್ವಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

07. ಮಿಕೋಯಾನ್ ಮಿಗ್ 31

07. ಮಿಕೋಯಾನ್ ಮಿಗ್ 31

ಸೋವಿಯತ್ ಯೂನಿಯನ್ ನಿರ್ಮಿತ ಮಿಕೋಯಾನ್ ಮಿಗ್ 31 ಒಂದು ಪ್ರತಿಬಂಧಕ ಯುದ್ಧ ವಿಮಾನವಾಗಿದೆ. ಫಾಕ್ಸ್ ಹೌಂಡ್ ಎಂಬುದಾಗಿಯೂ ಗುರುತಿಸ್ಪಟ್ಟಿರುವ ಮಿಕೋಯಾನ್ ಮಿಗ್ 31 ಯುದ್ಧ ವಿಮಾನವನ್ನು 1975ರಿಂದ 1994ರ ವರೆಗೆ ನಿರ್ಮಿಸಲಾಗಿತ್ತು. ರಷ್ಯಾ ವಾಯುಪಡೆ ಹೊರತಾಗಿ ಕಜಕಿಸ್ತಾನ ಸಹ ಇದರ ಸೇವೆಯನ್ನು ಬಳಕೆ ಮಾಡಿದೆ. ಎತ್ತರ ಹಾಗೂ ತಗ್ಗು ವಾಯು ಪ್ರದೇಶದಲ್ಲಿ ಅನುಕ್ರಮವಾಗಿ 2.83 ಹಾಗೂ 1.23 ಮ್ಯಾಕ್ ವೇಗದಲ್ಲಿ ಸಂಚರಿಸುವಷ್ಟು ಸಮರ್ಥವಾಗಿದೆ.

06. ಎಕ್ಸ್ ಬಿ-70 ವಾಲ್ಕಿರಿ

06. ಎಕ್ಸ್ ಬಿ-70 ವಾಲ್ಕಿರಿ

ಆರು ಎಂಜಿನ್ ಗಳಿಂದ ನಿಯಂತ್ರಿತ ಅತ್ಯಂತ ಶಕ್ತಿಶಾಲಿ ಎಕ್ಸ್ ಬಿ-70 ವಾಲ್ಕಿರಿ ಯುದ್ಧ ವಿಮಾನವು ಶಬ್ದ ವೇಗ 3.0 ಚಲಿಸುವಷ್ಟು ಶಕ್ತವಾಗಿದೆ. ಅಮೆರಿಕ ನಿರ್ಮಿತ ಈ ಯುದ್ಧ ವಿಮಾನವನ್ನು ವಿಶೇಷ ಕಾರ್ಯಾಚರಣೆಗೆ ನಿಯುಕ್ತಿಗೊಳಿಸಲಾಗಿದೆ.

05. ಬೆಲ್ ಎಕ್ಸ್-2 ಸ್ಟಾರ್ ಬಸ್ಟರ್

05. ಬೆಲ್ ಎಕ್ಸ್-2 ಸ್ಟಾರ್ ಬಸ್ಟರ್

ಬೆಲ್ ಎಕ್ಸ್-2 ಸ್ಟಾರ್ ಬಸ್ಟರ್ ಮೂಲತ: ಒಂದು ಸಂಶೋಧಕ ಯುದ್ಧ ವಿಮಾನವಾಗಿದೆ. 1945ನೇ ಇಸವಿಯಲ್ಲಿ ರಾಕೆಟ್ ಎಂಜಿನ್ ನಿಯಂತ್ರಿತ ಈ ಯುದ್ಧ ವಿಮಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ಇದು ಮ್ಯಾಕ್ 2ರಿಂದ 3ರ ವರೆಗೆ ಆವೇಗ ಕಾಪಾಡಿಕೊಳ್ಳುವಷ್ಟು ಸಮರ್ಥವಾಗಿದೆ.

04. ವಿಕೋಯಾನ್ ಮಿಗ್ 25

04. ವಿಕೋಯಾನ್ ಮಿಗ್ 25

ಫಾಕ್ಸ್ ಬ್ಯಾಟ್ ಎಂದು ಅರಿಯಲ್ಪಡುವ ಮಿಕೋಯಾನ್ ಮಿಗ್ 25, ಸ್ಟೈನ್ ಲೆಸ್ ಸ್ಟೀಲ್ ವಿನ್ಯಾಸ ಪಡೆದ ಒಂದು ವಿಶಿಷ್ಟ ಮಾತ್ರದ ಯುದ್ಧ ವಿಮಾನವಾಗಿದೆ. ಇದು ವ್ಯೋಮಯಾನ ಕ್ಷೇತ್ರದಲ್ಲಿ ಸೋವಿಯತ್ ಪಾರುಪತ್ಯಕ್ಕೆ ಸಾಕ್ಷಿಯಾಗಿದೆ. 1964ರಲ್ಲಿ ನಿರ್ಮಿತ ಈ ಯುದ್ಧ ವಿಮಾನ ಮ್ಯಾಕ್ 2.85 ವೇಗದಲ್ಲಿ ಸಂಚರಿಸಬಲ್ಲದ್ದು.

03. ಲಾಕ್ ಹೀಡ್ ವೈಎಫ್-12

03. ಲಾಕ್ ಹೀಡ್ ವೈಎಫ್-12

ಲಾಕ್ ಹೀಡ್ ವಿನ್ಯಾಸಿತ ವೈಎಫ್-12 ಅಮೆರಿಕ ಸೇನೆಯಿಂದ ನಿರ್ಮಿತ ಪ್ರತಿಬಂಧಕ ಯುದ್ಧ ವಿಮಾನವಾಗಿದೆ. ರಹಸ್ಯ ಯುದ್ಧ ವಿಮಾನ ಲಾಕ್ ಹೀಡ್ ಎ-12 ತಳಹದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಅತ್ಯಂತ ದುಬಾರಿ ವೆಚ್ಚದ ಈ ಯುದ್ಧ ವಿಮಾನವು 74,000 ಅಡಿ ಎತ್ತರದಲ್ಲಿ ಮ್ಯಾಕ್ 3.2 ವೇಗದಲ್ಲಿ ಸಾಗಬಲ್ಲದ್ದು.

02. ಲಾಕ್ ಹೀಡ್ ಎಸ್ ಆರ್ 71 ಬ್ಲ್ಯಾಕ್ ಬರ್ಡ್

02. ಲಾಕ್ ಹೀಡ್ ಎಸ್ ಆರ್ 71 ಬ್ಲ್ಯಾಕ್ ಬರ್ಡ್

1960ರ ದಶಕದಲ್ಲಿ ಲಾಕ್ ಹೀಡ್ ಎ-12 ತಳಹದಿಯಲ್ಲಿ ಎಸ್ ಆರ್ 71 ಬ್ಲ್ಯಾಕ್ ಬರ್ಡ್ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಶತ್ರು ಪಾಳೇಯದ ಭೀತಿಯನ್ನು ಸಮರ್ಥವಾಗಿ ಎದುರಿಸಲು ನಿಸ್ಸೀಮವಾಗಿರುವ ಈ ಯುದ್ಧ ವಿಮಾನವು ಮ್ಯಾಕ್ 3 ಗಿಂತಲೂ ವೇಗದಲ್ಲಿ ಸಂಚರಿಸುವಷ್ಟು ಶಕ್ತವಾಗಿದೆ.

01. ನಾರ್ತ್ ಅಮೆರಿಕನ್ ಎಕ್ಸ್ -15

01. ನಾರ್ತ್ ಅಮೆರಿಕನ್ ಎಕ್ಸ್ -15

ಇದು ಜಗತ್ತಿನ ಅತ್ಯಂತ ವೇಗದ ಯುದ್ಧ ವಿಮಾನ ಎಂದೆನಿಸಿಕೊಂಡಿದ್ದು 6.72 ಶಬ್ದ ವೇಗವನ್ನು ಕಾಪಾಡಿಕೊಂಡಿದೆ. 1959ರಲ್ಲಿ ನಿರ್ಮಿತ ನಾರ್ತ್ ಅಮೆರಿಕನ್ ಎಕ್ಸ್-15 ಯುದ್ಧ ವಿಮಾನವನ್ನು ಅನೇಕ ಬಾರಿ ಪರಿಷ್ಕೃತಗೊಳಿಸಲಾಗಿದೆ. ಅಂದ ಹಾಗೆ ಎರಡು ರಾಕೆಟ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತಿದೆ.

Most Read Articles

Kannada
Read more on ವಿಮಾನ plane
English summary
Top 10 Fastest Aircrafts In The World — Want To Know How Much Mach They Achieve?
Story first published: Friday, September 30, 2016, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X