ಅನುಷ್ಕಾಗೆ ಕೈಕೊಟ್ಟ ಕೊಹ್ಲಿ? ಹೊಸ ಪ್ರೇಯಸಿ ಜೊತೆ ಡೇಟಿಂಗ್!

Written By:

ಅನುಷ್ಕಾಗೆ ಕೈಕೊಟ್ಟ ಕೊಹ್ಲಿ? ಹೊಸ ಸಂಗಾತಿ ಯಾರು ಗೊತ್ತಾ ? ಹ್ಹಾಂ! ಶೀರ್ಷಿಕೆ ಕೇಳಿ ಗಾಬರಿಯಾಗದಿರಿ. ಐಷಾರಾಮಿ ಕಾರುಗಳತ್ತ ಸದಾ ಆಕರ್ಷಣೆ ಹೊಂದಿರುವ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಯುವ ನಾಯಕ ವಿರಾಟ್ ಕೊಹ್ಲಿ ಆಡಿಯ ದುಬಾರಿ ಕಾರೊಂದರ ಜೊತೆ ಡೇಟಿಂಗ್ ಮಾಡಿಕೊಂಡಿದ್ದಾರೆ.

Also Read : ರೇಸ್ ಟ್ರ್ಯಾಕಲ್ಲಿ ಧೋನಿ ಬಾಯ್ಸ್ ವೈಟ್‌ವಾಶ್ ಸಂಭ್ರಮ ಮುಂದಕ್ಕೆ ಓದಿ

ನಿಮಗೆಲ್ಲರಿಗೂ ತಿಳಿದಿರುವಂತೆಯ ತಮ್ಮ ನೆಚ್ಚಿನ ಆಡಿ ಬ್ರಾಂಡ್‌ನ ಐಷಾರಾಮಿ ಎ8ಎಲ್ ಡಬ್ಲ್ಯು12 ಕಾರನ್ನು ಕೊಹ್ಲಿ ಖರೀದಿಸಿದ್ದು, ತಮ್ಮ ಪ್ರೇಯಸಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಸ್ವಲ್ಪ ವಿರಾಮ ಕೊಡುವ ಮೂಲಕ ಆಡಿ ಕಾರಿನ ಜೊತೆ ಜಾಲಿ ರೈಡ್ ಹೊಡೆದಿದ್ದಾರೆ.

To Follow DriveSpark On Facebook, Click The Like Button
ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಈಗಾಗಲೇ ಆಡಿಯ ಜನಪ್ರಿಯ ಆರ್8, ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿ, ಆಡಿ ಆರ್8 ವಿ10 ಹಾಗೂ ಆಡಿ ಕ್ಯೂ7 ಒಡೆಯರಾಗಿರುವ ಕೊಹ್ಲಿ, ಈಗ ಎರಡು ಕೋಟಿಗಿಂತಲೂ ಹೆಚ್ಚು ಬೆಲೆಯ ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ನಿಮ್ಮ ಮಾಹಿತಿಗಾಗಿ ಜರ್ಮನಿಯ ಐಷಾರಾಮಿ ಆಡಿ ಸಂಸ್ಥೆಯಿಂದ ನಿರ್ಮಿತ ಎ8ಎಲ್ ಡಬ್ಲ್ಯು12 ಕ್ವಾಟ್ರೊ ಕಾರು ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಎಂಜಿನ್ ಆಯ್ಕೆಗಳು

ಎಂಜಿನ್ ಆಯ್ಕೆಗಳು

  • 3.0 ಲೀಟರ್ ವಿ6 ಡೀಸೆಲ್,
  • 4.2 ಲೀಟರ್ ವಿ8 ಡೀಸೆಲ್,
  • 6.3 ಲೀಟರ್ ಡಬ್ಲ್ಯು ಪೆಟ್ರೋಲ್
ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಈ ಎಲ್ಲ ಮೂರು ಮಾದರಿಗಳು ದೆಹಲಿ ಎಕ್ಸ್ ಶೋ ರೂಂ 1.17 ಕೋಟಿ ರು.ಗಳಿಂದ 1.87 ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ಆನ್ ರೋಡ್ ಬೆಲೆ ಎರಡು ಕೋಟಿ ರುಪಾಯಿಗಳನ್ನು ದಾಟಲಿದೆ.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಈ ಪೈಕಿ ಟಾಪ್ ಎಂಡ್ ಆಡಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ ಮಾದರಿಯು 6.3 ಲೀಟರ್ ಲೀಟರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 625 ಎನ್ ಎಂ ತಿರುಗುಬಲದಲ್ಲಿ 494 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಅತಿ ಉದ್ದವಾದ ಈ ಚಕ್ರಾಂತರ ಆಡಿ ಎ8ಎಲ್ ಮಾದರಿಯು ಮ್ಯಾಟ್ರಿಕ್ ಎಲ್‌ಇಡಿ ಹೆಡ್ ಲ್ಯಾಂಪ್ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ನಿಮಗಿದು ಗೊತ್ತೇ, ನೂತನ ಆಡಿ ಎ8ಎಲ್ ಕಾರಿನಲ್ಲಿ 100 ಹೊರಮೈ ಹಾಗೂ 23 ಒಳಮೈ ಬಣ್ಣಗಳ ಆಯ್ಕೆಯು ಲಭ್ಯವಿರುತ್ತದೆ. ಹಾಗೆಯೇ 12 ವುಡ್ ಇಸರ್ಟ್ ಆಯ್ಕೆಯನ್ನು ಕೊಡಲಾಗಿದೆ.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಪ್ರಸಕ್ತ ಸಾಲಿನ ಮೇ ತಿಂಗಳಿನಲ್ಲಷ್ಟೇ ಅತ್ಯಂತ ವೇಗದ ಹಾಗೂ ದುಬಾರಿ ಆಡಿ ಆರ್8 ಎಲ್ ಎಂಎಕ್ಸ್ ಸೀಮಿತ ಆವೃತ್ತಿಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದರು.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಅಂದಿನಂತೆ ಇಂದು ಕೂಡಾ ಸ್ವತ: ಆಡಿ ಇಂಡಿಯಾದ ನಿರ್ದೇಶಕ ಜೋ ಕಿಂಗ್ ಅವರೇ ಮುಂದೆ ಬಂದು ಈ ಐಷಾರಾಮಿ ಕಾರಿನ ಕೀಲಿಯನ್ನು ಕೊಹ್ಲಿ ಅವರಿಗೆ ಹಸ್ತಾಂತರಿಸಿದ್ದಾರೆ.

ಆಡಿ ಎ8ಎಲ್ ಡಬ್ಲ್ಯು12 ಕಾರು ಖರೀದಿಸಿದ ವಿರಾಟ್ ಕೊಹ್ಲಿ

ಒಟ್ಟಿನಲ್ಲಿ ಮೈದಾನದ ಒಳಗೂ ಹೊರಮೈ ಆಕ್ರಮಣಕಾರಿ ಸ್ವಭಾವ ಮೈಗೂಡಿಸಿ ಬಂದಿರುವ ವಿರಾಟ್ ಕೊಹ್ಲಿ ಮಗದೊಮ್ಮೆ ಆಡಿ ಕಾರುಗಳ ಮೇಲಿನ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.

ಇವನ್ನೂ ಓದಿ

ಆಕ್ರಮಣಕಾರಿ ನಾಯಕನ 'ವಿರಾಟ' ದರ್ಶನ ಮುಂದಕ್ಕೆ ಓದಿ

Read more on ಆಡಿ audi virat kohli
English summary
Virat Kohli Buys Another Audi & Meets Joe King
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark